Site icon Vistara News

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Fashion workshop

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಗೆ ಆಗಮಿಸಿದ್ದ (Fashion workshop) ಜಪಾನ್‌ನ ಖ್ಯಾತ ವಿನ್ಯಾಸಕ ಶಿಂಗೊ ಸಾಟೊ, ಭಾವಿ ಫ್ಯಾಷನ್‌ ಡಿಸೈನರ್‌ಗಳಿಗೆ ತ್ರಿ ಡಿ ಕಟ್ಟಿಂಗ್‌ ಫ್ಯಾಷನ್‌ ಕುರಿತಂತೆ ಮಾಸ್ಟರ್‌ ಕ್ಲಾಸ್‌ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಭಾರತದಲ್ಲಿ ಫ್ಯಾಷನ್‌ ಕ್ಷೇತ್ರದ ಹೊಸ ಎಜುಕೇಷನ್ ಪಾಲಿಸಿಗೆ ಸಂಬಂಧಿಸಿದಂತೆ, ಈ ಸಾಲಿನಲ್ಲಿ ಕೇಂದ್ರ ಸರಕಾರ ಜಾರಿ ತಂದಿರುವ ಹೊಸ ನಿಯಮಗಳಿಗೆ ಅನ್ವಯವಾಗುವಂತೆ ಸಹಕಾರಿಯಾಗುವ ಫ್ಯಾಷನ್‌ ಮಾಸ್ಟರ್‌ ಕ್ಲಾಸನ್ನು ಉದ್ಯಾನನಗರಿಯ ವಿದ್ಯಾ ಫ್ಯಾಷನ್‌ ಅಕಾಡೆಮಿಯು ಜಪಾನಿನ ಖ್ಯಾತ ತ್ರಿ ಡಿ ಕಟ್ಟಿಂಗ್‌ ಡಿಸೈನರ್‌ ಶಿಂಗೊಸಾಟೋ ಅವರ ಸಹಯೋಗದೊಂದಿಗೆ ನಡೆಸಿತು. 3 ದಿನಗಳ ಕಾಲ ನಡೆದ ಈ ಫ್ಯಾಷನ್‌ ಕಾರ್ಯಗಾರದಲ್ಲಿ ವಿದ್ಯಾ ಫ್ಯಾಷನ್‌ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ ವಿದ್ಯಾ ವಿವೇಕ್‌ ಭಾಗವಹಿಸಿದ್ದರು. ಅಲ್ಲದೇ, ಫ್ಯಾಷನ್‌ ಡಿಸೈನರ್‌ಗಳು ಹಾಗೂ ಆಸಕ್ತ ಮಹಿಳೆಯರು ಪಾಲ್ಗೊಂಡಿದ್ದರು.

ವಿದ್ಯಾ ವಿವೇಕ್‌ ಪ್ರಾಯೋಗಿಕ ಕಾರ್ಯಾಗಾರ

ಇಂದು ಕಂಪ್ಯೂಟರೈಸ್ಡ್ ಡಿಸೈನಿಂಗ್‌ ಕೋರ್ಸ್‌ಗಳು ಬಂದ ನಂತರ ವಿದ್ಯಾರ್ಥಿಗಳ ಕಲಿಯುವ ಹಾಗೂ ಯೋಚಿಸಿ ಡಿಸೈನ್‌ ಮಾಡುವ ಸ್ಕಿಲ್‌ ಕಡಿಮೆಯಾಗುತ್ತಿದೆ. ಡಿಸೈನಿಂಗ್‌ ಹಾಗೂ ಸ್ಕೆಚ್ಚಿಂಗ್‌ಗಷ್ಟೇ ಭಾವಿ ಡಿಸೈನರ್‌ಗಳು ಸೀಮಿತವಾಗುತ್ತಿದ್ದಾರೆ. ಇದನ್ನು ಮನಗೊಂಡ ಅಪರೆಲ್‌ ಕ್ಷೇತ್ರದ ಎಕ್ಸ್‌ಪರ್ಟ್‌ಗಳು ಪ್ರಾಯೋಗಿಕವಾಗಿ ತ್ರಿಡಿ ಕಟ್ಟಿಂಗ್‌ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಇತ್ತೀಚಿನ ಉತ್ತಮ ಬೆಳವಣಿಗೆ. ಪರಿಣಾಮ, ಫ್ಯಾಷನ್‌ ಕೋರ್ಸ್‌ಗಳಲ್ಲಿ ತ್ರಿ ಡಿ ಕಟ್ಟಿಂಗ್‌ ಕುರಿತ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಅಕಾಡೆಮಿಯ ಸಂಸ್ಥಾಪಕಿ ವಿದ್ಯಾ ವಿವೇಕ್‌.

ಯಾರಿದು ಶಿಂಗೊ ಸಾಟೊ

ಶಿಂಗೊ ಸಾಟೊ ತ್ರಿ ಡಿ ವಿನ್ಯಾಸದ ಸಂಶೋಧಕ ಹಾಗೂ ವಿನ್ಯಾಸಕರಾಗಿದ್ದು, ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ.

ಏನಿದು ತ್ರಿ ಡಿ ಕಟ್ಟಿಂಗ್‌ ಕಾರ್ಯಾಗಾರ

ಡಿಸೈನ್‌ ಮಾಡುವ ಬಟ್ಟೆಯನ್ನು ಹೆಚ್ಚು ಕಟ್ಟಿಂಗ್‌ ಮಾಡದೇ, ವಿನ್ಯಾಸ ಗೊಳಿಸುವ ಟೆಕ್ನಿಕ್‌ ಅನ್ನು ತ್ರಿ ಡಿ ಕಟ್ಟಿಂಗ್‌ ಎನ್ನಲಾಗುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಿಂಗೊ ಸಾಟೊ ಪ್ರಪಂಚದಲ್ಲೆ ಮೊದಲ ಬಾರಿ ಇದಕ್ಕಾಗಿಯೇ ಶಾಲೆಯನ್ನು ತೆರೆದಿದ್ದಾರೆ. ಫ್ಯಾಷನ್‌ ಹಬ್‌ ಮಿಲಾನ್‌ನಲ್ಲಿ ತರಗತಿಗಳನ್ನು ನಡೆಸುತ್ತಾರೆ. ಭಾರತೀಯರು ಅಲ್ಲಿಗೆ ಹೋಗಿ ಕಲಿಯಲಾಗದ ಕಾರಣ, ಸುಮಾರು 11 ವರ್ಷಗಳಿಂದ ಬೆಂಗಳೂರಿಗೆ ಬಂದು ವಿದ್ಯಾ ಅಕಾಡೆಮಿಯ ಸಹಯೋಗದೊಂದಿಗೆ ಹೇಳಿಕೊಡುತ್ತಿದ್ದಾರೆ.
ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!
(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version