Eco friendly Fashion In Dress Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಸಿಕ್ತು ಗ್ಲಾಮರ್‌ ಟಚ್‌ - Vistara News

ಫ್ಯಾಷನ್

Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಸಿಕ್ತು ಗ್ಲಾಮರ್‌ ಟಚ್‌

Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಇದೀಗ ಗ್ಲಾಮರ್ ಟಚ್‌ ಸಿಕ್ಕಿದೆ. ಸಾದಾ-ಸೀದಾ ಸಿಂಪಲ್‌ ಆಗಿದ್ದ, ಇಕೋ ಫ್ರೆಂಡ್ಲಿ ಔಟ್‌ಫಿಟ್‌ಗಳು ಇದೀಗ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಸಸ್ಟೈನಬಲ್‌ ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಗತೊಡಗಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Eco friendly Fashion In Dress
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಾದಾ-ಸೀದಾ ಹಾಗೂ ಸಿಂಪಲ್‌ ವಿನ್ಯಾಸದಲ್ಲಿ ದೊರೆಯುತ್ತಿದ್ದ ಪರಿಸರ ಸ್ನೇಹಿ ಉಡುಪುಗಳು (Eco friendly Fashion) ಇದೀಗ ಗ್ಲಾಮರ್‌ ಟಚ್‌ ಪಡೆದುಕೊಂಡಿವೆ. ಹೌದು. ಆಯಾ ಸೀಸನ್‌ಗೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಕೇವಲ ಪ್ರಬುದ್ಧ ಫ್ಯಾಷನ್‌ ಪ್ರಿಯರನ್ನು ಮಾತ್ರವಲ್ಲ, ಟೀನೇಜು-ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

ಸಿಂಪಲ್‌ ಔಟ್‌ಫಿಟ್ಸ್‌ಗೆ ಗ್ಲಾಮರ್‌ ಟಚ್‌

ಮೊದಲೆಲ್ಲಾ ಕೇವಲ ದೇಸಿ ಬ್ರಾಂಡ್‌ಗಳು, ಲೋಕಲ್‌ ಬ್ರ್ಯಾಂಡ್‌ಗಳು ಹೆಚ್ಚಾಗಿ ಪರಿಸರ ಸ್ನೇಹಿ ಉಡುಪುಗಳನ್ನು ಸಿದ್ಧಪಡಿಸುತ್ತಿದ್ದವು. ಆದರೆ, ಇದೀಗ ಫ್ಯಾಷನ್‌ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂಟರ್‌ನ್ಯಾಷನಲ್‌ ಬ್ರ್ಯಾಂಡ್‌ಗಳು ಕೂಡ ಕಡಿಮೆ ದರದಲ್ಲಿ ಇಂತಹ ಉಡುಪುಗಳಿಗೆ ಕೊಂಚ ಗ್ಲಾಮರ್‌ ಟಚ್‌ ನೀಡಿ ಬಿಡುಗಡೆಗೊಳಿಸಿವೆ. ಹಾಗಾಗಿ ಟೀನೇಜ್‌-ಕಾಲೇಜ್‌ ಹುಡುಗಿಯರು ಕೂಡ ಇವುಗಳತ್ತ ವಾಲುತ್ತಿದ್ದಾರೆ. ಇಷ್ಟಪಟ್ಟು ಧರಿಸತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಸಮೀಕ್ಷಾ ವರದಿ

ಅಂತಾರಾಷ್ಟ್ರೀಯ ಫ್ಯಾಷನ್‌ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ, ಇತ್ತೀಚೆಗೆ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳಾದ ಬಗೆಬಗೆಯ ಕಾಟನ್‌, ಲಿನಿನ್‌, ಖಾದಿಯಲ್ಲಿ ಅತಿ ಹೆಚ್ಚು ಸಿದ್ಧ ಉಡುಪುಗಳು ತಯಾರಾಗುತ್ತಿವೆ. ಸಂತಸದ ವಿಚಾರವೆಂದರೇ, ಆಯಾ ಸೀಸನ್‌ಗೆ ತಕ್ಕಂತೆ ಆಗಾಗ್ಗೆ ಹೊಸ ವಿನ್ಯಾಸಗಳನ್ನು ಹೊರತರಲಾಗುತ್ತಿದೆ. ಕೇವಲ ಕ್ಯಾಶುವಲ್‌ ಉಡುಪುಗಳಲ್ಲಿ ಮಾತ್ರವಲ್ಲ, ಎಥ್ನಿಕ್‌, ಸೆಮಿ ಎಥ್ನಿಕ್‌ ಔಟ್‌ಫಿಟ್‌ಗಳಲ್ಲೂ ಗ್ಲಾಮರ್‌ ಟಚ್‌ ನೀಡಲಾಗುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀನತ್‌.

ಇದನ್ನೂ ಓದಿ: EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ

Eco friendly Fashion In Dress

ಪಾಪುಲರ್‌ ಡಿಸೈನ್ಸ್‌

ಈ ಸೀಸನ್‌ನಲ್ಲಿ ಕಾಟನ್‌, ಲಿನಿನ್‌ನ ಆಫ್‌ ಶೋಲ್ಡರ್‌, ಕೋಲ್ಡ್‌ ಶೋಲ್ಡರ್‌, ಬಾರ್ಡಟ್‌ ಟಾಪ್‌, ಕಟೌಟ್‌ ಟಾಪ್‌, ಡ್ರೆಸ್‌, ಸ್ಟ್ರಾಪ್‌ ಟಾಪ್‌, ಟ್ಯಾಂಕ್‌ ಟಾಪ್‌ ಹಾಗೂ ನೀ ಲೆಂತ್‌ ಫ್ರಾಕ್‌ಗಳು ಹೆಚ್ಚು ಪಾಪುಲರ್‌ ಆಗಿವೆ. ಇನ್ನು ಇವುಗಳಲ್ಲೂ ಕ್ರಾಪ್‌ ಟಾಪ್‌ ಹಾಗೂ ಬ್ಯಾಕ್‌ಲೆಸ್‌ ಮ್ಯಾಕ್ಸಿ ಸ್ಟೈಲ್‌ ಸ್ಕರ್ಟ್, ಕೀ ಹೋಲ್‌ ಲೇಸ್‌ನ ಸಿಂಗಲ್‌ ಶೋಲ್ಡರ್‌ ಡ್ರೆಸ್‌, ಹಾಲ್ಟರ್‌ ನೆಕ್‌ ಬ್ಲೌಸ್‌, ಮಿನಿ, ಮಿಡಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾಲ್‌ನ ಶೋ ರೂಮ್‌ವೊಂದರ ಸೇಲ್ಸ್‌ ಮ್ಯಾನೇಜರ್‌.

ಗ್ಲಾಮರಸ್‌ ಪರಿಸರ ಸ್ಬೇಹಿ ಔಟ್‌ಫಿಟ್‌ ಆಯ್ಕೆ :

  • ಸಾಫ್ಟ್‌ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.
  • ಟ್ರೆಂಡಿ ಪ್ರಿಂಟ್ಸ್ ಅಥವಾ ಮಾನೋಕ್ರೋಮ್‌ನದ್ದನ್ನು ಚೂಸ್‌ ಮಾಡಿ.
  • ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ಗೆ ಹೊಂದುವಂತಿದ್ದರೇ ಮುಂದಿನ ಸೀಸನ್‌ಗೂ ಧರಿಸಬಹುದು.
  • ಟ್ರಯಲ್‌ ನೋಡಿ, ಫಿಟ್ಟಿಂಗ್‌ ಇರುವಂತದ್ದನ್ನು ಕೊಳ್ಳಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Surabhi Jain : 30 ವರ್ಷಕ್ಕೆ ಮೃತಪಟ್ಟ ಫ್ಯಾಷನ್ ಐಕಾನ್​ ಸುರಭಿ ಜೈನ್

VISTARANEWS.COM


on

Surabhi Jain
Koo

ನವದೆಹಲಿ: ಜನಪ್ರಿಯ ಫ್ಯಾಷನ್ ಐಕಾನ್​ ಸುರಭಿ ಜೈನ್ ಕ್ಯಾನ್ಸರ್​ನೊಂದಿಗಿನ ದೀರ್ಘಕಾಲದ ಹೋರಾಟದ ನಂತರ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರೆ. ಜೈನ್ ಅಂಡಾಶಯದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಎಂಟು ವಾರಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಹಾಕಿದ ತನ್ನ ಕೊನೆಯ ಪೋಸ್ಟ್​ನಲ್ಲಿ ಸುರಭಿ ಜೈನ್ ಆಸ್ಪತ್ರೆಯಲ್ಲಿ ತನ್ನ ಚಿತ್ರ ಹಂಚಿಕೊಂಡಿದ್ದರು.

“ನನ್ನ ಆರೋಗ್ಯದ ಬಗ್ಗೆ ನಾನು ನಿಮಗೆ ಅಪ್ಡೇಟ್ ಮಾಡಿಲ್ಲ ಎಂದು ನನಗೆ ತಿಳಿದಿದೆ. ಅದರ ಬಗ್ಗೆ ನಾನು ಪ್ರತಿದಿನ ಪಡೆಯುತ್ತಿರುವ ಸಂದೇಶಗಳ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತಿದೆ. ವಿಷಯಗಳು ಉತ್ತಮವಾಗಿ ನಡೆಯುತ್ತಿಲ್ಲ. ಆದ್ದರಿಂದ ಹಂಚಿಕೊಳ್ಳಲು ಹೆಚ್ಚು ಇಲ್ಲ. ಕಳೆದ 2 ತಿಂಗಳುಗಳಲ್ಲಿ ನಾನು ಹೆಚ್ಚಾಗಿ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಚಿಕಿತ್ಸೆ ನಡೆಯುತ್ತಿದೆ. ಕಷ್ಟ ಮತ್ತು ಇದೆಲ್ಲವೂ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬವು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಅವರು ಗುರುವಾರ ನಿಧನರಾದರು ಮತ್ತು ಏಪ್ರಿಲ್ 19 ರಂದು ಗಾಜಿಯಾಬಾದ್​ನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಅವರು ಹೇಳಿದರು.

ಸುರಭಿ ಜೈನ್ ಅವರಿಗೆ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿರುವುದು ಇದು ಎರಡನೇ ಬಾರಿ. 27 ನೇ ವಯಸ್ಸಿನಲ್ಲಿ, ಅವರು ತಮ್ಮ ಮೊದಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. “ಶಸ್ತ್ರಚಿಕಿತ್ಸೆಯಿಂದ ನನಗೆ 149 ಹೊಲಿಗೆಗಳು ಮತ್ತು ಸಾಕಷ್ಟು ನೋವು ಕಾಣಿಸಿಕೊಂಡಿತು. ನಾನು ಹೆಚ್ಚು ಚಟವಟಿಕೆಯಿಂದ ಇರಲು ಹಾಗೂ ನಗು ಮೂಡಿಸಲು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ಆ ವೇಳೆ ಬರೆದುಕೊಂಡಿದ್ದರು.

ಅಂಡಾಶಯದ ಕ್ಯಾನ್ಸರ್ ಅಂಡಾಶಯಗಳಲ್ಲಿ ಹುಟ್ಟುತ್ತದೆ ಮತ್ತು ಇದು ಮಹಿಳೆಯರಿಗೆ ಗಮನಾರ್ಹ ಆರೋಗ್ಯ ಕಾಳಜಿಯಾಗಿದೆ. ಈ ರೋಗವು ಅಂಡಾಶಯಗಳಲ್ಲಿ ಮಾರಣಾಂತಿಕ ಗೆಡ್ಡೆಯಿಂದ ಆರಂಭವಾಗುತ್ತದೆ. ಇದು ಆರೋಗ್ಯಕರ ಅಂಗಾಂಶಗಳನ್ನು ನಾಶಪಡಿಸುತ್ತದೆ. ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ನಂತರ ಭಾರತದಲ್ಲಿ ಮಹಿಳೆಯರಲ್ಲಿ ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.

Continue Reading

ಫ್ಯಾಷನ್

Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

ಜೆನ್‌ ಜಿ ಹುಡುಗರ ಸ್ಟೈಲೇ ಬೇರೇ! ಫ್ಯಾಷನ್ನೇ ಬೇರೇ! ಈ ಬಾರಿಯ ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಹುಡುಗರ ಸಾಕಷ್ಟು ಫ್ಯಾಷನ್‌ವೇರ್‌ಗಳ ಸ್ಟೈಲಿಂಗ್‌ ಬದಲಾಗಿದೆ. ಯಾವ್ಯಾವ ಶೈಲಿಯಲ್ಲಿ ಅವರು ಕಾಣಬಯಸುತ್ತಿದ್ದಾರೆ? ಅವುಗಳಲ್ಲಿ ಏನೇನಿದೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್‌ ಜಿ ಹುಡುಗರ ಫ್ಯಾಷನ್‌ ಈ ಸೀಸನ್‌ಗೆ (Summer Fashion) ತಕ್ಕಂತೆ ಬದಲಾಗಿದೆ. ಹಾಗೆಂದು ಯಾವುದು ಹೊಸತೆನಿಸುವುದಿಲ್ಲ! ಬದಲಿಗೆ ಇರುವ ಫ್ಯಾಷನ್‌ವೇರ್‌ಗಳ ರೂಪದಲ್ಲಿ ಬದಲಾವಣೆ ಕಂಡಿದೆ. ಜೊತೆಗೆ ಧರಿಸುವ ಸ್ಟೈಲಿಂಗ್‌ ಮೊದಲಿಗಿಂತ ಕೊಂಚ ಮಾಡರ್ನ್‌ ಕಾನ್ಸೆಪ್ಟ್‌ನಲ್ಲಿ ಕಾಣಿಸಿಕೊಂಡಿದೆ.

Men Summer Fashion

ಅಭಿರುಚಿಗೆ ತಕ್ಕಂತೆ ಬದಲಾಗುವ ಸ್ಟೈಲಿಂಗ್‌

“ಈ ಜನರೇಷನ್‌ನಲ್ಲಿ, ಜೆನ್‌ ಜಿ ಹುಡುಗರ ಸ್ಟೈಲೇ ಬೇರೇ! ಫ್ಯಾಷನ್ನೇ ಬೇರೇ! ಈ ಬಾರಿಯ ಸಮ್ಮರ್‌ ಫ್ಯಾಷನ್‌ನಲ್ಲಿ ಹುಡುಗರ ಸಾಕಷ್ಟು ಫ್ಯಾಷನ್‌ವೇರ್‌ಗಳ ಸ್ಟೈಲಿಂಗ್‌ ಬದಲಾಗಿದೆ. ಡಿಫರೆಂಟ್‌ ಸ್ಟೈಲಿನಲ್ಲಿ ಕಾಣಬಯಸುತ್ತಿದ್ದಾರೆ. ಮಿಕ್ಸ್‌ ಮ್ಯಾಚ್‌, ಕಾಂಟ್ರಾಸ್ಟ್‌ ಹಾಗೂ ರೆಟ್ರೊ ಔಟ್‌ಫಿಟ್ಸ್‌ ವಿತ್‌ ಡಿಫರೆಂಟ್‌ ಸ್ಟೈಲಿಂಗ್‌ ಸೇರಿದಂತೆ ನಾನಾ ಬಗೆಯ ಔಟ್‌ಫಿಟ್‌ ಧರಿಸುವ ವರಸೆ ಚೇಂಜ್‌ ಆಗಿದೆ. ಸಮೀಕ್ಷೆಯೊಂದರ ಪ್ರಕಾರ, ಈ ಜನರೇಷನ್‌ನ ಹುಡುಗರ ಸ್ಟೈಲಿಂಗ್‌ ಒಂದೇ ಬಗೆಯದ್ದಾಗಿರುವುದಿಲ್ಲ. ಬದಲಿಗೆ ಒಬ್ಬೊಬ್ಬರದು ಒಂದೊಂದು ಬಗೆಯದ್ದಾಗಿರುತ್ತದೆ. ಪ್ರತಿಯೊಬ್ಬರದು ಯೂನಿಕ್‌ ಸ್ಟೈಲಿಂಗ್‌ ಎಂದರೂ ತಪ್ಪಲ್ಲ! ಒಟ್ಟಿನಲ್ಲಿ ಈ ಜನರೇಷನ್‌ನ ಹೈಕಳು ಕಂಪ್ಲೀಟ್‌ ಡಿಫರೆಂಟಾಗಿ ಕಾಣಲು ಬಯಸುತ್ತಾರೆ. ನಾವು ಅವರಂತೆ ಕಾಣಬಾರದು, ನಾವು ಅವರಿಗಿಂತ ಭಿನ್ನವಾಗಿ ಕಾಣಿಸಬೇಕು ಎಂಬುದು ಅವರ ಚಾಯ್ಸ್‌ ಆಗಿದೆ. ಹಾಗಾಗಿ ಎಲ್ಲರದ್ದೂ ಒಂದೇ ಬಗೆಯ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಆಗಲು ಸಾಧ್ಯವಿಲ್ಲ!” ಎನ್ನುತ್ತಾರೆ ಫ್ಯಾಷನ್‌ ಸ್ಪೆಷಲಿಸ್ಟ್‌ ರಜತ್‌ ಗಾಂದಿ. ಅವರ ಪ್ರಕಾರ, ಹುಡುಗರ ಅಭಿರುಚಿ ಆಗಾಗ್ಗೆ ಬದಲಾಗುತ್ತಿರುತ್ತದಂತೆ. ಹಾಗೆಂದು ವಿಚಿತ್ರವಾಗಿರುವುದಿಲ್ಲ ಎನ್ನುತ್ತಾರೆ.

ರೆಟ್ರೊ ಫ್ಯಾಷನ್‌ವೇರ್ಸ್‌ನ ವಿನೂತನ ಸ್ಟೈಲಿಂಗ್‌

ದೊಗಲೆ ಪ್ಯಾಂಟ್‌, ಟ್ಯಾಪರ್‌, ರಿಪ್ಪಡ್‌ ಪ್ಯಾಂಟ್ಸ್‌, ರಿಂಕಲ್ಸ್‌ ಪುಶ್‌ಬ್ಯಾಕ್‌ ಪ್ಯಾಂಟ್ಸ್‌, ಕಾರ್ಪೆಂಟರ್‌ ಪ್ಯಾಂಟ್ಸ್‌, ಜಾಗರ್ಸ್‌ ಸೇರಿದಂತೆ ನಾನಾ ಬಗೆಯ ರೆಟ್ರೊ ಲುಕ್‌ ನೀಡುವ ಪ್ಯಾಂಟ್‌ಗಳು ಮತ್ತೊಮ್ಮೆ ಫ್ಯಾಷನ್‌ನಲ್ಲಿ ಮರಳಿವೆ. ಹಾಗೆಂದು ಹಳೆಯ ಕಾಲದ ಪುರುಷರು ಧರಿಸುತ್ತಿದ್ದ ಸ್ಟೈಲಿಂಗ್‌ನಲ್ಲಿ ಅಲ್ಲ, ಬದಲಿಗೆ ಬದಲಾದ ರೂಪದಲ್ಲಿ, ಧರಿಸುವ ಬಗೆ ಮಾತ್ರ ಹೀಗೂ ಉಂಟಾ? ಎನ್ನುವ ಮಟ್ಟಿಗೆ ಬದಲಾಗಿದೆ ಎನ್ನುತ್ತಾರೆ ಮೆನ್ಸ್‌ ಸ್ಟೈಲಿಸ್ಟ್‌ ಜಾನ್‌.

Men Summer Fashion

ಸ್ಲಿಮ್‌ ಫಿಟ್‌ ಶರ್ಟ್ಸ್‌

ಸ್ಲಿಮ್‌ ಫಿಟ್‌ ಟೀ-ಶರ್ಟ್ಸ್‌ ಇದೀಗ ಈ ದೊಗಲೆಯಂತಹ ಪ್ಯಾಂಟ್‌ಗಳಿಗೆ ಜೊತೆಯಾಗಿವೆ. ಫುಲ್‌ ಸ್ಲೀವ್‌ ಇದೀಗ ಸೈಡಿಗೆ ಸರಿದಿದ್ದು ಹಾಫ್‌ ಸ್ಲೀವ್‌ನವು ಈ ಸೀಸನ್‌ನಲ್ಲಿ ಬಂದಿವೆ. ಪ್ರಿಂಟೆಡ್‌ ಅದರಲ್ಲೂ ಲೈಟ್‌ ಪ್ರಿಂಟೆಡ್‌ ಶರ್ಟ್ಸ್‌ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗಿದ್ದು, ಸಖತ್‌ ಟ್ರೆಂಡಿಯಾಗಿವೆ. ಚೆಕ್ಸ್‌ ಶರ್ಟ್ಸ್‌ ಹುಡುಗರಿಂದ ದೂರ ಓಡಿವೆ.

Men Summer Fashion

ದೊಗಲೆ ಟೀ ಶರ್ಟ್ಸ್‌

ರೌಂಡ್‌ ನೆಕ್‌ ಹಾಗೂ ವೀ ನೆಕ್‌ನ ದೊಗಲೆ ಟೀ ಶರ್ಟ್ಸ್‌ ಇದೀಗ ಹುಡುಗರನ್ನು ಅಪ್ಪಿಕೊಂಡಿವೆ. ನೋಡಲು ಲೂಸಾಗಿ ಕಂಡರೂ ಇವು ಜೆನ್‌ ಜಿ ಹುಡುಗರ ಫ್ಯಾಷನ್‌ನಲ್ಲಿ ಜಾಗ ಪಡೆದುಕೊಂಡಿವೆ.

ಲಾಂಗ್‌ ಶಾರ್ಟ್ಸ್‌

ಸಮ್ಮರ್‌ ಲುಕ್‌ ಹಾಗೂ ಟ್ರಾವೆಲ್‌ ಫ್ಯಾಷನ್‌ನಲ್ಲಿ ಲಾಂಗ್‌ ಶಾರ್ಟ್ಸ್‌ ಆಗಮಿಸಿವೆ. ಇತ್ತ ಬರ್ಮಡಾ ಅಲ್ಲ, ಅತ್ತ ಶಾರ್ಟ್ಸ್‌ ಅಲ್ಲ, ಆ ಲೆಂಥ್‌ನ ಲಾಂಗ್‌ ಶಾರ್ಟ್ಸ್‌ ನಾನಾ ಪಾಕೆಟ್‌ ಡಿಸೈನ್‌ಗಳಲ್ಲಿ ಬಂದಿವೆ. ಹುಡುಗರನ್ನು ಸವಾರಿ ಮಾಡತೊಡಗಿವೆ.

Men Summer Fashion

ಗ್ರಾಫಿಕ್‌ ಟೀ ಶರ್ಟ್ಸ್‌

ತಮ್ಮಲ್ಲಿರುವ ಆಸಕ್ತಿ ತೋರ್ಪಡಿಸಲು ಸಹಕಾರಿಯಾಗಿರುವ ಗ್ರಾಫಿಕ್‌ ಟೀ ಶರ್ಟ್ಸ್‌ ಇದೀಗ ಹುಡುಗರನ್ನು ಸೆಳೆದಿವೆ. ಆಯಾ ಹುಡುಗನ ಕಲರ್‌ ಆಯ್ಕೆಗೆ ತಕ್ಕಂತೆ ನಾನಾ ಬ್ರಾಂಡ್‌ಗಳಲ್ಲೂ ಕಂಡು ಬರುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

Continue Reading

ಫ್ಯಾಷನ್

Wedding Saree Selection: ಮದುವೆ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೀರೆ ಎಕ್ಸ್‌ಫರ್ಟ್‌ಗಳ ಟಿಪ್ಸ್

ಮದುವೆ ಸೀರೆಗಳನ್ನು ಆಯ್ಕೆ (Wedding Saree Selection) ಮಾಡುವುದು ಸುಲಭವೇನಲ್ಲ! ಇಲ್ಲಿ ಮದುಮಗಳ ಆಯ್ಕೆ ಮಾತ್ರವಲ್ಲ, ಮನೆಯವರ ಇಷ್ಟನುಸಾರವಾಗಿಯೂ ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಇಡೀ ಕುಟುಂಬದ ಹೆಣ್ಣುಮಕ್ಕಳ ಸೀರೆಗಳ ಸೆಲೆಕ್ಷನ್‌ ಮಾಡುವುದು ತುಸು ಸಾಹಸವೇ ಸರಿ. ಇಂತಹ ಸಮಯದಲ್ಲಿ ಕೆಲವು ಸಿಂಪಲ್‌ ಟಿಪ್ಸ್‌ ಪಾಲಿಸಿದಲ್ಲಿ ಹೇಗೆಲ್ಲಾ ಸುಲಭವಾಗಿ ಆಯ್ಕೆ ಮಾಡಬಹುದು ಎಂಬುದರ ಬಗ್ಗೆ ಸೀರೆ ಎಕ್ಸ್‌ಫರ್ಟ್‌ ಯಮುನಾ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Wedding Saree Selection
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀರೆಗಳ ಆಯ್ಕೆ (Wedding Saree Selection) ಮಾಡುವುದು ಸುಲಭವೇನಲ್ಲ! ಹೌದು, ಇದರಲ್ಲಿ ಮದುವೆಯಾಗುತ್ತಿರುವ ಮದುಮಗಳ ಆಯ್ಕೆ ಮಾತ್ರವಲ್ಲ, ಆಪ್ತರ, ಮನೆಯವರ ಪಾತ್ರವೂ ಇರುತ್ತದೆ. ಕೆಲವೊಮ್ಮೆ ಕುಟುಂಬದವರ ಇಷ್ಟನುಸಾರವಾಗಿಯೂ ಸೀರೆಯ ಆಯ್ಕೆ ನಡೆಯುತ್ತದೆ. ಇನ್ನು, ಕೆಲವೊಮ್ಮೆ ಸಂಪ್ರಾದಾಯಗಳನ್ನು ಪಾಲಿಸಲು ಆಯಾ ಶಾಸ್ತ್ರಕ್ಕೆ ಹೊಂದುವ ಡಿಸೈನ್ಸ್‌ ಒಪ್ಪಿಕೊಳ್ಳಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಮದುವೆ ಮನೆಯ ಇಡೀ ಕುಟುಂಬದ ಹೆಣ್ಣುಮಕ್ಕಳ ಸೀರೆ ಸೆಲೆಕ್ಷನ್‌ ಕೂಡ ಇದೇ ಸಮಯದಲ್ಲಿ ನಡೆಯುತ್ತದೆ. ಹಾಗಾಗಿ ಸೀರೆ ಸೆಲೆಕ್ಷನ್‌ ಮಾಡುವುದು ವೆಡ್ಡಿಂಗ್‌ ಕೆಲಸಗಳಲ್ಲಿ ಟಾಸ್ಕ್‌ ಇದ್ದಂತೆ. ಇಂತಹ ಸನ್ನಿವೇಶಗಳಲ್ಲಿ ಕೆಲವು ಸಿಂಪಲ್‌ ಟಿಪ್ಸ್‌ ಪಾಲಿಸಿದಲ್ಲಿ, ಹೆಚ್ಚು ತಲೆ ಬಿಸಿಯಿಲ್ಲದೇ ಟ್ರೆಂಡಿ ಮದುವೆ ಸೀರೆಗಳನ್ನು ಸೆಲೆಕ್ಟ್‌ ಮಾಡಬಹುದು ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌.
“ಕೆಲವೊಮ್ಮೆ ಮದುವೆ ಹೆಣ್ಣಿನ ಸೀರೆಗಳೊಂದಿಗೆ ಕುಟುಂಬದ ಇತರೇ ಹೆಣ್ಣುಮಕ್ಕಳ ಸೀರೆಗಳನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇದು ಕೂಡ ಒಂದು ಅತಿ ದೊಡ್ಡ ಟಾಸ್ಕ್‌. ಸಿಂಪಲ್‌ ಸುಲಭೋಪಾಯಗಳನ್ನು ಕಂಡುಕೊಂಡು ಒಂದಿಷ್ಟು ಐಡಿಯಾ ಫಾಲೋ ಮಾಡಿದಲ್ಲಿ ನಿರಾತಂಕವಾಗಿ ಸೆಲೆಕ್ಟ್‌ ಮಾಡಬಹುದು” ಎನ್ನುತ್ತಾರೆ ಸೀರೆ ಡ್ರೇಪರ್ಸ್.‌ ಈ ಕುರಿಂತಂತೆ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

Wedding Saree Selection

ಮೊದಲು ಪ್ಲಾನ್‌ ಮಾಡಿ

ಮದುವೆ ಹೆಣ್ಣಿನ ಸೀರೆ ಖರೀದಿಗೆ ತೆರಳುವ ಮುನ್ನವೇ, ಯಾವ ಅಂಗಡಿಗೆ ತೆರಳಬೇಕು? ಎಲ್ಲೆಲ್ಲಿ ತಮಗೆ ಅವಶ್ಯವಿರುವಂತಹ ರೇಷ್ಮೆ ಸೀರೆಗಳು ದೊರೆಯುತ್ತವೆ? ಯಾವುದೆಲ್ಲಾ ಲಭ್ಯ? ಎಷ್ಟು ಸಮಯ ತೆಗೆದುಕೊಳ್ಳಬಹುದು? ಯಾರೆಲ್ಲಾ ಹೋಗಬೇಕು? ಯಾವ ಸಮಯದಲ್ಲಿ ತೆರಳುವುದು ಉತ್ತಮ? ಬಜೆಟ್‌ ಏನು? ಎಂಬುದರ ಕುರಿತಂತೆ ಮೊದಲೇ ಪ್ಲಾನ್‌ ಮಾಡಿ, ನೋಡಿ.

ಗ್ರೂಪ್‌ಗೆ ಜವಾಬ್ದಾರಿ ವಹಿಸಿ

ಮದುವೆಯ ಸೀರೆ ಖರೀದಿಸಲು ತೆರಳುವಾಗ ಆದಷ್ಟೂ ಎಲ್ಲಾ ಕುಟುಂಬದವರು ಗ್ರೂಪ್‌ನಲ್ಲಿ ತೆರಳುತ್ತಾರೆ. ಹಾಗಾಗಿ, ಮೊದಲೇ ಯಾವ ಗ್ರೂಪ್‌ನ ಸದಸ್ಯರು ಯಾರ್ಯಾರಿಗೆ ಸೀರೆ ಕೊಳ್ಳಬೇಕು? ಮದುಮಗಳ ಸೀರೆ ಆಯ್ಕೆಗೆ ಯಾರು ಆಕೆಯ ಜತೆಗಿರಬೇಕು? ಎಂಬುದನ್ನು ನಿರ್ಧರಿಸಬೇಕು. ಆಗ ಯಾರಿಗೂ ಕನ್‌ಫ್ಯೂಸ್‌ ಆಗುವುದಿಲ್ಲ. ಆಯ್ಕೆ ಸುಲಭವಾಗುವುದು.

Wedding Saree Selection

ಮೊದಲು ಮದುಮಗಳ ಸೀರೆ ಖರೀದಿಸಿ

ರೇಷ್ಮೆ ಸೀರೆ ಕೊಳ್ಳುವಾಗ ಮೊದಲು ಮದುಮಗಳ ಸೀರೆಯನ್ನು ಆಯ್ಕೆ ಮಾಡಿ. ನಂತರ ಉಳಿದವರ ಯೋಚನೆ ಮಾಡಿ. ಮೊದಲೇ ಇತರರಿಗೆ ಸೀರೆ ಖರೀದಿ ಮಾಡಿ ನಂತರ, ಆಕೆಯ ಸೀರೆ ಖರೀದಿಗೆ ಹೋಗುವುದಾದಲ್ಲಿ ಅಷ್ಟರೊಳಗೆ ಎಲ್ಲರ ಎನರ್ಜಿಯು ಕಡಿಮೆಯಾಗುವುದು, ಉತ್ಸಾಹ ಕುಂದಬಹುದು. ಹಾಗಾಗಿ, ಮೊದಲೇ ಮದುಮಗಳ ರೇಷ್ಮೆ ಸೀರೆ ಆಯ್ಕೆ ಮಾಡಿ.

ಟ್ರೆಂಡಿ ಡಿಸೈನ್‌ ಹಾಗೂ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿ

ಸದ್ಯ ಟ್ರೆಂಡಿಯಾಗಿರುವ ಡಿಸೈನ್‌ ರೇಷ್ಮೆ ಸೀರೆಗಳನ್ನು ಮೊದಲು ನೋಡಿ. ಮೊದಲೇ ಅದೇ ಬೇಕು, ಇದೇ ಬೇಕು ಎನ್ನುವುದಾದಲ್ಲಿ ಅಂತಹ ಡಿಸೈನ್‌ನದ್ದನ್ನು ತೆಗೆಸಿ, ಚೆಕ್‌ ಮಾಡಿ. ಸಿಲ್ಕ್‌ ಮಾರ್ಕ್‌ ಇರುವಂತಹದ್ದನ್ನು ನೋಡಿ ಖರೀದಿಸಿ.

ಮಾರಾಟಗಾರರ ಮಾತಿಗೆ ಮರುಳಾಗಬೇಡಿ

ಅಂಗಡಿಯವರ ಹಾಗೂ ಮಾರಾಟಗಾರರ ಮಾತಿಗೆ ಮರುಳಾಗಿ ಖರೀದಿಸಬೇಡಿ. ನಿಮಗೆ ಬೇಕಾದ್ದನ್ನು ಮೊದಲೇ ಮೊಬೈಲ್‌ನಲ್ಲಿ ಫೋಟೋ ಸೇವ್‌ ಮಾಡಿಕೊಂಡು ತೋರಿಸಿ ಕೇಳಿ ನೋಡಿ.

Wedding Saree Selection

ಮದುವೆಗೆ ಆನ್‌ಲೈನ್‌ ಸೀರೆ ಖರೀದಿ ಬೇಡ

ಮದುವೆಯ ದುಬಾರಿ ಸೀರೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬೇಡಿ. ಯಾಕೆಂದರೇ, ನೀವು ನೋಡಿದ ಫ್ಯಾಬ್ರಿಕ್‌, ಬಂದ ನಂತರ ಬೇರೇ ರೀತಿಯಲ್ಲಿ ಕಾಣಿಸಬಹುದು. ಇಷ್ಟವಾಗದೇ ಹೋಗಬಹುದು. ಹಾಗಾಗಿ ಅಂಗಡಿಗೆ ತೆರಳಿ ಖರೀದಿಸಿ.

ಡ್ರೇಪಿಂಗ್‌ ಟ್ರಯಲ್‌ ನೋಡಿ

ದುಬಾರಿ ಸೀರೆಗಳನ್ನು ನೋಡಿದಾಕ್ಷಣ ಆಯ್ಕೆ ಮಾಡಬೇಡಿ. ನೀವು ಉಟ್ಟ ಉಡುಪಿನ ಮೇಲೆಯೇ ಟ್ರಯಲ್‌ ಮಾಡುವ ಸೌಲಭ್ಯವಿರುತ್ತದೆ. ಅಂತಹದ್ದನ್ನು ನೋಡಿ ಕೊಳ್ಳಿ. ಕೆಲವು ಸೀರೆಗಳು ನೋಡಿದಾಗ ಚೆನ್ನಾಗಿ ಕಾಣುತ್ತವೆ. ಉಟ್ಟಾಗ ಡಿಫರೆಂಟಾಗಿ ಕಾಣುತ್ತವೆ. ಹಾಗಾಗಿ ಮೊದಲೇ ಪರಿಶೀಲಿಸಿ.

Wedding Saree Selection

ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಬಣ್ಣದ ಆಯ್ಕೆ

ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಬಣ್ಣದ ರೇಷ್ಮೆ ಸೀರೆಯ ಶೇಡ್‌ ಆಯ್ಕೆ ಮಾಡಿ. ಯಾಕೆಂದರೇ, ನಿಮ್ಮ ಮದುವೆಯ ದಿನ ಅದು ಮುಖದ ಕಾಂತಿ ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ಹಾಗಾಗಿ ಯಾರ ಮಾತು ಕೇಳದೇ ಬ್ಯೂಟಿ ಎಕ್ಸ್‌ಫರ್ಟ್ಸ್‌ ಸಲಹೆ ಪಡೆದು ಖರೀದಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Niveditha Gowda: ಗೋಲ್ಡನ್‌ ಲುಕ್‌ನಲ್ಲಿ ನಿವೇದಿತಾ ಗೌಡ ಕಮಾಲ್‌

Continue Reading

ಫ್ಯಾಷನ್

Summer Fashion: ಸಮ್ಮರ್‌ ಹೈ ಸ್ಟ್ರೀಟ್‌ ಫ್ಯಾಷನ್‌ಗೆ ಮರಳಿದ 3 ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್

Summer Fashion: ಈ ಬಾರಿಯ ಸಮ್ಮರ್‌ನಲ್ಲಿ ಸೆಲೆಬ್ರೆಟಿ ಲುಕ್‌ ನೀಡುವ ೩ ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಈ ಸೀಸನ್‌ ಪಾರ್ಟಿಗಳಲ್ಲಿ ಇವು ಕಾಣಿಸಿಕೊಳ್ಳತೊಡಗಿವೆ. ಅವು ಯಾವುವು? ಹೇಗೆಲ್ಲಾ ವಿನ್ಯಾಸಗೊಂಡಿರುತ್ತವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

VISTARANEWS.COM


on

Summer Fashion
ಸಾಂದರ್ಭಿಕ ಚಿತ್ರಗಳು. ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಮತ್ತೊಮ್ಮೆ ಸೆಲೆಬ್ರೆಟಿ ಲುಕ್‌ ನೀಡುವ ಬ್ಯಾಕ್‌ಲೆಸ್‌ ಉಡುಪುಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 3 ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್‌ಗಳು ಸಖತ್‌ ಟ್ರೆಂಡಿಯಾಗಿವೆ (Summer Fashion).

ಜೆನ್‌ ಜಿ ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರನ್ನು ಸೆಳೆದಿವೆ. ಧರಿಸಿದಾಗ ನೋಡಲು ಹಾಟ್‌ ಲುಕ್‌ ನೀಡುವ ಈ ಬ್ಯಾಕ್‌ಲೆಸ್‌ ಉಡುಪುಗಳಲ್ಲಿ ಈ ಬಾರಿಯೂ ಕೆಲವು ಹೆಚ್ಚು ಚಾಲ್ತಿಯಲ್ಲಿವೆ. ಪ್ರತಿ ಬೇಸಿಗೆಯಲ್ಲೂ ಹೊಸ ರೂಪದೊಂದಿಗೆ ಮರಳುವ ಈ ಬ್ಯಾಕ್‌ಲೆಸ್‌ ಡ್ರೆಸ್‌ ಹಾಗೂ ಟಾಪ್‌ಗಳು ಹೈ ಸ್ಟ್ರೀಟ್‌ ಫ್ಯಾಷನ್‌ನ ಭಾಗವಾಗಿವೆ.

“ಪ್ರತಿ ಬೇಸಿಗೆಯಲ್ಲೂ ಬಗೆಬಗೆಯ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್‌ ಕಾಲಿಡುತ್ತವೆ. ನೋಡಲು ಇವು ಒಂದೇ ಬಗೆಯದ್ದಾಗಿ ಕಂಡರೂ, ವಿನ್ಯಾಸ ಬೇರೆ ಬೇರೆಯದ್ದಾಗಿರುತ್ತವೆ. ಡಿಸೈನ್‌ ಕೂಡ ಬದಲಾಗಿರುತ್ತವೆ. ಕಾನ್ಸೆಪ್ಟ್‌ ಮಾತ್ರ ಒಂದೇ” ಎನ್ನುವ ಸ್ಟೈಲಿಸ್ಟ್‌ ರಚನಾ ಹೇಳುವಂತೆ, ʼʼಬ್ಯಾಕ್‌ಲೆಸ್‌ ಉಡುಪುಗಳು ಎಕ್ಸ್ಪೋಸ್‌ ಮಾಡುವ ಉಡುಪುಗಳು ಎಂಬ ಯೋಚನೆ ಜನರಲ್ಲಿದೆ. ಇದು ನಿಜ ಕೂಡ. ಇವು ಅಲ್ಟ್ರಾ ಮಾಡರ್ನ್‌ ಹುಡುಗಿಯರ ಚಾಯ್ಸ್‌ ಔಟ್‌ಫಿಟ್‌ಗಳುʼʼ ಎನ್ನುತ್ತಾರೆ.

ಬ್ಯಾಕ್‌ಲೆಸ್‌ ಹಾಲ್ಟರ್‌ ನೆಕ್‌ ಡ್ರೆಸ್‌

ಇದು ತೀರಾ ಕಾಮನ್‌ ಡ್ರೆಸ್.‌ ಈ ನೆಕ್‌ಲೈನ್‌ ಇರುವಂತಹ ಬ್ಯಾಕ್‌ಲೆಸ್‌ ಡ್ರೆಸ್‌ಗಳನ್ನು ಹಾಗೂ ಟಾಪ್‌ಗಳನ್ನು ಬಹುತೇಕ ಯುವತಿಯರು ಪ್ರಿಫರ್‌ ಮಾಡುತ್ತಾರೆ. ಈ ಉಡುಪಿನಲ್ಲಿ ಮುಂಭಾಗ ಕಂಪ್ಲೀಟ್‌ ಕ್ಲೋಸ್‌ ಆಗಿರುತ್ತದೆ. ಹಿಂಭಾಗ ಎಕ್ಸ್ಪೋಸ್‌ ಆಗಿರುತ್ತದೆ. ಕಾಲೇಜು ಹುಡುಗಿಯರ ಲಿಸ್ಟ್ನಲ್ಲಿವೆ. ಅತಿ ಹೆಚ್ಚು ಯುವತಿಯರು ಬಳಸುವ ಬ್ಯಾಕ್‌ಲೆಸ್‌ ಡ್ರೆಸ್ಗಳಿವು ಎಂದರೂ ಅತಿಶಯೋಕ್ತಿಯಾಗದು.

ಮಲ್ಟಿ ಸ್ಟ್ರಾಪ್‌ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್‌

ಕೆಲವು ಬ್ಯಾಕ್‌ಲೆಸ್‌ ಡ್ರೆಸ್‌ಗಳು ಸಾಕಷ್ಟು ಸ್ಟ್ರಾಪ್‌ ಹೊಂದಿರುತ್ತವೆ. ಇದು ತೀರಾ ಎಕ್ಸ್ಪೋಸ್‌ ಆಗುವುದನ್ನು ತಪ್ಪಿಸುತ್ತವೆ. ಜತೆಗೆ ಗ್ಲಾಮರಸ್‌ ಲುಕ್‌ ನೀಡುತ್ತವೆ. ಇನ್ನು ಈ ಶೈಲಿಯ ಗೌನ್‌, ಮಿಡಿ, ಮ್ಯಾಕ್ಸಿಗಳು ಹೆಚ್ಚು ಪ್ರಚಲಿತದಲ್ಲಿವೆ. ನಾನಾ ಡಿಸೈನ್‌ನಲ್ಲಿ ಇವು ದೊರೆಯುತ್ತಿವೆ. ಸ್ಪೆಗೆಟಿ ಬ್ಯಾಕ್‌ಲೆಸ್‌ ಫ್ರಾಕ್‌ಗಳೂ ಟ್ರೆಂಡ್‌ನಲ್ಲಿವೆ.

ಬ್ಯಾಕ್‌ಲೆಸ್‌ ಮಿನಿ ಪಾರ್ಟಿ ಡ್ರೆಸ್‌

ಪಾರ್ಟಿಗಳಿಗೆ ಧರಿಸಬಹುದಾದ ನಾನಾ ಶೈಲಿಯ ಮಿನಿ ಬ್ಯಾಕ್‌ಲೆಸ್‌ ಪಾರ್ಟಿ ಡ್ರೆಸ್ಗಳು ಕೂಡ ಹೆಚ್ಚು ಪ್ರಚಲಿತದಲ್ಲಿವೆ. ಇವು ಜೆನ್‌ ಜಿ ಹುಡುಗಿಯರ ಫೇವರೇಟ್‌ ಲಿಸ್ಟ್ನಲ್ಲಿವೆ. ಇನ್ನು, ಮಿನಿ ಫ್ರಾಕ್‌ನಲ್ಲಿ ಇವನ್ನು ಕಾಣಬಹುದು. ಕೆಲವು ಸ್ಯಾಟೀನ್‌ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಇನ್ನು ಕೆಲವು ಸಿಕ್ವೀನ್ಸ್ನಲ್ಲೂ ಲಭ್ಯ. ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತಿವೆ. ಬೇಸಿಗೆಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಸಿಗುತ್ತಿವೆ.

ಬ್ಯಾಕ್‌ ಲೆಸ್‌ ಡ್ರೆಸ್‌ ಪ್ರಿಯರು ಪಾಲಿಸಬೇಕಾದ 5 ಟಿಪ್ಸ್‌:

  • ಬ್ಯಾಕ್‌ಲೆಸ್‌ ಡ್ರೆಸ್‌ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಿರಬೇಕು.
  • ಫಿಟ್ಟಿಂಗ್‌ ಸರಿಯಾಗಿರದಿದ್ದಲ್ಲಿ ಎಕ್ಸ್‌ ಪೋಸ್‌ ಆಗುವ ಸಾಧ್ಯತೆಗಳಿರುತ್ತವೆ.
  • ಈ ಉಡುಪುಗಳಿಗೆ ಸೂಕ್ತವಾದ ಇನ್ನರ್‌ವೇರ್‌ ಧರಿಸುವುದು ಅಗತ್ಯ.
  • ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
  • ಪಾರ್ಟಿಗಳಿಗೆ ಹಾಗೂ ಔಟಿಂಗ್‌ಗೆ ಮಾತ್ರ ಸೂಕ್ತ ಎಂಬುದನ್ನು ಮರೆಯದಿರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

Continue Reading
Advertisement
CJI Chandrachud
ದೇಶ3 mins ago

CJI Chandrachud: ಹೊಸ ಕಾನೂನುಗಳ ಜಾರಿ ಐತಿಹಾಸಿಕ; ಸಿಜೆಐ ಡಿ.ವೈ.ಚಂದ್ರಚೂಡ್‌ ಬಣ್ಣನೆ

Forest bathing activity begins at Cubbon Park
ಬೆಂಗಳೂರು5 mins ago

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Modi in Karnataka HD Deve Gowda attack on Congess
Lok Sabha Election 20245 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Lok Sabha Election 2024
ಕರ್ನಾಟಕ9 mins ago

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Job Alert
ಉದ್ಯೋಗ10 mins ago

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Viral Video
ವೈರಲ್ ನ್ಯೂಸ್15 mins ago

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Vinay Gowda Lunch With Kichcha Sudeep
ಸಿನಿಮಾ18 mins ago

Vinay Gowda: ಕಿಚ್ಚ ಸುದೀಪ್‌ ಜತೆ ವಿನಯ್‌ ಗೌಡ ಭರ್ಜರಿ ಭೋಜನ!

Viral Video
ವೈರಲ್ ನ್ಯೂಸ್21 mins ago

Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

Case of bringing gun to CM Siddaramaiah Four policemen suspended
Lok Sabha Election 202428 mins ago

‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

Elon Musk
ವಿದೇಶ36 mins ago

Elon Musk: ಮೋದಿ ಭೇಟಿಗಾಗಿ ಈ ತಿಂಗಳು ಭಾರತಕ್ಕೆ ಬರಲ್ಲ ಎಲಾನ್‌ ಮಸ್ಕ್;‌ ಕೊಟ್ಟ ಕಾರಣ ಇದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka HD Deve Gowda attack on Congess
Lok Sabha Election 20245 mins ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20242 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ4 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ5 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

ಟ್ರೆಂಡಿಂಗ್‌