ಮುಂಬೈ: ನೆಟ್‌ಫ್ಲಿಕ್ಸ್ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ (AJIO’s House of Ethnics) ಅಡಿಯಲ್ಲಿ ಇದನ್ನು ಆರಂಭಿಸಲಾಗಿದೆ. ನೆಟ್‌ಫ್ಲಿಕ್ಸ್‌ನ ಈ ಸರಣಿಯಿಂದ ಪ್ರೇರಣೆಗೊಂಡ 250 ಸ್ಟೈಲ್‌ನ ಸಾಂಪ್ರದಾಯಿಕ ದಿರಿಸುಗಳ ಈ ಸೀಮಿತ ಅವಧಿಯ ಸಂಗ್ರಹವು ಗ್ರಾಹಕರಿಗೆ ಒದಗಿಸಲಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.
ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಈ ಸೀರಿಸ್‌ನಲ್ಲಿ ಬಳಸಲಾದ ಬಣ್ಣಗಳು, ಸಿಲೌಟ್‌ಗಳು, ಬಟ್ಟೆಗಳು ಮತ್ತು ಅಲಂಕಾರಗಳಿಂದ ಈ ಬಹು ನಿರೀಕ್ಷಿತ ಸಂಗ್ರಹವು ಪ್ರೇರಣೆ ಪಡೆದಿದೆ. ಈ ಸಂಗ್ರಹದ ಶ್ರೇಣಿಯಲ್ಲಿ ಬಟ್ಟೆಗಳಿಗೆ ಶುದ್ಧ ರೇಷ್ಮೆ, ಟಿಶ್ಯೂ, ಜಾರ್ಜೆಟ್ ಮತ್ತು ಬ್ರೋಕೇಡ್‌ಗಳನ್ನು ಬಳಸಲಾಗಿದೆ. ಇವುಗಳಲ್ಲಿ ಬಹಳ ಕೌಶಲದಿಂದ ರೂಪಿಸಿದ ಡಬ್ಕಾ ಕೈ ಕಸೂತಿ, ಪಾರ್ಸಿ ಕಸೂತಿ, ಬೀಡ್ ವರ್ಕ್ ಮತ್ತು ಇದೇ ಸೀರಿಸ್‌ನಿಂದ ಸ್ಫೂರ್ತಿಗೊಂಡ ಡಿಜಿಟಲ್ ಪ್ರಿಂಟ್ಸ್ ಇವೆ.
ಇದು ಮಹಿಳಾ ಕೇಂದ್ರಿತ ಸಂಗ್ರಹವಾಗಿದ್ದು, ಶರಾರಾ, ಕುರ್ತಾ ಸೂಟ್ ಸೆಟ್, ಲೆಹೆಂಗಾ ಮತ್ತು ಸೀರೆಗಳನ್ನು ಒಳಗೊಂಡಿದೆ. ಇವುಗಳ ಬೆಲೆ 4,000 ರೂ.ಯೊಂದ ಆರಂಭಗೊಂಡು 1,50,000 ರೂ. ತನಕ ಇರುತ್ತದೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ಅವರ ತಂಡ ವಿನ್ಯಾಸ ಮಾಡಿದೆ. ಅಜಿಯೋ ಹಾಗೂ ನೆಟ್‌ಫ್ಲಿಕ್ಸ್ ಮಧ್ಯೆ ಈ ಪಾಲುದಾರಿಕೆಯ ಕಲ್ಪನೆ ಮೂಡಿರುವ ಬಗೆಯೂ ಆಸಕ್ತಿದಾಯಕ. ಇದರಿಂದಾಗಿ ಅಭಿಮಾನಿಗಳು ನೆಟ್‌ಫ್ಲಿಕ್ಸ್ ಸೀರಿಸ್‌ನಿಂದ ಪ್ರೇರಣೆಗೊಂಡ ವಿಶಿಷ್ಟ ಸ್ಟೈಲ್ ಹೊಂದಬಹುದು.
ಅಜಿಯೋದ ಸಿಇಒ ವಿನೀತ್ ನಾಯರ್ ಅವರು ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಸೃಷ್ಟಿಯಲ್ಲಿ ಫ್ಯಾಷನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರ ಥೀಮ್ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಲ್ಲಿ ಆಳವಾಗಿ ಬೇರೂರಿರುತ್ತದೆ. ಆದ್ದರಿಂದ ನಾವು ʼಹೀರಾಮಂಡಿʼಗಾಗಿ ನೆಟ್‌ಫ್ಲಿಕ್ಸ್‌ನೊಂದಿಗೆ ಈ ಸಹಯೋಗದ ಬಗ್ಗೆ ಯೋಚಿಸಿದಾಗ ಅದು ಬಹಳಷ್ಟು ಅರ್ಥಪೂರ್ಣ ಎನಿಸಿತು. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ ಈ ಸೀಮಿತ ಆವೃತ್ತಿಯ ಸಂಗ್ರಹಕ್ಕೆ ಪರಿಪೂರ್ಣ ಲಾಂಚ್‌ಪ್ಯಾಡ್ ಆಗಿದೆ. ಗ್ರಾಹಕರು ಆರಾಧಿಸುವ ಫ್ಯಾಷನ್ ಕೈಗೆಟುಕುವಂತೆ ಮಾಡುತ್ತದೆ. ನಿಮ್ಮ ಕನಸಿನ ಬಾಲಿವುಡ್-ಪ್ರೇರಿತ ಲುಕ್ ಪಡೆಯುವುದಕ್ಕೆ ಇದು ಸಹಾಯ ಮಾಡುತ್ತದೆʼʼ ಎಂದು ಹೇಳಿದ್ದಾರೆ.
ʼಹೀರಾಮಂಡಿ: ಡೈಮಂಡ್ ಬಜಾರ್ʼ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚೊಚ್ಚಲ ವೆಬ್ ಸೀರಿಸ್. ಇದು 2024ರಲ್ಲಿ ಬಹು ನಿರೀಕ್ಷಿತ ಸರಣಿಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಭಾರತಲ್ಲಿ ನಡೆಯುವ ಘಟನೆ ಇದಾಗಿದೆ. ಅಂತಿಮ ಎಳೆಯನ್ನು ತವೈಫ್‌ಗಳ ಕಲೆಯನ್ನು ಹಿಡಿದಿಟ್ಟುಕೊಳ್ಳುವ (ಮುಜ್ರಾ) ಪರೀಕ್ಷೆಗೆ ಒಳಪಡಿಸಲಾಗಿದೆ.
ನೆಟ್‌ಫ್ಲಿಕ್ಸ್‌ನ ಏಪ್ಯಾಕ್ ಮಾರ್ಕೆಟಿಂಗ್ ಪಾಲುದಾರಿಕೆಯ ಹಿರಿಯ ನಿರ್ದೇಶಕಿ ಶಿಲ್ಪಾ ಸಿಂಗ್ ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಕಥೆಗಳಲ್ಲಿನ ವೇಷಭೂಷಣಗಳು ಮುಖ್ಯ ಪಾತ್ರ ವಹಿಸುತ್ತವೆ. ಕಥಾಹಂದರಕ್ಕೆ ಇನ್ನಷ್ಟು ಗಟ್ಟಿತನವನ್ನು ಸೇರಿಸುತ್ತವೆ. ʼಹೀರಾಮಂಡಿ: ಡೈಮಂಡ್ ಬಜಾರ್ʼ ಹಿಂದೆಂದೂ ನೋಡಿರದ ಕೆಲವು ಸಾಂಪ್ರದಾಯಿಕ ಶೈಲಿಗಳು ಮತ್ತು ಫ್ಯಾಷನ್‌ಗಳನ್ನು ಹೊಂದಿರುತ್ತದೆ. ʼಹೀರಾಮಂಡಿʼಯಿಂದ ಪ್ರೇರಿತವಾದ ಅಜಿಯೋ ಹೌಸ್ ಆಫ್ ಎಥ್ನಿಕ್ಸ್‌ನಿಂದ ಹೊಸ ಮತ್ತು ವಿಶೇಷ ಸಂಗ್ರಹವನ್ನು ಈ ಸಹಯೋಗವು ತರುತ್ತದೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್ ಚೈನ್ಸ್
ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಬಿಬಾ (BIBA), ಇಂಡಿ ಪಿಕ್ಸ್, ನೈರಿಕಾ (Nyrika), ಆರ್ಕೆ ರಿತು ಕುಮಾರ್, ಸತ್ಯ ಪಾಲ್, ರಿ-ವಾಹ್, ಗ್ಲೋಬಲ್ ದೇಸಿ, ಗುಲ್ಮೊಹರ್ ಜೈಪುರ್, ಸೋಚ್ ಮತ್ತು ಫ್ಯಾಬಿಂಡಿಯಾದಂತಹ ಉನ್ನತ ಸಾಂಪ್ರದಾಯಿಕ ದಿರಿಸುಗಳ ಬ್ರಾಂಡ್‌ಗಳನ್ನು ಹೊಂದಿರುವ ಕ್ಯುರೇಟೆಡ್ ಸ್ಟೋರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ಸ್ಟೈಲ್‌ಗಳೊಂದಿಗೆ ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಸಾಂಪ್ರದಾಯಿಕ ದಿರಿಸುಗಳ ಫ್ಯಾಷನ್‌ಗಾಗಿ ಭಾರತದ ಆದ್ಯತೆಯ ತಾಣವಾಗಿದೆ. ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗಲಿದೆ.