Site icon Vistara News

Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ !

Winter Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಸೀಸನ್ ಫ್ಯಾಷನ್‌ನಲ್ಲಿ (Winter Wedding Fashion) ಇದೀಗ ನಾನಾ ವಿನ್ಯಾಸದ ಎಥ್ನಿಕ್ ಹಾಗೂ ಟ್ರೆಡಿಷನಲ್ ಲುಕ್ ನೀಡುವಂತಹ ಇಂಡೋ-ವೆಸ್ಟರ್ನ್ ಶೈಲಿಯ ಲೇಯರ್ ಕೋ ಆರ್ಡ್ ಸೂಟ್ ಅಥವಾ ಸೆಟ್‌ಗಳು ಎಂಟ್ರಿ ನೀಡಿವೆ. ಕಾರ್ಡಿಗಾನ್ ಶೈಲಿಯ ಸಿಂಪಲ್ ಕೋಟ್ ಅಥವಾ ಮೇಲುಡುಗೆಯಂತೆ ಕಾಣುವ ಮಂಡಿಯ ಕೆಳಗಿನ ತನಕ ಬರುವ ಲಾಂಗ್ ಲೈಟ್‌ವೇಟ್‌ ಕೋಟ್‌ಗಳನ್ನು ಹೊಂದಿರುವ ಇವು ತ್ರೀ ಪೀಸ್ ಕೋ ಆರ್ಡ್ ಸೆಟ್‌ನಲ್ಲಿ ದೊರೆಯುತ್ತಿವೆ.

ಎಥ್ನಿಕ್ ಸ್ಟೈಲ್ ಲೇಯರ್ ಕೋ ಆರ್ಡ್ ಸೆಟ್

ಬಹುತೇಕ ಕೋ ಆರ್ಡ್ ಸೂಟ್ ಅಥವಾ ಸೆಟ್‌ಗಳು ಕ್ಯಾಶುವಲ್ ಸ್ಟೈಲ್‌ನಲ್ಲಿ ದೊರೆಯುತ್ತವೆ. ಇತ್ತೀಚೆಗೆ ಇವು ಎಲ್ಲಾ ಕೆಟಗರಿಗಳಲ್ಲೂ ದೊರಕತೊಡಗಿದ್ದು, ಇದೀಗ ಮದುವೆ ಮನೆಗಳಲ್ಲೂ ಧರಿಸಬಹುದಾದ ಹ್ಯಾಂಡ್ ವರ್ಕ್, ಮೆಷಿನ್ ವರ್ಕ್‌ನಂತಹ ವಿನ್ಯಾಸದಲ್ಲಿ ಎಥ್ನಿಕ್ ಲುಕ್‌ನಲ್ಲಿ ದೊರೆಯುತ್ತಿವೆ. ಅದರಲ್ಲೂ ಚಳಿಗಾಲಕ್ಕೆ ಮ್ಯಾಚ್ ಆಗುವಂತೆ ಮೇಲುಡುಗೆ ಇರುವಂತಹ ಕೋಟ್ ಶೈಲಿಯಲ್ಲಿ ತ್ರೀ ಪೀಸ್‌ನಲ್ಲಿ ಸಿಗುತ್ತಿವೆ.

ಕಸ್ಟಮೈಸ್ಡ್ ತ್ರೀ ಪೀಸ್ ಲೇಯರ್ ಕೋ ಆರ್ಡ್ ಸೂಟ್

ಅಂದಹಾಗೆ, ವೆಡ್ಡಿಂಗ್ ಸೀಸನ್‌ನಲ್ಲಿ ಇವು ಹೆಚ್ಚು ಟ್ರೆಂಡ್‌ನಲ್ಲಿವೆ. ರೆಡಿಮೇಡ್ ಮಾತ್ರವಲ್ಲದೇ, ಬೋಟಿಕ್‌ನಲ್ಲಿ ಡಿಸೈನರ್‌ಗಳು ಡಿಸೈನ್ ಮಾಡುವ ಡಿಫರೆಂಟ್ ವಿನ್ಯಾಸಗಳಲ್ಲೂ ಲಭ್ಯವಿದೆ. ಕಸ್ಟಮೈಸ್ಡ್ ಡಿಸೈನ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇನ್ನು ಮಾನೋಕ್ರೋಮ್ ಹಾಗೂ ಸಿಲ್ಕ್ ಪ್ರಿಂಟೆಡ್ ಫ್ಯಾಬ್ರಿಕ್‌ನಲ್ಲಿ ಇವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಲಲಿತಾ. ಅವರ ಪ್ರಕಾರ, ಲಾಂಗ್ ಕೋಟ್‌ನಂತಹ ಮೇಲುಡುಗೆ ಈ ಸೀಸನ್‌ಗೆ ಲೇಯರ್ ಲುಕ್ ನಿಡುವುದರೊಂದಿಗೆ ಬೆಚ್ಚಗಿಡುತ್ತವೆ ಎನ್ನುತ್ತಾರೆ.

ಎಥ್ನಿಕ್ ಲುಕ್ ಕೋ ಆರ್ಡ್ ಸೆಟ್ ಅಲಂಕಾರ

ಎಥ್ನಿಕ್ ಲುಕ್ ನೀಡುವ ಕೋ ಆರ್ಡ್ ಸೆಟ್‌ಗಳನ್ನು ಧರಿಸಿದಾಗ ಆಕ್ಸೆಸರೀಸ್ ಧರಿಸುವುದು ಅಗತ್ಯ. ಫಂಕಿ ಆಭರಣಗಳಿಗಿಂತ ಫ್ಯಾಷನ್ ಜ್ಯುವೆಲರಿಗಳನ್ನು ಧರಿಸಬಹುದು. ಕೆಲವೊಮ್ಮೆ ಇವನ್ನು ಪಾರ್ಟಿಗಳಿಗೂ ಧರಿಸಬಹುದು. ಇದಕ್ಕೆ ತಕ್ಕಂತೆ ಮ್ಯಾಚ್ ಮಾಡಬೇಕಷ್ಟೇ! ಇನ್ನು ಮೇಕಪ್ ವಿಂಟರ್ ಸೀಸನ್‌ಗೆ ಹೊಂದಬೇಕು. ಆಯ್ಕೆ ಮಾಡುವಾಗ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಶೇಡ್ ಚೂಸ್ ಮಾಡಬೇಕು ಎಂದು ಪ್ಯಾಷನ್ ಡಿಸೈನರ್ ಸಲಹೆ ನೀಡುತ್ತಾರೆ.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಟ್ರೆಡಿಷನಲ್‌ ಜ್ಯುವೆಲ್‌ ಫ್ಯಾಷನ್‌ಗೆ ಮರಳಿದ ಕಾಸಿನಸರ

Exit mobile version