ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಾಪ್ ಜಾಕೆಟ್ ಡಿಸೈನರ್ ಸೀರೆಗಳು ಇದೀಗ ಸೀರೆ ಲೋಕದಲ್ಲಿ (Crop Jacket Saree Fashion) ಹಂಗಾಮ ಎಬ್ಬಿಸಿವೆ. ಸೀಸನ್‌ನ ಹೈ ಫ್ಯಾಷನ್‌ನಲ್ಲಿ ಇವು ಸಿನಿಮಾ ತಾರೆಯರನ್ನು ಹಾಗೂ ಸೆಲೆಬ್ರೆಟಿಗಳನ್ನು ಸೆಳೆದಿವೆ.
ವಿಂಟರ್ ಫ್ಯಾಷನ್‌ನ ತಾರೆಯರ ಹೈ ಫ್ಯಾಷನ್‌ನಲ್ಲಿ ಸ್ಥಾನ ಗಳಿಸಿರುವ ಈ ಮಾನೋಕ್ರೋಮ್ ಡಿಸೈನರ್ ಕ್ರಾಪ್ ಜಾಕೆಟ್ ಸೀರೆಗಳು ದುಬಾರಿ ಫ್ಯಾಬ್ರಿಕ್ ಹಾಗೂ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಬಾಲಿವುಡ್ ಹಾಗೂ ಸೀರಿಯಲ್ ನಟಿಯರು ಧರಿಸಿದ ನಂತರ ಸಾಮಾನ್ಯ ಸೀರೆ ಪ್ರಿಯರನ್ನು ಆಕರ್ಷಿಸುತ್ತಿವೆ.
ಚಳಿಗಾಲಕ್ಕೆ ಕ್ರಾಪ್ ಜಾಕೆಟ್ ಸೀರೆ ಸಾಥ್
“ಚಳಿಗಾಲದಲ್ಲಿ ನಾನಾ ಬಗೆಯ ಲೇಯರ್ ಲುಕ್ ನೀಡುವ ಸೀರೆಗಳು ಪ್ರಚಲಿತಕ್ಕೆ ಬರುತ್ತವೆ. ಕೆಲವು ಕ್ಯಾಶುವಲ್ ಲುಕ್‌ನಲ್ಲಿ ಇವಕ್ಕೆ ರೂಪ ನೀಡಿದರೇ, ಇನ್ನು ಕೆಲವು ಡಿಸೈನರ್‌ಗಳು ಫ್ಯೂಷನ್ ವಿನ್ಯಾಸದಲ್ಲಿ ರೂಪ ನೀಡಿದ್ದಾರೆ. ಮತ್ತೆ ಕೆಲವರು ಹೊಸ ವಿನ್ಯಾಸದ ಮಾನೋಕ್ರೋಮ್ ಶೇಡ್‌ಗಳಲ್ಲೆ ಸೀರೆಯನ್ನು ಡಿಸೈನ್ ಮಾಡಿದ್ದಾರೆ. ಇದೀಗ, ಈ ಡಿಸೈನರ್ ಸೀರೆಗಳು ಚಾಲ್ತಿಗೆ ಬಂದಿದ್ದು, ಶ್ರೀಮಂತರ ವಾರ್ಡ್ರೋಬ್ ಸೇರಿವೆ. ಪಾರ್ಟಿವೇರ್ ಸೀರೆಗಳ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ” ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ ಅಬ್ರಾಹಂ. ಅವರ ಪ್ರಕಾರ, ಒಂದೇ ಶೇಡ್‌ನ ಫ್ಯಾಬ್ರಿಕ್‌ನಿಂದ ಮಾಡಿರುವ ಈ ಕ್ರಾಪ್ ಜಾಕೆಟ್ ಸೀರೆಗಳು ಇತ್ತೀಚೆಗೆ ಸ್ವಾತಿ ಒಬ್‌ರಾಯ್‌ರ ಲೆಬೆಲ್‌ನಲ್ಲಿ ನಟಿ ನರ್ಗಿಸ್ ಫಕ್ರಿ ಧರಿಸಿದ ನಂತರ ಸಾಕಷ್ಟು ಮಹಿಳೆಯರನ್ನು ಸೆಳೆಯಿತು. ಟ್ರೆಂಡ್ ಹುಟ್ಟು ಹಾಕಲು ಕಾರಣವಾಯಿತು ಎನ್ನುತ್ತಾರೆ.
ಏನಿದು ಕ್ರಾಪ್ ಜಾಕೆಟ್ ಸೀರೆ?
ಡಿಸೈನರ್ ಸೀರೆ ಬ್ಲೌಸ್‌ನೊಂದಿಗೆ ಮೇಲುಡುಗೆಯಂತೆ ಚಿಕ್ಕ ಅಂದರೆ ತುಂಡಾದ ಕ್ರಾಪ್ ಜಾಕೆಟ್ ಧರಿಸುವುದು. ಇದನ್ನು ಕ್ರಾಪ್ ಜಾಕೆಟ್ ಸೀರೆ ಸ್ಟೈಲಿಂಗ್ ಎನ್ನಲಾಗುತ್ತದೆ. ಇನ್ನು ಜಾಕೆಟ್ ಇಲ್ಲದೆಯೂ ಇದನ್ನು ಕೇವಲ ಬ್ಲೌಸ್‌ನೊಂದಿಗೆ ಧರಿಸಬಹುದು. ಆದರೆ, ಈ ಸೀಸನ್‌ನಲ್ಲಿ ಲೇಯರ್ ಲುಕ್ ನೀಡುವ ಸಲುವಾಗಿ ಡಿಸೈನರ್‌ಗಳು ಕ್ರಾಪ್ ಜಾಕೆಟನ್ನು ಜೊತೆಯಾಗಿಸಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕ್ರಾಪ್ ಜಾಕೆಟ್ ಸೀರೆ ಸ್ಟೈಲಿಂಗ್
- ಎತ್ತರವಾಗಿರುವವರಿಗೆ ಲೇಯರ್ ಲುಕ್ ನೀಡುವ ಕ್ರಾಪ್ ಜಾಕೆಟ್ ಸೀರೆ ಆಕರ್ಷಕವಾಗಿ ಕಾಣುತ್ತದೆ.
- ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಮಿಕ್ಸ್ ಮ್ಯಾಚ್ ಮಾಡಿ ಕ್ರಾಪ್ ಜಾಕೆಟ್ ಸೀರೆ ಧರಿಸಬಹುದು.
- ಮೆಸ್ಸಿ ಹೇರ್ ಸ್ಟೈಲ್ ಬೇಡ. ಸಿಂಪಲ್ಲಾಗಿರಲಿ.
- ಸೀರೆಯ ಫ್ಯಾಬ್ರಿಕ್ ಸಾಫ್ಟ್ ಆಗಿರಲಿ.
- ಅತಿಯಾದ ಡಿಸೈನ್ ಇರುವಂತಹ ಸೀರೆಯ ಆಯ್ಕೆ ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bell Bottom Jeans Fashion: ಮತ್ತೆ ಫ್ಯಾಷನ್ ಗೆ ಬಂತು ಬೆಲ್ ಬಾಟಮ್ ಜೀನ್ಸ್ ಪ್ಯಾಂಟ್!