-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವಂತಹ ವೆರೈಟಿ ಡಿಸೈನರ್ ಹೇರ್‌ಪಿನ್‌ಗಳು (Designer Hairpins Fashion) ಟ್ರೆಂಡಿಯಾಗಿವೆ. ಸಿಂಪಲ್ ಪರ್ಲ್ ಡಿಸೈನ್‌ನಿಂದಿಡಿದು ಸ್ಟೋನ್‌ನಿಂದ ಸಿಂಗಾರಗೊಂಡ ಮಲ್ಟಿ ಡಿಸೈನ್‌ನ ಹೇರ್‌ಪಿನ್‌ಗಳು ಹೇರ್‌ಸ್ಟೈಲ್ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಹೆಣ್ಣುಮಕ್ಕಳ ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್ ಲುಕ್ ನೀಡುವ ಈ ಡಿಸೈನರ್ ಹೇರ್‌ಪಿನ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಆಯಾ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಹುಡುಗಿಯರನ್ನು ಸಿಂಗರಿಸುತ್ತಿವೆ.
ಡಿಸೈನರ್ ಹೇರ್‌ಪಿನ್ಸ್ ಲೋಕ
ಫ್ಯಾನ್ಸಿ ಶಾಪ್‌ಗಳಿಗೆ ಕಾಲಿಟ್ಟರೇ ಸಾಕು, ಊಹೆಗೂ ಮೀರಿದ ಡಿಸೈನ್‌ನ ಗ್ರ್ಯಾಂಡ್ ಲುಕ್ ನೀಡುವಂತಹ ಹಾಗೂ ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲ್ ಅಂದಗಾಣಿಸುವಂತಹ ಹೇರ್‌ಪಿನ್ಸ್ ಲಭ್ಯ. ಅವುಗಳಲ್ಲಿ ಕ್ಯಾಶುವಲ್ ಲುಕ್ ನೀಡುವಂತವು ಹಾಗೂ ಎಥ್ನಿಕ್ ಲುಕ್ ನೀಡುವಂತವು ಮತ್ತು ಪಾರ್ಟಿವೇರ್ ಹೇರ್‌ಪಿನ್ಸ್ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ಬೀಡ್ಸ್ -ಪರ್ಲ್ ಹೇರ್‌ಪಿನ್ಸ್
ಕೃತಕ ಮುತ್ತುಗಳಿಂದ ಸಿಂಗರಿಸಿದ ಹೇರ್‌ಪಿನ್‌ಗಳು ಒಂದು ಲೈನ್‌ನಿಂದಿಡಿದು ನಾಲ್ಕೈದು ಸಾಲಿನಂತಿರುವ ಡಿಸೈನ್‌ನವು ಮಿಕ್ಸ್ ಮ್ಯಾಚ್ ಬೀಡ್ಸ್‌ನೊಂದಿಗೆ ಡಿಸೈನ್ ಮಾಡಿದವು ಯುವತಿಯರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿವೆ. ಇವು ಜಡೆ ಹೆಣೆದವರೂ ಕೂಡ ಧರಿಸಬಹುದು. ಫ್ರೀ ಕೂದಲಿನ ಹೇರ್‌ಸ್ಟೈಲ್ ಮಾಡುವವರೂ ಧರಿಸಬಹುದು.
ಡಿಸೈನರ್ ಹೇರ್‌ಪಿನ್ಸ್
ಹೂ ಗುಚ್ಛಗಳಂತೆ ಕಾಣುವ ಪುಟ್ಟ ಬಾಚಣಿಗೆಯ ಹಲ್ಲುಗಳ ಮೇಲೆ ಜೋಡಿಸಿದಂತೆ ಕಾಣುವ ಕ್ರಿಸ್ಟಲ್, ಬೀಡ್ಸ್, ಪರ್ಲ್, ತಂತಿಗಳಿಂದಲೇ ಅಬ್‌ಸ್ಟ್ರಾಕ್ಟ್ ಡಿಸೈನ್ ಮಾಡಿರುವ ಹೇರ್ ಪಿನ್ಸ್, ಯು ಶೇಪ್ ಡಿಸೈನರ್ ಹೇರ್‌ಪಿನ್ಸ್ ಸೇರಿದಂತೆ ನಾನಾ ಬಗೆಯವು ಈ ಕೆಟಗರಿಯಲ್ಲಿ ಪ್ರಚಲಿತದಲ್ಲಿವೆ.
ಇದನ್ನೂ ಓದಿ: Printed Handbags F ashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್ ಹ್ಯಾಂಡ್ ಬ್ಯಾಗ್ಸ್
ಕೂದಲಿಗೆ ತಕ್ಕಂತೆ ಡಿಸೈನರ್ ಹೇರ್‌ಪಿನ್ಸ್ ಆಯ್ಕೆ
· ಸ್ಟ್ರೇಟ್ ಹೇರ್ ಇದ್ದವರು ತೀರಾ ಭಾರವಾದ ಡಿಸೈನರ್ ಹೇರ್‌ಪಿನ್ಸ್ ಧರಿಸುವುದು ಬೇಡ. ಧರಿಸಿದಾಗ ಜಾರಬಹುದು, ಇಲ್ಲವೇ ಕೂದಲು ಕಿತ್ತು ಬರಬಹುದು.
· ಕೂದಲಿಗೆ ಮೆಸ್ಸಿ ವಿನ್ಯಾಸ ಮಾಡಿದಾಗ ಡಿಸೈನರ್ ಹೇರ್‌ಪಿನ್ ಧರಿಸಬಹುದು.
· ಲೈಟ್‌ವೈಟ್ ಹೇರ್‌ಪಿನ್‌ಗಳ ಆಯ್ಕೆ ಮಾಡುವುದು ಉತ್ತಮ.
· ಕರ್ಲಿ ಹೇರ್ ಇರುವಂತವರು ಆದಷ್ಟೂ ಅಬ್‌ಸ್ಟ್ರಾಕ್ಟ್ ಡಿಸೈನ್, ಅಥವಾ ಸಿಕ್ಕಿಹಾಕಿಕೊಳ್ಳುವಂತಹ ಕಾಂಪ್ಲೀಕೇಟೆಡ್ ಡಿಸೈನ್ ಇರುವಂತವನ್ನು ಆವಾಯ್ಡ್ ಮಾಡುವುದು ಉತ್ತಮ.
· ಚಿಕ್ಕ ಕೂದಲಿರುವವರು ಸಿಂಪಲ್ ಲೈನ್ಸ್‌ನಲ್ಲಿ ಡಿಸೈನ್ ಮಾಡಿರುವ ಹೇರ್‌ಪಿನ್ಸ್ ಧರಿಸಬಹುದು.
· ಧರಿಸುವ
· ಹೇರ್‌ಪಿನ್ಸ್‌ನ ಫಿನಿಶಿಂಗ್ ಚೆನ್ನಾಗಿರಬೇಕು.
( ಲೇಖಕಿ ಫ್ಯಾಷನ್ ಪತ್ರಕರ್ತೆ )