-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್ ಟ್ಯೂಬ್ ಟಾಪ್‌ಗಳು (Denim Tube Tops Fashion) ಇದೀಗ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಹೌದು, ಅಲ್ಟ್ರಾ ಮಾಡರ್ನ್ ಹುಡುಗಿಯರ ಫೆವರೇಟ್ ಲಿಸ್ಟ್‌ನಲ್ಲಿರುವ ಇವು ಗ್ಲಾಮರಸ್ ಲುಕ್ ನೀಡುತ್ತಿವೆ. ಮೊದಲೆಲ್ಲಾ ಸಾಫ್ಟ್ ಫ್ಯಾಬ್ರಿಕ್‌ನಲ್ಲಿದ್ದ ಈ ಟ್ಯೂಬ್ ಟಾಪ್‌ಗಳು ಇದೀಗ ಡೆನಿಮ್‌ನಲ್ಲೂ ಬಂದಿರುವುದು ಯುವತಿಯರ ವಾರ್ಡ್ರೋಬ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟ್ ನ್ಯಾಸ. ಅವರ ಪ್ರಕಾರ, ಟೀನೇಜ್ ಹುಡುಗಿಯರಿಂದಿಡಿದು ಕಾರ್ಪೋರೇಟ್ ಕ್ಷೇತ್ರದವರು ಕೂಡ ಈ ಟಾಪ್‌ಗಳ ಪ್ರೇಮಿಗಳು.
ಟ್ರೆಂಡಿಯಾಗಿರುವ ಡೆನಿಮ್ ಟ್ಯೂಬ್ ಟಾಪ್ಟ್
ಇಡೀ ಭುಜವನ್ನು ಎಕ್ಸ್‌ಫೋಸ್ ಮಾಡುವ ಆಫ್ ಶೋಲ್ಡರ್, ಬಾಡಿಕಾನ್, ಕಾರ್ಸೆಟ್ ಶೈಲಿಯವು ಟ್ಯೂಬ್ ಟಾಪ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವುಗಳ ವಿಶೇಷ ಎಂದರೇ, ಬಟನ್ ಇರುವಂತವು ಆಗಮಿಸಿವೆ. ವಿಂಟೇಜ್ ಬಟನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಇತರೇ ಟ್ಯೂಬ್ ಟಾಪ್‌ಗಳಿಗೆ ಬಟನ್ ಇರುವುದಿಲ್ಲ. ಬದಲಿಗೆ ಸ್ಟ್ರೆಚಬಲ್ ಫ್ಯಾಬ್ರಿಕ್ ಹೊಂದಿರುತ್ತವೆ. ಎಲಾಸ್ಟಿಕ್‌ನಂತೆ ಎಳೆದಾಗ ಸ್ಟ್ರೆಚ್ ಆಗುತ್ತವೆ. ಆದರೆ, ಡೆನಿಮ್‌ನವು ಕೊಂಚ ದಪ್ಪ ಫ್ಯಾಬ್ರಿಕ್ ಹೊಂದಿರುವುದರಿಂದ ಇವಕ್ಕೆ ಬಟನ್‌ಗಳನ್ನು ಫಿಕ್ಸ್ ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್.
ಡೆನಿಮ್ ಟ್ಯೂಬ್ ಟಾಪ್ ಮಿಕ್ಸ್-ಮ್ಯಾಚ್
ಡೆನಿಮ್ ಟ್ಯೂಬ್ ಟಾಪ್‌ಗಳನ್ನು ನಾನಾ ರೀತಿಯಲ್ಲಿ ಧರಿಸಬಹುದು. ಕೋ ಆರ್ಡ್ ಸೆಟ್‌ನಂತೆ ಬಿಂಬಿಸಬೇಕಾದಲ್ಲಿ ಅವನ್ನು ನಾನಾ ಬಗೆಯ ಜೀನ್ಸ್ ಪ್ಯಾಂಟ್‌ಗಳೊಂದಿಗೆ ಧರಿಸಬಹುದು. ಡೆನಿಮ್ ಶಾರ್ಟ್ಸ್ ಹಾಗೂ ಸ್ಕರ್ಟ್ಸ್‌ನೊಂದಿಗೂ ಧರಿಸಬಹುದು. ಡಿಫರೆಂಟ್ ಲುಕ್ ನೀಡಲು ಇತರೇ ಫ್ಯಾಬ್ರಿಕ್‌ನ ಸ್ಕರ್ಟ್ಸ್ ಅಥವಾ ಪ್ಯಾಂಟ್ ಜೊತೆಯೂ ಧರಿಸಬಹುದು. ನಿಮಗೆ ಮಿಕ್ಸ್-ಮ್ಯಾಚ್ ಮಾಡುವ ಸ್ಟೈಲಿಂಗ್ ಬಗ್ಗೆ ಬೇಸಿಕೆ ಅರಿವಿರಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಲೈಟ್‌ವೈಟ್ ಫ್ಯಾಬ್ರಿಕ್‌ನ ಆಯ್ಕೆ
“ಡೆನಿಮ್ ಟ್ಯೂಬ್ ಟಾಪ್‌ಗಳಲ್ಲೂ ಇದೀಗ ಲೈಟ್ ವೈಟ್ ಇರುವಂತಹ ಭಾರವಿಲ್ಲದ ಫ್ಯಾಬ್ರಿಕ್‌ನವನ್ನು ನಾನಾ ಬ್ರಾಂಡ್‌ಗಳು ಮಾರಾಟ ಮಾಡುತ್ತಿವೆ. ಖರೀದಿಸುವಾಗ ನೋಡಿ ಕೊಳ್ಳಬೇಕು” ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಜ್.
ಡೆನಿಮ್ ಟ್ಯೂಬ್ ಟಾಪ್ ಪ್ರಿಯರಿಗೆ 5 ಟಿಪ್ಸ್
- ಟ್ರಯಲ್ ನೋಡದೇ ಯಾವುದೇ ಕಾರಣಕ್ಕೂ ಖರೀದಿಸಬೇಡಿ.
- ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ಫಿಟ್ ಆಗಿ ಕೂರುವುದಾದಲ್ಲಿ ಮಾತ್ರ ಧರಿಸಿ.
- ತೀರಾ ಸ್ಲಿಮ್ ಅಥವಾ ತೀರಾ ಪ್ಲಂಪಿಯಾಗಿರುವವರಿಗೂ ಇವು ಸೂಕ್ತವಲ್ಲ.
- ಟ್ಯೂಬ್ ಟಾಪ್ಸ್ನೊಳಗೆ ಟೈಟ್ ಇನ್ನರ್ ಧರಿಸುವುದು ಅಗತ್ಯ.
- ಎಕ್ಸ್ ಪೋಸ್ ಆಗುವುದರಿಂದ ಸಂದರ್ಭಕ್ಕೆ ತಕ್ಕಂತೆ ಚೂಸ್ ಮಾಡಿ.
( ಲೇಖಕಿ: ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್ ಧರಿಸಿದ ನಟಿ ತಮನ್ನಾಳ ಯೂನಿಕ್ ಫ್ಯಾಷನ್!