-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಯರ್ ಕಫ್ ಜ್ಯುವೆಲರಿ ಫ್ಯಾಷನ್ ಮರಳಿದೆ. ಈ ಹಿಂದೆ ಫ್ಯಾಷನ್‌ನಲ್ಲಿದ್ದ ಇಯರ್ ಕಫ್ ಫ್ಯಾಷನ್ (Ear cuff fashion) ಇದೀಗ ಹೊಸ ಡಿಸೈನ್‌ಗಳಲ್ಲಿ ಹಾಗೂ ವಿನೂತನ ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಮರಳಿದೆ. ಯಾವುದೇ ಕಿವಿಯನ್ನು ಕಂಪ್ಲೀಟ್ ಅಲಂಕರಿಸುವ ಇವು ಭಾರಿ ಗಾತ್ರದಲ್ಲಿ ಲಗ್ಗೆ ಇಟ್ಟಿವೆ. ಜೆನ್ ಜಿ ಹುಡುಗಿಯರ ಅಲ್ಟ್ರಾ ಮಾಡ್ರನ್ ಲುಕ್‌ಗೆ ಮಾತ್ರವಲ್ಲ, ವೈಲ್ಡ್ ಲುಕ್‌ಗೂ ಸಾಥ್ ನೀಡುತ್ತಿವೆ. ಇನ್ನು ಟ್ರೆಡಿಷನಲ್ ಲುಕ್ ಬಯಸುವವರಿಗೂ ಎಥ್ನಿಕ್ ವೇರ್ ಡಿಸೈನ್‌ಗಳಲ್ಲಿ ಆಗಮಿಸಿವೆ.
ವೆರೈಟಿ ಡಿಸೈನ್ ಇಯರ್ ಕಫ್ ಜ್ಯುವೆಲರಿ
ಲೆಕ್ಕವಿಲ್ಲದಷ್ಟು ಡಿಸೈನ್‌ನ ಇಯರ್ ಕಫ್ ಜ್ಯುವೆಲರಿಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ ಕ್ರಿಸ್ಟಲ್, ಅಮೆರಿಕನ್ ಡೈಮಂಡ್, ಸಿಲ್ವರ್, ಪ್ಲಾಟಿನಂ, ಕೋಟೆಡ್, ಗೋಲ್ಡ್ ಕೋಟೆಡ್, ಗೋಲ್ಡ್ ಕೋಟೆಡ್, ಲಿಂಕ್ ಡಿಸೈನ್, ಪ್ರೆಸ್ ಹಾಗೂ ಕ್ಲಿಪಾನ್ ಡಿಸೈನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಂದಕ್ಕಿಂತ ಒಂದು ನೋಡಲು ವಿಭಿನ್ನವಾಗಿದ್ದು, ನಾನಾ ಡಿಸೈನ್‌ಗಳಲ್ಲಿ ಮಹಿಳೆಯರ ಮನ ಸೆಳೆಯುತ್ತಿವೆ. ಇನ್ನು ಫ್ಯಾನ್ಸಿ ಡಿಸೈನ್‌ಗಳು ಅತಿ ಹೆಚ್ಚು ಯುವತಿಯರನ್ನು ಸೆಳೆದಿವೆ.
ಲೈಟ್‌ವೈಟ್ ಇಯರ್ ಕಫ್
ಮೊದಲೆಲ್ಲಾ ಭಾರವಾಗಿರುತ್ತಿದ್ದ, ಈ ಇಯರ್ ಕಫ್ ಜ್ಯುವೆಲರಿಗಳು ಇದೀಗ ಲೈಟ್‌ವೈಟ್‌ನಲ್ಲಿ ಆಗಮಿಸಿವೆ. ಹಾಗಾಗಿ ಧರಿಸಿದಾಗ ಹೆಚ್ಚು ಭಾರವೆನಿಸುವುದಿಲ್ಲ ಹಾಗೂ ಕಿವಿಯ ರಂಧ್ರ ದೊಡ್ಡದಾಗುವುದಿಲ್ಲ. ಪರಿಣಾಮ, ಇದನ್ನು ಧರಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಘವ್.
ಕ್ಲಿಪಾನ್ ಇಯರ್ ಕಫ್
ಪ್ರೆಸ್ಸಿಂಗ್ ಹಾಗೂ ಕ್ಲಿಪಾನ್ ಶೈಲಿಯವು ಈ ಸೀಸನ್‌ನಲ್ಲಿ ಹೆಚ್ಚು ಆಗಮಿಸಿವೆ. ಪ್ರೆಸ್ ಮಾಡಿದರೇ ಸಾಕು ಇಡೀ ಜ್ಯುವೆಲ್ ಹಾಗೆಯೇ ಸ್ಟಿಫ್ ಆಗಿ ನಿಲ್ಲುತ್ತವೆ. ಇವುಗಳಲ್ಲೂ ಕೂಡ ಊಹೆಗೂ ಮೀರಿದ ಡಿಸೈನ್‌ಗಳು ಪಾಪುಲರ್ ಆಗಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್.
ಫ್ಯಾಷನ್ ಜ್ಯುವೆಲ್‌ನಲ್ಲಿ ಇಯರ್ ಕಫ್
ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿ ಇವು ಈ ಸೀಸನ್‌ನ ಟಾಪ್ 10 ಲಿಸ್ಟ್‌ನಲ್ಲಿವೆ. ಅವುಗಳಲ್ಲಿ ಕೃತಕ ಮೆಟಲ್‌ನವು, ಬ್ಲ್ಯಾಕ್ ಮೆಟಲ್, ವೈಟ್ ಮೆಟಲ್‌ನವು ಕಡಿಮೆ ದರದಲ್ಲಿ ದೊರೆಯುತ್ತಿವೆ. ಆನ್‌ಲೈನ್‌ನಲ್ಲಿ ಇವುಗಳ ಭರಾಟೆ ಹೆಚ್ಚು. ಕಡಿಮೆ ದರದಲ್ಲಿ ಹಾಗೂ ಡಿಸ್ಕೌಂಟ್ ದರದಲ್ಲಿ ಕೊಳ್ಳಬಹುದು.
ಇಯರ್ ಕಫ್ ಸೆಟ್
ಇನ್ನು ಕೆಲವು ಇಯರ್ ಕಫ್ ಜ್ಯುವೆಲ್‌ಗಳು ಸೆಟ್‌ನಲ್ಲೂ ದೊರೆಯುತ್ತವೆ. ಒಂದಕ್ಕೊಂದು ಕೊಂಡಿಯಂತಿರುತ್ತವೆ. ಬೇಕಾದಲ್ಲಿ ಕೇವಲ ಇಯರಿಂಗ್ಸ್ ಧರಿಸಬಹುದು. ಇಲ್ಲವೇ ಒಟ್ಟೊಟ್ಟಿಗೆ ಅಟ್ಯಾಚ್ ಮಾಡಿ ಧರಿಸಬಹುದು. ಇವುಗಳು ಸೆಟ್‌ನಂತೆಯೂ ದೊರೆಯುತ್ತವೆ.
ಇಯರ್ ಕಫ್ ಪ್ರಿಯರಿಗೆ 5 ಟಿಪ್ಸ್
- ನಿಮ್ಮ ಕಿವಿಯ ಆಕಾರಕ್ಕೆ ತಕ್ಕಂತೆ ಧರಿಸಿ.
- ಟ್ರೆಂಡಿ ಡಿಸೈನ್ ಆಯ್ಕೆ ಮಾಡಿ.
- ಕ್ರಿಸ್ಟಲ್ ಡಿಸೈನ್‌ನವು ಆಕಷಕವಾಗಿ ಕಾಣಿಸುತ್ತವೆ.
- ಜೆಮಿಟ್ರಿಕಲ್ ಡಿಸೈನ್ಸ್ ಇಂಡೋ-ವೆಸ್ಟರ್ನ್ ಲುಕ್‌ಗೆ ಬೆಸ್ಟ್.
- ಟ್ರೆಡಿಷನಲ್ ಲುಕ್ಗಾಗಿ ಎಥ್ನಿಕ್ ಡಿಸೈನ್ನವನ್ನು ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್ ಫಾಲೋ ಮಾಡಿ!