-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಾದರ್ಸ್ ಡೇ ಫ್ಯಾಷನ್‌ಗೆ (Father’s day Fashion) ಸಿದ್ಧರಾಗಿದ್ದೀರಾ? ಜೂನ್ 16 ರಂದು ಭಾನುವಾರ ಅಪ್ಪಂದಿರ ದಿನ. ಆ ದಿನದಂದು (father’s day 2024) ತಮ್ಮ ಮಕ್ಕಳೊಂದಿಗೆ ಸಂಭ್ರಮಿಸುವ ಅಪ್ಪಂದಿರಿಗೆ ಅಥವಾ ತಂದೆಯೊಂದಿಗೆ ಸೆಲೆಬ್ರೆಟ್ ಮಾಡುವ ಮಕ್ಕಳಿಗೆ ಪೂರಕವಾಗುವಂತೆ ಫಾದರ್ಸ್ ಡೇ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಕಾಲಿಟ್ಟಿವೆ. ಹೌದು. ಫಾದರ್ಸ್ ಡೇ ಯಂದು ಕೂಡ ಅಪ್ಪ-ಮಕ್ಕಳು ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಇದಕ್ಕಾಗಿ ಏನೆಲ್ಲಾ ಪಾಲಿಸಬೇಕು? ಸ್ಟೈಲಿಂಗ್ ಟಿಪ್ಸ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ತಕ್ಕಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಕ್ಯಾಶುವಲ್ಸ್ ಔಟ್‌ಫಿಟ್ಸ್
ಪ್ರತಿದಿನ ಸೀರಿಯಸ್ ಆಗಿ ಫಾರ್ಮಲ್ ಧರಿಸುವ ಅಪ್ಪ, ನೀವಾದಲ್ಲಿ ಆದಷ್ಟೂ ಈ ವಿಶೇಷ ದಿನದಂದು ಕೂಲಾಗಿ ಕಾಣಿಸುವ ಕ್ಯಾಶುವಲ್ ಔಟ್‌ಫಿಟ್ಸ್‌ಗೆ ಸೈ ಹೇಳಿ. ಇನ್ನು ಮಕ್ಕಳಿಗೆ ಇಷ್ಟವಾಗುವಂತಹ ಕಲರ್ಸ್ ಹಾಗೂ ಔಟ್‌ಫಿಟ್‌ಗಳನ್ನು ಧರಿಸಿ. ಇನ್ನು ದೊಡ್ಡ ಮಕ್ಕಳೊಂದಿಗೆ ಸೆಲೆಬ್ರೆಟ್ ಮಾಡುವುದಾದಲ್ಲಿ ಆ ಮಕ್ಕಳ ಚಾಯ್ಸ್‌ಗೆ ತಕ್ಕಂತೆ ಧರಿಸಿ, ಮಕ್ಕಳ ಜೊತೆ ಮಕ್ಕಳಾಗಿ ಆಚರಿಸಿ.
ಅಪ್ಪನೊಂದಿಗೆ ಟ್ವಿನ್ನಿಂಗ್
ಮಕ್ಕಳು ಅಪ್ಪನೊಂದಿಗೆ ಟ್ವಿನ್ನಿಂಗ್ ಮಾಡಬಹುದು. ಅದು ಹೇಗೆ? ಅಂತಿರಾ! ತೀರಾ ಸಿಂಪಲ್. ಶಾಪಿಂಗ್ ಮಾಡಿ ಖರೀದಿಸುವುದಾದಲ್ಲಿ ಆದಷ್ಟೂ ಒಂದೇ ಬಗೆಯ ಔಟ್‌ಫಿಟ್ಸ್ ಖರೀದಿಸಿ, ಧರಿಸಿ. ಇಲ್ಲವಾದಲ್ಲಿ ವಾರ್ಡ್ರೋಬ್‌ನಲ್ಲಿರುವ ಸೇಮ್ ಟು ಸೇಮ್ ಔಟ್‌ಫಿಟ್‌ಗಳನ್ನು ಧರಿಸಿ. ಧರಿಸುವ ಎಲ್ಲಾ ಉಡುಗೆ ಹಾಗೂ ಆಕ್ಸೆಸರೀಸ್ ಒಂದೇ ಬಗೆಯದ್ದಾಗಿರಬೇಕು.
ಹೆಣ್ಣುಮಕ್ಕಳ ತಂದೆಯಾದಲ್ಲಿ…
ಗಂಡು ಮಕ್ಕಳೊಂದಿಗೆ ಟ್ವಿನ್ನಿಂಗ್ ಮಾಡುವುದು ಸುಲಭ. ಹೆಣ್ಣುಮಕ್ಕಳೊಂದಿಗೆ ಟ್ವಿನ್ನಿಂಗ್ ಮಾಡುವುದು ತುಸು ಅಸಾಧ್ಯ ಎಂದು ಯೋಚಿಸುತ್ತಾರೆ. ಆದರೆ, ಇದು ಕೂಡ ಸುಲಭ ಎಂದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಇದಕ್ಕೆ ಮಾಡಬೇಕಾಗಿದ್ದಿಷ್ಟೇ! ಮಕ್ಕಳ ಔಟ್‌ಫಿಟ್ ಶೇಡ್ಸ್‌ನ ಕಾಪಿ ಮಾಡಿದರಾಯಿತು ಅಷ್ಟೇ! ಟ್ವಿನ್ನಿಂಗ್‌ಗೆ ಡ್ರೆಸ್‌ಗಳು ಥೇಟ್ ಒಂದೇ ಬಗೆಯದ್ದಾಗಿರಬೇಕೆಂಬ ರೂಲ್ಸ್ ಎಲ್ಲೂ ಇಲ್ಲ! ಒಟ್ಟಿನಲ್ಲಿ ಧರಿಸುವ ಉಡುಗೆ ಒಂದೇ ಕಲರ್ ಇದ್ದರೂ ಸಾಕು! ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಮನೋಲ್ಲಾಸ ನೀಡುವಂತಹ ಉಡುಗೆಗಳ ಆಯ್ಕೆ
ಈ ದಿನದಂದು ಮನಸ್ಸಿಗೆ ಖುಷಿ ನೀಡುವಂತಹ ಬಣ್ಣಗಳ ಆಯ್ಕೆಯ ಔಟ್‌ಫಿಟ್ಟನ್ನು ಅಪ್ಪ-ಮಕ್ಕಳು ಧರಿಸಿದಲ್ಲಿ, ಸಂಭ್ರಮ ಹೆಚ್ಚುವುದು. ಟ್ವಿನ್ನಿಂಗ್ ಮಾಡಲು ಇಷ್ಟವಿಲ್ಲದಿದ್ದಲ್ಲಿ, ಒಬ್ಬರಿಗೊಬ್ಬರು ಇಷ್ಟಪಡುವಂತಹ ಔಟ್‌ಫಿಟ್ಸ್ ಧರಿಸಿ, ಸಂಭ್ರಮಿಸಿ ಆಚರಿಸಿದರಾಯಿತು.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Celebrity Ethnic Fashion: ನಟ ಧನುಷ್ ಗೌಡರ ಗ್ರ್ಯಾಂಡ್ ಎಥ್ನಿಕ್ ಜಾಕೆಟ್ ವಿಶೇಷತೆ ಏನು?