-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಯೋಗಾತ್ಮಕ ಥೀಮ್‌ಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು (Fashion Show News) ಸಿದ್ಧಪಡಿಸಿದ್ದ ಉದ್ಯಾನನಗರಿಯ ಯಲಹಂಕದ ಸಿಇಎಸ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ಭಾವಿ ಡಿಸೈನರ್‌ಗಳು ನೆರೆದಿದ್ದ, ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ, ಸಿಳ್ಳೆ ಹಾಗೂ ಚಪ್ಪಾಳೆ ಗಿಟ್ಟಿಸಿಕೊಂಡರು.
ಸಾಗರ ಸಂರಕ್ಷಣೆ ಕುರಿತ ಡಿಸೈನರ್‌ವೇರ್ಸ್
ಕಪ್ಪೆ ಚಿಪ್ಪು, ಶಂಖದಂತಹ ನಾನಾ ಬಗೆಯ ಸೀ ಶೆಲ್ ಆಕ್ಸೆಸರೀಸ್‌ಗಳಿಂದ ವಿನ್ಯಾಸಗೊಳಿಸಿದ ವೈಟ್ ಡ್ರೆಸ್, ಸಮುದ್ರ ಹಾಗೂ ಸಾಗರವನ್ನು ಉಳಿಸಿ-ರಕ್ಷಿಸಿ ಎಂಬ ಸಂದೇಶವನ್ನು ಹೊಂದಿದಂತಹ ಬ್ಲ್ಯೂ ಡಿಸೈನರ್‌ವೇರ್ ಸೇರಿದಂತೆ, ನಾನಾ ಬಗೆಯ ಓಶನ್ ಥೀಮ್ ಹೊಂದಿದಂತಹ ಸಿಇಎಸ್ ಡಿಸೈನರ್‌ಗಳ ವೆರೈಟಿ ಡಿಸೈನರ್ ಡ್ರೆಸ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್ ಮೇಲೆ ಪರಿಸರ ಸಂರಕ್ಷಣೆ ಕುರಿತ ಸಂದೇಶ ಸಾರಿದರು.
ವೆಸ್ಟರ್ನ್ ಡೆನಿಮ್‌ಗೆ ನಾನಾ ಲುಕ್
ಇದುವರೆಗೂ ಡೆನಿಮ್‌ನಲ್ಲಿ ಜೀನ್ಸ್ ಪ್ಯಾಂಟ್, ಶಾರ್ಟ್ಸ್, ಸ್ಕರ್ಟ್ಸ್ ನೋಡಿ ಗೊತ್ತು! ಆದರೆ, ಇದರಲ್ಲಿ ಲೆಹೆಂಗಾ, ಹಾಗೂ ಇಂಡಿಯನ್ ಔಟ್‌ಫಿಟ್‌ಗಳನ್ನು ಪ್ರಯೋಗ ಮಾಡಿದರೇ ಹೇಗೆ? ಎಂದು ಯೋಚಿಸಿ, ಡಿಸೈನ್ ಮಾಡಿದ್ದ ಡಿಸೈನರ್‌ಗಳ ನಾನಾ ಬಗೆಯ ಡೆನಿಮ್ ಇಂಡಿಯನ್ ಔಟ್‌ಫಿಟ್‌ಗಳು ಭಾಗವಹಿಸಿದ್ದ ಹುಡುಗಿಯರನ್ನು ಸೆಳೆದವು.
ಮೈಸೂರ್ ಸಿಲ್ಕ್ ಸೀರೆ ಶೋ
ಇವೆಲ್ಲದರ ಮಧ್ಯೆ, ಜೆನ್ ಜಿ ಹುಡುಗಿಯರು ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಉಟ್ಟ ನಾನಾ ಬಗೆಯ ಟ್ರೆಡಿಷನಲ್ ಮೈಸೂರ್ ಸಿಲ್ಕ್ ಸೀರೆಗಳು ಮಹಿಳೆಯರನ್ನು ಮನಸೆಳೆದವು. ಇನ್ನು, ಮಾಡೆಲ್‌ಗಳೊಂದಿಗೆ ಮಹಿಳಾ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಹಾಗೂ ಫ್ಯಾಷನ್ ಲೇಖಕಿ, ರಾಜ್ಯ ಪೇಜೆಂಟ್‌ಗಳ ಜ್ಯೂರಿ ಸಲಹೆಗಾರರಾದ ಶೀಲಾ ಸಿ. ಶೆಟ್ಟಿ ಕೂಡ ವಿದ್ಯಾರ್ಥಿಗಳೊಂದಿಗೆ ರ‍್ಯಾಂಪ್ ವಾಕ್ ಮಾಡಿ, ಡಿಸೈನರ್‌ಗಳನ್ನು ಹುರಿದುಂಬಿಸಿದರು.
ಜಿ. ಎಂ ಶಿರಹಟ್ಟಿ ಪ್ರೋತ್ಸಾಹ
ಶೋನಲ್ಲಿ ಭಾಗವಹಿಸಿದ್ದ ದೂರದರ್ಶನದ ಮಾಜಿ ಡೈರೆಕ್ಟರ್ ಜಿ. ಎಂ. ಶಿರಹಟ್ಟಿ ಅವರು ಮಾತನಾಡಿ, ಪ್ರತಿಭಾನ್ವಿತ ಡಿಸೈನರ್‌ಗಳು ಮುಂದೊಮ್ಮೆ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು.
ಗ್ರಾಜುಯೇಷನ್ ಡೇಯಲ್ಲಿ ನಡೆದ ಡಿಸೈನರ್ ಆವಾರ್ಡ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್ ಸಂಜಯ್ ಚೊಲರಿಯಾ ಪ್ರಶಸ್ತಿ ಸ್ವಿಕರಿಸಿದರು. ರ‍್ಯಾಪರ್ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Kids Fashion: ಮಕ್ಕಳ ಕ್ಯೂಟ್ ಲುಕ್‌ಗೆ ಸಾಥ್ ನೀಡುವ ಬನ್ನಿ ಇಯರ್ಸ್ ಹೆಡ್ ಬ್ಯಾಂಡ್ಸ್!