Independence day 2023 : ರಾಷ್ಟ್ರಪ್ರೇಮ ಬಿಂಬಿಸುವ ಔಟ್‌ಫಿಟ್‌ನಲ್ಲಿ ಫ್ಯಾಷನ್‌ ಸೆಲೆಬ್ರೆಟಿಗಳು - Vistara News

ಫ್ಯಾಷನ್

Independence day 2023 : ರಾಷ್ಟ್ರಪ್ರೇಮ ಬಿಂಬಿಸುವ ಔಟ್‌ಫಿಟ್‌ನಲ್ಲಿ ಫ್ಯಾಷನ್‌ ಸೆಲೆಬ್ರೆಟಿಗಳು

ರಾಷ್ಟ್ರ ಪ್ರೇಮ ಬಿಂಬಿಸುವ ನಾನಾ ಬಗೆಯ ಔಟ್‌ಫಿಟ್‌ಗಳಲ್ಲಿ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಕೂಡ ಮಿಂಚಿದರು. ತಿರಂಗಾ, ಜೈ ಹಿಂದ್‌, ಖಾದಿ-ಕಾಟನ್‌ವೇರ್‌ ಧರಿಸಿ ಸ್ವಾತಂತ್ರ್ಯೋತ್ಸವನ್ನು ಸಂಭ್ರಮಿಸಿದರು. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Independence day 2023
ಸ್ನೇಹಾ ನಮನಂದಿ ಮಾಡೆಲ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯ ಫ್ಯಾಷನ್‌ ಲೋಕವು ತನ್ನದೇ ಆದ ಶೈಲಿಯಲ್ಲಿ ಸ್ವಾತಂತ್ಯೋತ್ಸವವನ್ನು (Independence day 2023) ಆಚರಿಸಿತು. ಗ್ಲಾಮರಸ್‌ ಲೋಕದ ಪೇಜ್‌ ತ್ರೀ ಹಾಗೂ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ದೇಶ ಪ್ರೇಮ ಬಿಂಬಿಸುವ ನಾನಾ ಶೈಲಿಯ ಔಟ್‌ಫಿಟ್‌ಗಳನ್ನು ಧರಿಸಿ, ಕಾಣಿಸಿಕೊಂಡರು, ಹಬ್ಬದಂತೆ ಸಂಭ್ರಮಿಸಿದರು. ರಾಷ್ಟ್ರ ಪ್ರೇಮ ಬಿಂಬಿಸುವ ತಿರಂಗಾ, ಜೈ ಹಿಂದ್‌, ಐ ಲವ್‌ ಇಂಡಿಯಾ, ದ್ವಜದ ಟೀ ಶರ್ಟ್, ಕೇಸರಿ-ಬಿಳಿ-ಹಸಿರು ಶೇಡ್‌ಗಳ ಸೀರೆ, ಲೆಹೆಂಗಾ, ಕಾಟನ್‌ ಜುಬ್ಬಾ- ಪೈಜಾಮ, ಖಾದಿ ಕುರ್ತಾ, ಸಲ್ವಾರ್‌, ಚೂಡಿದಾರ್‌, ತ್ರಿವರ್ಣದ ದುಪಟ್ಟಾ, ತ್ರಿವರ್ಣ ಸ್ಟೋಲ್‌ ಹೀಗೆ ನಾನಾ ಬಗೆಯ ಧರಿಸಿದ ಫ್ಯಾಷನ್‌ ಲೋಕದ ಸೆಲೆಬ್ರೆಟಿಗಳು ನಾನಾ ಶೈಲಿಯ ತಿರಂಗಾ ವರ್ಣದ ಔಟ್‌ಫಿಟ್‌ಗಳನ್ನು ಧರಿಸಿ, ತಮ್ಮದೇ ಆದ ಶೈಲಿಯಲ್ಲಿ ಸ್ವಾತಂತ್ರ್ಯೋತ್ಸವನ್ನು ಸಂಭ್ರಮಿಸಿದರು.

ಪ್ರತಿಭಾ ಸೌನ್ಶಿಮಠ್, ಮಿಸೆಸ್ ಏಷ್ಯಾ ಇಂಟರ್​ನ್ಯಾಷನಲ್

ಮಾಡೆಲ್‌ಗಳ ತಿರಂಗಾ ಶೇಡ್ಸ್ ಪ್ರೇಮ

ಮಾಡೆಲ್‌ ನಿಮಿಕಾ, ತೇಜಸ್ವಿನಿ ಶರ್ಮಾ, ಚಂದನಾ ಗೌಡ, ಶುಭಾ ಸುರೇಶ್‌, ಅನಿ ಥಾಮಸ್‌ ಸೇರಿದಂತೆ ಮಾಡೆಲ್‌ಗಳು ದೇಸಿ ಲುಕ್‌ ನೀಡುವ ಔಟ್‌ಫಿಟ್‌ಗಳಲ್ಲಿ ಹಾಗೂ ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ಅಷ್ಟು ಮಾತ್ರವಲ್ಲ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಡ್ರೆಸ್‌ಕೋಡ್‌ನಲ್ಲಿ ಮಿನುಗಿದರು. ಒಬ್ಬರಿಗಿಂತ ಒಬ್ಬರು ಈ ರೀತಿ ಕಾಣಿಸಿಕೊಂಡಿದ್ದು, ದೇಶ ಪ್ರೇಮಿಗಳನ್ನು ಸೆಳೆಯಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ ವಿವೇಕ್‌. ಅವರ ಪ್ರಕಾರ, ಇತ್ತೀಚೆಗೆ ಫ್ಯಾಷನ್‌ ಕ್ಷೇತ್ರವೂ ಕೂಡ ಇಂತಹ ಸೆಲೆಬ್ರೇಷನ್‌ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ!

ಇನ್ನು, ಮಿಸೆಸ್‌ ಇಂಡಿಯಾ ಕರ್ನಾಟಕ ಡೈರೆಕ್ಟರ್‌ ಪ್ರತಿಭಾ ಸೌಂಶಿಮಠ್‌ ಕೂಡ ಎಂದಿನಂತೆ ತಮ್ಮದೇ ತಿರಂಗಾ ಶೇಡ್ಸ್‌ನ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು, ರೀಲ್ಸ್‌ ಮಾಡಿ ಫ್ಯಾಷನ್‌ ಪ್ರೇಮಿಗಳನ್ನು ಸೆಳೆದರು.

ಇದನ್ನೂ ಓದಿ : Swami Nithyananda: ಶಿವಣ್ಣನ ಹಾಡಿಗೆ ʻನಿತ್ಯಾನಂದʼನ ತಾಳ; ಕೈಲಾಸಕ್ಕೆ ಹೋಗಲೇ ಬೇಕು ಅಂದ್ರು ಫ್ಯಾನ್ಸ್‌!

ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ, ಜೈ ಹಿಂದ್‌ ಟೀ ಶರ್ಟ್​ನಲ್ಲಿ ದೇಶ ಪ್ರೇಮ ತೋರ್ಪಡಿಸಿದರೇ, ಮಾಡೆಲ್‌ ವಿನಯ್‌ ಸಿಂಧ್ಯಾ , ಎಥ್ನಿಕ್‌ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡರು. ಇದೇ ರೀತಿ ಉದ್ಯಾನನಗರಿಯ ಬಹಳಷ್ಟು ಮಾಡೆಲ್‌ಗಳು ತಮ್ಮದೇ ಆದ ರೀತಿಯಲ್ಲಿ ರಾಷ್ಟ್ರ ಪ್ರೇಮಕ್ಕೆ ಸಾಥ್‌ ನೀಡುವ ಉಡುಪಿನಲ್ಲಿ ಕಾಣಿಸಿಕೊಂಡು, ದೇಶಪ್ರೇಮ ಮೆರೆದರು.

ಲೇಖಕಿ: ಫ್ಯಾಶನ್ ಪತ್ರಕರ್ತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌

ಇದೀಗ ಈ ಸೀಸನ್‌ನ ನೇಲ್‌ ಆರ್ಟ್‌ ಫ್ಯಾಷನ್‌ನಲ್ಲಿ (Summer Fashion) ಸನ್‌ ಕಲರ್ಸ್‌ ನುಸುಳಿದೆ. ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ಹಾಗಾದಲ್ಲಿ, ಏನಿದು ಸನ್‌ ಕಲರ್‌ ನೇಲ್‌ ಆರ್ಟ್?‌ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸನ್‌ ಕಲರ್‌ ನೇಲ್‌ ಆರ್ಟ್‌ (Summer Fashion) ಇದೀಗ ಟ್ರೆಂಡಿಯಾಗಿದೆ. ಹೌದು. ಇದೀಗ ಈ ಸೀಸನ್‌ನಲ್ಲಿ ನೇಲ್‌ ಆರ್ಟ್‌ನಲ್ಲಿ ನಾನಾ ಶೇಡ್‌ನ ಸನ್‌ ಕಲರ್‌ಗಳು ನುಸುಳಿವೆ. ಈ ಹಿಂದೆ ಹಳದಿ ಕಲರ್‌ ಎಂದು ಹೀಗೆಳೆಯುತ್ತಿದ್ದ ಮಾನಿನಿಯರು ಕೂಡ ಈ ಶೇಡ್‌ಗಳನ್ನು ತಮ್ಮ ನೇಲ್‌ ಆರ್ಟ್‌ನಲ್ಲಿ ಬಳಸತೊಡಗಿದ್ದಾರೆ. ಇದಕ್ಕೆ ಹೊಸ ರೂಪ ನೀಡಿ ಟ್ರೆಂಡಿಯಾಗಿಸಿದ್ದಾರೆ. ಮಿಕ್ಸ್‌ ಮ್ಯಾಚ್‌ ಮಾಡಿ ಹೊಸ ನೇಲ್‌ ಆರ್ಟ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ನೇಲ್‌ ಆರ್ಟ್‌ ಡಿಸೈನರ್ಸ್.‌

Summer Fashion

ಟ್ರೆಂಡಿಯಾಗಲು ಕಾರಣ

“ನೇಲ್‌ ಆರ್ಟ್‌ ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಅದರಲ್ಲೂ ಈ ಸಮ್ಮರ್‌ ಸೀಸನ್‌ನಲ್ಲಿ ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ನೇಲ್‌ ಆರ್ಟ್‌ನಲ್ಲೂ ಅಷ್ಟೇ! ಡಾರ್ಕ್‌ ಕಲರ್‌ಗಳಿಗಿಂತ ಲೈಟ್‌ ಕಲರ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಅದೇ ರೀತಿ ಈ ಸೀಸನ್‌ನಲ್ಲಿ ಅತಿ ಹೆಚ್ಚು ಯೆಲ್ಲೋ ಶೇಡ್‌ಗಳು, ಅದರಲ್ಲೂ ಹೆಚ್ಚು ಎದ್ದು ಕಾಣುವಂತಹ ಸನ್‌ ಕಲರ್‌ ಶೇಡ್‌ಗಳನ್ನು ಬಳಸಲಾಗುತ್ತಿದೆ. ಈ ಕಲರ್‌ಗಳು ಯುವತಿಯರಿಗೆ ಪ್ರಿಯವಾಗತೊಡಗಿವೆ. ಹಾಗಾಗಿ ಈ ಶೇಡ್ಸ್‌ ಟ್ರೆಂಡಿಯಾಗಲು ಕಾರಣವಾಗಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Fashion

ಏನಿದು ಸನ್‌ ಕಲರ್‌ ನೇಲ್‌ ಶೇಡ್ಸ್‌

ಹಳದಿಯ ನಾನಾ ಶೇಡ್‌ಗಳನ್ನು ಸನ್‌ ಕಲರ್‌ಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಪ್ರಖರ ಕಿರಣಗಳಂತೆ ಕಾಣುವ ಈ ಕಲರ್‌ಗಳನ್ನು ಸನ್‌ ಕಲರ್‌ಗಳೆಂದು ಹೇಳಲಾಗುತ್ತದೆ. ಇದು ಉಡುಪಿನ ಬಣ್ಣವಾಗಬಹುದು ಅಥವಾ ಇತರೇ ಶೇಡ್ಸ್‌ ಆಗಬಹುದು. ಇದನ್ನು ನೇಲ್‌ ಆರ್ಟ್‌ನಲ್ಲಿ ಮೊದಲೆಲ್ಲಾ ಬಳಕೆ ಮಾಡುತ್ತಿದ್ದದ್ದು ತೀರಾ ಕಡಿಮೆಯಾಗಿತ್ತು. ಇದೀಗ ಈ ಶೇಡ್‌ ಕೂಡ ನೇಲ್‌ ಆರ್ಟ್‌ನಲ್ಲಿ ಸ್ಥಾನಗಳಿಸಿ, ಪಾಪುಲರ್‌ ಆಗಿದೆ.

Summer Fashion

ಟ್ರೆಂಡಿಯಾಗಿರುವ ಸನ್‌ ನೇಲ್‌ ಆರ್ಟ್‌

ಸನ್‌ ಶೇಡ್ಸ್‌ ಅಂದರೇ, ಹಳದಿ ಬಣ್ಣವನ್ನು ಬ್ಯಾಕ್‌ಗ್ರೌಂಡ್‌ ವರ್ಣವಾಗಿಸಿ ಪೊಲ್ಕಾ ಡಾಟ್ಸ್‌ ರಚಿಸುವುದು, ಸೂರ್ಯನ ಕಿರಣಗಳನ್ನು ಸೃಷ್ಟಿಸುವುದು, ಸನ್‌ ಫ್ಲವರ್‌ ಹೂಗಳ ಚಿತ್ತಾರ, ಸೇವಂತಿ, ಬಿಸಿಲಿನ ಪ್ರಖರ ಕಿರಣಗಳು, ಹಳದಿಯ ನಾನಾ ಕಿರಣಗಳಂತೆ ಬಿಂಬಿಸುವುದು. ಕಾಮನಬಿಲ್ಲು, ಜೇಡರ ಬಲೆ ಹೀಗೆ ನಾನಾ ಬಗೆಯ ಚಿತ್ರಗಳನ್ನು ರಚಿಸುವುದು ಈ ನೇಲ್‌ ಆರ್ಟ್‌ನಲ್ಲಿ ಸೇರಿದೆ. ಹಳದಿ ಬಣ್ಣ ಎದ್ದು ಕಾಣಿಸುವುದರಿಂದ ಈ ಚಿತ್ತಾರಗಳನ್ನು ಮೂಡಿಸುವುದು ಸುಲಭ ಎನ್ನುತ್ತಾರೆ ನೇಲ್‌ ಡಿಸೈನರ್‌ ರಕ್ಷಿತಾ. ಅವರ ಪ್ರಕಾರ, ಈ ಕಲರ್‌ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ನೀವೂ ನೇಲ್‌ ಆರ್ಟ್‌ ಮಾಡಿ ನೋಡಿ

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ! ನೇಲ್‌ ಕಿಟ್‌ ನಿಮ್ಮ ಬಳಿ ಇರಲಿ. ಜೊತೆಗೆ ಟ್ರೆಂಡಿಯಾಗಿರುವ ಎಲ್ಲಾ ಶೇಡ್‌ಗಳ ಕಲೆಕ್ಷನ್ಸ್‌ ನಿಮ್ಮ ಬಳಿಯಿರಲಿ. ಡಿಸೈನ್ಸ್‌ಗಾಗಿ ನೀವೂ ಅಂತರ್ಜಾಲ ಜಾಲಾಡಬಹುದು. ನೀವೂ ಕೂಡ ನಿಮ್ಮ ಕೈ ಬೆರಳುಗಳ ಉಗುರುಗಳಿಗೆ ಅಥವಾ ನಿಮ್ಮ ಆಪ್ತರ ಕೈಗಳಿಗೆ ಸಿಂಗಾರ ಮಾಡಬಹುದು. ಉಗುರಿಗೆ ಕೋಟ್‌ ನೇಲ್‌ಪಾಲಿಶ್‌ ಹಾಕಿದ ನಂತರ ಸನ್‌ ಕಲರ್‌ ಹಚ್ಚಿ. ಪೊಲ್ಕಾ ಡಾಟ್ಸ್‌ ಅಥವಾ ನೆಟ್‌, ಸ್ಪೈಡರ್‌ನಂತಹ ಡಿಸೈನನ್ನು ನೀವೇ ಖುದ್ದು ಡಿಸೈನ್‌ ಮಾಡಿ. ಆನ್‌ಲೈನ್‌ ಟ್ಯೂಷನ್‌ನಲ್ಲೂ ಈ ಕುರಿತ ವಿಡಿಯೋಗಳು ಲಭ್ಯ ಎಂದು ಟಿಪ್ಸ್‌ ನೀಡುತ್ತಾರೆ ನೇಲ್‌ ಡಿಸೈನರ್ಸ್.‌

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ಪಾರ್ಟಿಪ್ರಿಯರಿಗೆ ಪ್ರಿಯವಾಗುವಂತಹ ಮಿರಮಿರ ಮಿನುಗುವ ಸಿಕ್ವೀನ್ಸ್‌ ಫ್ಯಾಷನ್‌ವೇರ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ. ಜಗಮಗಿಸುವ ಸಿಕ್ವೀನ್ಸ್‌ ಫ್ಯಾಬ್ರಿಕ್‌ ಹೊಂದಿರುವ (Sequins Partywear Fashion) ಫ್ಯಾಷನ್‌ವೇರ್‌ಗಳಿವು. ಕಿರಿದಾದ ಬಟನ್‌ ಶೈಲಿಯ ಮೆಟೀರಿಯಲ್‌ನಿಂದ ರೂಪುಗೊಳ್ಳುವ ಒಂದು ಔಟ್‌ಫಿಟ್‌ ಕನಿಷ್ಠವೆಂದರೂ ಲಕ್ಷಗಟ್ಟಲೇ ಥ್ರೆಡ್‌ನಿಂದ ಕೂರಿಸಲಾದ ಮೈಕ್ರೋ ಸಿಕ್ವೀನ್ಸ್‌ ಬಟನ್‌ ಶೈಲಿಯವನ್ನು ಹೊಂದಿರುತ್ತವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Sequins partywear fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಿಕ್ವೀನ್ಸ್‌ ಪಾರ್ಟಿವೇರ್ಸ್‌ (Sequins Partywear Fashion) ಇದೀಗ ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ಪಾರ್ಟಿ ಪ್ರಿಯರಿಗೆ ಪ್ರಿಯವಾಗುವಂತಹ ನಾನಾ ಬಗೆಯ ಮಿರಮಿರ ಮಿನುಗುವ ಸಿಕ್ವೀನ್ಸ್‌ ಫ್ಯಾಷನ್‌ವೇರ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿದ್ದು, ನೋಡಲು ಕಣ್ಣು ಕುಕ್ಕುವ ಶೇಡ್ಸ್‌ಗಳಲ್ಲಿ ಹಾಗೂ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಒಂದಕ್ಕಿಂತ ಒಂದು ವಿನ್ಯಾಸ ಮನಮೋಹಕವಾಗಿ ನೋಡುಗರನ್ನು ಸೆಳೆಯುತ್ತಿವೆ.

Sequins partywear fashion

ಮಿರಮಿರ ಮಿನುಗುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ಜಗಮಗಿಸುವ ಸಿಕ್ವೀನ್ಸ್‌ ಫ್ಯಾಬ್ರಿಕ್‌ ಹೊಂದಿರುವ ಫ್ಯಾಷನ್‌ವೇರ್‌ಗಳಿವು. ಚಿಕ್ಕ ಚಿಕ್ಕ ಮಿರ ಮಿರ ಎನ್ನುವ ಕಿರಿದಾದ ಬಟನ್‌ ಶೈಲಿಯ ಮೆಟೀರಿಯಲ್‌ನಿಂದ ರೂಪುಗೊಳ್ಳುವ ಒಂದು ಔಟ್‌ಫಿಟ್‌ ಕನಿಷ್ಠವೆಂದರೂ ಲಕ್ಷಗಟ್ಟಲೇ ಥ್ರೆಡ್‌ನಿಂದ ಕೂರಿಸಲಾದ ಮೈಕ್ರೋ ಸಿಕ್ವೀನ್ಸ್‌ ಬಟನ್‌ ಶೈಲಿಯವನ್ನು ಹೊಂದಿರುತ್ತವೆ. ಇವೆಲ್ಲವೂ ಒಟ್ಟಿಗೆ ಸೇರಿದಾಗ ಮಿರಮಿರ ಮಿನುಗುವ ಸಿಕ್ವೀನ್ಸ್‌ ಉಡುಪಾಗಿ ರೂಪುಗೊಳ್ಳುತ್ತವೆ. ಮೊದಲೆಲ್ಲಾ ಕೇವಲ ಸೀರೆಗಳಲ್ಲಿ ಕಾಣಿಸಿಕೊಂಡಿದ್ದ ಈ ಮೇಟಿರಿಯಲ್‌ ಇದೀಗ ವೆಸ್ಟರ್ನ್‌ವೇರ್‌ಗಳಲ್ಲಿ ಬಂದಿದ್ದು, ಪಾರ್ಟಿವೇರ್‌ಗಳಲ್ಲಿ ಸೂಪರ್‌ ಹಿಟ್‌ ಆಗಿವೆ.

Sequins partywear fashion

ಸೆಲೆಬ್ರೆಟಿಗಳ ಫೇವರೇಟ್‌ ಔಟ್‌ಫಿಟ್ಸ್‌

ಸಿಕ್ವೀನ್ಸ್‌ ಪಾರ್ಟಿವೇರ್‌ಗಳು ಸೆಲೆಬ್ರೆಟಿಗಳ ಫೇವರೇಟ್‌ ಪಾರ್ಟಿವೇರ್ಸ್‌ ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಆ ಮಟ್ಟಿಗೆ ಬಾಲಿವುಡ್‌ ಸೆಲೆಬ್ರೆಟಿಗಳು ನಾನಾ ಶೈಲಿಯಲ್ಲಿ ನಾನಾ ಡಿಸೈನ್‌ನ ಪಾರ್ಟಿವೇರ್ಸ್‌ ಧರಿಸುತ್ತಿರುತ್ತಾರೆ. ಇನ್ನು ವೆಸ್ಟರ್ನ್‌ವೇರ್‌ ಡಿಸೈನ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್‌ಗಳು ಕೂಡ ಆಯಾ ಬಾಲಿವುಡ್‌ ತಾರೆಯರ ಅಭಿಲಾಷೆಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಿಕೊಡುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಿಚಾ.

ಟ್ರೆಂಡಿಯಾಗಿರುವ ಸಿಕ್ವೀನ್ಸ್‌ ಪಾರ್ಟಿವೇರ್ಸ್‌

ನೈಟ್‌ಪಾರ್ಟಿಗಳಲ್ಲಿ ಅತಿ ಹೆಚ್ಚಾಗಿ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳನ್ನು ಧರಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಅವುಗಳಲ್ಲಿ, ಬಾಡಿಕಾನ್‌ ಸ್ಲಿಟ್‌ ಗೌನ್ಸ್‌, ಬ್ಯಾಕ್‌ಲೆಸ್‌ ಸಿಕ್ವೀನ್ಸ್‌ ಗೌನ್ಸ್‌, ಹಾಲ್ಟರ್‌ ನೆಕ್‌ ಗೌನ್ಸ್‌, ಮಿನಿ ಫ್ರಾಕ್ಸ್‌, ಸ್ವಿಂಗ್‌ ಫ್ರಾಕ್ಸ್‌, ಡಿವೈಡಿಂಗ್‌ ಪ್ಯಾಂಟ್ಸ್‌, ಕಟೌಟ್‌ ಟಾಪ್‌ ಹಾಗೂ ಸ್ಕೆಟರ್‌ ಡ್ರೆಸ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಗೋಲ್ಡ್‌ ಹಾಗೂ ಸಿಲ್ವರ್‌ ಶೇಡ್‌ನವು ಅತಿ ಹೆಚ್ಚು ಪಾರ್ಟಿವೇರ್‌ಗಳ ಕೆಟಗರಿಯಲ್ಲಿ ಪಾಪುಲರ್‌ ಆಗಿವೆ. ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಬಿಕಿನಿ ಶೈಲಿಯ ಟಾಪ್‌ ಹಾಗೂ ಶಾರ್ಟ್ಸ್‌ ಸ್ಕರ್ಟ್‌ಗಳಲ್ಲಿ ಬಂದಿವೆ. ಪೇಜ್‌ 3 ಪಾರ್ಟಿಪ್ರಿಯರ ವಾರ್ಡ್ರೋಬ್‌ಗೆ ಸೇರಿವೆ. ಪರಿಣಾಮ, ಯಾವ ಪಾರ್ಟಿಯಲ್ಲಿ ನೋಡಿದರೂ ಈ ಸಿಕ್ವೀನ್ಸ್‌ ಡಿಸೈನರ್‌ವೇರ್‌ಗಳ ಕಾರುಬಾರು ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್ಸ್‌ ರಿಯಾ ಹಾಗೂ ದೇವ್‌.

Sequins partywear fashion

ಮಾಡೆಲ್‌ಗಳ ಸಿಕ್ವೀನ್ಸ್‌ ಲವ್‌

ಇದಕ್ಕೆ ಪೂರಕ ಎಂಬಂತೆ, ಸಿಕ್ವೀನ್ಸ್‌ ಪಾರ್ಟಿ ಪ್ರಿಯರಲ್ಲಿ ಇದೀಗ ಮಾಡೆಲ್‌ಗಳು ಸೇರಿದ್ದಾರೆ. ಮಾಡೆಲ್‌ ರಿಯಾ, ಜಾನು ಹಾಗೂ ರೀಟಾ ಅವರಿಗೂ ಸಿಕ್ವೀನ್ಸ್‌ ಪಾರ್ಟಿವೇರ್‌ಗಳೆಂದರೇ ಬಲು ಪ್ರೀತಿಯಂತೆ. ಇವರುಗಳಿಗೆ ಮಾತ್ರವಲ್ಲ, ಸಾಕಷ್ಟು ಮಾಡೆಲ್‌ಗಳಿಗೆ ಬಿಂದಾಸ್‌ ಲುಕ್‌ ನೀಡುವ ಈ ಸಿಕ್ವೀನ್ಸ್‌ ಔಟ್‌ಫಿಟ್ಸ್‌ ಎಂದರೇ ಸಖತ್‌ ಇಷ್ಟವಂತೆ.

ಇದನ್ನೂ ಓದಿ: Mango Facepack: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

ಸಿಕ್ವೀನ್ಸ್‌ ಪಾರ್ಟಿವೇರ್ಸ್‌ ಮೇಕೋವರ್‌ಗೆ 3 ಐಡಿಯಾ

  1. ವೆಸ್ಟರ್ನ್‌ ಲುಕ್‌ಗೆ ಆಕ್ಸೆಸರೀಸ್‌ ಮ್ಯಾಚ್‌ ಮಾಡಿ.
  2. ಮೇಕಪ್‌ ಲೈಟಾಗಿರಲಿ, ಐ ಮೇಕಪ್‌ ಹೈ ಲೈಟಾಗಿರಲಿ.
  3. ಹೈ ಹೀಲ್ಸ್‌ ಹಾಗೂ ಹೇರ್‌ಸ್ಟೈಲ್‌ ಆಕರ್ಷಕವಾಗಿರಲಿ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading

ಬೆಂಗಳೂರು

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

Child Actor Master OM: ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಹಾಗೂ ಬಾಲ ನಟ ಮಾಸ್ಟರ್ ಓಂ‌, ಇದೀಗ 10ನೇ ತರಗತಿಯ ಬೋರ್ಡ್‌ ಎಕ್ಸಾಂ (ಐಸಿಎಸ್‌ಇ ಸಿಲಬಸ್)ನಲ್ಲಿ 97% ಅಂಕ ಗಳಿಸುವ ಮೂಲಕ ಬೆಂಗಳೂರಿನ ಆಚಾರ್ಯ ಪಾಠಶಾಲೆಯ ಟಾಪರ್ಸ್‌ ಲಿಸ್ಟ್‌ಗೆ ಸೇರಿದ್ದಾನೆ. ನಟನೆ, ಮಾಡೆಲಿಂಗ್‌ನಂಥ ಪಠ್ಯೇತರ ಚಟುವಟಿಕೆ ತನ್ನ ಓದಿಗೆ ಅಡ್ಡಿಯಾಗಲಿಲ್ಲ ಎನ್ನುವ ಓಂ, ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸುವ ಗುರಿ ಹೊಂದಿದ್ದಾನೆ.

VISTARANEWS.COM


on

ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಮತ್ತು ಬಾಲ ನಟ ಓಂ
Koo

ಬೆಂಗಳೂರು: ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಹಾಗೂ ಬಾಲ ನಟನಾಗಿದ್ದ (Child Actor Master OM) ಮಾಸ್ಟರ್ ಓಂ, ಇದೀಗ 10ನೇ ತರಗತಿ ಬೋರ್ಡ್‌ ಎಕ್ಸಾಂ (ಐಸಿಎಸ್‌ಇ ಸಿಲಬಸ್) ಪರೀಕ್ಷೆಯಲ್ಲಿ 97% ಅಂಕ ಗಳಿಸುವ ಮೂಲಕ ಪ್ರತಿಷ್ಠಿತ ಆಚಾರ್ಯ ಪಾಠಶಾಲೆಯ ಟಾಪರ್ಸ್‌ ಲಿಸ್ಟ್‌ಗೆ ಸೇರಿದ್ದಾನೆ. ಐಸಿಎಸ್‌ಸಿ ಸಿಲಬಸ್‌ನಲ್ಲಿ ಓದುವವರು ಕನ್ನಡವೆಂದರೇ ಕಬ್ಬಿಣದ ಕಡಲೆ ಎಂದು ಭಾವಿಸುತ್ತಾರೆ. ಆದರೆ, ಓಂ ಕನ್ನಡದಲ್ಲಿ 100 ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಇದನ್ನು ಸಾಧಿಸಿ ತೋರಿಸಿದ್ದಾನೆ. ಗಣಿತ ಹಾಗೂ ಹಿಸ್ಟರಿಯಲ್ಲಿ 100ಕ್ಕೆ 99 ಮಾರ್ಕ್ಸ್‌ ಗಳಿಸಿದ್ದಾನೆ. ಇನ್ನುಳಿದ ಎಲ್ಲಾ ವಿಷಯಗಳಲ್ಲೂ ಕ್ರಮವಾಗಿ 95, 96, 97 ಹೀಗೆ ಅತ್ಯಧಿಕ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಇದಕ್ಕೆಲ್ಲಾ ಶಾಲೆಯ ಪ್ರಾಂಶುಪಾಲರು, ಟೀಚರ್ಸ್‌ ಹಾಗೂ ಪೋಷಕರ ಸಹಕಾರವೇ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾನೆ.

ಓಂ ಸಿನಿಮಾ, ಫ್ಯಾಷನ್‌ ಜರ್ನಿ

ಮದುವೆಯ ಮಮತೆಯ ಕರೆಯೊಲೆ, ಲೀ, ವೇಷಧಾರಿ, ಪ್ರೇಮಂ, ಸಂತೋಷ-ಸಂಗೀತ, ಕಾಳಿದಾಸ ಕನ್ನಡ ಮೇಷ್ಟ್ರು, ಕಾಫಿ(ತಮಿಳು) ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾ, 35ಕ್ಕೂ ಅಧಿಕ ಜಾಹೀರಾತು ಮತ್ತು ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿರುವ ಓಂ ಓದಿನಲ್ಲೂ ಮುಂದಿರುವುದು ಸಿನಿಮಾ ಬಾಲ ನಟ-ನಟಿಯರಿಗೆ ಮಾದರಿಯಾಗುವಂತಿದೆ. ಇವೆಲ್ಲದರ ಜೊತೆಗೆ ಶಾಲೆಯ ಕ್ಯಾಪ್ಟನ್‌ಶಿಪ್‌ ಹಾಗೂ ತೇಜಸ್ವಿ ಸೂರ್ಯರ ಸೌತ್‌ ಸ್ಕೂಲ್‌ ಲೀಡರ್ಸ್‌ ಟೀಮ್‌ನ ಸಾಮಾಜಿಕ ಕಾರ್ಯಾಗಾರಗಳಲ್ಲೂ ಶಾಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಓಂನದು.

ಇದನ್ನೂ ಓದಿ | Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ನಟನೆ, ಮಾಡೆಲಿಂಗ್‌ನಂಥ ಪಠ್ಯೇತರ ಚಟುವಟಿಕೆ ತನ್ನ ಓದಿಗೆ ಅಡ್ಡಿಯಾಗಲಿಲ್ಲ ಎನ್ನುವ ಓಂ, ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸುವ ಗುರಿ ಹೊಂದಿದ್ದಾನೆ. ಹಾಗೆಯೇ, ನಟನೆ-ಮಾಡೆಲಿಂಗ್‌ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾನೆ.

Continue Reading

ಬೆಂಗಳೂರು

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

LuLu Fashion Week 2024: ಬೆಂಗಳೂರಿನ ಲುಲು ಮಾಲ್‌ನಲ್ಲಿ ಮೇ 10ರಿಂದ 12ರವರೆಗೆ ಮೂರು ದಿನಗಳವರೆಗೆ ಲುಲು ಫ್ಯಾಷನ್ ವೀಕ್ʼ 2ನೇ ಆವೃತ್ತಿ ಆಯೋಜಿಸಲಾಗಿದೆ. ಶನಿವಾರ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮದಲ್ಲಿ ವಿವಿಧ ಬ್ರ್ಯಾಂಡ್‌ಗಳ ಫ್ಯಾಷನ್ ಶೋ ನಡೆಯಿತು. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ.

VISTARANEWS.COM


on

Koo

ಬೆಂಗಳೂರು: ನಗರದ ಲುಲು ಮಾಲ್‌ನಲ್ಲಿ ʼಲುಲು ಫ್ಯಾಷನ್ ವೀಕ್ʼ 2ನೇ ಆವೃತ್ತಿಯ (LuLu Fashion Week 2024) ಭಾಗವಾಗಿ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮವು 2ನೇ ದಿನವೂ ಅದ್ಧೂರಿಯಾಗಿ ನೆರವೇರಿತು. ಕಲರಫುಲ್ ಸಂಜೆಯಲ್ಲಿ ಮೂಡಿಬಂದ ಫ್ಯಾಷನ್ ಶೋ ನೋಡಲು ಸಾವಿರಾರು ಜನರು ಆಗಮಿಸಿದ್ದರು.

ಮೇ 10ರಂದು ಆರಂಭವಾದ ಕಾರ್ಯಕ್ರಮ ಮೇ 12 ಭಾನುವಾರದವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ. ಶನಿವಾರ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮದಲ್ಲಿ ನುವಾ, ಪೆಪೆ ಜೀನ್ಸ್ ಲಂಡನ್, ಪೀಟರ್ ಇಂಗ್ಲೆಂಡ್, ಅಮೆರಿಕನ್ ಟೂರಿಸ್ಟರ್, ಕ್ರೊಯ್ಡಾನ್ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳ ಫ್ಯಾಷನ್ ಶೋ ನಡೆಯಿತು. ಜೊತೆಗೆ ಬಿಗ್ ಚೋಕೋ ಡೇಸ್ ಲೋಗೋ ಲಾಂಚ್ ಮಾಡಲಾಯಿತು. ನಂತರ ಫ್ಯಾಷನ್ ಫೋರಂನಲ್ಲಿ ಭವಿಷ್ಯದ ಫ್ಯಾಷನ್ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಚಂದನವನದ ನಟ ರಿಷಿ ಭಾಗಿಯಾಗಿದ್ದರು.

ಇನ್ನು ಹಲವಾರು ಕಲೆಗಳಿಗೆ ಕಾರ್ಯಕ್ರಮ ವೇದಿಕೆಯಾಯಿತು. ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಲುಲು ಮಾಲ್ ಅಂಗಳದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ವಿಭಿನ್ನವಾದ ಬಟ್ಟೆ ತೊಟ್ಟು ನಾರಿಯರು ಕಂಗೊಳಿಸಿದರು. ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಜನರು ಆಗಮಿಸಿದ್ದು, ಮಕ್ಕಳು ಸಹ ಖುಷಿಪಟ್ಟರು.

ಇದನ್ನೂ ಓದಿ | Hair Color Fashion: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

ಒಟ್ಟಿನಲ್ಲಿ ಲುಲು ಫ್ಯಾಷನ್ ವೀಕ್ ಬಹು ಜೋರಾಗಿದ್ದು, ಪ್ಯಾಷನ್ ಶೋ ನೋಡಿ ನೆರೆದಿದ್ದ ಜನರು ಫುಲ್ ಫಿದಾ ಆಗಿದ್ದಾರೆ. ಇನ್ನು ಮೇ 12 ಭಾನುವಾರ ಫ್ಯಾಷನ್ ವೀಕ್ ಮುಕ್ತಾಯಗೊಳ್ಳಲಿದೆ.

Continue Reading
Advertisement
Narendra Modi
ದೇಶ2 mins ago

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Dina Bhavishya
ಭವಿಷ್ಯ3 mins ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ5 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ6 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ6 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ6 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ6 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ6 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ6 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 mins ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ10 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ10 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ11 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ11 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ12 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ18 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ23 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌