-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಬಂಗಾರ ಹಾಗೂ ವಜ್ರದಲ್ಲೂ ಫ್ಯಾಷನ್ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಫ್ಯಾಷನ್ ಪ್ರಿಯ ಮಹಿಳೆಯರನ್ನು ಅಲಂಕರಿಸುತ್ತಿವೆ. ಈ ಹಿಂದೆ ಕೇವಲ ಆರ್ಟಿಫಿಷಿಯಲ್ ಮೆಟಲ್‌ನಲ್ಲಿ ದೊರೆಯುತ್ತಿದ್ದ ವೈವಿಧ್ಯಮಯ ಊಹೆಗೂ ಮೀರಿದ ಡಿಸೈನ್‌ನ ಫ್ಯಾಷನ್ ಜ್ಯುವೆಲರಿಗಳು, ಇತ್ತೀಚೆಗೆ ಬಂಗಾರ ಹಾಗೂ ವಜ್ರದಲ್ಲೂ ಎಂಟ್ರಿ ನೀಡಿರುವುದು ಸಾಕಷ್ಟು ಮಾನಿನಿಯರಿಗೆ ಖುಷಿ ತಂದಿದೆ.
ಫ್ಯಾಷನ್ ಜ್ಯುವೆಲರಿ ಕ್ರೇಝ್
ಫ್ಯಾಷನ್ ಜ್ಯುವೆಲರಿಗಳು ಮೊದಲಿನಿಂದಲೂ ಸಖತ್ ಜನಪ್ರಿಯವಾಗಿವೆ. ಇದಕ್ಕೆ ಕಾರಣ, ವೆಸ್ಟರ್ನ್ ಔಟ್‌ಫಿಟ್ ಮಾತ್ರವಲ್ಲ, ಎಲ್ಲಾ ಬಗೆಯ ಡ್ರೆಸ್‌ಕೋಡ್‌ಗಳಿಗೆ ಮ್ಯಾಚ್ ಆಗುವುದು. ಇನ್ನು ಇವು ಅತ್ಯಾಕರ್ಷಕವಾಗಿ ಕಾಣುವುದು ಮತ್ತೊಂದು ಕಾರಣ. ಎಲ್ಲದಕ್ಕಿಂತ ಹೆಚ್ಚಾಗಿ ಇವುಗಳ ಯೂನಿಕ್ ಡಿಸೈನ್ಸ್ ಇಂದಿನ ಯಂಗ್‌ಸ್ಟರ್ಸ್ ಹಾಗೂ ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯಲು ಮತ್ತೊಂದು ಕಾರಣ ಎನ್ನಬಹುದು.
ವೈವಿಧ್ಯಮಯ ಡಿಸೈನ್ಸ್
ಬರ್ಡ್ಸ್, ಅಬ್‌ಸ್ಟ್ರಾಕ್ಟ್ ಡಿಸೈನ್ಸ್, ಜಂಕ್ ಜ್ಯುವೆಲ್ ಡಿಸೈನ್ಸ್, ಸಿಂಪಲ್ ಸ್ಟಡ್ಸ್, ಕ್ರಿಸ್ಟಲ್ ಶೈನಿಂಗ್ ಹ್ಯಾಂಗಿಂಗ್ಸ್, ಬೀಡ್ಸ್ ಒವರ್‌ಸೈಝ್ ಜ್ಯುವೆಲರಿ, ಜೆಮೆಟ್ರಿಕಲ್ ವಿನ್ಯಾಸ, ಟ್ರಾಪಿಕಲ್ ಡಿಸೈನ್ಸ್, ಫ್ಲೋರಲ್ ಸ್ಟಡ್ಸ್, ಹ್ಯಾಂಗಿಂಗ್ಸ್, ಸೀಸನಬಲ್ ಇಯರಿಂಗ್ಸ್, ನೇಚರ್, ಸನ್-ಮೂನ್-ಸ್ಟಾರ್ ಡಿಸೈನ್ಸ್, ಪರ್ಲ್ ಫ್ಯಾಷನ್ ಜ್ಯುವೆಲರಿ ಸೇರಿದಂತೆ ನಾನಾ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಫಿಂಗರ್ ರಿಂಗ್‌ಗಳು ಈ ಕೆಟಗರಿಯಲ್ಲಿ ಎಂಟ್ರಿ ನೀಡಿವೆ. ಈ ಫ್ಯಾಷನ್ ಜ್ಯುವೆಲರಿಗಳು ಈ ಹಿಂದೆಯೂ ಇತ್ತಾದರೂ ಅಷ್ಟಾಗಿ ಮಾನಿನಿಯರನ್ನು ಸೆಳೆದಿರಲಿಲ್ಲ! ಅದರಲ್ಲೂ ಹೆಚ್ಚು ಡಿಸೈನ್ಸ್ ಕೂಡ ದೊರೆಯುತ್ತಿರಲಿಲ್ಲ! ಹಾಗಾಗಿ ಕೊಳ್ಳುವವರು ಕಡಿಮೆ ಇದ್ದರು. ಇದೀಗ ಲೈಟ್‌ವೈಟ್‌ನಲ್ಲಿ ಈ ಫ್ಯಾಷನ್ ಜ್ಯುವೆಲರಿಗಳು ದೊರಕಲಾರಂಭಿಸಿರುವುದು ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿದೆ. ಇನ್ನು, ಲಕ್ಷ ರೂ. ಗಳಿಗಿಂತ ಕಡಿಮೆಗೆ ದೊರೆಯುವ ಈ ಜ್ಯುವೆಲರಿಗಳನ್ನು ಗಿಫ್ಟ್ ಮಾಡುವ ಪುರುಷರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್.
ಇದನ್ನೂ ಓದಿ: Urfi Javed: ಹೃದಯ ಕಿತ್ತು ಮಾನ ಮುಚ್ಚಿಕೊಂಡ ಫ್ಯಾಷನ್ ಐಕಾನ್ ಖ್ಯಾತಿಯ ಉರ್ಫಿ ಜಾವೇದ್
ಖರೀದಿಸುವ ಫ್ಯಾಷನ್ ಜ್ಯುವೆಲರಿಗಳು ಹೇಗಿರಬೇಕು ?
- ಒಮ್ಮೆ ಮಾತ್ರವಲ್ಲ, ಆಗಾಗ್ಗೆ ಧರಿಸುವಂತಹ ವಿನ್ಯಾಸವಿರಬೇಕು.
- ನೋಡಿದಾಗ ಯೂನಿಕ್ ಡಿಸೈನ್ ಎಂದೆನಿಸಬೇಕು.
- ಲೈಟ್ವೈಟ್ನದ್ದು ಕಿವಿಗೆ ಭಾರವಾಗುವುದಿಲ್ಲ.
- ಇಂಡೋ-ವೆಸ್ಟರ್ನ್ ಲುಕ್ಗೂ ಮ್ಯಾಚ್ ಆಗುವಂತಿರಬೇಕು.
- ಸೂಕ್ಷ್ಮ ಡಿಸೈನ್ಸ್ ಹೊಂದಿರುವುದರಿಂದ ರಫ್ ಬಳಕೆ ಮಾಡಬಾರದು.
- ಡೈಲಿ ಬಳಕೆ ಮಾಡುವುದಾದಲ್ಲಿ ಆದಷ್ಟೂ ಹ್ಯಾಂಗಿಂಗ್ಸ್ ಖರೀದಿ ಬೇಡ.
- ಸ್ಟಡ್ಸ್ ಡಿಸೈನ್ಸ್ ರಫ್ ಬಳಕೆ ಮಾಡಬಹುದು.
- ವಜ್ರದಾದ್ದಲ್ಲಿ ಮೊದಲು ಮಾಹಿತಿ ಪಡೆದು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)