-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್‌ವೇರ್ ಸೇರಿದಂತೆ ಕಂಟೆಂಪರರಿ ವಿನ್ಯಾಸದಲ್ಲಿ ಮೂಡಿದ ಫ್ಯಾಷನ್ ವೇರ್‌ಗಳನ್ನು (Fashion News) ಧರಿಸಿದ ಮಾಡೆಲ್‌ಗಳು ರನ್ ವೇ ಫ್ಯಾಷನ್ ಶೋನಲ್ಲಿ ವಾಕ್ ಮಾಡುವಂತೆ ರ‍್ಯಾಂಪ್ ವಾಕ್ ಮಾಡಿದರು. ಭಿನ್ನ-ವಿಭಿನ್ನವಾಗಿರುವ ನೂರಾರು ಡಿಸೈನರ್‌ವೇರ್‌ಗಳು ನೋಡುಗರ ಮನಸೆಳೆದವು. ಉದ್ಯಾನನಗರಿಯಲ್ಲಿ ನಡೆದ 2024 ಗ್ಲಾಮರ್ ಸ್ಟ್ರೀಟ್ ಫ್ಯಾಷನ್ ಶೋನಲ್ಲಿ ಗ್ಲಾಮರಸ್ ಮಾಡೆಲ್‌ಗಳು, ಫ್ಯಾಷನ್ ಪ್ರಿಯರು ಮಾತ್ರವಲ್ಲ, ಪೇಜ್ 3 ಸೆಲೆಬ್ರೆಟಿಗಳು, ಸಿನಿಮಾ ಮಂದಿಯು ಪಾಲ್ಗೊಂಡಿದ್ದರು. ಅತ್ಯಾಕರ್ಷಕವಾಗಿ ಈ ನಡೆದ ಫ್ಯಾಷನ್ ಶೋ ಕುರಿತ ಸಂಕ್ಷೀಪ್ತ ವರದಿ ಇಲ್ಲಿದೆ.
11 ಡಿಸೈನರ್‌ಗಳ ಕ್ರಿಯೆಟಿವಿಟಿಗೆ ಸಾಕ್ಷಿಯಾದ ರ‍್ಯಾಂಪ್ ಶೋ
ಮಿಕು ಕ್ರಿಯೇಷನ್ಸ್, ಅಸ್ವಾಸ್, ಅಂಕಿತಾ, ಗೀತುಸ್, ಗ್ರಾವಿಟಿ, ಡಿಚೀಸ್, ಇನ್ಫಿನಿಟಿ ಫ್ಯಾಷನ್ ಸೇರಿದಂತೆ ಸುಮಾರು 11 ಕ್ಕೂ ಹೆಚ್ಚು ಡಿಸೈನರ್ ಬ್ರಾಂಡ್‌ಗಳ ಡಿಸೈನರ್‌ಗಳು ಸಿದ್ಧಪಡಿಸಿದ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್ ಶೋನಲ್ಲಿ ಪ್ರದರ್ಶಿಸಿದರು. ಒಬ್ಬರಿಗಿಂತ ಒಬ್ಬರು ಡಿಫರೆಂಟಾಗಿ ಕಾಣಿಸುತ್ತಿದ್ದರು.
50ಕ್ಕೂ ಹೆಚ್ಚು ರೂಪದರ್ಶಿಗಳ ವಾಕ್
ಈ ಫ್ಯಾಷನ್ ಶೋನಲ್ಲಿ ಸರಿ ಸುಮಾರು 50ಕ್ಕೂ ಹೆಚ್ಚು ಮಾಡೆಲ್‌ಗಳು ಡಿಸೈನರ್‌ಗಳ ಎಕ್ಸ್ಕ್ಲೂಸಿವ್ ಡಿಸೈನರ್‌ಗಳನ್ನು ಧರಿಸಿ ಅತ್ಯಾಕರ್ಷಕವಾಗಿ ಪೋಸ್ ನೀಡಿದರು. ಕಂಟೆಂಪರರಿ ಸ್ಟೈಲಿಂಗ್‌ನಲ್ಲಿ ಟ್ರೆಡಿಷನಲ್ ಹಾಗೂ ಎಥ್ನಿಕ್‌ವೇರ್‌ಗಳನ್ನು ಧರಿಸಿ ವಾಕ್ ಮಾಡಿದರು.
ಸ್ಯಾಂಡಲ್ವುಡ್ ಸೆಲೆಬ್ರೆಟಿಗಳ ಝಲಕ್
ಡಿಸೈನರ್‌ಗಳ ಡಿಸೈನರ್ ಧರಿಸಿದ್ದ ನಟಿ ಹಾಗೂ ಮಾಡೆಲ್ ಶುಭಾ ರಕ್ಷಾ, ದಾಮಿನಿ ನಂದಾ ಮತ್ತುಸ್ವರೂಪಿಣಿ (ಅರೋಹಿ) ಸೆಲೆಬ್ರೆಟಿ ಶೋ ಸ್ಟಾಪರ್‌ಗಳಾಗಿ ಡಿಸೈನರ್‌ವೇರ್‌ಗಳನ್ನು ಧರಿಸಿ ವಾಕ್ ಮಾಡಿದರು.
Fashion Show news: ವೈವಿಧ್ಯಮಯ ವಜ್ರಾಭರಣ ಧರಿಸಿ ಫ್ಯಾಷನ್ ಶೋನಲ್ಲಿ ಮಿಂಚಿದ ರೂಪದರ್ಶಿಯರುಇದನ್ನೂ ಓದಿ:
ಸ್ಟೈಲಿಶ್ ನಿರಂಜನ್ ದೇಶಪಾಂಡೆ ಫ್ಯಾಷನ್ ಲುಕ್
ಸ್ಟೈಲಿಶ್ ಲುಕ್‌ನಿಂದಲೇ ಸೆಳೆಯುವ ನಿರೂಪಕ ಹಾಗೂ ನಟ ನಿರಂಜನ್ ದೇಶಪಾಂಡೆ ಅವರು ಫ್ಯಾಷನ್ ಶೋನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಫ್ಯಾಷನ್ ಶೋಗಳು ಹೊಸ ಡಿಸೈನ್‌ನ ಆವಿಷ್ಕಾರಕ್ಕೆ ನಾಂದಿ ಹಾಡುತ್ತವೆ. ಅಲ್ಲದೇ, ಹೊಸ ಡಿಸೈನರ್ಗಳಿಗೆ ಫ್ಯಾಷನ್ ಲೋಕದಲ್ಲಿ ಭವಿಷ್ಯ ಕಂಡುಕೊಳ್ಳಲು ಸಹಾಯ ಮಾಡುತ್ತವೆ ಎಂದು ವೇದಿಕೆ ಮೇಲೆ ಹೇಳಿದರು.
( ಲೇಖಕಿ ಫ್ಯಾಷನ್ ಪತ್ರಕರ್ತೆ )