Site icon Vistara News

Bikers Fashion Week: ಬೈಕರ್ಸ್ & ಕಿಡ್ಸ್ ಫ್ಯಾಷನ್‌ ಶೋನಲ್ಲಿ ರೋಮಾಂಚನಗೊಳಿಸಿದ ರ‍್ಯಾಂಪ್‌ ವಾಕ್‌

Bikers Fashion Week

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟಾಮ್‌ ಬಾಯ್‌ ಇಮೇಜ್‌ನಲ್ಲಿ ಕಾಣಿಸಿಕೊಂಡ ಲೇಡಿಸ್‌ ಗ್ರೂಪ್‌ ರ‍್ಯಾಂಪ್‌ ಮೇಲೆ ಬಿಂದಾಸ್‌ ಆಗಿ ಹೆಜ್ಜೆ ಹಾಕುತ್ತಿದ್ದರೇ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಿದ್ದರು. ಬ್ಲ್ಯಾಕ್‌ ಶೇಡ್‌ನ ಪ್ಯಾಂಟ್‌, ಟಾಪ್‌ ಹಾಗೂ ಜಾಕೆಟ್‌ ಧರಿಸಿದ ಬೈಕರ್ಸ್ ಕಮ್‌ ಮಾಡೆಲ್‌ಗಳು ತಮ್ಮದೇ ಆದ ಸ್ಟೈಲ್‌ನಲ್ಲಿ ಫ್ಯಾಷನ್‌ (Bikers Fashion Week) ವಾಕ್‌ ಮಾಡಿದರು. ಹೆಲ್ಮೆಟ್‌ ಹಿಡಿದು ಕೆಲವು ಮಾಡೆಲ್‌ಗಳು ವೇದಿಕೆ ಹತ್ತಿದರೇ, ಜಾಕೆಟನ್ನೇ ಸ್ಟೈಲಾಗಿ ಹೇಗಲೇರಿಸಿಕೊಂಡು ಒಂದಿಷ್ಟು ಮಾಡೆಲ್‌ಗಳು ವಾಕ್‌ ಮಾಡಿದರು. ಮತ್ತೆ ಕೆಲವರು ಮಾಡರ್ನ್ ಲುಕ್‌ನಲ್ಲಿ ಪೋಸ್‌ ನೀಡಿದರು. ಅಂದಹಾಗೆ, ಇದೆಲ್ಲಾ ನಡೆದದ್ದು, ಲಿಯಾ ನೇತೃತ್ವದ ಕ್ಯಾಸ್ಲಿ ಸಂಸ್ಥೆಯ ಮಹಿಳಾ ದಿನಾಚಾರಣೆಯಲ್ಲಿ. ಬೈಕರ್ಸ್ ಫ್ಯಾಷನ್‌ ಶೋ ಮಾತ್ರವಲ್ಲ, ಪುಟ್ಟ ಮಕ್ಕಳಿಂದಿಡಿದು ಟಿನೇಜ್‌ ಮಕ್ಕಳವರೆಗಿನ ಕಿಡ್ಸ್ ಫ್ಯಾಷನ್‌ ವಾಕ್‌ ಕೂಡ ನಡೆಯಿತು.

ಕ್ಯೂಟ್‌ ಕಿಡ್ಸ್ ಫ್ಯಾಷನ್‌ ಶೋ

ಪುಟ್ಟ ಮಕ್ಕಳ ಕಿಡ್ಸ್ ಫ್ಯಾಷನ್‌ ಶೋವನ್ನು 3 ವರ್ಷದ ಪುಟ್ಟ ಬಾಲಕ ಹಾಗೂ ಬಾಲಕಿ ಆರಂಭಿಸಿದರು. ತಮ್ಮ ತುಂಟತನದಿಂದ ಕೂಡಿದ ವಾಕ್‌ನಿಂದ ಎದುರುಗಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು. ಎಲ್ಲರನ್ನೂ ತಮ್ಮತ್ತ ಸೆಳೆದರು. ಆ ಮಟ್ಟಿಗೆ ಆಕರ್ಷಕವಾಗಿ ವಾಕ್‌ ಮಾಡಿದರು.

ಲಿಯಾ ನೇತೃತ್ವದ ಕ್ಯಾಸ್ಲಿ

ಕ್ಯಾಸ್ಲಿ ಸಂಸ್ಥೆಯ ಮುಖಾಂತರ ಸಾಕಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿರುವ ಲಿಯಾ ಸ್ಯಾಮುವೆಲ್‌ಗೆ ಸ್ವಂತ ಮಗಳೇ ಸಾಥ್‌ ನೀಡುತ್ತಿದ್ದು, ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ. ಈ ಸಾಲಿನ ಮಹಿಳಾ ದಿನಾಚಾರಣೆಯಲ್ಲಿ ಕೊಂಚ ವಿಭಿನ್ನವಾದ ಬೈಕರ್ಸ್ ಫ್ಯಾಷನ್‌ ಹಮ್ಮಿಕೊಂಡಿದ್ದು, ಸಂತಸ ತಂದಿದೆ. ಇದು ಮಹಿಳೆಯರಿಗೆ ಉತ್ತೇಜನ ನೀಡುವಂತಿತ್ತು. ಇದರೊಂದಿಗೆ ಟ್ಯಾಲೆಂಟೆಡ್‌ ಮಹಿಳೆಯರನ್ನು ಗುರುತಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ ಎಂದು ಲಿಯಾ ತಿಳಿಸಿದರು.

ರಾಗಿಣಿ ದ್ವಿವೇದಿ ಫ್ಯಾಷನ್‌ ಮಾತು

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗಮಿಸಿದ್ದ ಬೈಕರ್ಸ್, ವುಮೆನ್‌ ಅಚಿವರ್ಸ್ ಹಾಗೂ ಫ್ಯಾಷನ್‌ ವಾಕ್‌ ಮಾಡಿದ ಮಕ್ಕಳನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಫ್ಯಾಷನ್‌ ವಾಕ್‌ ಮಾಡುವುದು ಸಾಮಾನ್ಯ. ಅದರಲ್ಲಿ ಬೈಕರ್ಸ್ ಮಹಿಳೆಯರು ರ‍್ಯಾಂಪ್‌ ವಾಕ್‌ ಮಾಡಿದ್ದನ್ನು ನೋಡಿ ಖುಷಿಯಾಯಿತು. ಇವರ ಈ ಶೋ ಇತರೇ ಮಹಿಳೆಯರಿಗೆ ಮಾದರಿಯಾಗುವಂತಿತ್ತು. ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಇಂತಹ ಶೋಗಳು ಹೆಚ್ಚಬೇಕು ಎಂದರು. ಇನ್ನು ವಾಕ್‌ ಮಾಡಿದ ಪುಟ್ಟ ಚಿಣ್ಣರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಇಂಟರ್‌ನ್ಯಾಷನಲ್‌ ಬಾಡಿ ಬಿಲ್ಡರ್‌ ಮಮತಾ, ಬಾಲಿವುಡ್‌ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ, ಶೀ ಸೊಸೈಟಿಯ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡ್ಯಾನ್ಸ್‌ ಅನ್ನು ಸಂಸ್ಥಾಪಕ ನಿರ್ದೇಶಕಿ ಪೂರ್ಣಿಮಾ ರಜನಿ, ಲೆಫಿಸ್ಟನಂಟ್ ಜಾಯ್‌ಶ್ರೀ ಬ್ಯಾನರ್ಜಿ, ಡಿಸೈನರ್‌ ನೈನಾ ಕುಮಾರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Garden Printed Fashionwears: ಬೇಸಿಗೆ ಫ್ಯಾಷನ್‌ನಲ್ಲಿ ಗಾರ್ಡನ್‌ ಪ್ರಿಂಟ್ಸ್‌ ಹಂಗಾಮ!

Exit mobile version