ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಾನಾ ಡಿಸೈನರ್‌ಗಳ ಡಿಸೈನರ್‌ವೇರ್‌ಗಳ ಸಂಗಮವೇ ಇಲ್ಲಿ ಸೇರಿತ್ತು. ವಯಸ್ಸಿನ ಭೇದ-ಭಾವವಿಲ್ಲದೇ ಸರಿ ಸುಮಾರು 50 ಮಾಡೆಲ್‌ಗಳು ವಾಕ್ ಮಾಡಿದ ಈ ಬೆಂಗಳೂರು ಫ್ಯಾಷನ್ ಸಾಗಾದಲ್ಲಿ (Fashion Show News) ದಕ್ಷಿಣ ಭಾರತದ ನಾನಾ ಗಾರ್ಮೆಂಟ್ಸ್, ಜ್ಯುವೆಲರಿ ಬ್ರಾಂಡ್‌ಗಳು ಪ್ರತಿನಿಧಿಸಿದ್ದವು. ಉದ್ಯಾನನಗರಿಯ ಫ್ಯಾಷನ್ ಫ್ಲೇಮ್ಸ್ ಆಶ್ರಯದಲ್ಲಿ ಜಿನ್ಸಿ ಸತೀಶ್ ಅವರ ನೇತೃತ್ವದಲ್ಲಿ ನಡೆದ ಫ್ಯಾಷನ್ ಸಾಗಾ ಸೀಸನ್ 3 ಯಶಸ್ವಿಯಾಗಿ ನಡೆಯಿತು.
ಶೋ ಡೈರೆಕ್ಟರ್ ಜಿನ್ಸಿ ಸತೀಶ್ ಫ್ಯಾಷನ್ ಟಾಕ್
“ಬೆಂಗಳೂರು ಫ್ಯಾಷನ್ ಸಾಗಾದಲ್ಲಿ ಎಲ್ಲಾ ಬ್ರಾಂಡ್‌ನ ಡಿಸೈನರ್‌ಗಳಿಗೆ ವೇದಿಕೆ ಕಲ್ಪಿಸುತ್ತಿದ್ದೇವೆ. ಈ ಹಿಂದೆಯೂ ಕಲ್ಪಿಸಿದ್ದೇವೆ. ಎಥ್ನಿಕ್ ಹಾಗೂ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ವಿನೂತನ ಡಿಸೈನರ್‌ವೇರ್‌ಗಳು ಇಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಿವೆ. ಮುಂದೆಯೂ ಇದು ಮುಂದುವರೆಯಲಿದೆ” ಎಂದು ಶೋ ಡೈರೆಕ್ಟರ್ ಜೆನ್ಸಿ ಹೇಳಿದರು..
ಬ್ರಾಂಡ್ ಅಂಬಾಸಡರ್ ಪ್ರಿಯಾಂಕಾ ರ್ಯಾಂಪ್ ವಾಕ್
ಮಿಸೆಸ್ ಇಂಡಿಯಾ ಕರ್ನಾಟಕ ಫೈನಲಿಸ್ಟ್ ಹಾಗೂ ಮಾಡೆಲ್ ಪ್ರಿಯಾಂಕಾ ಸುದರ್ಶನ್, ಫ್ಯಾಷನ್ ಸಾಗಾದ ಬ್ರಾಂಡ್ ಅಂಬಾಸಡರ್ ಆಗಿದ್ದು, ಇನ್ಸಿಗ್ನಿಯಾ ಡಿಸೈನರ್ ಕೂಡ ಆಗಿದ್ದಾರೆ. ಎಥ್ನಿಕ್ ವೇರ್ ಡಿಸೈನರ್‌ವೇರ್ ಹಾಗೂ ನಾನಾ ವೈವಿಧ್ಯಮಯ ಸೀರೆಗಳ ಡ್ರೇಪಿಂಗ್ ಡಿಸೈನ್‌ಗಳನ್ನು ರ್ಯಾಂಪ್ ಮೇಲೆ ಪ್ರದರ್ಶಿಸುವ ಮೂಲಕ ಫ್ಯಾಷನ್ ಪ್ರಿಯರನ್ನು ಸೆಳೆದರು. ಶೋ ಸ್ಟಾಪರ್ ಆಗಿಯೂ ವಾಕ್ ಕೂಡ ಮಾಡಿದರು. “ಹೊಸ ಡಿಸೈನರ್‌ಗಳಿಗೆ, ಬೆಂಗಳೂರು ಫ್ಯಾಷನ್ ಸಾಗಾ ವೇದಿಕೆ ಕಲ್ಪಿಸುತ್ತಿರುವುದು ಸ್ವಾಗತಾರ್ಹ. ಬೋಟಿಕ್ ಡಿಸೈನರ್‌ಗಳು ಭಾಗವಹಿಸಲು ಇಲ್ಲಿ ಸದಾವಕಾಶ ಕಲ್ಪಿಸಿರುವುದು ಹಾಗೂ ಅವರವರ ಎಕ್ಸ್‌ಕ್ಲೂಸೀವ್ ಡಿಸೈನ್‌ಗಳನ್ನು ಪ್ರದರ್ಶಿಸಲು ಅವಕಾಶ ನೀಡಿರುವುದು ಉತ್ತಮ ಕಾರ್ಯ” ಎಂದು ಮಾಡೆಲ್ ಪ್ರಿಯಾಂಕಾ ಸುದರ್ಶನ್ ತಿಳಿಸಿದರು.
ಯಶಸ್ವಿಯಾದ ಡಿಸೈನರ್‌ಗಳ ಸಂಗಮ
ಪವಿತ್ರಾಸ್ ಬೋಟಿಕ್, ಟ್ರಿಯಾನ್ ಬೋಟಿಕ್, ಇನ್ಸಿಗ್ನಿಯಾ, ಬ್ಯೂಟಿಕ್ ಕ್ರಿಯೇಷನ್,ಗೌತಮ್ ಮೆನ್ಸ್ ಕಲೆಕ್ಷನ್ ಸೇರಿದಂತೆ ನಾನಾ ಬೋಟಿಕ್‌ಗಳ ಡಿಸೈನರ್‌ಗಳು ವಿವಿಧ ಕಾನ್ಸೆಪ್ಟ್‌ಗಳೊಂದಿಗೆ ಈ ಫ್ಯಾಷನ್ ಸಾಗಾದಲ್ಲಿ ತಂತಮ್ಮ ಡಿಸೈನರ್‌ವೇರ್ ಕಲೆಕ್ಷನ್‌ಗಳನ್ನು ಪ್ರದರ್ಶಿಸಿದರು. ಅಂದಹಾಗೆ, ಈ ರ್ಯಾಂಪ್ ಶೋ ಕೊರಿಯಾಗ್ರಾಫಿಯನ್ನು ಇರ್ಫಾನ್, ಕಿನ್ಝಿ ವಹಿಸಿಕೊಂಡಿದ್ದರು. ಟಾಪ್ ಮಾಡೆಲ್ ಆಫ್ ಸೌತ್ ಇಂಡಿಯಾದ ಮಾಡೆಲ್‌ಗಳಾದ ಬಬಿತಾ ರಾಣಿ, ಮನೀಶಾ, ಹರ್ಷಿತಾ, ಘೋರ್ಪಡೆ, ಮಾಧವಿ, ಅಂಬಿಕಾ, ಪ್ರತಿಭಾ, ಅಯ್ನಾ ಸತೀಸ್, ಅನುಷಾ, ಮೇಘಾ, ಸಮರ್ಥ್ ಪಾಲ್ಗೊಂಡಿದ್ದರು. ವಿಖಾರ್ ಅಹಮದ್ ಹಾಗೂ ಸಯ್ಯದ್ ಜೀಲನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
( ಲೇಖಕಿ : ಫ್ಯಾಷನ್ ಲೇಖಕಿ )
ಇದನ್ನೂ ಓದಿ: Satin Saree Fashion: ರೆಟ್ರೋ ಲುಕ್ ನೀಡುವ ಸ್ಯಾಟಿನ್ ಸೀರೆಗೆ ನಯಾ ಲುಕ್ ನೀಡಲು 5 ಐಡಿಯಾ!