ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಟನ್ ಸೀರೆಗಳನ್ನು ಆಕರ್ಷಕವಾಗಿ ಕಾಣುವಂತೆ ಬಿಂಬಿಸಬಹುದು. ಅದು ಹೇಗೆ ಅಂತಿರಾ! ಭಿನ್ನ-ವಿಭಿನ್ನ ಬ್ಲೌಸ್‌ಗಳನ್ನು ಕಾಟನ್ ಸೀರೆಯೊಂದಿಗೆ ಮಿಕ್ಸ್ –ಮ್ಯಾಚ್ ಅಥವಾ ವಿಭಿನ್ನವಾಗಿ ಧರಿಸಿದಾಗ (Cotton saree blouse mix match) ಸುಂದರವಾಗಿ ಕಾಣಿಸಬಹುದು. ಈ ಸ್ಟೈಲಿಂಗ್‌ಗೆ ಆಕ್ಸೆಸರೀಸ್ ಮ್ಯಾಚ್ ಮಾಡಿದಾಗ ಹೈ ಫ್ಯಾಷನ್ ಲುಕ್ ನೀಡಬಹುದು. ಹಿಂದಿನ ಕಾಲದಲ್ಲಿ ಮಹಿಳೆಯರು ಅತಿ ಹೆಚ್ಚಾಗಿ ಕಾಟನ್ ಸೀರೆಗಳನ್ನು ಬಳಸುತ್ತಿದ್ದರು. ಆದರೆ, ಇಂದು ಕೆಲವು ಹುಡುಗಿಯರು ಕಾಟನ್ ಸೀರೆಗಳು ಕೇವಲ ಹಿರಿಯ ಮಹಿಳೆಯರಿಗೆ ಮಾತ್ರ ಎಂದು ಕೊಳ್ಳುತ್ತಾರೆ. ಅದು ತಪ್ಪು. ನಮ್ಮ ಸ್ಟೈಲಿಂಗ್ ಆಧಾರದ ಮೇಲೆ ಪ್ರತಿ ಸಾಮಾನ್ಯ ಕಾಟನ್ ಸೀರೆ ಕೂಡ ಆಕರ್ಷಕವಾಗಿ ಕಾಣಿಸಬಲ್ಲವು. ಅದಕ್ಕಾಗಿ ವೈವಿಧ್ಯಮಯ ಬ್ಲೌಸ್‌ಗಳನ್ನು ಹಾಗೂ ಆಕ್ಸೆಸರೀಸ್‌ಗಳನ್ನು ಧರಿಸಬೇಕು. ಜೊತೆಗೆ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಸೈ ಎನ್ನಬೇಕು ಎನ್ನುತ್ತಾರೆ ಡಿಸೈನರ್ ರೇಣುಕಾ ಪ್ರಕಾಶ್. ಅವರ ನಾನಾ ಸ್ಟೈಲಿಂಗ್‌ನ ಉದಾಹರಣೆಗಳು ಇಲ್ಲಿವೆ.
ಉಡುಪಿ ಸೀರೆಗೆ ಅರ್ಗಾನ್ಜಾ ಬ್ಲೌಸ್
ಉಡುಪಿ ಕಾಟನ್ ಸೀರೆಯನ್ನು ಅರ್ಗಾನ್ಜಾ ಫುಲ್ ಸ್ಲೀವ್ ಬ್ಲೌಸ್ ಮ್ಯಾಚ್ ಮಾಡಿದ್ದೇನೆ. ಇದು ಡಿಫರೆಂಟ್ ಲುಕ್ ನೀಡುತ್ತದೆ. ಇನ್ನು ಇದಕ್ಕೆ ಧರಿಸಿರುವ ಜುಮ್ಕಾ, ಬಿಗ್ ಫಿಂಗರ್ ರಿಂಗ್ಸ್ ಹಾಗೂ ಕ್ಲಿಪಾನ್ ಮೂಗುತಿ ಡಿಫರೆಂಟ್ ಲುಕ್ ನೀಡಿದೆ. ಸೊಂಟಕ್ಕೆ ಬಿಗಿದಿರುವ ಫಂಕಿ ಬೆಲ್ಟ್ ಇಂಡೋ- ವೆಸ್ಟರ್ನ್ ಲುಕ್ ನೀಡಿದೆ ಎನ್ನುತ್ತಾರೆ.
ಪಲ್ಹಾಜೊ ಪ್ಯಾಂಟ್ ಜೊತೆ ಕಾಟನ್ ಸೀರೆ
ವೈಟ್ ಪಲ್ಹಾಜೊ ಪ್ಯಾಂಟ್ ಜೊತೆಗೆ ಚೆಡಿ ಬುಟ್ಟಾ ಸೀರೆ ಹಾಗೂ ರೇಸರ್ ಬ್ಲೌಸ್ ಮ್ಯಾಚ್ ಮಾಡಿ ಧರಿಸಿರುವುದು ಕಂಪ್ಲೀಟ್ ಇಂಡೋ-ವೆಸ್ಟರ್ನ್ ಲುಕ್ ನೀಡಿದೆ. ಇನ್ನು ಇದರೊಂದಿಗೆ ಮರದ ಬಳೆಗಳು, ಮ್ಯಾಚಿಂಗ್ ಬಳೆ, ಫುಟ್ವೇರ್ ಇದನ್ನು ಆಕರ್ಷಕವಾಗಿಸಿದೆ ಎಂಬುದು ರೇಣುಕಾ ಅಭಿಪ್ರಾಯ.
ಪಟ್ಟದ ಅಂಚು ಸೀರೆಗೆ ಬ್ಲ್ಯಾಕ್ ಪ್ರಿಂಟ್ ಕೋಟ್
ಇನ್ನು, ಪಟ್ಟದ ಅಂಚು ಸೀರೆ ಜೊತೆ ಬ್ಲ್ಯಾಕ್ ಪ್ರಿಂಟ್ ಇರುವಂತಹ ಜಾಕೆಟ್, ಸಿಲ್ವರ್ ಜ್ಯುವೆಲರಿ, ಜುಮ್ಕಾ, ಬ್ಲಾಕ್ ಶೂ ಟ್ರೆಡಿಷನಲ್ ಲುಕ್ ಅನ್ನು ಸ್ಟೈಲಿಶ್ ಆಗಿಸಿದೆ. ಅವರಿಗೆ ಜಾಕೆಟ್ ಸೀರೆ ಲುಕ್ ನೀಡಿದೆ.
ಸಲ್ವಾರ್ ಟಾಪ್‌ನೊಂದಿಗೆ ಗಂಚಾ ಸೀರೆ
ಗಂಚಾ ಸೀರೆಯೊಂದಿಗೆ ಸಲ್ವಾರ್‌ಟಾಪ್ ಮ್ಯಾಚ್ ಮಾಡಿ, ಅದಕ್ಕೆ ಡಿಫರೆಂಟ್ ಆಗಿ ಪಲ್ಲು ಹಾಕಿರುವುದು ಕಂಪ್ಲೀಟ್ ಡಿಫರೆಂಟ್ ಆಗಿದ್ದು, ಅವರನ್ನು ಸಿಂಪಲ್ ಆಗಿ ಬಿಂಬಿಸಿದೆ.
ಮಲ್ಟಿ ಕಲರ್ ಬ್ಲೌಸ್‌ಗೆ ಇಳಕಲ್ ಸೀರೆ
ಮಲ್ಟಿ ಕಲರ್ ಚೆಕ್ಸ್ ಬ್ಲೌಸ್‌ಗೆ ಹಸಿರು ಇಳಕಲ್ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿರುವುದು ಆಕರ್ಷಕವಾಗಿ ಬಿಂಬಿಸಿದೆ. ಸಿಲ್ವರ್ ಹಸ್ಲಿ, ಬ್ಯಾಂಗಲ್ಸ್, ರೆಡ್ ಜೂತಿ ಸುಂದರವಾಗಿ ಬಿಂಬಿಸಿದೆ. ಉತ್ತರ ಕರ್ನಾಟಕದ ಟ್ರೆಡಿಷನಲ್ ಸೀರೆಯನ್ನು ಹೈ ಲೈಟ್ ಮಾಡಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Crop Jacket Saree Fashion: ವಿಂಟರ್ ಫ್ಯಾಷನ್‌ನಲ್ಲಿ ಡಿಸೈನರ್ ಕ್ರಾಪ್ ಜಾಕೆಟ್ ಸೀರೆಯ ಜಾದೂ