ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಂಟ್ರಾಸ್ಟ್ ಕಲರ್ ಬ್ಲೌಸ್ ಇರುವಂತಹ ಸೀರೆಗಳು ಹಬ್ಬದ ಸೀಸನ್‌ನಲ್ಲಿ (Ugadi Fashion) ಟ್ರೆಂಡಿಯಾಗಿವೆ. ಹೌದು. ಈ ಬಾರಿ ಯುಗಾದಿ ಹಬ್ಬಕ್ಕೆ ಕಾಂಟ್ರಾಸ್ಟ್ ಕಲರ್ ಬ್ಲೌಸ್ ಇರುವಂತಹ ನಾನಾ ಬಗೆಯ ಸೀರೆಗಳಲ್ಲಿ ಇವು ಕಾಲಿಟ್ಟಿವೆ. ಗ್ರ್ಯಾಂಡ್ ಹಾಗೂ ದುಬಾರಿ ಬೆಲೆಯ ರೇಷ್ಮೆ ಸೀರೆಗಳಲ್ಲಿ ಮಾತ್ರವಲ್ಲ, ಇತರೇ ಫ್ಯಾಬ್ರಿಕ್‌ನ ಡಿಸೈನರ್ ಸೀರೆಗಳಲ್ಲೂ ಈ ಕಾನ್ಸೆಪ್ಟ್ ಕಾಲಿಟ್ಟಿವೆ.
ಕಾಂಟ್ರಾಸ್ಟ್ ಬ್ಲೌಸ್ ಸೀರೆಗಳ ಲವ್
ಮಾನೋಕ್ರೋಮ್ ಹಾಗೂ ಸೆಲ್ಫ್ ಶೇಡ್‌ನ ಸೀರೆಗಳು ಒಂದೇ ಬಗೆಯ ಬಣ್ಣದ ಬ್ಲೌಸ್ ಪೀಸ್ ಒಳಗೊಂಡಿರುತ್ತವೆ. ನೋಡಲು ಒಂದೇ ರೀತಿಯಲ್ಲಿ ಕಾಣುತ್ತವೆ. ಸಿಂಪಲ್ ಲುಕ್ ನೀಡುತ್ತವೆ. ಇದನ್ನು ಮನಗಂಡ ಸೀರೆ ಡಿಸೈನರ್‌ಗಳು ಕೊಂಚ ವಿಭಿನ್ನ ಲುಕ್‌ಗಾಗಿ ಇದೀಗ ಫೆಸ್ಟೀವ್ ಸೀಸನ್‌ನಲ್ಲಿ ಗ್ರ್ಯಾಂಡ್ ಲುಕ್ ನೀಡುವಂತಹ ಕಾಂಟ್ರಸ್ಟ್ ಶೇಡ್ ಬ್ಲೌಸ್ ಪೀಸ್ ಒಳಗೊಂಡ ಸೀರೆಗಳನ್ನು ಡಿಸೈನ್ ಮಾಡಿದ್ದಾರೆ. ಅದು ದುಬಾರಿ ಬೆಲೆಯ ಗ್ರ್ಯಾಂಡ್ ಸೀರೆಯಾಗಬಹುದು ಅಥವಾ ಕಡಿಮೆ ಬೆಲೆಯ ಸೀರೆಯಾಗಬಹುದು. ಉಟ್ಟಾಗ ಎದ್ದು ಕಾಣಿಸುತ್ತವೆ. ಹೈ ಲೈಟ್ ಆಗುತ್ತವೆ. ಹಾಗೆಂದು ಈ ಸೀರೆಯೇನು ಹೊಸ ಡಿಸೈನ್‌ನವೇನೂ ಅಲ್ಲ! ಆದರೆ, ಹೊಸ ಎದ್ದು ಕಾಣುವಂತಹ ಶೇಡ್‌ನಲ್ಲಿ ವಿನೂತನ ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಂಡಿವೆ ಅಷ್ಟೇ! ಅದರಲ್ಲೂ ಹಬ್ಬದ ಸೀಸನ್‌ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್. ಅವರ ಪ್ರಕಾರ, ರೇಷ್ಮೆ ಸೀರೆಯಿಂದಿಡಿದು ಸಾಮಾನ್ಯ ಸೀರೆಯಲ್ಲೂ ಕಣ್ಣಿಗೆ ರಾಚುವಂತಹ ಕಾಂಟ್ರಾಸ್ಟ್ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆಯಂತೆ.
ಕಾಂಟ್ರಾಸ್ಟ್ ಬ್ಲೌಸ್ ಸೀರೆಗಳ ಮೆಕೋವರ್ ಹೇಗೆ?
ಇಂತಹ ಸೀರೆಗಳ ಬ್ಲೌಸ್‌ಗಳಿಗೆ ಆದಷ್ಟೂ ಟ್ರೆಡಿಷನಲ್ ಲುಕ್ ನೀಡುವಂತಹ ಡಿಸೈನ್‌ಗಳನ್ನು ಮಾಡಿಸಬೇಕು. ಇನ್ನು ಸಾದಾ ಸೀರೆಗಳಾದಲ್ಲಿ ಪಫ್ ಬ್ಲೌಸ್, ಫ್ರಿಲ್ ಪಫ್, ಬಲೂನ್ ಶೀರ್ ಬ್ಲೌಸ್, ಮೆಗಾ ಪಫ್ ಡಿಸೈನ್‌ನಲ್ಲಿ ಹೊಲೆಸಬಹುದು. ಪ್ರಿಂಟೆಡ್ ಕಾಂಟ್ರಾಸ್ಟ್ ಆದಲ್ಲಿ ಸಿಂಪಲ್ ಡಿಸೈನ್ ಮಾಡಿಸಬಹುದು. ಇನ್ನು, ಅಗತ್ಯವಿದ್ದಲ್ಲಿ ಸಾದಾ ಕಾಂಟ್ರಾಸ್ಟ್ ಶೇಡ್‌ನ ಬ್ಲೌಸ್ ಆದಲ್ಲಿ ಅವಕ್ಕೆ ಸಿಂಪಲ್ ಬಾರ್ಡರ್ ಗೋಲ್ಡನ್ ಎಂಬ್ರಾಯ್ಡರಿ ಮಾಡಿಸಬಹುದು. ಇನ್ನು ಕಾಟನ್ ಸೀರೆಯ ಬ್ಲೌಸ್‌ಗಳಾದಲ್ಲಿ ಸಿಂಪಲ್ ಸ್ಲೀವ್ ಡಿಸೈನ್ ಮಾಡಿಸಬಹುದು. ಜಾರ್ಜೆಟ್ ಹಾಗೂ ಶಿಫಾನ್ ಬ್ಲೌಸ್‌ಗಳಾದಲ್ಲಿ ಬಲೂನ್ ಸ್ಲೀವ್ ಅಥವಾ ಇಂಡೋ-ವೆಸ್ಟರ್ನ್ ಲುಕ್ ನೀಡುವ ಬ್ಲೌಸ್ ಡಿಸೈನ್ ಮಾಡಿಸಬಹುದು ಎನ್ನುತ್ತಾರೆ ಬ್ಲೌಸ್ ಡಿಸೈನರ್.
ಕಾಂಟ್ರಾಸ್ಟ್ ಬ್ಲೌಸ್ ಸೀರೆ ಉಡುವವರಿಗೆ 3 ಸಿಂಪಲ್ ಟಿಪ್ಸ್
- · ಪ್ರಿಂಟೆಡ್ ಸೀರೆ ಬ್ಲೌಸ್ ಕಾಂಟ್ರಾಸ್ಟ್ ಆದಲ್ಲಿ ಆದಷ್ಟೂ ಕಡಿಮೆ ಆಕ್ಸೆಸರೀಸ್ ಧರಿಸಿ.
- · ಸಾದಾ ಸೀರೆಯ ಕಾಂಟ್ರಾಸ್ಟ್ ಬ್ಲೌಸ್ಗೆ ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡಿ.
- · ಈ ಸೀಸನ್ಗೆ ತಕ್ಕಂತೆ ಮೆಕೋವರ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: False Eyelash Fashion Tips: ಕೃತಕ ಐ ಲ್ಯಾಶಸ್ ಆಯ್ಕೆಗೂ ಮುನ್ನ ಪಾಲಿಸಬೇಕಾದ 5 ಸಂಗತಿಗಳು