ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ್ಯಾಂಪ್ ಮೇಲೆ ಮಾಡೆಲ್ಗಳು ನಾನಾ ಔಟ್ಫಿಟ್ಗಳಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುವುದರೊಂದಿಗೆ ಮಿಸ್ ಕ್ವೀನ್ ಆಫ್ ಕರ್ನಾಟಕ ಪೇಜೆಂಟ್ನಲ್ಲಿ ಭಾಗವಹಿಸಿದರು. ಒಬ್ಬೊಬ್ಬರು ಒಂದೊಂದು ಸ್ಟೈಲ್ನಲ್ಲಿ ಕಾಣಿಸಿಕೊಂಡರು. ನಾನಾ ರೌಂಡ್ಗಳಲ್ಲಿ ನೆರೆದಿದ್ದವರ ಮನ ಸೂರೆಗೊಂಡರಲ್ಲದೇ ಆಕರ್ಷಕವಾಗಿ ಕಾಣಿಸಿಕೊಂಡರು. ಉದ್ಯಾನನಗರಿಯ ಕಲಾ ಸಂಗಮ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಿಸ್ ಕ್ವೀನ್ ಆಫ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ (Fashion Pageant News) ಸುಮಾರು 20ಕ್ಕೂ ಹೆಚ್ಚು ಯುವತಿಯರು ಪಾಲ್ಗೊಂಡಿದ್ದರು.
ಆದರ್ಶ್ ಜೈನ್ ಗ್ರೂಮಿಂಗ್ ಹಾಗೂ ಕೊರಿಯಾಗ್ರಾಫಿ
ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ಈ ಸೌಂದರ್ಯ ಸ್ಪರ್ಧೆಗೆ ಕೊರಿಯಾಗ್ರಾಫಿ ಮಾಡಿದ್ದರು. ಪಾಲ್ಗೊಂಡಿದ್ದ ಭಾವಿ ಮಾಡೆಲ್ಗಳಿಗೆ ಕ್ಯಾಟ್ ವಾಕ್ ಜೊತೆಗೆ ಗ್ರೂಮಿಂಗ್ ಕೂಡ ಮಾಡಿದ್ದರು. “ಮಾಡೆಲಿಂಗ್ ಜಗತ್ತಿಗೆ ಕಾಲಿಡುವ ಯುವತಿಯರಿಗೆ ಗ್ರೂಮಿಂಗ್ ಹಾಗೂ ಕೊರಿಯಾಗ್ರಾಫಿ ಮಾಡುವುದು ನನಗೆ ಸದಾ ಖುಷಿ ನೀಡುವ ವಿಷಯ. ಮಾಡೆಲಿಂಗನ್ನು ಪ್ರೊಫೆಷನ್ ಆಗಿ ತೆಗೆದುಕೊಳ್ಳುವವರಿಗೆ ಇಂತಹ ಪೇಜೆಂಟ್ಗಳು ಸದಾವಕಾಶ ಕಲ್ಪಿಸುತ್ತವೆ” ಎಂದು ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ತಿಳಿಸಿದರು.
ಮಿಸ್ ಕ್ವೀನ್ ಆಫ್ ಕರ್ನಾಟಕ ಟೈಟಲ್ ವಿಜೇತರು
ರಾಜ್ಯದ ಎಲ್ಲೆಡೆಯಿಂದ ಈ ಸೌಂದರ್ಯ ಸ್ಪರ್ಧೆಗೆ ಆಗಮಿಸಿದ್ದ ಮಾಡೆಲ್ಗಳು ನಾನಾ ರೌಂಡ್ಗಳಲ್ಲಿ ಭಾಗವಹಿಸಿ, ಜ್ಯೂರಿ ಟೀಮ್ನ ಪ್ರಶ್ನೆಗಳಿಗೆ ಉತ್ತರಿಸಿದರು. ತಂತಮ್ಮ ಕ್ಯಾಟ್ ವಾಕ್ನಿಂದ ನೋಡುಗರ ಮನ ಸೆಳೆದರು.
ಕೊನೆಯಲ್ಲಿ, ಮಿಸ್ ಕ್ವೀನ್ ಆಫ್ ಕರ್ನಾಟಕ ಕಿರೀಟವನ್ನು ಕಾವ್ಯ ಮುಡಿಗೇರಿಸಿಕೊಂಡರು. ಟೈಟಲ್ ಪಡೆದರು. ಗ್ರೀಷ್ಮಾ ಮೊದಲ ರನ್ನರ್ ಅಪ್ ಆದರೇ, ಸೋನಿ ಎರಡನೇ ರನ್ನರ್ ಅಪ್ ಮತ್ತು ಬಿಪಾಶಾ ಮೂರನೇ ರನ್ನರ್ ಆಗಿ ಆಯ್ಕೆಯಾಗಿ ಟೈಟಲ್ ಪಡೆದುಕೊಂಡರು.
ಪೇಜೆಂಟ್ನಲ್ಲಿ ಭಾಗವಹಿಸಿದ ಅತಿಥಿಗಳು
ಈ ಸೌಂದರ್ಯ ಸ್ಪರ್ಧೆಯಲ್ಲಿ ಫ್ಯಾಶನ್ ಡಿಸೈನರ್ ರಮ್ಯಶ್ರೀ , ಮೇಕಪ್ ಆರ್ಟಿಸ್ಟ್ ವಾಣಿ ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಲೀಲಾ ಮೋಹನ್, ಅಮೂಲ್ಯ ಸುಜಿತ್, ಹಂಸ ಸ್ಕೈ, ಪ್ರಿಯಾ ಮೃಣಾಲಿನಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಗಾಯಕ ಶಶಿಧರ ಕೋಟೆ, ಅನಿತಾ, ಸತೀಶ್ ಕುಮಾರ್, ವಕೀಲರಾದ ಮಂಜುನಾಥ್, ರಾಮು, ವಿಜೆ ಮನೋಜ್, ಗೋವರ್ಧನ್ ಲಾಲ್ ಪೇಜೆಂಟ್ನಲ್ಲಿ ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಕೆಎಲ್ಇ ಕಾಲೇಜಿನ ಪ್ರತಿಬಿಂಬದಲ್ಲಿ ಆಕರ್ಷಕ ಫ್ಯಾಷನ್ ಶೋ