ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫ್ಯಾಷನ್ ಶೋ ವರ್ಣ ರಂಜಿತವಾಗಿತ್ತು. ಇಡೀ ವೇದಿಕೆ ಅಂತರಾಷ್ಟ್ರೀಯ ಮಟ್ಟದ ಪೇಜೆಂಟ್‌ನಂತೆ ಭಾಸವಾಗುತ್ತಿತ್ತು. ಪೇಜೆಂಟ್‌ನಲ್ಲಿ (Fashion Pageant News) ಸ್ಪರ್ಧಿಸಿದವರೆಲ್ಲರೂ ಆಕರ್ಷಕವಾದ ಡಿಸೈನರ್‌ವೇರ್ ಗೌನ್ ಹಾಗೂ ಸೂಟ್‌ಗಳಲ್ಲಿ ಮಿಂಚುತ್ತಿದ್ದರು. ಒಬ್ಬೊಬ್ಬರು ಒಂದೊಂದು ಬಗೆಯ ಥೀಮ್ ಹಾಗೂ ಕಾನ್ಸೆಪ್ಟ್‌ಗೆ ತಕ್ಕಂತೆ ಹೆಜ್ಜೆ ಹಾಕಿದರು. ಬೆಂಗಳೂರಿನ ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್, ಚೈನ್ನೈನಲ್ಲಿ ಆಯೋಜಿಸಿದ್ದ, ಅಂತರ ರಾಜ್ಯ ಪೇಜೆಂಟ್ ಫ್ಯಾಷನ್ ಶೋನಲ್ಲಿ ರಾಜ್ಯ ಹಾಗೂ ಇತರೇ ಕಡೆಗಳಿಂದಲೂ ಮಾಡೆಲ್‌ಗಳು ಪಾಲ್ಗೊಂಡು ಸ್ಪರ್ಧಿಸಿದರು.
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಮಾತು
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಈ ಪೇಜೆಂಟ್‌ನಲ್ಲಿ ಜ್ಯೂರಿ ಟೀಮ್ ಸದಸ್ಯರು ಹಾಗೂ ಅತಿಥಿಯಾಗಿ ಭಾಗವಹಿಸುವುದರೊಂದಿಗೆ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿಯೂ ವಾಕ್ ಮಾಡಿದರು. “ ಮಾಡೆಲ್‌ಗಳು ಮಾಡೆಲಿಂಗ್‌ನಲ್ಲಿ ತಮ್ಮ ಕೆರಿಯರ್ ಆರಂಭಿಸಲು ಇಂತಹ ಪೇಜೆಂಟ್‌ಗಳು ಸಾಥ್ ನೀಡುತ್ತವೆ. ಜೊತೆಗೆ ಆತ್ಮವಿಶ್ವಾಸ ಮೂಡಿಸುತ್ತವೆ. ಪ್ರತಿಯೊಂದು ಪೇಜೆಂಟ್‌ಗಳು ತಮ್ಮದೇ ಆದ ಹೊಸತನವನ್ನು ಹೊಂದಿವೆ. ಅವುಗಳಲ್ಲಿ ಯರ್ಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್ ಕೂಡ ಒಂದು“ ಎಂದು ಹೇಳಿದರು.
ಸೀಮಾ ನಾಯ್ಡು ವಾಕ್
ಮಾಡೆಲ್ ಹಾಗೂ ಫಿಟ್ನೆಸ್ ದಿವಾ ಸೀಮಾ ನಾಯ್ಡು ಕೂಡ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಫಿಟ್ನೆಸ್ ಕೂಡ ಒಂದು ಭಾಗ. ಹಾಗಾಗಿ ಮಾಡೆಲ್‌ಗಳು ಫಿಟ್ನೆಸ್‌ಗೂ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು. ಇನ್ನು ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್ ಸಂಸ್ಥಾಪಕ ಯಶ್, ಪೇಜೆಂಟ್ ಸ್ಪರ್ಧಿಗಳೊಂದಿಗೆ ರ್ಯಾಂಪ್ ವಾಕ್ ಮಾಡಿ, ಸ್ಪರ್ಧಿಗಳನ್ನು ಉತ್ತೇಜಿಸಿದರು.
ಪೇಜೆಂಟ್ ವೀಜೇತರ ಪಟ್ಟಿ
ಲಿಟಲ್ ಪ್ರಿನ್ಸ್ ಇಂಟರ್‌ನ್ಯಾಷನಲ್ ಇಂಡಿಯಾ 2023 ಟೈಟಲನ್ನು ಕೇರಳದ ಇಶಾನ್, ಲಿಟಲ್ ಪ್ರಿನ್ಸೆಸ್ ಟೈಟಲ್ ಸಾಯಿ ಚೆಡಸ್ವಿ ಪಡೆದರು. ಮಿಸ್ ಟೀನ್ ಇಂಟರ್‌ನ್ಯಾಷನಲ್ ಟೈಟಲ್ ಅಲ್ಕಾ ಫಾತೀಮಾ ತಮ್ಮದಾಗಿಸಿಕೊಂಡರೇ ಮಿಸ್ಟರ್ ಟೀನ್ ಇಂಟರ್‌ನ್ಯಾಷನಲ್ ಇಂಡಿಯಾ ಟೈಟಲ್ ಶೈನಿ ಪಡೆದರು. ಇನ್ನು, ನಿತೀನ್ ಮಿಸ್ಟರ್‌ಇಂಟರ್‌ನ್ಯಾಷನಲ್ ಇಂಡಿಯಾ ಟೈಟಲ್ ವಿಜೇತರಾದರು. ಮೈಸೂರಿನ ಪುಣ್ಯಾಮೃತಾ ಮಿಸ್ ಇಂಟರ್‌ನ್ಯಾಷನಲ್ ಇಂಡಿಯಾ ವಿಜೇತೆಯಾದರು. ಹೈದರಾಬಾದ್‌ನ ನಂದಿನಿ ಮಿಸ್ ಇಂಟರ್‌ನ್ಯಾಷನಲ್ ಫ್ಯಾಷನ್ ಐಕಾನ್, ಶಿಲ್ಪಾ ಮಿಸೆಸ್ ಇಂಟರ್‌ನ್ಯಾನಲ್ ಇಂಡಿಯಾ ಟೈಟಲ್ ಪಡೆದು ವಿಜೇತರಾದರು. ಜ್ಯೂರಿ ಟೀಮ್‌ನಲ್ಲಿ ಮಾಡೆಲ್ ಸಂತೋಷ್ ರೆಡ್ಡಿ ಹಾಗೂ ಸೀಮಾ ನಾಯ್ಡು ಜೊತೆಗೆ ರಶ್ಮಿ ಹೆಗ್ಡೆ, ಶ್ರವ್ಯಾ ರಿಶೀಕಾ ಪಾಲ್ಗೊಂಡಿದ್ದರು. ಫ್ಯಾಷನ್ ಹೆಡ್ ಹೇಮಾಲತಾ, ಸಂಜಯ್ ಕುಮಾರ್, ಶೋ ಡೈರೆಕ್ಟರ್ ಜೀಶಾನ್ ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಡಿಸೈನರ್‌ಗಳಿಗೆ ವೇದಿಕೆ ಕಲ್ಪಿಸುತ್ತಿರುವ ಬೆಂಗಳೂರು ಫ್ಯಾಷನ್ ಸಾಗಾ