ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮ್ಮ ಮನೆಯ ಮುದ್ದಿನ ಶ್ವಾನವನ್ನು ಫ್ಯಾಷನಬಲ್ ಆಗಿಸಬಲ್ಲ ಸಮ್ಮರ್ ಕ್ಯಾಪ್‌ಗಳು ಈಗಾಗಲೇ ಆನ್‌ಲೈನ್ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ನೋಡಲು ಕ್ಯೂಟ್ ಆಗಿ ಬಿಂಬಿಸಬಲ್ಲ ನಾನಾ ಡಿಸೈನ್‌ನವು ಡಾಗ್ಗಿ ಪ್ರಿಯರನ್ನು ಸೆಳೆದಿವೆ.
ಆನ್‌ಲೈನ್‌ನಲ್ಲಿ ವೈವಿಧ್ಯಮಯ ಹ್ಯಾಟ್ಸ್ & ಕ್ಯಾಪ್ಸ್
“ಮುದ್ದು ನಾಯಿಮರಿಗಳನ್ನು ಕ್ಯೂಟಾಗಿಸಬಲ್ಲ ನಾನಾ ಬಗೆಯ ಸಮ್ಮರ್ ಕ್ಯಾಪ್ ಹಾಗೂ ಹ್ಯಾಟ್ಸ್ ದೊರೆಯುತ್ತಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಆನ್‌ಲೈನ್ ಶಾಪ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ಸಿಗುತ್ತಿವೆ. ಆಯಾ ಬ್ರೀಡ್‌ಗೆ ತಕ್ಕಂತೆ ಹಾಕಬಹುದಾದ ಈ ಕ್ಯಾಪ್‌ಗಳು ಕೆಲವು ಹ್ಯಾಟ್ ರೂಪದಲ್ಲಿದ್ದರೇ, ಇನ್ನು ಕೆಲವು ಡಿಫರೆಂಟಾಗಿವೆ“ ಎನ್ನುತ್ತಾರೆ ಡಾಗ್ ಗ್ರೂಮರ್. ಅವರ ಪ್ರಕಾರ, ಆಯಾ ಜಾತಿಯ ನಾಯಿ ಮರಿಗಳಿಗೆ ಹೊಂದುವಂತೆ ಈ ಕ್ಯಾಪ್‌ಗಳನ್ನು ಖರೀದಿಸುವುದು ಉತ್ತಮ ಎನ್ನುತ್ತಾರೆ. ಶ್ವಾನಗಳ ತಲೆಭಾಗಕ್ಕೆ ನೀಟಾಗಿ ಕೂರುವಂತಹ ಕ್ಯಾಪ್ ಅಥವಾ ಹ್ಯಾಟ್‌ಗಳನ್ನು ಆಯ್ಕೆ ಮಾಡಬೇಕು. ಆಗಷ್ಟೇ ಇವು ನೋಡಲು ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಡಾಗ್ಗೀಸ್ ಸಮ್ಮರ್ ಕ್ಯಾಪ್‌ಗಳು
ಪುಟ್ಟ ಪಮೇರಿಯನ್ ಡಾಗಿಯಿಂದ ಹಿಡಿದು ದೊಡ್ಡ ಹಸ್ಕಿಯಂತಹ ಶ್ವಾನಕ್ಕೂ ಹೊಂದುವಂತಹ ನಾನಾ ವಿನ್ಯಾಸದ ಕ್ಯಾಪ್ ಹಾಗೂ ಹ್ಯಾಟ್‌ಗಳು ಬಂದಿವೆ. ಡಾಗ್ ಬೇಸ್‌ಬಾಲ್ ಕ್ಯಾಪ್, ಕೂಲಿಂಗ್ ಡಾಗ್ ಹ್ಯಾಟ್, ಡಾಗ್ ಸನ್ ಹ್ಯಾಟ್, ಅಡ್ಜಸ್ಟಬಲ್ ಲೇಸ್ ಹ್ಯಾಟ್, ಪಪ್ಪಿ ಹಾಲಿಟೇ ಹ್ಯಾಟ್ಸ್, ಡಾಗ್ ಟ್ರಕ್ಕರ್ ಹ್ಯಾಟ್, ಸ್ಟ್ರಾ ಹ್ಯಾಟ್, ಟ್ರಕ್ಕರ್ ಹ್ಯಾಟ್, ಕ್ಯಾಮೋ ಬಕೆಟ್ ಹ್ಯಾಟ್ ಸೇರಿದಂತೆ ನಾನಾ ವಿನ್ಯಾಸದ ಕ್ಯಾಪ್ ಹಾಗೂ ಹ್ಯಾಟ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ. ಶ್ವಾನದ ಮಾಲೀಕರು ಕೂಡ ತಮ್ಮ ಮುದ್ದು ನಾಯಿಮರಿಯ ಮುಖ ಹಾಗೂ ತಲೆಗೆ ಹೊಂದುವಂತಹ ವಿನ್ಯಾಸದವನ್ನು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಾಗ್ ಗ್ರೂಮರ್.
ವಾಕಿಂಗ್ ಸಮಯಕ್ಕೆ ಸೂಕ್ತ
ವಾಕಿಂಗ್ ಕರೆದುಕೊಂಡು ಹೋಗುವಾಗ ಈ ಕ್ಯಾಪ್ ಅಥವಾ ಹ್ಯಾಟ್‌ಗಳನ್ನು ಹಾಕಿಕೊಂಡು ಕರೆದುಕೊಂಡು ಹೋಗಬಹುದು. ಇನ್ನು ಹಾಲಿಡೇ ಹಾಗೂ ಔಟಿಂಗ್‌ಗೆ ಕರೆದುಕೊಂಡು ಹೋದಾಗಲೂ ಕೂಡ ಈ ಹ್ಯಾಟ್‌ಗಳನ್ನು ಶ್ವಾನಕ್ಕೆ ಹಾಕಿ ಕರೆದುಕೊಂಡು ಹೋಗಬಹುದು ಎನ್ನುತ್ತಾರೆ ಶ್ವಾನವೊಂದರ ಮಾಲೀಕರು. ಅವರು ಈಗಾಗಲೇ ಸಾಕಷ್ಟು ಬಗೆಯ ಹ್ಯಾಟ್‌ಗಳನ್ನು ಖರೀದಿಸಿ, ಬಳಸುತ್ತಿದ್ದಾರಂತೆ.
ಶ್ವಾನದ ಕ್ಯಾಪ್ ಮತ್ತು ಹ್ಯಾಟ್ ಆಯ್ಕೆ ಹೀಗಿರಲಿ
- ಶ್ವಾನದ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡಿ.
- ಕ್ಯೂಟಾಗಿರುವ ನಾಯಿಮರಿಗಳಿಗೆ ಕಲರ್ಫುಲ್ ಹ್ಯಾಟ್ಸ್ ಕೊಳ್ಳಿ.
- ದೊಡ್ಡ ಸೈಜ್ನ ಶ್ವಾನಕ್ಕೆ ಕ್ಯಾಮೋ ಡಿಸೈನ್‌ನವು ಮ್ಯಾಚ್ ಆಗುತ್ತವೆ.
- ಬಿಸಿಲ ಝಳಕ್ಕೆ ಕಣ್ಣಿನ ಸಂರಕ್ಷಣೆ ಮಾಡುವಂತವನ್ನು ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್ ಶಾಪಿಂಗ್