ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿಂಟೆಡ್ ಡ್ರೇಪ್ ಸ್ಕರ್ಟ್ ಕೋ ಆರ್ಡ್ ಸೆಟ್ ಔಟ್‌ಫಿಟ್‌ಗಳು (Printed Drape Skirt) ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ಈ ಸೀಸನ್‌ನಲ್ಲಿ ಫ್ರೆಶ್ ಲುಕ್ ನೀಡುತ್ತವೆ. ಅದರಲ್ಲೂ ಸ್ಕರ್ಟ್ ಪ್ರಿಯರಿಗೆ ಪ್ರಿಯವಾಗಿವೆ. ಆಫೀಸ್‌ವೇರ್‌ನಿಂದಿಡಿದು ಔಟಿಂಗ್‌ಗೂ ಇವು ಹೊಂದುತ್ತವೆ. ವಿಂಟರ್ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ.
ಆಕರ್ಷಕ ಸ್ಕಟ್ರ್ಸ್
“ಪ್ರಿಂಟೆಡ್ ಡ್ರೇಪ್ ಸ್ಕರ್ಟ್‌ಗಳು ಈ ಹಿಂದೆ ರೆಟ್ರೊ ಫ್ಯಾಷನ್‌ನಲ್ಲಿ ಡಿಫರೆಂಟ್ ಲುಕ್‌ನಲ್ಲಿ ಪ್ರಚಲಿತದಲ್ಲಿದ್ದವು. ಮೊದಲಿಂದಲೂ ಇವು ಸಾಫ್ಟ್ ಹಾಗೂ ಜಾರುವಂತಹ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಳ್ಳುತ್ತಿದ್ದವು. ಚೈನಾ ಸಿಲ್ಕ್ ಹಾಗೂ ಗಾರ್ಡನ್ ಸಿಲ್ಕ್‌ನಲ್ಲಿ ಇವನ್ನು ಸಿದ್ಧಗೊಳಿಸಲಾಗುತ್ತಿತ್ತು. ಇದೀಗ ಇವನ್ನು ರಯಾನ್ ಹಾಗೂ ಸಿಲ್ಕ್ ಪ್ರಿಂಟೆಡ್ ಕಾಟನ್ ಫ್ಯಾಬ್ರಿಕ್‌ನಲ್ಲೂ ಸಿದ್ಧಗೊಳಿಸಲಾಗುತ್ತಿದೆ. ಹಾಗಾಗಿ ಇವು ನೋಡಲು ಆಕರ್ಷಕವಾಗಿ ಕಾಣುತ್ತವೆ” ಎನ್ನುತ್ತಾರೆ ಫ್ಯಾಷನ್ ಡಿಸೈನರ್‌ಗಳು.
ಕೋ ಆರ್ಡ್ ಫ್ಯಾಷನ್‌ಗೆ ತಕ್ಕಂತೆ ಶೇಡ್ಸ್
ನಾನಾ ಬಗೆಯ ಫ್ಲೋರಲ್ ಪ್ರಿಂಟ್ಸ್, ಜೆಮೆಟ್ರಿಕಲ್ ಪ್ರಿಂಟ್ಸ್, ಕ್ರಿಸ್ ಕ್ರಾಸ್, ಮಂಡಲಾ ಹೀಗೆ ಸಾಕಷ್ಟು ಪ್ರಿಂಟಿಂಗ್ ಡಿಸೈನ್‌ಗಳಲ್ಲಿ ಈ ಶೈಲಿಯ ಕೋ ಆರ್ಡ್ ಸೆಟ್ ಸ್ಕರ್ಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ತಾರೆಯರು ಈ ಶೈಲಿಯ ಕೋ ಆರ್ಡ್ ಸೆಟ್ ಸ್ಕರ್ಟ್ ಪ್ರಿಯರು. ಅದರಲ್ಲೂ ಸ್ಕಿಟ್‌ನಂತಿರುವ ಸ್ಕರ್ಟ್ ಧರಿಸುವುದು ಹೆಚ್ಚು. ಡಿಸೈನರ್ ಕೋಆರ್ಡ್ ಸೆಟ್ ಎಂದು ಕರೆಯಲಾಗುವ ಈ ಡಿಸೈನರ್‌ವೇರ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಲು ಸಾಧ್ಯವಿಲ್ಲದ್ದರಿಂದ ಸೆಲೆಬ್ರೆಟಿಗಳು ಹೆಚ್ಚು ಧರಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು
ಉಲ್ಲಾಸ ಮೂಡಿಸುವ ಪ್ರಿಂಟೆಡ್ ಕೋ ಆರ್ಡ್ ಸೆಟ್ ಸ್ಕರ್ಟ್
ಯಂಗ್ ಲುಕ್ ನೀಡುವ ಕೋ ಆರ್ಡ್ ಸೆಟ್ ಸ್ಕರ್ಟ್‌ಗಳ ಪ್ರಿಂಟ್ಸ್ ನೋಡಲು ಮನಮೋಹಕವಾಗಿರುವುದರಿಂದ ಮನಸ್ಸಿಗೆ ಉಲ್ಲಾಸ ನೀಡುತ್ತವೆ ಎನ್ನುತ್ತಾರೆ ಡಿಸೈನರ್ಸ್. ಅವರ ಪ್ರಕಾರ, ಈ ಸ್ಕರ್ಟ್‌ಗಳನ್ನು ಧರಿಸಿದಾಗ ಚಿಕ್ಕ ವಯಸ್ಸಿನವರಂತೆ ಬಿಂಬಿಸುತ್ತವೆ.
ಕೋ ಆರ್ಡ್ ಸೆಟ್ ಸ್ಕರ್ಟ್ ಮೇಕ್‌ಓವರ್
- ಆಕ್ಸೆಸರೀಸ್ ಸಿಂಪಲ್ ಆಗಿರಲಿ.
- ಮ್ಯಾಚಿಂಗ್ ಫುಟ್ವೇರ್ ಧರಿಸಬಹುದು.
- ಹೇರ್ಸ್ಟೈಲ್ ಸ್ಟೈಲಿಶ್ ಆಗಿರಲಿ.
- ಆದಷ್ಟೂ ಲೈಟ್ ಪ್ರಿಂಟ್ಸ್ ಇರುವಂತದ್ದನ್ನು ಆಯ್ಕೆ ಮಾಡಿ.
- ವೆಸ್ಟರ್ನ್ ಲುಕ್ ನೀಡುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bridal Footwear Fashion: ಮದುಮಗಳ ಜಗಮಗಿಸುವ ಗ್ರ್ಯಾಂಡ್ ಪಾದರಕ್ಷೆಗಳಿಗೆ 5 ಸಿಂಪಲ್ ಸಲಹೆ