Site icon Vistara News

Fashion Show News: ಇಂಡಿಯನ್‌ ಡಿಸೈನರ್ಸ್ ಲೀಗ್‌ನಲ್ಲಿ ಮಾಡೆಲ್‌ಗಳೊಂದಿಗೆ ಸೆಲೆಬ್ರಿಟಿ ಡಾಗ್‌ ಹೈದರ್‌ ರ‍್ಯಾಂಪ್ ವಾಕ್‌

Fashion Show News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿ ಬಾರಿಯಂತೆ ಈ ಬಾರಿಯೂ ನಡೆದ ಇಂಡಿಯನ್‌ ಡಿಸೈನರ್ಸ್ ಲೀಗ್‌ ಸೀಸನ್‌ 5ರಲ್ಲಿ ನಾನಾ ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಕ್ಯಾಟ್‌ವಾಕ್‌ (Fashion Show News) ಮಾಡಿ ಫ್ಯಾಷನ್‌ ಪ್ರಿಯರ ಮನ ಗೆದ್ದರು. ಮನಮೋಹಕ ಡಿಸೈನರ್‌ವೇರ್‌ಗಳು ಮುಂಬರುವ ಸೀಸನ್‌ ಹಾಗೂ ಟ್ರೆಂಡಿ ಉಡುಪುಗಳಿಗೆ ಸಾಕ್ಷಿ ಎಂಬಂತೆ ಸಾಲು ಸಾಲು ಫ್ಯಾಷನ್‌ ರೌಂಡ್‌ನಲ್ಲಿ ಅನಾವರಣಗೊಂಡವು.

ಸೆಲೆಬ್ರೆಟಿ ಡಾಗ್‌ ಹೈದರ್‌ ರ‍್ಯಾಂಪ್ ವಾಕ್‌

ಇವೆಲ್ಲದರ ನಡುವೆ 5 ನೇ ಸೀಸನ್‌ನ ಇಂಡಿಯನ್‌ ಡಿಸೈನರ್ಸ್ ಲೀಗ್‌ನಲ್ಲಿ ಮಾಡೆಲ್‌ಗಳ ಕ್ಯಾಟ್‌ ವಾಕ್‌ಗಿಂತ ಹೈ ಲೈಟ್‌ ಆಗಿದ್ದು, 20 ಕೋಟಿ ರೂ. ಬೆಲೆ ಬಾಳುವ ಸೆಲೆಬ್ರೆಟಿ ಡಾಗ್‌ನ ಕ್ಯಾಟ್‌ ವಾಕ್‌! ಹೌದು. ನಟ ಹಾಗೂ ಸೆಲೆಬ್ರೆಟಿ ಡಾಗ್‌ ಬ್ರೀಡರ್‌ ಸತೀಶ್‌ ಕಾಡಬಮ್‌ ತಮ್ಮ ಬೆಲೆಬಾಳುವ ಶ್ವಾನ ಹೈದರ್‌ ಜತೆಗೆ ಶೋ ಸ್ಟಾಪರ್‌ ಆಗಿ ರ‍್ಯಾಂಪ್ ವಾಕ್‌ ಮಾಡಿದ್ದು ಎಲ್ಲರಲ್ಲೂ ಬೆರಗು ಮೂಡಿಸಿತು.

ಸೆಲೆಬ್ರಿಟಿಯಾದ ಶ್ವಾನ ಹೈದರ್‌

“ಪ್ರಪಂಚದ ಅತ್ಯಂತ ಹೆಚ್ಚು ಬೆಲೆ ಬಾಳುವ ಶ್ವಾನ ಹೈದರ್‌ ನನ್ನ ಪ್ರೀತಿ ಪಾತ್ರನಾಗಿದ್ದು, ಆತನೊಂದಿಗೆ ರ‍್ಯಾಂಪ್ ವಾಕ್‌ ಮಾಡುವುದು ವಿಶೇಷ ಸಂಗತಿ. ಶ್ವಾನವೊಂದು ಈ ರೀತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಸೆಲೆಬ್ರಿಟಿಯಾಗಿ ಎಲ್ಲೆಡೆ ಮಿಂಚುತ್ತಿರುವುದು ಉದ್ಯಾನನಗರಿಯಲ್ಲಿ ಇದೇ ಮೊದಲು. ಸಿನಿಮಾಗಳಲ್ಲೂ ನಟಿಸಿರುವ ನಮ್ಮ ಪ್ರೀತಿಯ ಹೈದರ್‌ ಜಾಣ ಮಾತ್ರವಲ್ಲ, ಮನುಷ್ಯರೊಂದಿಗೂ ಉತ್ತಮವಾಗಿ ವ್ಯವಹರಿಸುತ್ತಾನೆ. ರ‍್ಯಾಂಪ್ ಎಂದಾಕ್ಷಣ ಹೆದರುವುದಕ್ಕಿಂತ ಸುಮ್ಮನೆ ವಾಕ್‌ ಮಾಡುತ್ತಾನೆ. ಹೇಳಿದ ಮಾತನ್ನು ಕೇಳುವ ಶ್ವಾನ ಹೈದರ್‌ಗೆ ಇದೀಗ ಫ್ಯಾಷನ್‌ ಕ್ಷೇತ್ರವೂ ಪರಿಚಯಗೊಂಡಿದ್ದು, ಎಲ್ಲರೊಂದಿಗೂ ಬೆರೆಯುತ್ತಾನೆ. ಪೋಸ್‌ ನೀಡುತ್ತಾನೆ. ಆತನ ಒಂದೊಂದು ಚಟುವಟಿಕೆಯನ್ನು ನಾನು ಗಮನಿಸುತ್ತಿರುತ್ತೇನೆ. ಟ್ರೈನ್‌ ಅಪ್‌ ಮಾಡಿದ್ದೇನೆ. ಹಾಗಾಗಿ ಎಲ್ಲಿಯೂ ಗೊಂದಲವಾಗುವುದಿಲ್ಲ. ಬದಲಿಗೆ ಆತನ ಹಾವ-ಭಾವ ನೋಡಿದರೇ ನಿಜಕ್ಕೂ ಖುಷಿಯಾಗುತ್ತದೆ “ ಎಂದು ನಟ ಹಾಗೂ ಸೆಲೆಬ್ರಿಟಿ ಡಾಗ್‌ ಬ್ರೀಡರ್‌ ಸತೀಶ್‌ ಸಂತಸ ಹಂಚಿಕೊಂಡರು.

ಪ್ರಶಸ್ತಿ ಪ್ರದಾನ

ಮಾಡೆಲ್‌ ಹರ್ಷವರ್ಧನ್‌ ಅವರಿಗೆ ಮಿಸ್ಟರ್‌ ಹ್ಯಾಂಡ್‌ಸಮ್‌ ಆಫ್‌ ದಿ ಇಯರ್‌ ಪ್ರಶಸ್ತಿಯನ್ನು ನೀಡಿ ಈ ಶೋನಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಡೆಲ್ ಸಂತೋಷ್‌ ರೆಡ್ಡಿ ಪಾಲ್ಗೊಂಡಿದ್ದರು. ನಾನಾ ಡಿಸೈನರ್‌ಗಳು ಸೇರಿದಂತೆ ಫ್ಯಾಷನ್‌ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Show News: ಎಕ್ವಿನಾಕ್ಸ್ ಅವಂತ್‌ ಫ್ಯಾಷನ್‌ ಶೋಗೆ ಸೆಲೆಬ್ರೆಟಿ ಸ್ಟೈಲಿಸ್ಟ್ ಶಿಲ್ಪಾ ಹೆಗಡೆ ಸಾಥ್‌

Exit mobile version