-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಫ್ಯಾಷನ್ ಲೋಕವು ತನ್ನದೇ ಆದ ಶೈಲಿಯಲ್ಲಿ ಸ್ವಾತಂತ್ಯೋತ್ಸವವನ್ನು (Independence day 2023) ಆಚರಿಸಿತು. ಗ್ಲಾಮರಸ್ ಲೋಕದ ಪೇಜ್ ತ್ರೀ ಹಾಗೂ ಫ್ಯಾಷನ್ ಕ್ಷೇತ್ರದ ಸೆಲೆಬ್ರೆಟಿಗಳು ದೇಶ ಪ್ರೇಮ ಬಿಂಬಿಸುವ ನಾನಾ ಶೈಲಿಯ ಔಟ್‌ಫಿಟ್‌ಗಳನ್ನು ಧರಿಸಿ, ಕಾಣಿಸಿಕೊಂಡರು, ಹಬ್ಬದಂತೆ ಸಂಭ್ರಮಿಸಿದರು. ರಾಷ್ಟ್ರ ಪ್ರೇಮ ಬಿಂಬಿಸುವ ತಿರಂಗಾ, ಜೈ ಹಿಂದ್, ಐ ಲವ್ ಇಂಡಿಯಾ, ದ್ವಜದ ಟೀ ಶರ್ಟ್, ಕೇಸರಿ-ಬಿಳಿ-ಹಸಿರು ಶೇಡ್‌ಗಳ ಸೀರೆ, ಲೆಹೆಂಗಾ, ಕಾಟನ್ ಜುಬ್ಬಾ- ಪೈಜಾಮ, ಖಾದಿ ಕುರ್ತಾ, ಸಲ್ವಾರ್, ಚೂಡಿದಾರ್, ತ್ರಿವರ್ಣದ ದುಪಟ್ಟಾ, ತ್ರಿವರ್ಣ ಸ್ಟೋಲ್ ಹೀಗೆ ನಾನಾ ಬಗೆಯ ಧರಿಸಿದ ಫ್ಯಾಷನ್ ಲೋಕದ ಸೆಲೆಬ್ರೆಟಿಗಳು ನಾನಾ ಶೈಲಿಯ ತಿರಂಗಾ ವರ್ಣದ ಔಟ್‌ಫಿಟ್‌ಗಳನ್ನು ಧರಿಸಿ, ತಮ್ಮದೇ ಆದ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವನ್ನು ಸಂಭ್ರಮಿಸಿದರು.
ಪ್ರತಿಭಾ ಸೌನ್ಶಿಮಠ್, ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್
ಮಾಡೆಲ್‌ಗಳ ತಿರಂಗಾ ಶೇಡ್ಸ್ ಪ್ರೇಮ
ಮಾಡೆಲ್ ನಿಮಿಕಾ, ತೇಜಸ್ವಿನಿ ಶರ್ಮಾ, ಚಂದನಾ ಗೌಡ, ಶುಭಾ ಸುರೇಶ್, ಅನಿ ಥಾಮಸ್ ಸೇರಿದಂತೆ ಮಾಡೆಲ್‌ಗಳು ದೇಸಿ ಲುಕ್ ನೀಡುವ ಔಟ್‌ಫಿಟ್‌ಗಳಲ್ಲಿ ಹಾಗೂ ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ಅಷ್ಟು ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಡ್ರೆಸ್‌ಕೋಡ್‌ನಲ್ಲಿ ಮಿನುಗಿದರು. ಒಬ್ಬರಿಗಿಂತ ಒಬ್ಬರು ಈ ರೀತಿ ಕಾಣಿಸಿಕೊಂಡಿದ್ದು, ದೇಶ ಪ್ರೇಮಿಗಳನ್ನು ಸೆಳೆಯಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ ವಿವೇಕ್. ಅವರ ಪ್ರಕಾರ, ಇತ್ತೀಚೆಗೆ ಫ್ಯಾಷನ್ ಕ್ಷೇತ್ರವೂ ಕೂಡ ಇಂತಹ ಸೆಲೆಬ್ರೇಷನ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ!
ಇನ್ನು, ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸೌಂಶಿಮಠ್ ಕೂಡ ಎಂದಿನಂತೆ ತಮ್ಮದೇ ತಿರಂಗಾ ಶೇಡ್ಸ್‌ನ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು, ರೀಲ್ಸ್ ಮಾಡಿ ಫ್ಯಾಷನ್ ಪ್ರೇಮಿಗಳನ್ನು ಸೆಳೆದರು.
ಇದನ್ನೂ ಓದಿ : Swami Nithyananda: ಶಿವಣ್ಣನ ಹಾಡಿಗೆ ʻನಿತ್ಯಾನಂದʼನ ತಾಳ; ಕೈಲಾಸಕ್ಕೆ ಹೋಗಲೇ ಬೇಕು ಅಂದ್ರು ಫ್ಯಾನ್ಸ್!
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ, ಜೈ ಹಿಂದ್ ಟೀ ಶರ್ಟ್ನಲ್ಲಿ ದೇಶ ಪ್ರೇಮ ತೋರ್ಪಡಿಸಿದರೇ, ಮಾಡೆಲ್ ವಿನಯ್ ಸಿಂಧ್ಯಾ , ಎಥ್ನಿಕ್ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡರು. ಇದೇ ರೀತಿ ಉದ್ಯಾನನಗರಿಯ ಬಹಳಷ್ಟು ಮಾಡೆಲ್‌ಗಳು ತಮ್ಮದೇ ಆದ ರೀತಿಯಲ್ಲಿ ರಾಷ್ಟ್ರ ಪ್ರೇಮಕ್ಕೆ ಸಾಥ್ ನೀಡುವ ಉಡುಪಿನಲ್ಲಿ ಕಾಣಿಸಿಕೊಂಡು, ದೇಶಪ್ರೇಮ ಮೆರೆದರು.
ಲೇಖಕಿ: ಫ್ಯಾಶನ್ ಪತ್ರಕರ್ತೆ