ಫ್ಯಾಷನ್
Jewel Trend: ಬಂಗಾರ-ವಜ್ರದಲ್ಲೂ ಮೂಡಿದ ಟ್ರೆಂಡಿ ವಿನ್ಯಾಸದ ಫ್ಯಾಷನ್ ಜ್ಯುವೆಲ್ಸ್
ಕೇವಲ ಆರ್ಟಿಫಿಷಿಯಲ್ ಮೆಟಲ್‌ನಲ್ಲಿ ದೊರೆಯುತ್ತಿದ್ದ ಫ್ಯಾಷನ್ ಜ್ಯುವೆಲರಿಗಳು, ಇದೀಗ ಬಂಗಾರ ಹಾಗೂ ವಜ್ರದಲ್ಲೂ ಎಂಟ್ರಿ ನೀಡಿವೆ. ಫ್ಯಾಷನ್ ಪ್ರಿಯ ಮಹಿಳೆಯರನ್ನು ಸೆಳೆಯುತ್ತಿವೆ. ಯಾವ್ಯಾವ ಡಿಸೈನ್‌ನವು ಹೆಚ್ಚು ಜನಪ್ರಿಯವಾಗಿವೆ? ಇದಕ್ಕೆ ಕಾರಣ ಏನು? ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಬಂಗಾರ ಹಾಗೂ ವಜ್ರದಲ್ಲೂ ಫ್ಯಾಷನ್ ಜ್ಯುವೆಲರಿಗಳು ಟ್ರೆಂಡಿಯಾಗಿವೆ. ಫ್ಯಾಷನ್ ಪ್ರಿಯ ಮಹಿಳೆಯರನ್ನು ಅಲಂಕರಿಸುತ್ತಿವೆ. ಈ ಹಿಂದೆ ಕೇವಲ ಆರ್ಟಿಫಿಷಿಯಲ್ ಮೆಟಲ್‌ನಲ್ಲಿ ದೊರೆಯುತ್ತಿದ್ದ ವೈವಿಧ್ಯಮಯ ಊಹೆಗೂ ಮೀರಿದ ಡಿಸೈನ್‌ನ ಫ್ಯಾಷನ್ ಜ್ಯುವೆಲರಿಗಳು, ಇತ್ತೀಚೆಗೆ ಬಂಗಾರ ಹಾಗೂ ವಜ್ರದಲ್ಲೂ ಎಂಟ್ರಿ ನೀಡಿರುವುದು ಸಾಕಷ್ಟು ಮಾನಿನಿಯರಿಗೆ ಖುಷಿ ತಂದಿದೆ.
ಫ್ಯಾಷನ್ ಜ್ಯುವೆಲರಿ ಕ್ರೇಝ್
ಫ್ಯಾಷನ್ ಜ್ಯುವೆಲರಿಗಳು ಮೊದಲಿನಿಂದಲೂ ಸಖತ್ ಜನಪ್ರಿಯವಾಗಿವೆ. ಇದಕ್ಕೆ ಕಾರಣ, ವೆಸ್ಟರ್ನ್ ಔಟ್‌ಫಿಟ್ ಮಾತ್ರವಲ್ಲ, ಎಲ್ಲಾ ಬಗೆಯ ಡ್ರೆಸ್‌ಕೋಡ್‌ಗಳಿಗೆ ಮ್ಯಾಚ್ ಆಗುವುದು. ಇನ್ನು ಇವು ಅತ್ಯಾಕರ್ಷಕವಾಗಿ ಕಾಣುವುದು ಮತ್ತೊಂದು ಕಾರಣ. ಎಲ್ಲದಕ್ಕಿಂತ ಹೆಚ್ಚಾಗಿ ಇವುಗಳ ಯೂನಿಕ್ ಡಿಸೈನ್ಸ್ ಇಂದಿನ ಯಂಗ್‌ಸ್ಟರ್ಸ್ ಹಾಗೂ ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯಲು ಮತ್ತೊಂದು ಕಾರಣ ಎನ್ನಬಹುದು.
ವೈವಿಧ್ಯಮಯ ಡಿಸೈನ್ಸ್
ಬರ್ಡ್ಸ್, ಅಬ್‌ಸ್ಟ್ರಾಕ್ಟ್ ಡಿಸೈನ್ಸ್, ಜಂಕ್ ಜ್ಯುವೆಲ್ ಡಿಸೈನ್ಸ್, ಸಿಂಪಲ್ ಸ್ಟಡ್ಸ್, ಕ್ರಿಸ್ಟಲ್ ಶೈನಿಂಗ್ ಹ್ಯಾಂಗಿಂಗ್ಸ್, ಬೀಡ್ಸ್ ಒವರ್‌ಸೈಝ್ ಜ್ಯುವೆಲರಿ, ಜೆಮೆಟ್ರಿಕಲ್ ವಿನ್ಯಾಸ, ಟ್ರಾಪಿಕಲ್ ಡಿಸೈನ್ಸ್, ಫ್ಲೋರಲ್ ಸ್ಟಡ್ಸ್, ಹ್ಯಾಂಗಿಂಗ್ಸ್, ಸೀಸನಬಲ್ ಇಯರಿಂಗ್ಸ್, ನೇಚರ್, ಸನ್-ಮೂನ್-ಸ್ಟಾರ್ ಡಿಸೈನ್ಸ್, ಪರ್ಲ್ ಫ್ಯಾಷನ್ ಜ್ಯುವೆಲರಿ ಸೇರಿದಂತೆ ನಾನಾ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಫಿಂಗರ್ ರಿಂಗ್‌ಗಳು ಈ ಕೆಟಗರಿಯಲ್ಲಿ ಎಂಟ್ರಿ ನೀಡಿವೆ. ಈ ಫ್ಯಾಷನ್ ಜ್ಯುವೆಲರಿಗಳು ಈ ಹಿಂದೆಯೂ ಇತ್ತಾದರೂ ಅಷ್ಟಾಗಿ ಮಾನಿನಿಯರನ್ನು ಸೆಳೆದಿರಲಿಲ್ಲ! ಅದರಲ್ಲೂ ಹೆಚ್ಚು ಡಿಸೈನ್ಸ್ ಕೂಡ ದೊರೆಯುತ್ತಿರಲಿಲ್ಲ! ಹಾಗಾಗಿ ಕೊಳ್ಳುವವರು ಕಡಿಮೆ ಇದ್ದರು. ಇದೀಗ ಲೈಟ್‌ವೈಟ್‌ನಲ್ಲಿ ಈ ಫ್ಯಾಷನ್ ಜ್ಯುವೆಲರಿಗಳು ದೊರಕಲಾರಂಭಿಸಿರುವುದು ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿದೆ. ಇನ್ನು, ಲಕ್ಷ ರೂ. ಗಳಿಗಿಂತ ಕಡಿಮೆಗೆ ದೊರೆಯುವ ಈ ಜ್ಯುವೆಲರಿಗಳನ್ನು ಗಿಫ್ಟ್ ಮಾಡುವ ಪುರುಷರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್.
ಇದನ್ನೂ ಓದಿ: Urfi Javed: ಹೃದಯ ಕಿತ್ತು ಮಾನ ಮುಚ್ಚಿಕೊಂಡ ಫ್ಯಾಷನ್ ಐಕಾನ್ ಖ್ಯಾತಿಯ ಉರ್ಫಿ ಜಾವೇದ್
ಖರೀದಿಸುವ ಫ್ಯಾಷನ್ ಜ್ಯುವೆಲರಿಗಳು ಹೇಗಿರಬೇಕು ?
- ಒಮ್ಮೆ ಮಾತ್ರವಲ್ಲ, ಆಗಾಗ್ಗೆ ಧರಿಸುವಂತಹ ವಿನ್ಯಾಸವಿರಬೇಕು.
- ನೋಡಿದಾಗ ಯೂನಿಕ್ ಡಿಸೈನ್ ಎಂದೆನಿಸಬೇಕು.
- ಲೈಟ್‌ವೈಟ್‌ನದ್ದು ಕಿವಿಗೆ ಭಾರವಾಗುವುದಿಲ್ಲ.
- ಇಂಡೋ-ವೆಸ್ಟರ್ನ್ ಲುಕ್‌ಗೂ ಮ್ಯಾಚ್ ಆಗುವಂತಿರಬೇಕು.
- ಸೂಕ್ಷ್ಮ ಡಿಸೈನ್ಸ್ ಹೊಂದಿರುವುದರಿಂದ ರಫ್ ಬಳಕೆ ಮಾಡಬಾರದು.
- ಡೈಲಿ ಬಳಕೆ ಮಾಡುವುದಾದಲ್ಲಿ ಆದಷ್ಟೂ ಹ್ಯಾಂಗಿಂಗ್ಸ್ ಖರೀದಿ ಬೇಡ.
- ಸ್ಟಡ್ಸ್ ಡಿಸೈನ್ಸ್ ರಫ್ ಬಳಕೆ ಮಾಡಬಹುದು.
- ವಜ್ರದಾದ್ದಲ್ಲಿ ಮೊದಲು ಮಾಹಿತಿ ಪಡೆದು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Salwar Suit Fashion: ಈದ್ ಮಿಲಾದ್ ಫೆಸ್ಟಿವ್ ಸಂಭ್ರಮಕ್ಕೆ ಎಂಟ್ರಿ ನೀಡಿದ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ಸ್
ಈ ಫೆಸ್ಟಿವ್ ಸೀಸನ್‌ನಲ್ಲಿ ಆಕರ್ಷಕ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್‌ಗಳು (Salwar Suit Fashion) ಯುವತಿಯರನ್ನು ಬರಸೆಳೆದಿದ್ದು, ಊಹೆಗೂ ಮೀರಿದ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನವು ಹೆಚ್ಚು ಪ್ರಚಲಿತದಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವಿನ್ಯಾಸದ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್‌ಗಳು (Salwar Suit Fashion) ಈ ಬಾರಿಯ ಈದ್ ಮಿಲಾದ್ ಹಬ್ಬದ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಹೌದು. ಈ ಫೆಸ್ಟಿವ್ ಸೀಸನ್‌ಗೆ ಮ್ಯಾಚ್ ಆಗುವಂತಹ ಗ್ರ್ಯಾಂಡ್ ಆ್ಯಂಕೆಲ್ ಲೆಂಥ್‌ನ ಹ್ಯಾಂಡ್ ಹಾಗೂ ಮೆಷಿನ್ ವರ್ಕ್ ಇರುವಂತಹ ಸಲ್ವಾರ್ ಸೂಟ್‌ಗಳು ಯುವತಿಯರನ್ನು ಸೆಳೆದಿದ್ದು, ಊಹೆಗೂ ಮೀರಿದ ಡಿಸೈನ್‌ನಲ್ಲಿ ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ.
ಆ್ಯಂಕೆಲ್ ಲೆಂಥ್ ಸಲ್ವಾರ್ ಡಿಸೈನರ್‌ವೇರ್
ಪಾದದಿಂದ ಮೇಲೆ ನಿಲ್ಲುವ ಪ್ಯಾಂಟ್‌ಗಳೇ ಈ ಸಲ್ವಾರ್‌ನ ವಿಶೇಷತೆ. ಬಹಳಷ್ಟು ಸಲ್ವಾರ್‌ನ ಪ್ಯಾಂಟ್‌ಗಳು ಪಾದಗಳನ್ನು ಮುಚ್ಚುತ್ತವೆ. ಇಲ್ಲವೇ ಮುಳುಗಿಸುತ್ತವೆ. ಆದರೆ, ಈ ಆ್ಯಂಕೆಲ್ ಲೆಂಥ್‌ನ ಸಲ್ವಾರ್ ಸೂಟ್‌ನಲ್ಲಿ ಪಾದದ ಮೇಲೆ ನಿಲ್ಲುತ್ತವೆ. ಇನ್ನು ಇದಕ್ಕೆ ಹೊಂದುವಂತಹ ಕುರ್ತಿ ಶೈಲಿಯ ಅಥವಾ ಅನಾರ್ಕಲಿ, ಫ್ಲೇರ್ ಅಥವಾ ಕಮೀಝ್ ಶೈಲಿಯ ಟಾಪ್‌ಗಳು ಮ್ಯಾಚ್ ಮಾಡಿದ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಒಂದೇ ಬಗೆಯ ವರ್ಕ್ ಕೂಡ ಹೊಂದಿರುತ್ತವೆ.
ಫೆಸ್ಟಿವ್ ಸೀಸನ್‌ಗೆ ಸಲ್ವಾರ್ ಸೂಟ್
ಮುಂಬರುತ್ತಿರುವ ಈದ್ ಮಿಲಾದ್ ವಿಶೇಷವಾಗಿ ನಾನಾ ಬಗೆಯ ಸಲ್ವಾರ್ ಸೂಟ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ ಈ ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್‌ಗಳು ಉದ್ಯೋಗಸ್ಥ ಹಾಗೂ ಕಾಲೇಜು ಹುಡುಗಿಯರನ್ನು ಬರಸೆಳೆದಿವೆ. ಇದಕ್ಕೆ ಪ್ರಮುಖ ಕಾರಣ, ಓಡಾಡುವಾಗ ಕಾಲಿಗೆ ಸಿಕ್ಕಿಹಾಕಿಕೊಳ್ಳದ ಪ್ಯಾಂಟ್ ವಿನ್ಯಾಸ ಹಾಗೂ ಎಲಿಗೆಂಟ್ ಲುಕ್ ನೀಡುತ್ತಿರುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬಗೆಬಗೆಯ ಆ್ಯಂಕೆಲ್ ಲೆಂಥ್ ಸಲ್ವಾರ್
ಧೋತಿ ಆ್ಯಂಕೆಲ್ ಲೆಂಥ್ ವಿನ್ಯಾಸ, ಸ್ಟ್ರೇಟ್ ಕಟ್ ಪ್ಯಾಂಟ್, ಟೈಟ್ ಪುಶ್ ಬ್ಯಾಕ್ ಆ್ಯಂಕೆಲ್ ಲೆಂಥ್ ಪ್ಯಾಂಟ್ ಸೇರಿದಂತೆ ನಾನಾ ಬಗೆಯ ಪಾದದ ಮೇಲೆ ನಿಲ್ಲುವಂತ ಪ್ಯಾಂಟ್ ಹೊಂದಿರುವ ಸಲ್ವಾರ್ ಸೂಟ್‌ಗಳು ಪ್ರಚಲಿತದಲ್ಲಿವೆ. ಕೆಲವು ಸಲ್ವಾರ್‌ಗಳಂತೂ ಆಕರ್ಷಕ ವಿನ್ಯಾಸದಲ್ಲಿ ಇಂದಿನ ಹೆಣ್ಣು ಮಕ್ಕಳಿಗೆ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಆ್ಯಂಕೆಲ್ ಲೆಂಥ್ ಸಲ್ವಾರ್ ಸೂಟ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಧೋತಿಯಾದಲ್ಲಿ ಎಥ್ನಿಕ್ ಫುಟ್‌ವೇರ್ ಧರಿಸಿ.
- ಈ ಶೈಲಿಯ ಸಲ್ವಾರ್‌ಗಳಿಗೆ ಹಾಫ್ ಶೂ ಮ್ಯಾಚ್ ಆಗುತ್ತದೆ.
- ಕಾಲ್ಗೆಜ್ಜೆಯನ್ನು ಈ ಉಡುಪಿನೊಂದಿಗೆ ಧರಿಸಿದಲ್ಲಿ ಚೆನ್ನಾಗಿ ಕಾಣುತ್ತದೆ.
- ಸೆಮಿ ಸ್ಟಿಚ್‌ನವು ದೊರೆಯುತ್ತವೆ.
- ಬಾಡಿ ಮಾಸ್ ಇಂಡೆಕ್ಸ್‌ಗೆ ಸೂಟ್ ಆಗುವಂತವನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: South India Fashion Week News: ಸೌತ್ ಇಂಡಿಯಾ ಫ್ಯಾಷನ್ ವೀಕ್‌ಗೆ ಡಾ. ಸಂಜಯ್ ನೀಲನ್ ಚೇರಿ ಕೊರಿಯಾಗ್ರಫಿ
ಫ್ಯಾಷನ್
South India Fashion Week News: ಸೌತ್ ಇಂಡಿಯಾ ಫ್ಯಾಷನ್ ವೀಕ್‌ಗೆ ಡಾ. ಸಂಜಯ್ ನೀಲನ್ ಚೇರಿ ಕೊರಿಯಾಗ್ರಫಿ
ಉದ್ಯಾನನಗರಿಯಲ್ಲಿ ಈ ಸೀಸನ್‌ನಲ್ಲಿ ನಡೆದ ಸೌತ್ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ (South India Fashion Week News) ಫ್ಯಾಷನ್ ಕ್ಷೇತ್ರದ ಸೆಲೆಬ್ರೆಟಿಗಳು ಕೂಡ ಮಾಡೆಲ್‌ಗಳೊಂದಿಗೆ ರ‍್ಯಾಂಪ್ ವಾಕ್ ಮಾಡಿದರು. ಈ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಡೆಲ್‌ಗಳು ಒಬ್ಬೊಬ್ಬರು ತಮ್ಮದೇ ಆದ ಸ್ಟೈಲ್‌ನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ನೋಡುಗರ ಮನ ಸೆಳೆದರು. ಹೌದು. ಉದ್ಯಾನನಗರಿಯಲ್ಲಿ ಈ ಸೀಸನ್‌ನಲ್ಲಿ ನಡೆದ ಸೌತ್ ಇಂಡಿಯಾ ಫ್ಯಾಷನ್ ವೀಕ್ (South India Fashion Week News) ಫ್ಯಾಷನ್ ಕ್ಷೇತ್ರದ ಸೆಲೆಬ್ರೆಟಿಗಳು ಹಾಗೂ ಮಾಡೆಲ್‌ಗಳ ಸಮಾಗಮಕ್ಕೆ ಸಾಕ್ಷಿಯಾಗಿತ್ತು.
ಫ್ಯಾಷನ್ ಟೆರೆಕ್ಸ್ ವೆಂಚರ್, ಇಂಡಿಯನ್ ಫ್ಯೂಚರ್ ಫ್ಯಾಷನ್ ಐಕಾನ್ ಹಾಗೂ ಜಿಎಮ್‌ಎಸ್ ಎವಿಯೇಷನ್ ಇನ್ಸ್‌ಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ನಡೆದ ಸೌತ್ ಇಂಡಿಯಾ ಫ್ಯಾಷನ್ ವೀಕ್, ನಿರ್ದೇಶಕರಾದ ಅಮೋಘ್ ಹರೀಶ್ ಹಾಗೂ ಅಶ್ವಿನಿ ನಾಯಕ್ ಹಾಗೂ ಶೋ ಡೈರೆಕ್ಟರ್ ಆದರ್ಶ್ ಜೈನ್ ಅವರ ನೇತೃತ್ವದಲ್ಲಿ ನಡೆಯಿತು.
ಡಾ. ಸಂಜಯ್ ನೀಲನ್ ಚೇರಿ ಕೊರಿಯಾಗ್ರಫಿ
ಖುದ್ದು ಮಾಡೆಲ್ ಆಗಿರುವ ಡಾ. ಸಂಜಯ್ ನೀಲನ್ ಚೇರಿಯವರ ಕೊರಿಯಾಗ್ರಾಫಿಯಲ್ಲಿ ನಡೆದ ಈ ಫ್ಯಾಷನ್ ವೀಕ್‌ನಲ್ಲಿ ಮಾಡೆಲ್‌ಗಳ ಸ್ಟೈಲಿಂಗ್ ಅತ್ಯಾಕರ್ಷಕವಾಗಿತ್ತು. ಫ್ಯಾಷನ್ ಶೋನಲ್ಲಿ ಕೊರಿಯಾಗ್ರಫಿ ಮಾಡುವುದು ಉತ್ಸಾಹದ ಕೆಲಸ. ಇನ್ನು ಸ್ಟೈಲಿಂಗ್ ಮಾಡುವುದೆಂದರೇ ಖುಷಿಯಾಗುತ್ತದೆ ಎಂದು ಡಾ. ಸಂಜಯ್ ನೀಲನ್‌ಚೇರಿ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡರು.
ಪ್ರಿಯಾ ಪ್ರಶಾಂತ್ ಶೋ ಸ್ಟಾಪರ್ ವಾಕ್
ಈ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ಹಾಗೂ ಮಾಡೆಲ್ ಪ್ರಿಯಾ ಪ್ರಶಾಂತ್ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಅವರ ಡಿಸೈನರ್‌ವೇರ್ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಮಾತು
“ಫ್ಯಾಷನ್ ಎಂಬುದು ಎಂದಿಗೂ ಮರೆಯಾಗದ ಕ್ಷೇತ್ರ. ಆಯಾ ಪ್ರಸ್ತುತ ಪರಿಸ್ಥಿತಿಯೊಂದಿಗೆ ತನ್ನದೇ ಆದ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ” ಎಂದು ಸೂಪರ್ ಮಾಡೆಲ ಸಂತೋಷ್ ರೆಡ್ಡಿ ತಮ್ಮ ಮಾತುಗಳನ್ನು ಹಂಚಿಕೊಂಡರು.
ಇದನ್ನೂ ಓದಿ: Party Fashion: ಬಿಹೈವ್ ಹೈ ಪಾರ್ಟಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ನೇಹಾ ದುಪಿಯಾ
ಫ್ಯಾಷನ್
Co Ord Set Lehenga Fashion: ಕೋ ಆರ್ಡ್ ಸೆಟ್ ಲುಕ್‌ನಲ್ಲಿ ಬಂತು ಆಕರ್ಷಕ ಇಂಡೋ-ವೆಸ್ಟರ್ನ್ ಶೈಲಿಯ ಲೆಹೆಂಗಾ
ಇದೀಗ ಲೆಹೆಂಗಾಗಳಿಗೂ ಕೋ ಆರ್ಡ್ ಸೆಟ್ (Co Ord Set Lehenga Fashion) ಲುಕ್ ಸಿಕ್ಕಿದೆ. ಒಂದೇ ವರ್ಣದ ಬ್ಲೌಸ್ ಹಾಗೂ ಸ್ಕರ್ಟ್ ಶೇಡ್ ಮಾನೋಕ್ರೋಮ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿದೆ. ಯಾವ್ಯಾವ ಲೆಹೆಂಗಾಗಳು ಈ ಶೈಲಿಯಲ್ಲಿ ಬಿಡುಗಡೆಗೊಂಡಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೋ ಆರ್ಡ್ ಸೆಟ್ ಲೆಹೆಂಗಾಗಳು (Co Ord Set Lehenga Fashion) ಇದೀಗ ಟ್ರೆಂಡಿಯಾಗಿವೆ. ಹೌದು. ಇದೀಗ ಲೆಹೆಂಗಾಗಳಿಗೂ ಕೋ ಆರ್ಡ್ ಸೆಟ್ ಲುಕ್ ಸಿಕ್ಕಿದ್ದು, ಒಂದೇ ವರ್ಣದ ಲೆಹೆಂಗಾ ಬ್ಲೌಸ್ ಹಾಗೂ ಸ್ಕರ್ಟ್ ಶೇಡ್, ಮಾನೋಕ್ರೋಮ್ ಸ್ಟೈಲಿಂಗ್‌ಗೆ ಸಾಥ್ ನೀಡಿದೆ. ವೈವಿಧ್ಯಮಯ ಡಿಸೈನ್‌ನ ಲೆಹೆಂಗಾಗಳು ಈ ಲುಕ್‌ನಲ್ಲಿ ಬಿಡುಗಡೆಗೊಂಡಿವೆ.
ಸೈಡಿಗೆ ಸರಿದ ಕಾಂಟ್ರಾಸ್ಟ್ ಲೆಹೆಂಗಾ ಸೆಟ್
ಬ್ಲೌಸ್ ಒಂದು ಬಣ್ಣ, ಸ್ಕರ್ಟ್ ಇನ್ನೊಂದು ಬಣ್ಣ, ಅದರೊಂದಿಗೆ ಹೊದಿಯುವ ದುಪಟ್ಟಾ ಮತ್ತೊಂದು ಬಣ್ಣ, ಈ ರೀತಿಯ ನಾರ್ತ್ ಇಂಡಿಯನ್ ಶೈಲಿಯ ಲೆಹೆಂಗಾಗಳು ಕಳೆದ ವೆಡ್ಡಿಂಗ್ ಸೀಸನ್‌ನಲ್ಲಿ ಹಾಗೂ ಫೆಸ್ಟಿವ್ ಸೀಸನ್‌ನಲ್ಲಿ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ಬಾಲಿವುಡ್ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಮಾನೋಕ್ರೋಮ್ ಶೇಡ್‌ನ ಕೋ ಆರ್ಡ್ ಸೆಟ್ ಲುಕ್ ನೀಡುವ ಲೆಹೆಂಗಾ ಸೆಟ್‌ಗಳು ಸೇರಿವೆ. ಪರಿಣಾಮ, ಬಾಲಿವುಡ್ ಪಾರ್ಟಿಯಿಂದಿಡಿದು, ಫೆಸ್ಟಿವ್ ಪಾರ್ಟಿಯಲ್ಲೂ ಈ ರೀತಿಯ ನಾನಾ ಬಗೆಯ ಕೋ ಆರ್ಡ್ ಸೆಟ್ ಲೆಹೆಂಗಾಗಳು ಕಾಣಿಸಿಕೊಳ್ಳತೊಡಗಿವೆ. ಅಷ್ಟೇಕೆ! ಎಥ್ನಿಕ್ ಲೆಹೆಂಗಾಗಳು ಇಂಡೋ-ವೆಸ್ಟರ್ನ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವು ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಟ್ರೆಂಡ್ ಲಿಸ್ಟ್‌ಗೆ ಸೇರಿವೆ.
ದುಪಟ್ಟಾ ಇಲ್ಲದ ಕೋ ಆರ್ಡ್ ಸೆಟ್ ಲೆಹೆಂಗಾ
ಈ ಕೋ ಆರ್ಡ್ ಸೆಟ್ ಲೆಹೆಂಗಾಗಳು ಸದ್ಯಕ್ಕೆ ದುಪಟ್ಟಾ ಇಲ್ಲದೇ ಬರುತ್ತಿವೆ. ಹಾಗಾಗಿ ಇವು ಇಂಡೋ-ವೆಸ್ಟರ್ನ್ ಲುಕ್ ಪಡೆದಿವೆ. ಬೇಕಾದಾಗ ದುಪಟ್ಟಾ ಮ್ಯಾಚ್ ಮಾಡಿ ಎಥ್ನಿಕ್ ಲುಕ್ ಪಡೆಯಬಹುದು, ಇಲ್ಲವಾದಲ್ಲಿ ವೆಸ್ಟರ್ನ್ ಲುಕ್‌ನಂತೆ ಬಿಂಬಿಸುತ್ತವೆ. ಅವುಗಳ ಡಿಸೈನ್‌ನ ಆಧಾರದ ಮೇಲೆ ಇವಕ್ಕೆ ಸ್ಟೈಲಿಂಗ್ ಮಾಡಬಹುದು ಎನ್ನುತ್ತಾರೆ ಸ್ಟೈಲಿಂಗ್ ಎಕ್ಸ್‌ಪರ್ಟ್ ರೀಟಾ. ಅವರ ಪ್ರಕಾರ, ಕೋ ಆರ್ಡ್ ಸೆಟ್ ಲೆಹೆಂಗಾಗಳು ಆದಷ್ಟೂ ಗ್ರ್ಯಾಂಡ್ ಆಗಿರಕೂಡದು. ಆಗಷ್ಟೇ ಅವಕ್ಕೆ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು ಎನ್ನುತ್ತಾರೆ.
ಕೋ ಆರ್ಡ್ ಸೆಟ್ ಲೆಹೆಂಗಾ ಸ್ಟೈಲಿಂಗ್‌ಗೆ 7 ಟಿಪ್ಸ್
- ಕೋ ಆರ್ಡ್ ಸೆಟ್ ಲೆಹೆಂಗಾಗಳ ಪ್ರಿಯರು ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು.
- ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡುವ ವಿನ್ಯಾಸದ ಲೆಹೆಂಗಾ ಆಯ್ಕೆ ಮಾಡಿ.
- ಎಥ್ನಿಕ್ ಲುಕ್ ನೀಡುವುದಾದಲ್ಲಿ ಪ್ರತ್ಯೇಕವಾಗಿ ಮ್ಯಾಚ್ ಆಗುವ ದುಪಟ್ಟಾ ಖರೀದಿಸಿ, ಧರಿಸಿ.
- ವೆರೈಟಿ ಬ್ಲೌಸ್ ಸ್ಲೀವ್ ಡಿಸೈನ್‌ನ ಲೆಹೆಂಗಾಗಳು ಇಂದು ಬೇಡಿಕೆ ಪಡೆದುಕೊಂಡಿವೆ.
- ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಕೋ ಆರ್ಡ್ ಸೆಟ್ ಆಯ್ಕೆ ಮಾಡಿ.
- ಪಿಂಕ್, ಆರೆಂಜ್, ಪಿಸ್ತಾ ಸೇರಿದಂತೆ ಪಾಸ್ಟೆಲ್ ಶೇಡ್‌ನವು ಹೆಚ್ಚು ಚಾಲ್ತಿಯಲ್ಲಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Tote Bags Fashion: ರೂಪಾಂತರಗೊಂಡ ಟೊಟ್ ಬ್ಯಾಗ್ ಫ್ಯಾಷನ್!
ಫ್ಯಾಷನ್
Tote Bags Fashion: ರೂಪಾಂತರಗೊಂಡ ಟೊಟ್ ಬ್ಯಾಗ್ ಫ್ಯಾಷನ್!
ಇದೀಗ ರೂಪಾಂತರಗೊಂಡಿರುವ ಟೊಟ್ ಬ್ಯಾಗ್‌ಗಳು (Tote Bags Fashion) ಟ್ರೆಂಡಿಯಾಗಿವೆ. ಮಹಿಳೆಯರು ಮಾತ್ರವಲ್ಲ, ಹುಡುಗ-ಹುಡುಗಿಯರು ಬಳಸಲಾರಂಭಿಸಿದ್ದಾರೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಬ್ಯಾಗ್ ಸ್ಪೆಷಲಿಸ್ಟ್ಸ್ ಹಾಗೂ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೂಪಾಂತರಗೊಂಡಿರುವ ಫ್ಯಾಷೆನಬಲ್ ಟೊಟ್ ಬ್ಯಾಗ್‌ಗಳು (Tote Bags Fashion) ಇಂದು ಟ್ರೆಂಡಿಯಾಗಿವೆ. ಹೌದು. ಇದೀಗ ಈ ಬ್ಯಾಗ್‌ಗಳು ನಾನಾ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದ್ದು, ಮಹಿಳೆಯರು ಮಾತ್ರವಲ್ಲ, ಹುಡುಗ- ಹುಡುಗಿಯರೂ ಕೂಡ ಬಳಸಲಾರಂಭಿಸಿದ್ದಾರೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ಯೂನಿಸೆಕ್ಸ್ ಡಿಸೈನ್‌ನ ಟೊಟ್ ಡಿಸೈನರ್ ಬ್ಯಾಗ್‌ಗಳು ಬಿಡುಗಡೆಗೊಂಡಿವೆ.
ಫ್ಯಾಷೆನಬಲ್ ಆಯ್ತು ಟೊಟ್ ಬ್ಯಾಗ್
ಅಂದಹಾಗೆ, ಟೊಟ್ ಬ್ಯಾಗ್ ಹೊಸ ಕಾನ್ಸೆಪ್ಟ್ ಏನಲ್ಲ! ಹಳೆಯ ಬ್ಯಾಗ್ ಶೈಲಿಯಿದು. ಆದರೆ, ಮೊದಲೆಲ್ಲ ಇದನ್ನು ಶಾಪಿಂಗ್ ಬ್ಯಾಗ್ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಮಾರುಕಟ್ಟೆಯಿಂದ ಹೆಚ್ಚಿನ ಸಾಮಗ್ರಿಗಳನ್ನು ತರಲು ಬಳಸಲಾಗುತ್ತಿತ್ತು. ಅದರಲ್ಲೂ ಮಹಿಳೆಯರು ಹಾಗೂ ವಯಸ್ಸಾದವರು ಅತಿ ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಈ ಕಾನ್ಸೆಪ್ಟ್ ಕಂಪ್ಲೀಟ್ ಬದಲಾಗಿದೆ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಹೊರಗೆ ಹೋಗುವ ಬಹುತೇಕರು ತಮ್ಮ ಜೊತೆಗೆ ನೀರಿನ ಬಾಟಲ್, ಮಾಸ್ಕ್ ಹಾಗೂ ಇನ್ನಿತರೇ ಸಾಮಗ್ರಿಗಳನ್ನು ಬ್ಯಾಗ್‌ಗನಲ್ಲಿ ಕೊಂಡೊಯ್ಯುವುದು ಚಾಲ್ತಿಗೆ ಬಂದ ಮೇಲೆ ಈ ಶೈಲಿಯ ಬ್ಯಾಗ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಯಿತು. ಪರಿಣಾಮ, ಬಿಗ್ ಬ್ಯಾಗ್‌ಗಳು ಅದರಲ್ಲೂ ಟೊಟ್ ಶೈಲಿಯ ಬ್ಯಾಗ್‌ಗಳು ಅತಿ ಹೆಚ್ಚು ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿದವು ಎನ್ನುತ್ತಾರೆ ಬ್ಯಾಗ್ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಇಂದು ಫ್ಯಾಷೆನಬಲ್ ಬ್ಯಾಗ್‌ಗಳ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ.
ವೈವಿಧ್ಯಮಯ ಟೊಟ್ ಬ್ಯಾಗ್ಸ್
ಪರಿಸರ ಸ್ನೇಹಿ ಗೋಣಿಚೀಲದಂತೆ ಕಾಣುವ ಜ್ಯೂಟ್, ಕಾಟನ್, ಲೆನಿನ್ ಟೊಟ್ ಬ್ಯಾಗ್‌ಗಳು ಸಖತ್ ಟ್ರೆಂಡ್‌ನಲ್ಲಿವೆ. ಇವು ಪರಿಸರ ಸ್ನೇಹಿ ಫ್ಯಾಷನ್ ಪ್ರಿಯರ ಹೆಗಲೇರಿವೆ. ಇನ್ನು ಲೆದರ್ ಹಾಗೂ ಸಿಲಿಕಾನ್ ಸೇರಿದಂತೆ ನಾನಾ ಮೆಟಿರಿಯಲ್‌ನಲ್ಲೂ ದೊರೆಯುತ್ತಿವೆ. ಅದರಲ್ಲೂ ಓವರ್‌ಸೈಝ್ ಟೊಟ್ ಬ್ಯಾಗ್, ಕ್ಯಾನ್ವಾಸ್ ಟೊಟ್ ಬ್ಯಾಗ್ ಯುವತಿಯರನ್ನು ಆಕರ್ಷಿಸಿವೆ. ಔಟಿಂಗ್ ಹಾಗೂ ಟ್ರಾವೆಲಿಂಗ್‌ಗೆ ಇವು ಹೇಳಿಮಾಡಿಸಿದಂತಿರುತ್ತವೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
ಟೊಟ್ ಬ್ಯಾಗ್ ಪ್ರಿಯರ ಆಯ್ಕೆ ಹೀಗಿರಲಿ
- ಇದೀಗ ಟೊಟ್ ಬ್ಯಾಗ್‌ಗಳು ನಾನಾ ಆಕಾರದಲ್ಲಿ ದೊರೆಯುತ್ತವೆ.
- ಕೆಲವು ಬ್ರಾಂಡ್‌ಗಳಲ್ಲಿ ಲೈಟ್‌ವೈಟ್ ಟೊಟ್ ಬ್ಯಾಗ್‌ಗಳು ಲಭ್ಯ.
- ಲ್ಯಾಪ್‌ಟಾಪ್ ಇರಿಸಬಹುದಾದ ಟೊಟ್‌ಬ್ಯಾಗ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
- ಮಿನಿ ಟೊಟ್ ಬ್ಯಾಗ್‌ಗಳು ಲಭ್ಯ.
- ಯೂನಿಸೆಕ್ಸ್ ಟೊಟ್ ಬ್ಯಾಗ್‌ಗಳನ್ನು ಹುಡುಗ-ಹುಡುಗಿಯರು ಇಬ್ಬರು ಕ್ಯಾರಿ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kids Sling Bag Fashion: ಮಕ್ಕಳ ಹೆಗಲೇರಿದೆ ಆಕರ್ಷಕ ಕ್ಯೂಟ್ ಸ್ಲಿಂಗ್ ಬ್ಯಾಗ್ಸ್!
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ20 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema23 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ13 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ24 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು