ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಂದಾಸ್ ಹಾಲಿಡೇ ಫ್ಯಾಷನ್ (Celebrity Travel Fashion) ಮನಸ್ಸಿಗೆ ರಿಲಾಕ್ಸೇಷನ್ ನೀಡುವುದರೊಂದಿಗೆ ಉಲ್ಲಾಸ ಹೆಚ್ಚಿಸುತ್ತದೆ ಎನ್ನುತ್ತಾರೆ ಆರ್ ಜೆ ಹಾಗೂ ನಟ ರಾಜೇಶ್. ಟ್ರಾವೆಲ್ ಹಾಗೂ ಹಾಲಿಡೇ ನಾಣ್ಯದ ಎರಡು ಮುಖಗಳಿದ್ದಂತೆ. ಯುವಕರಿಗೆ ಆರಾಮ ಎನಿಸುವ ಕೂಲ್ ಫ್ಯಾಷನ್ ಟ್ರಾವೆಲ್‌ನದ್ದಾಗಬೇಕು. ಇನ್ನು ಪ್ರಯಾಣದ ಎಂಜಾಯ್‌ಮೆಂಟ್ ಜೊತೆಗೆ ರಿಲ್ಯಾಕ್ಸೇಷನ್ ನೀಡುವ ಸ್ಟೈಲ್ ಸ್ಟೇಟ್‌ಮೆಂಟ್ ಹಾಲಿಡೇಗಳದ್ದಾಗಬೇಕು ಎನ್ನುತ್ತಾರೆ.
ಬೀಚ್ ಹಾಗೂ ದ್ವೀಪಗಳ ನಡುವಿನ ಬಿಂದಾಸ್ ಸ್ಟೈಲ್‌ಸ್ಟೇಟ್‌ಮೆಂಟ್ಸ್
ಬ್ಯಾಂಕಾಕ್‌ನ ನಾನಾ ದ್ವೀಪಗಳ ನಡುವೆ ಟ್ರಾವೆಲ್ ಮಾಡಿದ ಆರ್ ಜೆ ರಾಜೇಶ್, ಮೊದಲಿನಿಂದಲೂ ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್ ಹೊಂದಿದ್ದಾರೆ. ಈ ಬಾರಿ ತಮ್ಮ ಜೊತೆಗೆ ಸೇರಿದ ಸ್ನೇಹಿತರಿಗೂ ಸೇರಿದಂತೆ ಕಸ್ಟಮೈಸ್ಡ್ ಡಿಸೈನ್ ಮಾಡಿಸಿದ ಉಡುಪುಗಳನ್ನು ಅವರೊಂದಿಗೆ ಧರಿಸಿ ಎಂಜಾಯ್ ಮಾಡಿದ್ದಾರೆ. ಇದರೊಂದಿಗೆ ತಮ್ಮ ಈ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಸ್ತಾರ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ.
ಹೀಗಿರಲಿ ಮೆನ್ಸ್ ಹಾಲಿಡೇ ಸ್ಟೈಲ್ ಸ್ಟೇಟ್‌ಮೆಂಟ್ಸ್
ಯುವಕರು ಎಂದಾಕ್ಷಣ ಯಾವುದೇ ಫ್ಯಾಷನ್ ಬೇಕಾಗಿಲ್ಲ ಎಂದಲ್ಲ! ಹಾಲಿಡೇಗೆ ತೆರಳುವ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಆರೈಕೆಯೂ ಅಗತ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ಸ್ ಹಚ್ಚಿಕೊಳ್ಳುವುದು ಅಗತ್ಯ. ಇನ್ನು ಬಿಸಿಲಿಗೆ ಕ್ಯಾಪ್ ಆಗುವ ಬದಲು ಹೆಡ್ ಬ್ಯಾಂಡ್‌ನಂತವನ್ನು ಧರಿಸಬಹುದು. ಮೊದಲೇ ಹಾಲಿಡೇಗೆ ಧರಿಸುವ ಔಟ್‌ಫಿಟ್‌ಗಳನ್ನು ಪ್ಲಾನ್ ಮಾಡಿಕೊಳ್ಳಬೇಕು. ಯಾವ ಬಗೆಯ ಉಡುಪು ನಾವು ಹೋಗುತ್ತಿರುವ ಜಾಗಕ್ಕೆ ಹೊಂದುತ್ತದೆ ಎಂಬುದನ್ನು ತಿಳಿದುಕೊಂಡು ಧರಿಸಬೇಕು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಆರ್ ಜೆ ರಾಜೇಶ್.
“ಸ್ನೇಹಿತರಾದ ನಟ ಮನೋಜ್‌ಕುಮಾರ್ ಹಾಗೂ ಮಾಡೆಲ್ ಅನುಷಾ ರಾಜ್‌ರೊಂದಿಗೆ ಕ್ರಾಬಿಯ ಸುತ್ತಮುತ್ತ ದ್ವೀಪಗಳಿಗೆ ಭೇಟಿ ನೀಡಿದಾಗ, ಡಿಸೈನರ್ ಪಲ್ಲವಿ ಡಿಸೈನ್‌ನ ಫ್ಲೋರಲ್ ಪ್ರಿಂಟ್ಸ್ ಔಟ್‌ಫಿಟ್ಸ್ ಧರಿಸಿದ್ದೆವು. ಈ ಡಿಸೈನರ್‌ವೇರ್ ಇಡೀ ಹಾಲಿಡೇಯ ಲುಕ್ಕನ್ನೇ ಬದಲಿಸಿತ್ತು ಎನ್ನುತ್ತಾರೆ ಆರ್ ಜೆ ರಾಜೇಶ್.
ಮೆನ್ಸ್ ಬೀಚ್ ಲುಕ್
ಜೇಮ್ಸ್ ಬಾಂಡ್ ಐಲ್ಯಾಂಡ್, ಬ್ಯಾಂಬೂ ಐಲ್ಯಾಂಡ್ ಚಿಕನ್ ಐಲ್ಯಾಂಡ್ ಸೇರಿದಂತೆ ಅತಿ ಹೆಚ್ಚು ಸಮಯವನ್ನು ಅನೊಂಗ್ ಬೀಚ್‌ನಲ್ಲಿ ಕಳೆದ ನಾವು, ಅಲ್ಲಿನ ಹವಮಾನಕ್ಕೆ ತಕ್ಕಂತೆ ಔಟ್‌ಫಿಟ್ ಬದಲಿಸಿಕೊಂಡಿದ್ದೆವು. ಎನ್ನುವ ಆರ್‌ಜೆ ರಾಜೇಶ್, ಹಾಲಿಡೇ ಫ್ಯಾಷನ್ ಫಾಲೋ ಮಾಡುವ ಯುವಕರಿಗೆ ಮತ್ತೊಂದಿಷ್ಟು ಸಲಹೆ ಕೂಡ ನೀಡಿದ್ದಾರೆ.
- ವಾತಾವಾರಣಕ್ಕೆ ತಕ್ಕಂತೆ ಔಟ್‌ಫಿಟ್ ಇರಲಿ.
- ಬೀಚ್‌ನಲ್ಲಿ ಆದಷ್ಟೂ ಶಾಟ್ರ್ಸ್ ಗೆ ಆದ್ಯತೆ ನೀಡಿ.
- ಹಾಲಿಡೇ ಔಟ್ಫಿಟ್ಗಳು ಆರಾಮದಾಯಕವಾಗಿರಲಿ.
- ಲೈಟ್ವೇಟ್ ಉಡುಪುಗಳನ್ನು ಪ್ರಿಫರ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion news: ಫೆಸ್ಟಿವ್ ಸೀಸನ್‌ನಲ್ಲಿ ನಡೆದ ಆಕರ್ಷಕ ಬ್ರೈಡಲ್ ಫ್ಯಾಷನ್ ಶೋ