-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ (Fashion Show news) ವಜ್ರಾಭರಣಗಳನ್ನು ಧರಿಸಿದ ರೂಪದರ್ಶಿಯರು ಹೆಜ್ಜೆ ಇಟ್ಟು ರ‍್ಯಾಂಪ್ ವಾಕ್ ಮಾಡುತ್ತಿದ್ದರೇ ನೋಡುಗರ ಕಣ್ಣೆಲ್ಲವೂ ಅವರು ಧರಿಸಿದ ಜ್ಯುವೆಲರಿಗಳ ಮೇಲಿತ್ತು. ಅತ್ಯಾದ್ಭುತವಾದ ಮನಮೋಹಕ ಆಭರಣಗಳನ್ನು ಧರಿಸಿದ್ದ, ಮಾಡೆಲ್‌ಗಳು ವಾಕ್ ಮಾಡುತ್ತಿದ್ದರೇ ಥೇಟ್ ಧರೆಗಿಳಿದ ದೇವತೆಗಳಂತೆ ಕಾಣಿಸುತ್ತಿದ್ದರು.
ಪ್ರೊಫೆಷನಲ್ ಮಾಡೆಲ್‌ಗಳ ರ‍್ಯಾಂಪ್ ವಾಕ್
ಕೆಲವರು ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ಧರಿಸಿ ಅಲಂಕೃತಗೊಂಡಿದ್ದರೇ, ಇನ್ನು ಕೆಲವರು ಟ್ರೆಡಿಷನಲ್ ಗೌನ್‌ನಲ್ಲಿಯೇ ಕಂಟೆಂಪರರಿ ಜ್ಯುವೆಲರಿಗಳಲ್ಲಿ ಕಾಣಿಸಿಕೊಂಡರು. ವಾಕ್ ಮಾಡಿದ ಸುಮಾರು 15 ಪ್ರೊಫೆಷನಲ್ ಮಾಡೆಲ್‌ಗಳು, ರಂಭೆ-ಊರ್ವಶಿ ಮೇನಕೆಯರಂತೆ ಕಾಣಿಸುತ್ತಿದ್ದರು. ಭಾಗವಹಿಸಿದ್ದವರೆಲ್ಲರ ಮನ ಸೂರೆಗೊಂಡರು.
ಅಂದಹಾಗೆ, ಉದ್ಯಾನನಗರಿಯ ಡಿಕನ್‌ಸನ್ ರಸ್ತೆಯಲ್ಲಿರುವ ಭೀಮಾ ಜ್ಯುವೆಲರಿ ಶೋ ರೂಮ್‌ವೊಂದರ ಫ್ಯಾಷನ್ ಶೋವೊಂದರಲ್ಲಿ ಈ ರಮಣೀಯ ದೃಶ್ಯ ಕಂಡು ಬಂತು. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ವೈವಿಧ್ಯಮಯ ವಜ್ರಾಭರಣಗಳನ್ನು ಪ್ರದರ್ಶಿಸಲಾಯಿತು.
ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕೊರಿಯಾಗ್ರಫಿ
ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿಯವರ ಕೊರಿಯಾಗ್ರಾಫಿಯಲ್ಲಿ ನಡೆದ ಈ ಫ್ಯಾಷನ್ ಶೋ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಹಬ್ಬದ ಸೀಸನ್‌ನಲ್ಲಿ ಇಂತಹ ಫ್ಯಾಷನ್ ಶೋಗಳ ಅಗತ್ಯವಿದೆ. ಇದರಿಂದಾಗಿ ಮಹಿಳೆಯರಿಗೆ ಟ್ರೆಂಡ್‌ನಲ್ಲಿರುವ ವಜ್ರಾಭರಣಗಳ ಪರಿಚಯವಾಗುತ್ತದೆ. ಮಾಡೆಲ್‌ಗಳು ಧರಿಸಿರುವ ಜ್ಯುವೆಲರಿಗಳು ಕೂಡ ಈ ಸೀಸನ್‌ನಲ್ಲಿ ಸಖತ್ ಟ್ರೆಂಡಿಯಾಗಿವೆ. ಮಹಿಳೆಯರಿಗೆ ಟ್ರೆಂಡ್ ಫಾಲೋ ಮಾಡಲು ಇಂತಹ ಶೋಗಳು ಸಹಕರಿಸುತ್ತವೆ ಎಂದು ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಹೇಳಿದರು. ಇವರೊಂದಿಗೆ ಶೋ ನೇತೃತ್ವವಹಿಸಿದ್ದ ಆದಿತ್ಯಾ ಶ್ರೀ ವಾತ್ಸವ್ ಕೂಡ ಹಾಜರಿದ್ದರು.
ಟ್ರೆಂಡಿ ಆಭರಣಗಳ ಪ್ರದರ್ಶನ
ಕತ್ತಿಗೆ ಧರಿಸುವ ಚೋಕರ್, ಲೇಯರ್ ಆಭರಣಗಳಿಂದ ಹಿಡಿದು ಬಾಜುಬಂದ್, ಮಾಂಗ್‌ಟೀಕಾ, ಕಮರ್‌ಬಾಂದ್, ಕಡ, ಬಳೆ ಸೆಟ್, ಮೂಗುತಿ, ಕಿವಿಯ ಹ್ಯಾಂಗಿಂಗ್ಸ್ ಹೀಗೆ ನಾನಾ ಬಗೆಯ ಫೆಸ್ಟಿವ್ ಸೀಸನ್ ಆಭರಣಗಳು ಈ ಶೋನಲ್ಲಿ ಹೈಲೈಟಾದವು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Banaras Silk Saree Fashion: ಫೆಸ್ಟಿವ್ ಸೀಸನ್‌ನಲ್ಲಿ ಗ್ರ್ಯಾಂಡ್ ಬನಾರಸ್ ಸಿಲ್ಕ್ ಸೀರೆಗಳ ಹಂಗಾಮ!