ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈದ್ಯರಾಗಿ ಫ್ಯಾಷನ್ ರ್ಯಾಂಪ್ (Fashion Show) ಮೇಲೆ ಕ್ಯಾಟ್ ವಾಕ್ ಮಾಡಿದರೇ ಅಚ್ಚರಿಯಾಗದೇ ಇರುತ್ತದೆಯೇ! ಖಂಡಿತಾ ಅಚ್ಚರಿ ಆಗುತ್ತದೆ. ಯಾಕೆಂದರೆ, ವೈದ್ಯರಿಗೆ ತಮ್ಮ ಪ್ರೊಫೆಷನ್ನಲ್ಲಿ ತೊಡಗಿಸಿಕೊಳ್ಳಲು ಸಮಯವಿಲ್ಲದಾಗ ಅದು ಹೇಗೆ? ಫ್ಯಾಷನ್ನತ್ತ ಮುಖ ಮಾಡಿದರು ಎಂದನಿಸುವುದು ಸಹಜ. ಅದರಲ್ಲೂ ಒಬ್ಬರಲ್ಲ! ಇಬ್ಬರಲ್ಲ, ನಾನಾ ಡಿಪಾರ್ಟ್ಮೆಂಟ್ನ ಇಡೀ ಗ್ರೂಪ್ನ ಮಹಿಳಾ ವೈದ್ಯರು ಬಿಂದಾಸ್ ಆಗಿ ಕೆಲಕಾಲ ರಿಲ್ಯಾಕ್ಸಿಂಗ್ ಸಮಯವನ್ನು ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ಕಳೆದರು. ಎಥ್ನಿಕ್ ಲುಕ್ನಲ್ಲಿ ಕಾಣಿಸಿಕೊಂಡ ವೈದ್ಯರು ಉಲ್ಲಾಸದಿಂದ ಹೆಜ್ಜೆ ಹಾಕಿದ್ದು ನೋಡುಗರನ್ನು ಸೆಳೆಯಿತು. ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ಮತ್ತು ಶೋ ಡೈರೆಕ್ಟರ್ ಮತ್ತು ಆಯೋಜಕರಾದ ಪ್ರಿಯಾ ಪ್ರಶಾಂತ್ ನೇತೃತ್ವದಲ್ಲಿ ನಡೆದ ಡಾಕ್ಟರ್ಸ್ ಇನ್ ವೋಗ್ 2ನೇ ಎಡಿಷನ್ ಫ್ಯಾಷನ್ ಶೋ ಯಶಸ್ವಿಯಾಯಿತಲ್ಲದೇ, ಪ್ರೊಫೆಷನಲ್ ವೈದ್ಯರು ಕೂಡ ರ್ಯಾಂಪ್ ಮೇಲೆ ಹೆಜ್ಜೆ ಹಾಕಬಲ್ಲರು ಎಂಬುದನ್ನು ಪ್ರೂವ್ ಮಾಡಿತು.
ಡಾಕ್ಟರ್ಸ್ ರ್ಯಾಂಪ್ ವಾಕ್
ಡಾ. ಸಂಧ್ಯಾ, ಡಾ. ಕೋಮಲ, ಡಾ. ಮಂಜುಳಾ, ಡಾ. ತೇಜಸ್ವಿನಿ. ಡಾ. ಸುಪ್ರೀತಾ, ಡಾ. ಕೃಪಾ, ಡಾ. ಉಷಾ ಸೇರಿದಂತೆ ಗೈನಾಕಲಾಜಿಸ್ಟ್ ಹಾಗೂ ಡರ್ಮಾಟಲಾಜಿಸ್ಟ್ ಸೇರಿದಂತೆ ನಾನಾ ಡಿಪಾರ್ಟ್ಮೆಂಟ್ನ ಮಹಿಳಾ ವೈದ್ಯರು ಆಕರ್ಷಕ ರ್ಯಾಂಪ್ ವಾಕ್ ಮಾಡಿ, ತಾವು ಕೇವಲ ಸ್ಟೆತೊಸ್ಕೋಪ್, ಇಂಜಕ್ಷನ್, ಆರೋಗ್ಯ ತಪಾಸಣೆಗೆ ಮಾತ್ರ ಸೀಮಿತವಾಗಿಲ್ಲ, ನಾವು ಕೂಡ ಸಿಗುವ ಸಮಯವನ್ನು ಮನೋಲ್ಲಾಸದಿಂದ ಕಳೆಯುತ್ತೇವೆ ಎಂಬುದನ್ನು ಬಿಂಬಿಸಿದರು. ಗ್ರಿಶ್ಮಾ ಡಿಸೈನ್ಸ್ನ ಡಿಸೈನರ್ವೇರ್ ಧರಿಸಿದ ಮಾಡೆಲ್ಗಳು ಪ್ರೇಮಾ ಟೀಮ್ನ ಮೇಕಪ್ನಲ್ಲಿ ಕಂಗೊಳಿಸಿದರು.
ಆದರ್ಶ್ ಜೈನ್ –ಪ್ರಿಯಾ ಪ್ರಶಾಂತ್ ಶೋ
ಫ್ಯಾಷನ್ ಕೋರಿಯಾಗ್ರಾಫರ್ ಹಾಗೂ ಶೋ ಡೈರೆಕ್ಟರ್, ಮಾಡೆಲ್ ಪ್ರಿಯಾ ಪ್ರಶಾಂತ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ವೈದ್ಯರ ಫ್ಯಾಷನ್ ಶೋಗಳಲ್ಲಿ ಇದು ಎರಡನೇಯದಾಗಿತ್ತು. “ಮಹಿಳಾ ವೈದ್ಯರ ಆಸಕ್ತಿ ಈ ಶೋ ಯಶಸ್ವಿಯಾಗಲು ಕಾರಣವಾಗಿದೆ” ಎಂದು ಆಯೋಜಕರಾದ ಪ್ರಿಯಾ ಪ್ರಶಾಂತ್ ಅಭಿಪ್ರಾಯ ಪಟ್ಟರೇ, ಶೋ ಕೊರಿಯಾಗ್ರಾಫರ್ ಆದರ್ಶ್, ಇದೊಂದು ವಿಭಿನ್ನ ವೈದ್ಯರ ಫ್ಯಾಷನ್ ಶೋ ಎಂದು ಅಭಿಪ್ರಾಯಪಟ್ಟರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್ ಸ್ಟೈಲಿಂಗ್ಗೆ ಸಾಥ್ ನೀಡುವ ಎಥ್ನಿಕ್ವೇರ್ಸ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ