-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಗ್ಲಾಮರಸ್ (Fashion Trend) ಯುವತಿಯರ ಪ್ಯಾಂಟ್‌ಸೂಟ್‌ಗೂ ಕಟೌಟ್ ಲುಕ್ ದೊರಕಿದೆ. ಹೌದು. ಸದಾ ಪ್ರತಿಯೊಂದು ಡ್ರೆಸ್‌ನಲ್ಲೂ ಗ್ಲಾಮರ್ ಬಯಸುವ ಹುಡುಗಿಯರನ್ನು ಇವು ಆಕರ್ಷಿಸಿವೆ. ಪ್ಯಾಂಟ್‌ಸೂಟ್‌ಗೂ ಗ್ಲಾಮರ್ ಟಚ್ ದೊರಕಿದ್ದು, ಇದೀಗ ಒಂದರ ಹಿಂದೊಂದರಂತೆ ನಾನಾ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ. ಕೆಲವೊಮ್ಮೆ ಕ್ರಾಪ್ ಬ್ಲೌಸ್ ಜೊತೆ ಪ್ಯಾಂಟ್‌ಸೂಟ್‌ಗೆ ಮ್ಯಾಚ್ ಮಾಡಿ ಡಿಸೈನರ್‌ಗಳು ಗ್ಲಾಮರ್ ಟಚ್ ನೀಡಿದರೇ, ಇದೀಗ ಡಿಸೈನರ್‌ಗಳು ಸೂಟ್‌ಗೆ ಕಟೌಟ್ ಡಿಸೈನ್ ಮಾಡಿ ಡಿಫರೆಂಟ್ ಲುಕ್ ನೀಡುತ್ತಿದ್ದಾರೆ.
ಏನಿದು ಕಟೌಟ್ ಪ್ಯಾಂಟ್‌ಸೂಟ್
ಒಂದೇ ಶೇಡ್‌ನ ಮಾನೋಕ್ರೋಮ್ ಪ್ಯಾಟ್‌ಸೂಟ್‌ಗಳೀಗ ಕಟೌಟ್ ಆಗಿದೆ ಎಂದರೇ, ಆ ಬ್ಲೇಝರ್‌ನ ಕೆಲವು ಭಾಗಗಳಿಗೆ ಕಟೌಟ್ ವಿನ್ಯಾಸ ಮಾಡಲಾಗಿರುತ್ತದೆ. ನೋಡಲು ಇದು ವಿಚಿತ್ರ ಎಂದೆನಿಸಿದರೂ ಪ್ರಯೋಗಾತ್ಮಕವಾಗಿ ಮಾಡಿದ ಈ ಡಿಸೈನ್‌ಗಳು ಇದೀಗ ನಾನಾ ಕಟೌಟ್‌ಗಳಲ್ಲಿ ಕಂಡು ಬರುತ್ತಿವೆ. ಒಂದಕ್ಕಿಂತ ಒಂದು ಡಿಸೈನ್ ಭಿನ್ನ-ವಿಭಿನ್ನ ವಿನ್ಯಾಸಗಳಲ್ಲಿ ಇತ್ತೀಚೆಗಿನ ಪ್ಯಾಂಟ್‌ಸೂಟ್‌ಗಳಲ್ಲಿ ಕಾಣಸಿಗುತ್ತಿವೆ. ಪ್ಯಾಂಟ್‌ಸೂಟ್‌ನ ಯಾವುದೇ ನಿರ್ದಿಷ್ಟ ಭಾಗವನ್ನು ನೀಟಾಗಿ ಅಂದವಾಗಿ ಕಾಣುವಂತೆ ಈ ಕಟೌಟ್ ಡಿಸೈನ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಅವರ ಪ್ರಕಾರ, ಕಟೌಟ್ ಪ್ಯಾಂಟ್‌ಸೂಟ್‌ಗಳ ಯಾವುದೇ ಭಾಗ ಬೇಕಾದರೂ ಕಟ್ ಆದಂತೆ ಕಾಣಿಸಬಹುದು. ಇದಕ್ಕೆ ಇದೇ ಭಾಗವೆಂಬ ರೂಲ್ಸ್ ಇಲ್ಲ! ಎನ್ನುತ್ತಾರೆ.
ಮಾನೋಕ್ರೋಮ್ ಕಟೌಟ್ ಪ್ಯಾಂಟ್‌ಸೂಟ್
ಮಾನೋಕ್ರೋಮ್ ಹಾಗೂ ಸಾಲಿಡ್ ಶೇಡ್‌ನ ಕಟೌಟ್ ಪ್ಯಾಂಟ್‌ಸೂಟ್‌ಗಳು ಸದ್ಯ ಚಾಲ್ತಿಯಲ್ಲಿವೆ. ಇವು ಸೆಲೆಬ್ರೆಟಿಗಳ ಹಾಗೂ ಮಾಡೆಲ್‌ಗಳ ಫೇವರೇಟ್ ಪ್ಯಾಂಟ್ ಸೂಟ್‌ಗಳೆಂದರೂ ಅತಿಶಯೋಕ್ತಿಯಾಗದು. ವೇಸ್ಟ್ಲೈನ್ ಭಾಗದಲ್ಲಿ ಅತಿ ಹೆಚ್ಚು ಕಟೌಟ್ ಡಿಸೈನ್‌ಗಳನ್ನು ಮಾಡಲಾಗಿರುತ್ತವೆ. ಬಾಡಿ ಫಿಟ್ ಡಿಸೈನ್‌ನಲ್ಲಿ ಇವು ದೊರೆಯುವುದರಿಂದ ಹೆಚ್ಚು ಕಟೌಟ್ ಮಾಡಲಾಗುವುದಿಲ್ಲ ಎನ್ನುತ್ತಾರೆ ಡಿಸೈನರ್ಸ್.
ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿ ಕಟೌಟ್ ಪ್ಯಾಂಟ್‌ಸೂಟ್ಸ್
ಅತಿ ಹೆಚ್ಚು ಬಾಲಿವುಡ್ ಹಾಗೂ ಫ್ಯಾಷನ್ ಕ್ಷೇತ್ರದವರು ಈ ಕಟೌಟ್ ಪ್ಯಾಂಟ್‌ಸೂಟ್‌ಗಳನ್ನು ಧರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಈ ಪ್ಯಾಂಟ್‌ಸೂಟ್‌ಗಳು ಸೆಲೆಬ್ರೆಟಿಗಳಿಗೆ ತಕ್ಕಂತೆ ನಾನಾ ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ಇದನ್ನೂ ಓದಿ: Star Saree Fashion: ಸೀರೆಗೆ ಕ್ರೋಚೆಟ್ ಬ್ಲೌಸ್ ಧರಿಸಿ ಟ್ರೆಂಡ್ ಸೆಟ್ ಮಾಡಿದ ಸೋನಂ ಕಪೂರ್!
ಕಟೌಟ್ ಪ್ಯಾಂಟ್‌ಸೂಟ್ಸ್ ರಿಯಾಲಿಟಿ
- ಕಟೌಟ್ ಪ್ಯಾಂಟ್‌ಸೂಟ್ ಎಲ್ಲರಿಗೂ ಮ್ಯಾಚ್ ಆಗದು.
- ಅತಿ ದುಬಾರಿ ಪ್ಯಾಂಟ್ಸೂಟ್ಗಳಿವು .
- ಸಾಲಿಡ್ ಕಲರ್ಸ್ ಎದ್ದು ಕಾಣುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)