-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ಡಿಸೈನ್‌ನ ಫ್ಯಾನ್ಸಿ ಹ್ಯಾಂಡ್ ಬ್ಯಾಗ್‌ಗಳು (Fancy Handbags Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಊಹೆಗೂ ಮೀರಿದ ಫ್ಯಾನ್ಸಿ ಹ್ಯಾಂಡ್ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಿನ್ನ-ವಿಭಿನ್ನ ವಿನ್ಯಾಸದಲ್ಲಿ ಇವು ಬಿಡುಗಡೆಗೊಂಡಿವೆ. ಅಂದಹಾಗೆ, ಮೊದಲಿನಂತೆ ಈ ಹ್ಯಾಂಡ್‌ಬ್ಯಾಗ್‌ಗಳು ಅಗತ್ಯ ವಸ್ತುಗಳನ್ನು ಇಡುವ ಹಾಗೂ ಕ್ಯಾರಿ ಮಾಡುವ ಬ್ಯಾಗ್ ಆಗಿ ಉಳಿದಿಲ್ಲ! ಬದಲಿಗೆ ಉಡುಪಿನೊಂದಿಗೆ ಸಾಥ್ ನೀಡುವ ಸ್ಟೈಲಿಶ್ ಆಗಿ ಕಾಣಿಸುವ ಆಕ್ಸೆಸರೀಸ್ ಲಿಸ್ಟ್‌ಗೆ ಸೇರಿಕೊಂಡಿವೆ. ಅಲ್ಲದೇ, ಬಹುತೇಕ ಫ್ಯಾಷನ್ ಪ್ರಿಯರ ಸ್ಟೈಲ್ ಸ್ಟೇಟ್‌ಮೆಂಟ್ ಲಿಸ್ಟ್‌ಗೆ ಸೇರಿಕೊಂಡಿವೆ.
ಟ್ರೆಂಡ್‌ನಲ್ಲಿರುವ ಫ್ಯಾನ್ಸಿ ಹ್ಯಾಂಡ್ ಬ್ಯಾಗ್ಸ್
ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಇದೀಗ ಅಸ್ಸೆಮ್ಮಿಟ್ರಿಕಲ್ ಡಿಸೈನ್‌ನವು, ಜೆಮೆಟ್ರಿಕಲ್ ಆಕಾರದವು, ಚಿತ್ರ-ವಿಚಿತ್ರ ಪ್ರಿಂಟ್ಸ್‌ನವು, ಲೆದರ್‌ನ ಮಿನಿ ಬ್ಯಾಗ್‌ಗಳು ಸಿಲಿಕಾನ್‌ನ ಕ್ಲಚ್ ಶೈಲಿಯವು, ಜ್ಯೂಟ್ ಹಾಗೂ ಬಂಬು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳಿಂದ ಸಿದ್ಧಪಡಿಸಲಾದ ಹ್ಯಾಂಡ್‌ಬ್ಯಾಗ್‌ಗಳು, ಫೈಬರ್ ಮೇಟಿರಿಯಲ್‌ನ ಪಿರಮಿಡ್ ಸ್ಟ್ರಕ್ಚರ್ ಡಿಸೈನ್ ಬ್ಯಾಗ್‌ಗಳು, ಟ್ರಾನ್ಸಫರೆಂಟ್, ಕ್ವಿರ್ಕಿ, ಫಂಕಿ ಹ್ಯಾಂಡ್ ಬ್ಯಾಗ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದವು ಚಾಲ್ತಿಯಲ್ಲಿವೆ.
ದುಬಾರಿ ಫ್ಯಾನ್ಸಿ ಹ್ಯಾಂಡ್ ಬ್ಯಾಗ್‌ಗಳ ರಿಪ್ಲಿಕಾ ಲಭ್ಯ
ಬ್ರಾಂಡೆಡ್ ಹ್ಯಾಂಡ್‌ಬ್ಯಾಗ್‌ಗಳಲ್ಲೂ ಇದೀಗ ಇಂತಹ ಡಿಸೈನ್‌ಗಳು ಬಂದಿರುವುದು ಸೆಲೆಬ್ರೆಟಿಗಳು ಹಾಗೂ ಫ್ಯಾಷನ್ ಮಾಡೆಲ್‌ಗಳು ಬಳಸುವುದನ್ನು ಕಾಣಬಹುದು. ಇನ್ನು, ಸಾಮಾನ್ಯ ಹುಡುಗಿಯರು ಕೂಡ ಇಂತಹ ಬ್ಯಾಗ್‌ಗಳನ್ನು ಹಿಡಿದು ಓಡಾಡತೊಡಗಿದ್ದಾರೆ. ಹಾಗೆಂದು ಸಾವಿರಗಟ್ಟಲೇ ಬೆಲೆ ಬಾಳುವ ಈ ಫ್ಯಾನ್ಸಿ ಬ್ಯಾಗ್‌ಗಳನ್ನು ಕೊಳ್ಳುತ್ತಾರೆಂದಲ್ಲ! ಅದೇ ಶೈಲಿಯ ರಿಪ್ಲಿಕಾ ಹ್ಯಾಂಡ್ ಬ್ಯಾಗ್‌ಗಳು ಕೂಡ ಇದೀಗ ಕೈಗೆಟಕುವ ದರದಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್. ಅವರ ಪ್ರಕಾರ, ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಹೆಚ್ಚು ಜಾಗದ ಅವಕಾಶವಿರುವುದಿಲ್ಲ. ನೋಡಲು ಹಾಗೂ ಶೋ ಆಫ್‌ಗಾಗಿ ಇಂತಹ ಬ್ಯಾಗನ್ನು ಬಳಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ.
ತಾರೆಯರ ಲಕ್ಷುರಿ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್ಸ್
ಇನ್ನು, ತಾರೆಯರ ಫ್ಯಾನ್ಸಿ ಹ್ಯಾಂಡ್‌ಬ್ಯಾಗ್‌ಗಳ ಬೆಲೆ ಕೇಳಿದರೇ ಬೆಚ್ಚಿ ಬೀಳುತ್ತೀರಾ! ಎಲ್ಲವೂ ಲಕ್ಷ ರೂಪಾಯಿಗಳ ಮೇಲಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಕೈಯಲ್ಲಿ ಹಿಡಿದಿದ್ದ ಒಂದು ಹ್ಯಾಂಡ್ ಬ್ಯಾಗ್‌ಗೆ ಎರಡು ಲಕ್ಷಕ್ಕೂ ಹೆಚ್ಚು ದರ ಇತ್ತು. ಇನ್ನು ದೀಪಿಕಾ ಪಡುಕೋಣೆ ಬಳಸುವುದು ಇಂಟರ್ನ್ಯಾಷನಲ್ ಬ್ರಾಂಡ್‌ನದ್ದೇ! ಇದೇ ರೀತಿ, ಅನನ್ಯಾ, ಜಾನ್ವಿ ಕಪೂರ್, ಸುಹಾನಾ ಎಲ್ಲರೂ ಲಕ್ಷುರಿ ಫ್ಯಾನ್ಸಿ ಹ್ಯಾಂಡ್ ಬ್ಯಾಗ್ ಪ್ರಿಯರು ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Parachute Pants Fashion: ಪ್ಯಾರಾಶೂಟ್ ಪ್ಯಾಂಟ್ಸ್; ಟೀನೇಜ್ ಹುಡುಗಿಯರ ಹೊಸ ಟ್ರೆಂಡ್!
ಫ್ಯಾನ್ಸಿ ಹ್ಯಾಂಡ್‌ಬ್ಯಾಗ್ ಬಗ್ಗೆ ತಿಳಿದಿರಬೇಕಾದ್ದು
- ನಿಮ್ಮ ಬಳಕೆಗೆ ತಕ್ಕಂತೆ ಡಿಸೈನ್ ಆಯ್ಕೆ ಮಾಡುವುದು ಉತ್ತಮ.
- ನೋಡಲು ಫ್ಯಾನ್ಸಿಯಾಗಿರುವ ಬ್ಯಾಗ್‌ಗಳು ಹೆಚ್ಚು ಬಾಳಿಕೆ ಬರದು.
- ಆದಷ್ಟೂ ನ್ಯೂಟ್ರಲ್ ಶೇಡ್ ಆಯ್ಕೆ ಉತ್ತಮ. ಎಲ್ಲಾ ಡ್ರೆಸ್ಗಳಿಗೂ ಮ್ಯಾಚ್ ಆಗುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)