-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್ ಸೀಸನ್‌ನಲ್ಲಿ ಶ್ವೇತ ವರ್ಣದ ವೈಟ್ ಪ್ಯಾಂಟ್ ಫ್ಯಾಷನ್ (Fashion Trend) ಮರಳಿದೆ. ನಾನಾ ವಿನ್ಯಾಸದ ಫ್ಯಾಬ್ರಿಕ್‌ನ ವೈಟ್ ಪ್ಯಾಂಟ್‌ಗಳು ಇದೀಗ ಉದ್ಯೋಗಸ್ಥ ಮಹಿಳೆಯರ ಹಾಗೂ ಯುವತಿಯರ ವಾರ್ಡ್ರೋಬ್‌ಗೆ ಸೇರಿವೆ. ಕಚೇರಿ, ಔಟಿಂಗ್, ಮೀಟಿಂಗ್ ಹೀಗೆ ನಾನಾ ಸಂದರ್ಭಗಳಿಗೆ ಮ್ಯಾಚ್ ಆಗುವಂತಹ ಕಾನ್ಸೆಪ್ಟ್ ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಕ್ಲಾಸಿ ಲುಕ್ ನೀಡುತ್ತಿವೆ. ಅವುಗಳಲ್ಲಿ 3 ಶೈಲಿಯವು ಅತಿ ಹೆಚ್ಚು ಟ್ರೆಂಡಿಯಾಗಿವೆ.
ವೈಟ್ ಪ್ಯಾಂಟ್ ಪ್ರೇಮ
ಅಂದಹಾಗೆ, ಮೊದಲೆಲ್ಲಾ ವೈಟ್ ಪ್ಯಾಂಟ್ ಧರಿಸುವವರು ತೀರಾ ಕಡಿಮೆಯಾಗಿದ್ದರು. ಕಾರಣ, ಅದನ್ನು ಮೇಂಟೆನ್ ಮಾಡುವುದು ಕಷ್ಟವಾಗಿತ್ತು. ಧರಿಸಿದರೂ ತೀರಾ ಕಡಿಮೆ ಮಹಿಳೆಯರು ಧರಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಕಾಲೇಜು ಹುಡುಗಿಯರು ಮಾತ್ರ ಫ್ರಿಫರ್ ಮಾಡುತ್ತಿದ್ದರು. ಹೆಚ್ಚು ಕೆಲಸ ಮಾಡದೇ, ಧೂಳಿನಲ್ಲಿ ಓಡಾಡದೇ ಇರುವಂತಹ ಹುಡುಗಿಯರು ಧರಿಸುತ್ತಿದ್ದರು. ಹೆಚ್ಚು ಹೊರಗಡೆ ಓಡಾಡುವರು ಹಾಗೂ ಹೆಚ್ಚು ಕೆಲಸ ಮಾಡುವವರು ಧರಿಸುತ್ತಿರಲಿಲ್ಲ. ಕೊಂಚ ಗಲೀಜಾದರೂ ಕಲೆಯು ಉಳಿಯುವುದು ಹಾಗೂ ನೀಟಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣವಾಗಿತ್ತು. ಆದರೆ, ಇದಕ್ಕೆಲ್ಲಾ ಉತ್ತರ ಎಂಬಂತೆ, ಇದೀಗ ನಾನಾ ಬಗೆಯ ಕಂಫರ್ಟಬಲ್ ಫೀಲ್ ನೀಡುವ ವೈಟ್ ಪ್ಯಾಂಟ್‌ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ. ಕೆಲವಂತೂ ಕಲೆಯಾದರೂ ಸುಲಭವಾಗಿ ವಾಶ್ ಮಾಡಬಹುದಾದಂತವು, ರಿಂಕಲ್ ಫ್ರೀ ಇರುವಂತವು ಹಾಗೂ ಮಾಡರ್ನ್ ಫಾರ್ಮಲ್ ಪ್ಯಾಂಟ್ ವಿನ್ಯಾಸದವು ಕಾಲಿಟ್ಟಿವೆ ಎನ್ನುತ್ತಾರೆ ಫ್ಯಾಷನಿಸ್ಟ್ ರಾಜ್.
ಆ್ಯಂಕೆಲ್ ಲೆಂಥ್ ಜೀನ್ಸ್ ವೈಟ್ ಪ್ಯಾಂಟ್
ಪಾದದ ಮೇಲೆ ನಿಲ್ಲುವ ಆ್ಯಂಕೆಲ್ ಲೆಂಥ್ ಶೈಲಿಯ ವೈಟ್ ಪ್ಯಾಂಟ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಯಾವುದೇ ಶೇಡ್‌ನ ಕ್ರಾಪ್ ಟಾಪ್‌ನೊಂದಿಗೆ ಧರಿಸಬಹುದಾದ ಇವು ನೋಡಲು ಮಾಡರ್ನ್ ಲುಕ್ ನೀಡುತ್ತವೆ. ಫ್ಲೇರ್ ಹಾಗೂ ಸ್ಕಿನ್ ಟೈಟ್ ಎರಡು ಶೈಲಿಯವು ಪಾಪುಲರ್ ಆಗಿವೆ.
ರಿಂಕಲ್ ಫ್ರೀ ವೈಟ್ ಪ್ಯಾಂಟ್
ಇಸ್ತ್ರೀ ಮಾಡದೇಯೂ ಧರಿಸಬಹುದಾದ ಇವು ರಿಂಕಲ್ ಫ್ರೀ ಪ್ಯಾಂಟ್‌ಗಳಿವು. ಅತಿ ಹೆಚ್ಚು ಯುವತಿಯರು ಇಂತಹ ಪ್ಯಾಂಟ್‌ಗಳನ್ನು ಧರಿಸತೊಡಗಿದ್ದಾರೆ. ಯಾವುದೇ ಬಗೆಯ ಟಾಪ್‌ಗಳಿಗಾದರೂ ಇವನ್ನು ಧರಿಸಬಹುದು. ಆಕ್ಸೆಸರೀಸ್ ಕೂಡ ಅಷ್ಟೇ ಯಾವುದನ್ನು ಬೇಕಾದರೂ ಇವಕ್ಕೆ ಮಿಕ್ಸ್ ಮ್ಯಾಚ್ ಮಾಡಬಹುದು.
ಇದನ್ನೂ ಓದಿ: Fashion Trend: ಜೆನ್ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್ ಜ್ಯುವೆಲರಿಗಳು!
ಫಾರ್ಮಲ್ ವೈಟ್ ಪ್ಯಾಂಟ್
ಕಾರ್ಪೋರೇಟ್ ಕ್ಷೇತ್ರದ ಹೆಣ್ಣು ಮಕ್ಕಳು ಅತಿ ಹೆಚ್ಚು ಧರಿಸುವ ಹಾಗೂ ಪ್ರಿಫರ್ ಮಾಡುವ ಫಾರ್ಮಲ್ ಪ್ಯಾಂಟ್‌ಗಳಿವು. ನೋಡಲು ಕ್ಲಾಸಿ ಲುಕ್ ನೀಡುತ್ತವೆ. ಇವುಗಳಲ್ಲಿ ಹಾಫ್, ವೈಟ್, ಕ್ರೀಮ್ ವೈಟ್ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಶಾರ್ಟ್ ಟಾಪ್‌ಗಳು ಹೊಂದುತ್ತವೆ. ಪಾಸ್ಟೆಲ್ ಶೇಡ್‌ನವು ಇದೀಗ ಟ್ರೆಂಡಿ ಮಿಕ್ಸ್ ಮ್ಯಾಚ್ ಟ್ರೆಂಡ್‌ನಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ )