-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ನಲ್ಲಿ (Fashion Trend) ಮೆನ್ಸ್ ಕಲರ್ ಡೆನಿಮ್ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಇದುವರೆಗೂ ಇದ್ದ ಜಾಕೆಟ್ ಕಲರ್ ರೂಲ್ಸ್ ಬ್ರೇಕ್ ಮಾಡಿ, ಹೊಸತನ ಮೂಡಿಸುವ ಎದ್ದು ಕಾಣುವಂತಹ ಶೇಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಇದಕ್ಕೆ ಪೂರಕ ಎಂಬಂತೆ, ನಟ ರಿತೇಶ್ ದೇಶ್‌ಮುಖ್ ಧರಿಸಿದ್ದ ಕೇಸರಿ ಡೆನಿಮ್ ಜಾಕೆಟ್ ಇದೀಗ ಮೆನ್ಸ್ ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸಿ, ಟ್ರೆಂಡಿಯಾಗಿವೆ.
ರಂಗಾದ ಮೆನ್ಸ್ ಜಾಕೆಟ್
ಇದುವರೆಗೂ ಬ್ಲ್ಯೂ & ಬ್ಲ್ಯಾಕ್ ಹಾಗೂ ಡಾರ್ಕ್ ಕಲರ್‌ಗಳಿಗೆ ಸೀಮಿತವಾಗಿದ್ದ, ಮೆನ್ಸ್ ಡೆನಿಮ್ ಜಾಕೆಟ್ ಕಾನ್ಸೆಪ್ಟ್ ಬದಲಾಗಿದೆ. ಬದಲಿಗೆ ಡಾರ್ಕ್, ಗ್ರೀನ್, ಬೇಜ್ ಹಾಗೂ ಆರೆಂಜ್ ಶೇಡ್, ಮರೂನ್‌ನಲ್ಲೂ ಡೆನಿಮ್ ಜಾಕೆಟ್‌ಗಳು ಬಿಡುಗಡೆಗೊಂಡಿವೆ. ಮೊದಲೆಲ್ಲಾ ಪ್ರೊಫೆಷನಲ್ ಪುರುಷರು ಡೆನಿಮ್ ಜಾಕೆಟ್ ಧರಿಸಲು ಹಿಂದೇಟು ಹಾಕುತ್ತಿದ್ದರು. ಬರಬರುತ್ತಾ ತಮ್ಮ ರಿಲಾಕ್ಸಿಂಗ್ ಸಮಯದಲ್ಲಿ ಹಾಗೂ ಔಟಿಂಗ್‌ನಲ್ಲಿ ಇವನ್ನು ಧರಿಸಲು ಆರಂಭಿಸಿದರು. ಕೇವಲ ಕಾಲೇಜು ಯುವಕರಿಗೆ ಮಾತ್ರ ಎಂಬಂತಿದ್ದ, ಈ ಡೆನಿಮ್ ಜಾಕೆಟ್‌ಗಳು ಕಾಲ ಕ್ರಮೇಣ ಎಲ್ಲಾ ವರ್ಗದ ಪುರುಷರಿಗೂ ಇಷ್ಟವಾಗತೊಡಗಿದವು. ನಂತರ ಇವುಗಳ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ, ಬಗೆಬಗೆಯ ವಿನ್ಯಾಸದಲ್ಲಿ ಬಿಡುಗಡೆಗೊಂಡವು. ಇದೀಗ ವೈವಿಧ್ಯಮಯ ಕಲರ್‌ಗಳಲ್ಲೂ ಎಂಟ್ರಿ ನೀಡಲಾರಂಭಿಸಿದವು ಎನ್ನುತ್ತಾರೆ ಮೆನ್ಸ್ ಫ್ಯಾಷನ್ ಡಿಸೈನರ್ ರಾಹತ್. ಅವರ ಪ್ರಕಾರ, ಇತ್ತೀಚೆಗೆ ಈ ಜನರೇಷನ್ ಹುಡುಗರು ಮಾತ್ರವಲ್ಲ, ಎಲ್ಲಾ ವಯಸ್ಸಿನವರು ಹಾಗೂ ಕ್ಷೇತ್ರದವರು ತಮ್ಮ ಔಟಿಂಗ್‌ನಲ್ಲಿ ಅಥವಾ ಕ್ಯಾಶುವಲ್ ಲುಕ್‌ನಲ್ಲಿ ಕಲರ್ ಡೆನಿಮ್ ಜಾಕೆಟ್ ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಕಲರ್ ಡೆನಿಮ್ ಡಿಸೈನ್ಸ್
ಎಂದಿನಂತೆ ಎರಡು ಪಾಕೆಟ್‌ಗಳು ಬಹುತೇಕ ಎಲ್ಲಾ ಡೆನಿಮ್ ಜಾಕೆಟ್‌ಗಳಲ್ಲಿ ಇಂದಿಗೂ ಮುಂದುವರೆದಿವೆ. ಬಟನ್ ಡೌನ್ ವಿನ್ಯಾಸ ಜಾಕೆಟ್‌ಗಳಲ್ಲಿ ಹೊಸ ರೂಪದಲ್ಲಿ ಲಗ್ಗೆ ಇಟ್ಟಿವೆ. ಕ್ರಾಪ್ ಜಾಕೆಟ್ ಇತ್ತೀಚಿನ ಟ್ರೆಂಡಿಯಾಗಿರುವ ಲೇಯರ್ ಲುಕ್‌ಗಳಲ್ಲಿ ಸೇರಿದೆ. ಲಾಂಗ್ ಜಾಕೆಟ್ ಸೈಡಿಗೆ ಸರಿದಿದೆ.
ಇದನ್ನೂ ಓದಿ: Star Saree Fashion: ಸೀರೆಗೆ ಕ್ರೋಚೆಟ್ ಬ್ಲೌಸ್ ಧರಿಸಿ ಟ್ರೆಂಡ್ ಸೆಟ್ ಮಾಡಿದ ಸೋನಂ ಕಪೂರ್!
ಕಲರ್ ಡೆನಿಮ್ ಜಾಕೆಟ್ ಆಯ್ಕೆ & ಸ್ಟೈಲಿಂಗ್ ಹೇಗೆ?
- ಸ್ಕಿನ್ ಟೋನ್ಗೆ ಮ್ಯಾಚ್ ಆಗುವಂತಹ ಕಲರ್ ಡೆನಿಮ್ ಆಯ್ಕೆ ಮಾಡಿ.
- ಕಲರ್ ಜಾಕೆಟ್ಗೆ ಧರಿಸುವ ಟೀ ಶರ್ಟ್ ಅಥವಾ ಶರ್ಟ್ ಕಾಂಟ್ರಸ್ಟ್ ಆಗಿರಬೇಕು.
- ಎಲಿಗೆಂಟ್ ಲುಕ್ ಈ ಜಾಕೆಟ್ನಲ್ಲಿ ಸಾಧ್ಯವಿಲ್ಲ. ಫಂಕಿ ಲುಕ್ ಗ್ಯಾರಂಟಿ.
- ಔಟಿಂಗ್ ಹಾಗೂ ಪಾರ್ಟಿಗಳಿಗೆ ಈ ಲುಕ್ ಮ್ಯಾಚ್ ಆಗುತ್ತದೆ.
- ವೆಸ್ಟರ್ನ್ ಸ್ಟೈಲಿಂಗ್ ಉತ್ತಮ ಆಯ್ಕೆ ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)