ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟ್ ಆಗಿ ಬಿಂಬಿಸಬಲ್ಲ ನಾನಾ ಡಿಸೈನ್‌ನ ಅತ್ಯಾಕರ್ಷಕ ಹೇರ್ ಬೋಗಳು ಟ್ರೆಂಡಿಯಾಗಿವೆ. ಮುದ್ದು ಕಂದಮ್ಮನಿಂದಿಡಿದು ಕ್ಯೂಟ್ ಆಗಿರುವ ತರ್ಲೆ ಕಿಡ್‌ನವರೆಗೂ ಧರಿಸಬಹುದಾದ ಇವು ಆಕರ್ಷಕ ಡಿಸೈನ್ ಹಾಗೂ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ.
ಚಿಣ್ಣರ ಕ್ಯೂಟ್ ಲುಕ್‌ಗೆ ಹೇರ್ ಬೋ
“ಅಂದಹಾಗೆ, ಮುದ್ದಾದ ಚಿಣ್ಣರನ್ನು ಅತ್ಯಾಕರ್ಷಕವಾಗಿಸುವ ಕಿಡ್ಸ್ ಹೇರ್ ಬೋಗಳು ಇದೀಗ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಒಂದಕ್ಕಿಂತ ಒಂದು ನೋಡಲು ಆಕರ್ಷಕವಾಗಿರುವ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತಿವೆ. ಹಸುಗೂಸಿನಿಂದಿಡಿದು ಶಾಲೆಗೆ ಹೋಗುವ ಪುಟ್ಟ ಮಕ್ಕಳ ತಲೆಗೂದಲನ್ನು ಸಿಂಗರಿಸುತ್ತಿವೆ. ಎಲ್ಲರನ್ನೂ ಕ್ಯೂಟಾಗಿ ಬಿಂಬಿಸುತ್ತಿವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರೀಟಾ. ಅವರ ಪ್ರಕಾರ, ಮುದ್ದು ಮಕ್ಕಳ ಮ್ಯಾಚಿಂಗ್ ಉಡುಪಿಗೆ ತಕ್ಕಂತೆ ಇವು ದೊರೆಯುತ್ತಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಹೇರ್ ಬೋಗಳಿವು
ಬಟನ್ ಬೋ, ಫ್ಯಾಬ್ರಿಕ್ ಬೋ, ಮ್ಯಾಚಿಂಗ್ ಬೋ, ಕ್ಲಿಪ್ ಸ್ಟೈಲ್ ಹೇರ್ ಬೋ, ರಿಬ್ಬನ್ ಫ್ಲವರ್ ಬೋ, ಪೋಮ್ ಪೋಮ್ ಬೋ, ಲೇಸ್, ಅರ್ಗಾನ್ಜಾ ಬೋ, ಸ್ಯಾಟೀನ್, ವೆಲ್ವೆಟ್, ನಿಟ್ಟೆಡ್ ಹೇರ್ ಬೋ, ಫ್ಲವರ್ ಬೋ, ಸಿಕ್ವೀನ್ ಹೇರ್ ಬೋ ಸೇರಿದಂತೆ ಸಾಕಷ್ಟು ಬಗೆಯವು ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, ನಾನಾ ಬ್ರಾಂಡ್‌ಗಳಲ್ಲೂ ಲಭ್ಯ. ಇನ್ನು ಲೋಕಲ್ ಬ್ರಾಂಡ್‌ನವು ಕೊಂಚ ಕಡಿಮೆ ದರಕ್ಕೆ ದೊರಕುತ್ತವೆ. ಆದರೆ, ಪುಟ್ಟ ಮಕ್ಕಳಿಗೆ ಕೊಳ್ಳುವಾಗ ಆದಷ್ಟೂ ಉತ್ತಮ ಗುಣಮಟ್ಟದ ಹೇರ್ ಬೋ ಕೊಳ್ಳುವುದು ಮುಖ್ಯ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್. ಅವರ ಪ್ರಕಾರ, ಮಕ್ಕಳಿಗೆ ಆದಷ್ಟೂ ಡಾರ್ಕ್ಗಿಂತ ಲೈಟ್ ಶೇಡ್‌ನವನ್ನು ಆಯ್ಕೆ ಮಾಡಿ ಎನ್ನುತ್ತಾರೆ.
ಚಿಣ್ಣರ ಹೇರ್ ಬೋ ಆಯ್ಕೆಗೆ 7 ಸಲಹೆಗಳು
- ಉತ್ತಮ ಗುಣಮಟ್ಟದ್ದನ್ನುಆಯ್ಕೆ ಮಾಡಿ.
- ಫ್ಯಾಬ್ರಿಕ್ ಸಾಫ್ಟ್ ಆಗಿರುವುದು ಮುಖ್ಯ.
- ಮಕ್ಕಳ ತಲೆಕೂದಲಿಗೆ ಚುಚ್ಚದ ಹೇರ್ ಬೋ ಚೂಸ್ ಮಾಡಿ.
- ಟ್ರೆಂಡಿಯಾಗಿರುವುದನ್ನು ಆಯ್ಕೆ ಮಾಡಿ.
- ಮಕ್ಕಳಿಗೆ ಇಷ್ಟವಾಗುವಂತಹ ಬ್ರೈಟ್ ಹಾಗೂ ಆಕರ್ಷಕ ಡಿಸೈನ್‌ನವನ್ನು ಕೊಳ್ಳಿ.
- ಆನ್‌ಲೈನ್‌ನಲ್ಲಿ ಸಾಕಷ್ಟು ಡಿಸೈನ್‌ನವು ದೊರೆಯುತ್ತವೆ.
- ಚಿಣ್ಣರ ಉಡುಪಿಗೆ ತಕ್ಕಂತೆ ಮ್ಯಾಚ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)