-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾದಾ-ಸೀದಾ ಹಾಗೂ ಸಿಂಪಲ್ ವಿನ್ಯಾಸದಲ್ಲಿ ದೊರೆಯುತ್ತಿದ್ದ ಪರಿಸರ ಸ್ನೇಹಿ ಉಡುಪುಗಳು (Eco friendly Fashion) ಇದೀಗ ಗ್ಲಾಮರ್ ಟಚ್ ಪಡೆದುಕೊಂಡಿವೆ. ಹೌದು. ಆಯಾ ಸೀಸನ್‌ಗೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಕೇವಲ ಪ್ರಬುದ್ಧ ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಟೀನೇಜು-ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಸಿಂಪಲ್ ಔಟ್‌ಫಿಟ್ಸ್‌ಗೆ ಗ್ಲಾಮರ್ ಟಚ್
ಮೊದಲೆಲ್ಲಾ ಕೇವಲ ದೇಸಿ ಬ್ರಾಂಡ್‌ಗಳು, ಲೋಕಲ್ ಬ್ರ್ಯಾಂಡ್‌ಗಳು ಹೆಚ್ಚಾಗಿ ಪರಿಸರ ಸ್ನೇಹಿ ಉಡುಪುಗಳನ್ನು ಸಿದ್ಧಪಡಿಸುತ್ತಿದ್ದವು. ಆದರೆ, ಇದೀಗ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳು ಕೂಡ ಕಡಿಮೆ ದರದಲ್ಲಿ ಇಂತಹ ಉಡುಪುಗಳಿಗೆ ಕೊಂಚ ಗ್ಲಾಮರ್ ಟಚ್ ನೀಡಿ ಬಿಡುಗಡೆಗೊಳಿಸಿವೆ. ಹಾಗಾಗಿ ಟೀನೇಜ್-ಕಾಲೇಜ್ ಹುಡುಗಿಯರು ಕೂಡ ಇವುಗಳತ್ತ ವಾಲುತ್ತಿದ್ದಾರೆ. ಇಷ್ಟಪಟ್ಟು ಧರಿಸತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಸಮೀಕ್ಷಾ ವರದಿ
ಅಂತಾರಾಷ್ಟ್ರೀಯ ಫ್ಯಾಷನ್ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ, ಇತ್ತೀಚೆಗೆ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳಾದ ಬಗೆಬಗೆಯ ಕಾಟನ್, ಲಿನಿನ್, ಖಾದಿಯಲ್ಲಿ ಅತಿ ಹೆಚ್ಚು ಸಿದ್ಧ ಉಡುಪುಗಳು ತಯಾರಾಗುತ್ತಿವೆ. ಸಂತಸದ ವಿಚಾರವೆಂದರೇ, ಆಯಾ ಸೀಸನ್‌ಗೆ ತಕ್ಕಂತೆ ಆಗಾಗ್ಗೆ ಹೊಸ ವಿನ್ಯಾಸಗಳನ್ನು ಹೊರತರಲಾಗುತ್ತಿದೆ. ಕೇವಲ ಕ್ಯಾಶುವಲ್ ಉಡುಪುಗಳಲ್ಲಿ ಮಾತ್ರವಲ್ಲ, ಎಥ್ನಿಕ್, ಸೆಮಿ ಎಥ್ನಿಕ್ ಔಟ್‌ಫಿಟ್‌ಗಳಲ್ಲೂ ಗ್ಲಾಮರ್ ಟಚ್ ನೀಡಲಾಗುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀನತ್.
ಇದನ್ನೂ ಓದಿ: EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
ಪಾಪುಲರ್ ಡಿಸೈನ್ಸ್
ಈ ಸೀಸನ್‌ನಲ್ಲಿ ಕಾಟನ್, ಲಿನಿನ್‌ನ ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಬಾರ್ಡಟ್ ಟಾಪ್, ಕಟೌಟ್ ಟಾಪ್, ಡ್ರೆಸ್, ಸ್ಟ್ರಾಪ್ ಟಾಪ್, ಟ್ಯಾಂಕ್ ಟಾಪ್ ಹಾಗೂ ನೀ ಲೆಂತ್ ಫ್ರಾಕ್‌ಗಳು ಹೆಚ್ಚು ಪಾಪುಲರ್ ಆಗಿವೆ. ಇನ್ನು ಇವುಗಳಲ್ಲೂ ಕ್ರಾಪ್ ಟಾಪ್ ಹಾಗೂ ಬ್ಯಾಕ್‌ಲೆಸ್ ಮ್ಯಾಕ್ಸಿ ಸ್ಟೈಲ್ ಸ್ಕರ್ಟ್, ಕೀ ಹೋಲ್ ಲೇಸ್‌ನ ಸಿಂಗಲ್ ಶೋಲ್ಡರ್ ಡ್ರೆಸ್, ಹಾಲ್ಟರ್ ನೆಕ್ ಬ್ಲೌಸ್, ಮಿನಿ, ಮಿಡಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾಲ್‌ನ ಶೋ ರೂಮ್‌ವೊಂದರ ಸೇಲ್ಸ್ ಮ್ಯಾನೇಜರ್.
ಗ್ಲಾಮರಸ್ ಪರಿಸರ ಸ್ಬೇಹಿ ಔಟ್‌ಫಿಟ್ ಆಯ್ಕೆ :
- ಸಾಫ್ಟ್ ಫ್ಯಾಬ್ರಿಕ್ನದ್ದನ್ನು ಆಯ್ಕೆ ಮಾಡಿ.
- ಟ್ರೆಂಡಿ ಪ್ರಿಂಟ್ಸ್ ಅಥವಾ ಮಾನೋಕ್ರೋಮ್ನದ್ದನ್ನು ಚೂಸ್ ಮಾಡಿ.
- ಮಿಕ್ಸ್ ಮ್ಯಾಚ್ ಫ್ಯಾಷನ್ಗೆ ಹೊಂದುವಂತಿದ್ದರೇ ಮುಂದಿನ ಸೀಸನ್ಗೂ ಧರಿಸಬಹುದು.
- ಟ್ರಯಲ್ ನೋಡಿ, ಫಿಟ್ಟಿಂಗ್ ಇರುವಂತದ್ದನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)