-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲೇಜಿನ ಹುಡುಗಿಯರು ಹಾಗೂ ಹುಡುಗರು ರ‍್ಯಾಂಪ್ (Fashion Show News) ಮೇಲೆ ಹೆಜ್ಜೆ ಹಾಕುತ್ತಿದ್ದರೇ, ನೋಡುಗರ ಕಣ್ಣು ಕುಕ್ಕುವಂತಿತ್ತು. ಒಬ್ಬೊಬ್ಬರದು ಒಂದೊಂದು ಬಗೆಯ ಥೀಮ್! ಆ ಥೀಮ್‌ಗೆ ತಕ್ಕಂತೆ ಕಾಸ್ಟ್ಯೂಮ್ಸ್! ಇವನ್ನು ಧರಿಸಿದ ಯಂಗ್‌ಸ್ಟರ್ಸ್ ವೇದಿಕೆ ಮೇಲೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್ ವಾಕ್ ಮಾಡಿ ನೆರೆದಿದ್ದ ಕಾಲೇಜಿನ ಆಡಳಿತ ವರ್ಗವನ್ನು ಮಾತ್ರವಲ್ಲದೇ, ವಿದ್ಯಾರ್ಥಿಗಳ ಮನ ಗೆದ್ದರು. ಅಂದಹಾಗೆ, ಈ ಫ್ಯಾಷನ್ ಶೋ ನಡೆದದ್ದು, ಉದ್ಯಾನನಗರಿಯ ಬಿ ಎಂ ಎಸ್ ಕಾಲೇಜಿನ ಆವರಣದಲ್ಲಿ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದ, ಈ ಫ್ಯಾಷನ್ ಶೋ ನಾನಾ ರೌಂಡ್‌ಗಳಲ್ಲಿ ನಡೆಯಿತು.
ಆದರ್ಶ್ ಜೈನ್ ಕೊರಿಯಾಗ್ರಾಫಿ & ಜಡ್ಜ್
ಕೊರಿಯಾಗ್ರಾಫರ್ ಹಾಗೂ ಫ್ಯಾಷನ್ ಶೋಗಳ ಡೈರೆಕ್ಟರ್ ಆದರ್ಶ್ ಜೈನ್ ಬಿ ಎಂ ಎಸ್ ಕಾಲೇಜಿನ ಫ್ಯಾಷನ್ ಶೋಗಳಿಗೆ ಜ್ಯೂರಿಯಲ್ಲಿದ್ದರು. ಇವರೊಂದಿಗೆ ಮಾಡೆಲ್ ಕಾವ್ಯಾ ಕೂಡ ಜ್ಯೂರಿ ಪಾನೆಲ್‌ನಲ್ಲಿದ್ದರು. ರ‍್ಯಾಂಪ್ ಮೇಲೆ ವಾಕ್ ಮಾಡಿದ ಕಾಲೇಜಿನ ಗ್ರೂಪ್‌ಗಳಿಗೆ ಪ್ರಶಂಸೆಯ ಸುರಿಮಳೆಯೊಂದಿಗೆ ಅವರ ರ‍್ಯಾಂಪ್ ವಾಕ್, ಟ್ಯಾಲೆಂಟ್ ಹಾಗೂ ಕಾಸ್ಟ್ಯೂಮ್ಸ್ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಜಡ್ಜ್ ಮಾಡಿದರು.
ಆದರ್ಶ್ ಜೈನ್ ಫ್ಯಾಷನ್ ಟಾಕ್
ವಿದ್ಯಾರ್ಥಿಗಳ ಈ ಫ್ಯಾಷನ್ ಶೋ ನೋಡಲು, ಪಕ್ಕಾ ಪ್ರೊಫೆಷನಲ್ ಮಾಡೆಲ್‌ಗಳ ರ‍್ಯಾಂಪ್ ವಾಕ್‌ನಂತಿತ್ತು. ಆಯೋಜನೆ ಕೂಡ ಪರ್ಫೆಕ್ಟಾಗಿತ್ತು. ಇಂದು ನಡೆದ ವಿದ್ಯಾರ್ಥಿಗಳು ಮುಂದೊಮ್ಮೆ ಮಾಡೆಲ್‌ಗಳಾಗಿ ಯಶಸ್ವಿಯೂ ಆಗಬಹುದು. ಇದು ಅವರೆಲ್ಲರ ಮೊದಲ ಹೆಜ್ಜೆ” ಎಂದು ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ಹೇಳಿದರು.
ಸಂಸ್ಕೃತಿ-ಫ್ಯಾಷನ್ ಶೋ ಪ್ಲಸ್ ಟ್ಯಾಲೆಂಟ್ ಶೋ
ಫ್ಯಾಷನ್ ಶೋ ಮಾತ್ರವಲ್ಲದೇ, ಇದರೊಂದಿಗೆ ಹುಡುಗ-ಹುಡುಗಿಯರ ಟ್ಯಾಲೆಂಟ್ ಕಂಡು ಹಿಡಿಯುವ ಟ್ಯಾಲೆಂಟ್ ಶೋವನ್ನು ಜೊತೆಜೊತೆಗೆ ಆಯೋಜಿಸಲಾಗಿತ್ತು. ಸಂಸ್ಕೃತಿ ಹೆಸರಿನಲ್ಲಿ ನಡೆದ ಈ ಟ್ಯಾಲೆಂಟ್ ಶೋನಲ್ಲಿ ಕಾಲೇಜು ಹುಡುಗ-ಹುಡುಗಿಯರು ನಾನಾ ಕಾಯ್ರಕ್ರಮಗಳನ್ನು ನೀಡಿದರು. ಎಲ್ಲಾ ಪ್ರೋಗ್ರಾಮ್‌ಗಳು ಮೆಚ್ಚುಗೆ ಪಡೆದವು.
ಫ್ಯಾಷನ್ ಶೋ ವಿಜೇತರು
ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಟೀಮ್‌ನ ಫ್ಯಾಷನ್ ರ‍್ಯಾಂಪ್ ವಾಕ್ ಅತ್ಯಾಕರ್ಷಕವಾಗಿ ಮೂಡಿ ಬಂದಿತು. “ಸ್ಕಲ್ಪ್ಚರ್ ಆಫ್ ಬ್ಲೈಂಡ್ ಗಾಡೆಸ್‌ಆಫ್ ಜಸ್ಟೀಸ್ “ ಥೀಮ್‌ಗೆ ಹೊಂದುವಂತೆ ಅವರೆಲ್ಲರ ವಾಕ್, ಕಾಸ್ಟ್ಯೂಮ್ಸ್ ಸೇರಿದಂತೆ ಎಲ್ಲವೂ ಫಸ್ಟ್ ಕ್ಲಾಸ್ ಲಿಸ್ಟ್‌ಗೆ ಸೇರಿತು. ಪರಿಣಾಮ, ಈ ಕಾಲೇಜಿನ ಏರಿಯನ್ ಟೀಮ್ ಮೊದಲ ಸ್ಥಾನ ಗಳಿಸಿತು. ಬಿಎಂಎಸ್ ಆರ್ಕಿಟೆಕ್ಚರ್ ಎರಡನೇ ರನ್ನರ್ ಅಪ್ ಆಗಿ ಸ್ಥಾನ ಗಳಿಸಿತು.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು