ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ವೇತ ವರ್ಣದ ಡಿಸೈನರ್ವೇರ್ ಧರಿಸಿದ್ದ ಮಕ್ಕಳು ಒಬ್ಬರ ಹಿಂದೆ ಒಬ್ಬರು ಕ್ಯಾಟ್ ವಾಕ್ (Fashion Show News) ಮಾಡುತ್ತಾ ಸಾಗುತ್ತಿದ್ದರೇ, ಆಕಾಶದಿಂದ ಧರೆಗಿಳಿಯುತ್ತಿರುವ ಪುಟ್ಟ ಪುಟ್ಟ ಏಂಜೆಲ್ಗಳಂತೆ ಕಾಣಿಸುತ್ತಿದ್ದರು. ಬಿಳಿ ಫ್ರಾಕ್, ಗೌನ್ ಹಾಗೂ ನಾನಾ ವಿನ್ಯಾಸದ ಸಾಫ್ಟ್ ಡಿಸೈನರ್ವೇರ್ಗಳಲ್ಲಿ ಇದಕ್ಕೊಂದುವ ವೈಟ್ ಫ್ಲವರ್ಸ್, ಸ್ಪಟಿಕದ ಮಣಿ ಹಾಗೂ ಮುತ್ತುಗಳ ಸಿಂಗಾರದೊಂದಿಗೆ ಪೋಸ್ ನೀಡುತ್ತಿದ್ದರು. ಈ ರ್ಯಾಂಪ್ ಶೋ ಫೇರಿಟೇಲ್ ದೃಶ್ಯದಂತೆ ಕಾಣಿಸುತ್ತಿತ್ತು. ವೈಟ್ ಗೌನ್ನಲ್ಲಿ ಧರಿಸುವ ಕ್ರಿಶ್ಚಿಯನ್ ವಧುವಿನೊಂದಿಗೆ ಹೆಜ್ಜೆ ಹಾಕುವ ಫ್ಲವರ್ ಗರ್ಲ್ಸ್ ಅಂದರೆ, ಈ ಹೂ ಹುಡುಗಿಯರ ಟೀಮ್ ಆಧರಿಸಿ ಈ ಕಾನ್ಸೆಪ್ಟ್ ಸೃಷ್ಟಿಸಲಾಗಿತ್ತು. ಅಂದ ಹಾಗೆ, ಇದು ನಡೆದದ್ದು, ಹುಬ್ಬಳ್ಳಿಯ ಐಎನ್ಐಎಫ್ಡಿ ಸಿಲೊಯೇಟ್ ಐದನೇ ವಾರ್ಷಿಕೋತ್ಸವದಲ್ಲಿ. ಡಿಸೈನರ್ ಸೀಮಾ ಎಸ್. ಕಟಾವ್ಕರ್ ಡಿಸೈನ್ ಮಾಡಿದ ಡಿಸೈನರ್ವೇರ್ಗಳನ್ನು ಧರಿಸಿದ ಒಂಭತ್ತು ಬಾಲೆಯರು ತಮ್ಮದೇ ಆದ ಆಕರ್ಷಕ ಸ್ಟೈಲಿಂಗ್ನಲ್ಲಿ ರ್ಯಾಂಪ್ ವಾಕ್ ಮಾಡಿ, ನೋಡುಗರ ಮನ ಸೆಳೆದರು.
ಏನಿದು ಫ್ಲವರ್ ಗರ್ಲ್ಸ್ ಕಾನ್ಸೆಪ್ಟ್
ಕ್ರಿಶ್ಚಿಯನ್ ಸಮುದಾಯದಲ್ಲಿ ವಧುವಿನ ಜೊತೆಗೆ ಹೂ ಚೆಲ್ಲುತ್ತಾ ಬರುವ ಹೂ ಹುಡುಗಿಯರೇ ಈ ಫ್ಲವರ್ ಗರ್ಲ್ಸ್. ಈ ವಿಷಯವನ್ನೇ ಕಾನ್ಸೆಪ್ಟ್ ಆಗಿಸಿಕೊಂಡು ಆಕರ್ಷಕ ವೈಟ್ ಉಡುಗೆಗಳನ್ನು ಡಿಸೈನರ್ ಸಿದ್ಧಪಡಿಸಿದ್ದರು. ಇದಕ್ಕೆ ಫ್ಲವರ್ ಗರ್ಲ್ ಕಾನ್ಸೆಪ್ಟ್ ಎಂಬ ಹೆಸರನ್ನು ಸೀಮಾ ಅವರೇ ನೀಡಿದ್ದರು.
ಡಿಸೈನರ್ ಸೀಮಾ ಫ್ಯಾಷನ್ ಲೋಕ
ಡಿಸೈನರ್ ಸೀಮಾ ಈಗಾಗಲೇ ಸಾಕಷ್ಟು ಡಿಸೈನರ್ವೇರ್ಗಳನ್ನು ಡಿಸೈನ್ ಮಾಡಿದ್ದಾರೆ. ಸೆಲೆಬ್ರೆಟಿಗಳಿಗೂ ಡಿಸೈನ್ ಮಾಡಿದ್ದಾರೆ. ಪರಿಸರ ಸ್ನೇಹಿ ಉಡುಪುಗಳನ್ನು ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ ತಮ್ಮ ಕಾನ್ಸೆಪ್ಟ್ ಆಧಾರಿತ ಡಿಸೈನರ್ವೇರ್ಗಳನ್ನು ಪ್ರದರ್ಶಿಸಿ, ಫ್ಯಾಷನ್ ಪ್ರಿಯರ ಮೆಚ್ಚುಗೆ ಪಡೆದಿದ್ದಾರೆ.
ಮಕ್ಕಳ ಆಕರ್ಷಕ ರ್ಯಾಂಪ್ ವಾಕ್
ವಿಸ್ತಾರ ನ್ಯೂಸ್ನೊಂದಿಗೆ ಮಾತನಾಡಿದ ಡಿಸೈನರ್ ಸೀಮಾ, ಫ್ಲವರ್ ಗರ್ಲ್ ಡಿಸೈನರ್ವೇರ್ ಕಾನ್ಸೆಪ್ಟ್ ನನಗೆ ಬಹಳ ಇಷ್ಟವಾದ ಕಾನ್ಸೆಪ್ಟ್. ಮಕ್ಕಳು ಈ ಉಡುಗೆಗಳನ್ನು ಧರಿಸಿ ಕ್ಯಾಟ್ ವಾಕ್ ಮಾಡುವಾಗ ನೋಡಲು ಖುಷಿಯಾಗುತ್ತಿತ್ತು. ಈ ಶೋ ಎಲ್ಲರನ್ನೂ ಆಕರ್ಷಿಸಿತು. ಮಕ್ಕಳು ಈ ಉಡುಗೆಗಳಲ್ಲಿ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಇನ್ನು ಅವರ ಜೊತೆಯಲ್ಲಿ ವಾಕ್ ಮಾಡಿದ್ದು ಮತ್ತಷ್ಟು ಖುಷಿ ತಂದಿತು ಎಂದಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Menʼs Co-Ord Suit Fashion: ಯುವಕರ ಫ್ಯಾಷನ್ಗೂ ಸೇರಿದ ಕೋ-ಆರ್ಡ್ ಪ್ಯಾಂಟ್ ಸೂಟ್