ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್ ಸೀರೆಗಳ ಡಿಸೈನರ್ ಬ್ಲೌಸ್‌ಗಳಲ್ಲಿ (Saree Blouse Design) ಇದೀಗ ತೋಳುಗಳನ್ನು ಆಕರ್ಷಕವಾಗಿ ಬಿಂಬಿಸಬಲ್ಲ ಬಾಜುಬಂದ್ ಎಂಬ್ರಾಯ್ಡರಿ ಡಿಸೈನ್ಸ್ ವೆಡ್ಡಿಂಗ್ ಬ್ಲೌಸ್ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ಡಿಸೈನ್ಸ್, ಹೆಣ್ಣುಮಕ್ಕಳ ಗ್ರ್ಯಾಂಡ್ ಸೀರೆಗೆ ಸಾಥ್ ನೀಡುತ್ತಿವೆ. ಇನ್ನು ಕೆಲವು ಮದುವೆಗಳಲ್ಲಿ ಮದುಮಗಳು ಕೈಗಳಿಗೆ ಬಾಜುಬಂದ್ ಧರಿಸುವ ಬದಲು ಇದೀಗ ಇಂತಹ ಡಿಸೈನರ್ ಬ್ಲೌಸ್‌ಗಳನ್ನೇ ಧರಿಸತೊಡಗಿರುವುದು ಸಾಮಾನ್ಯವಾಗತೊಡಗಿದೆ. “ಸಾಕಷ್ಟು ಗ್ರ್ಯಾಂಡ್ ಬ್ಲೌಸ್‌ನ ಸ್ಲೀವ್ ಡಿಸೈನ್‌ನಲ್ಲಿ ಇದೀಗ ನಾನಾ ಬಗೆಯ ಬಾಜುಬಂದ್ ಎಂಬ್ರಾಯ್ಡರಿ ಹಾಗೂ ಹ್ಯಾಂಡ್ ವರ್ಕ್ ಡಿಸೈನ್‌ಗಳು ಟ್ರೆಂಡಿಯಾಗಿವೆ. ಧರಿಸಿದಾಗ ನೋಡಲು ಬಾಜುಬಂದ್‌ನಂತೆಯೇ ಕಾಣುವ ಇವು ವೆಡ್ಡಿಂಗ್ ಸೀರೆಗಳ ಬ್ಲೌಸ್‌ಗಳಿಗೆ ಮ್ಯಾಚಿಂಗ್ ಆಗುತ್ತಿವೆ. ಮೆಷಿನ್ ವರ್ಕ್ ಹಾಗೂ ಹ್ಯಾಂಟ್‌ವರ್ಕ್‌ನ ಡಿಸೈನ್‌ಗಳು ರೇಷ್ಮೆ ಸೀರೆಗಳ ಬ್ಲೌಸ್‌ಗಳ ಮೇಲೆ ಅಂದವಾಗಿ ಕಾಣಿಸುತ್ತಿವೆ” ಎನ್ನುವ ಬ್ಲೌಸ್ ಡಿಸೈನರ್ ರಾಶಿ ಪ್ರಕಾರ, ರೇಷ್ಮೆ ಸೀರೆಗಳಿಗೆ ಬರುವ ಬ್ಲೌಸ್‌ಗಳಿಗೆ ಡಿಸೈನ್ ಮಾಡಿಸುವುದು ಮೊದಲಿನಿಂದಲೂ ಚಾಲ್ತಿಯಲ್ಲಿತ್ತು. ಇದೀಗ ಹೆಣ್ಣುಮಕ್ಕಳು ಇವುಗಳಲ್ಲೆ ನಾನಾ ಬಗೆಯ ವಿನ್ಯಾಸ ಮಾಡಿಸತೊಡಗಿದ್ದು, ಅವುಗಳಲ್ಲಿ ಬಾಜುಬಂದ್ ಡಿಸೈನ್ಸ್ ಟ್ರೆಂಡಿಯಾಗಿದೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಬ್ಲೌಸ್ ಬಾಜುಬಂದ್ ಡಿಸೈನ್ಸ್
ಗಂಡಭೇರುಂಡ, ನರ್ತಿಸುತ್ತಿರುವ ನವಿಲು, ಹೂ-ಬಳ್ಳಿಗಳು, ಸರಸ್ವತಿ, ನಾಟ್ಯ ಶಿವ, ವೀಣೆ, ತಂಬೂರಿ, ದೇವಿಯ ಮುಖ, ಬೆಂಕಿಯ ಧಗೆ ಹೀಗೆ ನಾನಾ ಡಿಸೈನ್‌ಗಳು ಬಾಜುಬಂದ್ ಬ್ಲೌಸ್‌ನ ಡಿಸೈನ್‌ನಲ್ಲಿ ಟ್ರೆಂಡ್‌ನಲ್ಲಿವೆ. ಕೆಲವು ವಿನ್ಯಾಸಗಳು ಥೇಟ್ ಬಾಜುಬಂದ್‌ನಂತೆಯೇ ಕಾಣಿಸುತ್ತವೆ. ಇನ್ನು ಕೆಲವು ಸಿಂಪಲ್ ಡಿಸೈನ್‌ನಲ್ಲಿ ಚಾಲ್ತಿಯಲ್ಲಿವೆ.
ಹ್ಯಾಂಡ್‌ವರ್ಕ್ ಡಿಸೈನ್‌ಗೆ ಬೇಡಿಕೆ
ಇನ್ನು ಬ್ಲೌಸ್‌ನ ಬಾಜುಬಂದ್ ಡಿಸೈನ್ ಮಾಡಿಸುವವರಲ್ಲಿ ಅತಿ ಹೆಚ್ಚು ಮಹಿಳೆಯರು ಹ್ಯಾಂಡ್‌ವರ್ಕ್‌ಗೆ ಮಾನ್ಯತೆ ನೀಡುತ್ತಾರೆ. ಇವು ನೋಡಲು ಮನಮೋಹಕವಾಗಿರುತ್ತವೆ. ಇನ್ನು ಮೆಷಿನ್ ವರ್ಕ್ ಕಡಿಮೆ ಬೆಲೆಯಲ್ಲಿ ಡಿಸೈನ್ ಮಾಡಿಸಬಹುದು. ಎಲ್ಲರ ಕೈಗೆಟಕುವ ಬೆಲೆಯಲ್ಲಿ ಸಿದ್ಧಗೊಳ್ಳುತ್ತದೆ ಎನ್ನುವ ಬ್ಲೌಸ್‌ನ ಡಿಸೈನರ್, ಅತ್ಯುತ್ತಮ ಡಿಸೈನ್‌ಗಳು ಮೆಷಿನ್ ವರ್ಕ್ ಡಿಸೈನ್‌ನಲ್ಲೂ ಲಭ್ಯ, ಸೂಕ್ತ ಆಯ್ಕೆ ಮಾಡಬೇಕಷ್ಟೇ! ಎನ್ನುತ್ತಾರೆ.
- ಬಾಜುಬಂದ್ ಡಿಸೈನರ್ ಬ್ಲೌಸ್ ಮೇಲೆ ಬಾಜುಬಂದ್ ಧರಿಸಕೂಡದು.
- ಸೀರೆಯ ಅಂದಕ್ಕೆ ಈ ಡಿಸೈನ್ ಹೊಂದಬೇಕು.
- ಗೋಲ್ಡನ್ ಡಿಸೈನ್ ಧರಿಸುವ ಆಭರಣಕ್ಕೆ ಮ್ಯಾಚ್ ಆಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ