ಸಂದರ್ಶನ : ಶೀಲಾ ಸಿ. ಶೆಟ್ಟಿ
ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ಇಸ್ರೋ ರೂಪ ಮಳಲಿ ಯಾರಿಗೆ ಗೊತ್ತಿಲ್ಲ! ಯಶಸ್ವಿ ಚಂದ್ರಯಾನ ಮೂರರ ನಂತರ ಸಾಕಷ್ಟು ಗುರುತಿಸಿಕೊಂಡವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ನಮ್ಮ ಕನ್ನಡತಿ. ಅವರ ಸಾಧನೆ ಬಗ್ಗೆ ಅವರ ಜೀವನಗಾಥೆ ಕುರಿತಂತೆ ಸಾಕಷ್ಟು ಕಡೆ ಸುದ್ದಿಯಾಗಿದೆ. ಅವರ ಕಾರ್ಯವೈಖರಿ ಕುರಿತಂತೆಯೂ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗಿರುವುದು, ನಾನಾ ಪ್ರಶಸ್ತಿ ಪುರಸ್ಕಾರ ದೊರೆತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮಧ್ಯೆ ಉದ್ಯಾನನಗರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ತಮ್ಮ ಸಿಂಪಲ್ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ಸ್ ಬಗ್ಗೆ ಸಂದರ್ಶನ ನೀಡಿದರು. ಈ ಕುರಿತ (Cotton Saree Fashion) ಸಂಕ್ಷಿಪ್ತ ಸಾರಂಶ ಇಲ್ಲಿದೆ.
ವಿಸ್ತಾರ ನ್ಯೂಸ್: ಸದಾ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಝಿಯಾಗಿರುವ ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಗೆ ಜಾಗವಿದೆಯೇ!
ರೂಪಾ ಮಳಲಿ : ಖಂಡಿತಾ ಇಲ್ಲ! ನಾನೆಂದು ಫ್ಯಾಷನ್ ಹಾಗೂ ಸ್ಟೈಲ್ ಎಂದೆಲ್ಲಾ ತಲೆಕೆಡಿಸಿಕೊಂಡವಳಲ್ಲ! ನನ್ನ ಗುರಿ ನನ್ನ ಸಾಧನೆ ಬಗ್ಗೆ ಸದಾ ಯೋಚಿಸುವವಳು. ಇನ್ನು ಇವೆಲ್ಲದರ ಮಧ್ಯೆ ನನ್ನ ಜೀವನಶೈಲಿಗೆ ತಕ್ಕಂತೆ ಅಗತ್ಯವಿರುವುದನ್ನು ಫಾಲೋ ಮಾಡುತ್ತೇನಷ್ಟೇ!
ವಿಸ್ತಾರ ನ್ಯೂಸ್: ನಿಮಗೆ ಕಾಟನ್ ಸೀರೆಗಳೆಂದರೇ ಇಷ್ಟವಂತೆ ?
ರೂಪಾ ಮಳಲಿ : ಹೌದು. ನನಗೆ ಕಾಟನ್ ಸೀರೆಗಳೆಂದರೇ ತುಂಬಾ ಇಷ್ಟ. ನಾನು ಹೆಚ್ಚಾಗಿ ಕಾಟನ್ ಸೀರೆಗಳನ್ನೇ ಉಡುತ್ತೇನೆ.
ವಿಸ್ತಾರ ನ್ಯೂಸ್ : ಹಾಗಾದಲ್ಲಿ, ನೀವು ಸೀರೆ ಪ್ರೇಮಿಯಾ ?
ರೂಪಾ ಮಳಲಿ: ಪ್ರತಿ ಮಹಿಳೆಗೂ ಸೀರೆ ಪ್ರೇಮ ಇದ್ದೇ ಇರುತ್ತದೆ. ಅದರಲ್ಲೂ ನನಗೆ ಸಿಂಪಲ್ ಕಾಟನ್ ಸೀರೆಗಳೆಂದರೇ ಮೊದಲಿನಿಂದಲೂ ಪ್ರೀತಿ. ಇದಕ್ಕೆ ಕಾರಣವೂ ಇದೆ. ಅವು ಲೈಟ್‌ವೈಟ್ ಆಗಿರುತ್ತವೆ. ನೋಡಲು ಆಕರ್ಷಕವಾಗಿ ಕಾಣುತ್ತವೆ. ಇನ್ನು ಉಟ್ಟಾಗ ಎಲಿಗೆಂಟ್ ಲುಕ್ ನೀಡುತ್ತವೆ.
ವಿಸ್ತಾರ ನ್ಯೂಸ್: ನಿಮ್ಮ ಬಳಿ ಸೀರೆ ಕಲೆಕ್ಷನ್ ಇದೆಯಾ?
ರೂಪಾ ಮಳಲಿ : ಒಂದಿಷ್ಟು ಇದೆ. ಹಾಗೆಂದು ರಾಶಿ ರಾಶಿ ಸೀರೆಗಳ ಕಲೆಕ್ಷನ್ ಇಲ್ಲ! ನನಗೆ ಅಗತ್ಯವಿರುವಷ್ಟು ಸೀರೆಗಳಿವೆ. ರೇಷ್ಮೆ ಸೀರೆಗಳಿಗಿಂತ ಹೆಚ್ಚಾಗಿ ಕಾಟನ್ ಸೀರೆಗಳು ನನ್ನ ಬಳಿ ಇವೆ.
ವಿಸ್ತಾರ ನ್ಯೂಸ್ : ನಿಮಗೆ ಡ್ರೆಸ್‌ಕೋಡ್ ಇದೆಯಾ? ನಿಮ್ಮ ವರ್ಕಿಂಗ್ ನೇಚರ್‌ನಲ್ಲಿ ನೀವು ಪ್ರಿಫರ್ ಮಾಡುವ ಉಡುಪು ಯಾವುದು?
ರೂಪಾ ಮಳಲಿ : ಡ್ರೆಸ್‌ಕೋಡ್ ಇಲ್ಲ! ನಮ್ಮ ವರ್ಕ್ ನೇಚರ್‌ನಲ್ಲಿ ಇದೇ ಉಡುಪು ಧರಿಸಬೇಕೆಂಬ ನಿಯಮವೇನೂ ಇಲ್ಲ! ಆಯಾ ವ್ಯಕ್ತಿಗೆ ಅನುಗುಣವಾಗಿ ಅವರವರು ತಂತಮ್ಮ ಡ್ರೆಸ್‌ಕೋಡ್ ನಿರ್ಧರಿಸುತ್ತಾರೆ. ಹಾಗೆಯೇ ನಾನು ಕೂಡ. ಸಿಂಪಲ್, ಎಲಿಗೆಂಟ್ ಹಾಗೂ ಡಿಸೆಂಟ್ ಉಡುಪನ್ನು ಧರಿಸಲು ಇಷ್ಟಪಡುತ್ತೇನೆ.
ವಿಸ್ತಾರ ನ್ಯೂಸ್: ನಿಮ್ಮ ಯೂನಿಕ್ ಸ್ಟೈಲ್ ಸ್ಟೇಟ್ಮೆಂಟ್ ಬಗ್ಗೆ ಹೇಳಿ ?
ರೂಪ ಮಳಲಿ : ನನ್ನದು ಯೂನಿಕ್ ಎನ್ನುವುದಕ್ಕಿಂತ ಸದಾ ಸಿಂಪಲ್ ಕಾಟನ್ ಸೀರೆ, ಅದಕ್ಕೊಂದು ಪರ್ಲ್ ನೆಕ್‌ಪೀಸ್, ಸ್ಟಡ್ಸ್ ಧರಿಸುತ್ತೇನೆ. ಇದು ನನ್ನ ಆಲ್ ಟೈಮ್ ಯೂನಿಕ್ ಸ್ಟೈಲ್ ಸ್ಟೇಟ್ಮೆಂಟ್ಸ್.
ವಿಸ್ತಾರ ನ್ಯೂಸ್: ಉದ್ಯೋಗಸ್ಥ ಮಹಿಳೆಯರಿಗೆ ನೀವು ನೀಡುವ ಟಿಪ್ಸ್ ಏನು ?
ರೂಪಾ ಮಳಲಿ : ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಿಮ್ಮ ಲೈಫ್‌ಸ್ಟೈಲ್ ರೂಪಿಸಿಕೊಳ್ಳಿ. ಗುರಿಯೊಂದಿಗೆ ನಿಮ್ಮ ಚಾಯ್ಸ್ಗೂ ಅವಕಾಶ ನೀಡಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಇನ್ನು, ಫ್ಯಾಷನ್ ವಿಷಯಕ್ಕೆ ಬಂದಲ್ಲಿ, ನಿಮ್ಮ ಮನಸ್ಸಿಗೆ ಮುದ ನೀಡುವ ಉಡುಗೆಗಳನ್ನು ಧರಿಸಿ. ಇಡೀ ದಿನ ಉಲ್ಲಾಸಮಯವಾಗಿರುತ್ತದೆ.
(ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್ ಕ್ರೌನ್‌ಗೆ ಯುವತಿಯರು ಫಿದಾ