-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಶ್ರಾವಣ ಮಾಸದಲ್ಲಿ (Contrast dupatta fashion) ಕಾಂಟ್ರಾಸ್ಟ್ ದುಪಟ್ಟಾ ಫ್ಯಾಷನ್ ಟ್ರೆಂಡಿಯಾಗಿದೆ. ಪ್ರತಿದಿನ ಧರಿಸುವ ಸಿಂಪಲ್ ಸಲ್ವಾರ್ ಕಮೀಜ್‌ಗೆ ಮಾತ್ರವಲ್ಲ, ಗ್ರ್ಯಾಂಡ್ ಲುಕ್ ನೀಡುವ ಕುರ್ತಾ-ಅನಾರ್ಕಲಿ ಚೂಡಿದಾರ್ ಸೆಟ್‌ಗಳೊಂದಿಗೂ ಇವು ಕಾಣಿಸಿಕೊಂಡಿವೆ.
ನ್ಯೂ ಕಾನ್ಸೆಪ್ಟ್‌ನಲ್ಲಿ ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾ ಫ್ಯಾಷನ್
“ಕಾಂಟ್ರಾಸ್ಟ್ ಕಲರ್ ದುಪಟ್ಟಾ ಧರಿಸುವ ಫ್ಯಾಷನ್ ಇವತ್ತಿನದಲ್ಲ! ಬದಲಿಗೆ ಮೊದಲಿನಿಂದಲೂ ಇದೆ. ಆದರೆ, ಹೊಸ ಕಾನ್ಸೆಪ್ಟ್ ಫ್ಯಾಷನ್ ಬರುತ್ತಿದ್ದಂತೆ ಆಗಾಗ್ಗೆ ಈ ಕಾನ್ಸೆಪ್ಟ್ ಮರೆಯಾಗಿ ಮತ್ತೊಮ್ಮೆ ಹೊಸ ಥೀಮ್ ಅಥವಾ ಸ್ಟೈಲಿಂಗ್‌ನೊಂದಿಗೆ ಮರುಕಳಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಈ ಸಾಲಿನಲ್ಲಿ, ಅದರಲ್ಲೂ ಫೆಸ್ಟಿವ್ ಸೀಸನ್ ಆದ ಶ್ರಾವಣ ಮಾಸದಲ್ಲಿ ಈ ಕಾನ್ಸೆಪ್ಟ್ ಮತ್ತೊಮ್ಮೆ ರೀ ಎಂಟ್ರಿ ನೀಡಿದೆ” ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ. ಅವರ ಪ್ರಕಾರ, ಕಾಂಟ್ರಾಸ್ಟ್ ದುಪಟ್ಟಾ, ಧರಿಸುವ ಉಡುಪನ್ನು ಹೈಲೈಟ್ ಮಾಡುತ್ತದೆ ಎನ್ನುತ್ತಾರೆ.
ಕಾಂಟ್ರಾಸ್ಟ್ ಕಲರ್ ದುಪಟ್ಟಾ ಫ್ಯಾಷನ್
ಕೆಲವು ಕಾಲ ಮಾನೋಕ್ರೋಮ್ ಅಥವಾ ಒಂದೇ ಶೇಡ್‌ನ ದುಪಟ್ಟಾ ಧರಿಸುವ ಕ್ರೇಝ್ ಹಾಗೂ ಫ್ಯಾಷನ್ ಸಖತ್ ಟ್ರೆಂಡಿಯಾಗಿತ್ತು. ಇದೀಗ ಇದಕ್ಕೆ ತದ್ವಿರುದ್ಧವೆಂಬಂತೆ, ಕಾಂಟ್ರಾಸ್ಟ್ ದುಪಟ್ಟಾ ಫ್ಯಾಷನ್ ಎಂಟ್ರಿ ನೀಡಿದೆ. ಧರಿಸುವ ಉಡುಪಿಗೂ ಹಾಗೂ ಡಿಸೈನರ್‌ವೇರ್‌ಗೂ ಯಾವುದೇ ಸಂಬಂದಂಧವಿಲ್ಲದ ಸ್ಟೈಲಿಂಗ್ ಈ ಕಾಂಟ್ರಾಸ್ಟ್ ದುಪಟ್ಟಾ ಧರಿಸುವ ಫ್ಯಾಷನ್‌ನಲ್ಲಿದೆ ಎನ್ನಬಹುದು. ಉದಾಹರಣೆಗೆ., ಕ್ರೀಮ್ ಶೇಡ್‌ನ ಸಲ್ವಾರ್ ಅಥವಾ ಚೂಡಿದಾರ್ ಸೆಟ್‌ಗೆ ಗ್ರ್ಯಾಂಡ್ ಲುಕ್ ನೀಡುವ ಪಿಂಕ್ ಡಿಸೈನರ್ ದುಪಟ್ಟಾ, ಬ್ಲ್ಯಾಕ್ ಸಲ್ವಾರ್ ಸೂಟ್‌ಗೆ ಕ್ರೀಮ್, ಬ್ಲ್ಯೂ ಚೂಡಿದಾರ್ ಸೆಟ್‌ಗೆ ರೆಡ್ ಶೇಡ್ ದುಪಟ್ಟಾ, ಮರೂನ್ ಉಡುಪಿಗೆ ಸನ್ ಕಲರ್ ಅಥವಾ ಹಳದಿ ದುಪಟ್ಟಾ ಹೀಗೆ ಡಿಸೈನರ್‌ವೇರ್‌ನ ವಿರುದ್ಧ ಕಲರ್‌ನ ದುಪಟ್ಟಾಗಳು ಜೊತೆಯಾಗಿವೆ. ರೀ ಎಂಟ್ರಿ ನೀಡಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಡಿಸೈನರ್ ಜಾನ್ ಹಾಗೂ ಸಾಶಿ.
ಮಿಕ್ಸ್ ಮ್ಯಾಚ್ ಸ್ಟೈಲಿಂಗ್
ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾಗಳೊಂದಿಗೆ ಇದೀಗ ಡಿಸೈನರ್‌ವೇರ್‌ಗಳು ಆಗಮಿಸುತ್ತಿವೆ. ಆದರೆ, ನಿಮ್ಮ ಬಳಿ ಇರುವ ಹಳೆಯ ಔಟ್‌ಫಿಟ್‌ಗಳಿಗೂ ಈ ಫ್ಯಾಷನ್ ಫಾಲೋ ಮಾಡಬಹುದು. ಇದಕ್ಕಾಗಿ ಮಿಕ್ಸ್ ಮ್ಯಾಚ್ ಸ್ಟೈಲಿಂಗ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ದಾಮಿನಿ.
ಇದನ್ನೂ ಓದಿ: Nail Extension Beauty Trend: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾದ ನೇಲ್ ಎಕ್ಸ್‌ಟೆನ್ಷನ್ ಕಾನ್ಸೆಪ್ಟ್
ಕಾಂಟ್ರಾಸ್ಟ್ ಕಲರ್ ದುಪಟ್ಟಾ ಮಿಕ್ಸ್ ಮ್ಯಾಚ್ ಮಾಡುವುದು ಹೀಗೆ
- ಎಲ್ಲದಕ್ಕೂ ಹೊಂದುವಂತಹ ಎದ್ದು ಕಾಣುವಂತಹ ಮಲ್ಟಿ ಶೇಡ್‌ನ ದುಪಟ್ಟಾ ಆಯ್ಕೆ ಮಾಡಿ ಖರೀದಿಸಿ.
- ಲೈಟ್ ಕಲರ್ ಸಲ್ವಾರ್ ಸೂಟ್ಗಳಿಗೆ ಡಾರ್ಕ್ ಕಲರ್‌ನ ದುಪಟ್ಟಾ ಧರಿಸಿ.
- ಮಾರುಕಟ್ಟೆಯಲ್ಲಿ ನಾನಾ ಬಗೆಯ ಮಿಕ್ಸ್ ಮ್ಯಾಚ್ ದುಪಟ್ಟಾ ದೊರೆಯುತ್ತದೆ. ಆರಿಸಿ, ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)