ಶೀಲಾ ಸಿ, ಶೆಟ್ಟಿ, ಬೆಂಗಳೂರು
ಬಣ್ಣಬಣ್ಣದ ಫ್ಲವರ್ ಕ್ರೌನ್‌ಗೆ ಯುವತಿಯರು ಫಿದಾ ಆಗತೊಡಗಿದ್ದಾರೆ. ಅದು ಯಾಕಾಗಿ ಎಂದುಕೊಂಡಿದ್ದೀರಾ! ಬೇಸಿಗೆಯ ಫ್ಯಾಷನ್ ಫೋಟೋಶೂಟ್ ಇದೀಗ ಕಾಮನ್ ಆಗಿದೆ. ಇದಕ್ಕೆ ಪೂರಕ ಎಂಬಂತೆ, ಸಮ್ಮರ್ ಔಟ್‌ಫಿಟ್‌ಗಳು ಟ್ರೆಂಡಿಯಾಗಿದ್ದು, ಇವುಗಳನ್ನು ಹೊರತು ಪಡಿಸಿದರೇ, ಆಕ್ಸೆಸರೀಸ್ ವಿಭಾಗದಲ್ಲಿ ಮನಮೋಹಕ ಫ್ಲವರ್ ಕ್ರೌನ್‌ಗಳು (Flower Crown Trend) ಕಾಣಿಸಿಕೊಳ್ಳತೊಡಗಿವೆ. ಮಾಡೆಲ್‌ಗಳು ಮಾತ್ರವಲ್ಲ, ಸಾಮಾನ್ಯ ಫ್ಯಾಷನ್ ಪ್ರಿಯ ಹುಡುಗಿಯರು ಇವುಗಳ ಪ್ರಯೋಗ ಮಾಡಲಾರಂಭಿಸಿದ್ದು, ಪರಿಣಾಮ, ಫ್ಯಾಷನ್ ಫೋಟೋಶೂಟ್‌ಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಆಕರ್ಷಕ ಕಲರ್‌ಫುಲ್ ಹೂಗಳನ್ನು ಹೆಡ್ ಬ್ಯಾಂಡ್‌ನಂತೆ ಪೋಣಿಸಿ ನೆತ್ತಿ ಮೇಲೆ ಧರಿಸಿರುವ ಇಲ್ಲವೇ ಆರ್ಟಿಫಿಶಿಯಲ್ ಹೂವುಗಳಿಂದ ಸಿದ್ಧಪಡಿಸಿದ ಫ್ಲೋರಲ್ ಹೆಡ್‌ಬ್ಯಾಂಡ್ ಶೈಲಿಯವು, ಮಿನಿ ಫ್ಲವರ್‌ಗಳಿರುವ ಹೆಡ್‌ಬ್ಯಾಂಡ್‌ಗಳು ಟ್ರೆಂಡಿಯಾಗಿವೆ. ಇವನ್ನು ಚಿತ್ರ-ವಿಚಿತ್ರವಾಗಿ ಧರಿಸಿರುವ ಮಾಡೆಲ್‌ಗಳ ಫೋಟೋಗಳು ಬ್ಯೂಟಿ ಬ್ಲಾಗರ್ಸ್ ಹಾಗೂ ಇನ್‌ಪ್ಲೂಯೆನ್ಸರ್ ಖಾತೆಗಳಲ್ಲಿ ಹರಿದಾಡುತ್ತಿವೆ.
ಏನಿದು ಫ್ಲವರ್ ಕ್ರೌನ್ ಕಾನ್ಸೆಪ್ಟ್?
ಫೇಸ್ ಆರ್ಟ್‌ನೊಂದಿಗೆ ಹೇರ್‌ಸ್ಟೈಲ್ ವಿನ್ಯಾಸಕ್ಕೂ ಅಂತರಾಷ್ಟ್ರೀಯ ರ್ಯಾಂಪ್ ಹಾಗೂ ಫೋಟೋಶೂಟ್‌ಗಳಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಕೆಲವು ಕಾನ್ಸೆಪ್ಟ್‌ನಲ್ಲಿ ನೋಡಲು ಫೇರಿಟೇಲ್ ಕಥೆಯ ಪಾತ್ರದಂತೆ ಮಾಡೆಲ್‌ಗಳನ್ನು ಬಿಂಬಿಸಲಾಗುತ್ತದೆ. ಉಡುಪಿನ ವರ್ಣದಿಂದಿಡಿದು ಒಂದೊಂದು ಆಕ್ಸೆಸರೀಸನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೊದಲೆಲ್ಲಾ ಕ್ರಿಸ್ಟಲ್ ಹೆಡ್‌ಬ್ಯಾಂಡ್‌ಗಳನ್ನು ಹೆಚ್ಚು ಬಳಸಲಾಗುತ್ತಿತ್ತು. ಇದೀಗ ಫ್ಲೋರಲ್ ಹೆಡ್ ಬ್ಯಾಂಡ್‌ಗಳು ಅದರಲ್ಲೂ ದೊಡ್ಡ ಹೂವುಗಳನ್ನು ಹೊಂದಿರುವಂತಹ ಫ್ಲವರ್ ಕ್ರೌನ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ. ಇವು ಕ್ರಿಯೆಟಿವಿಟಿಯ ಸಂಕೇತ ಎನ್ನುತ್ತಾರೆ ಅಂತರಾಷ್ಟ್ರೀಯ ಮಟ್ಟದ ಶೋಗಳಲ್ಲಿ ವಾಕ್ ಮಾಡಿರುವ ಮಾಡೆಲ್ ಜೆನಿಫರ್. ಅಲ್ಲಿನ ರ್ಯಾಂಪ್‌ಗಳಲ್ಲಿ ಹಾಗೂ ಫೋಟೋ ಶೂಗಳಲ್ಲಿ ಇವನ್ನು ಹೈಲೈಟ್ ಮಾಡಲಾಗುತ್ತದೆ. ಹಾಗಾಗಿ ಆಗಾಗ್ಗೆ ಈ ಟ್ರೆಂಡ್ ಹೊಸ ರೂಪದೊಂದಿಗೆ ಮರುಕಳಿಸುತ್ತಲೇ ಇರುತ್ತದೆ ಎನ್ನುತ್ತಾರೆ.
ಫ್ಲವರ್ ಕ್ರೌನ್ ಪ್ರಿಯರಿಗಾಗಿ
- ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮುನ್ನ ಫ್ಲವರ್ ಕ್ರೌನ್ ಸರಿಯಾಗಿ ಫಿಟ್ ಆಗಿ ಕಾಣುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
- ಟ್ರೆಂಡ್ನಲ್ಲಿರುವ ಹೂಗಳ ಕ್ರೌನ್ ಆಯ್ಕೆ ಮಾಡಿ.
- ಮೇಕಪ್ ಇದಕ್ಕೆ ಸೂಟ್ ಆಗುವಂತಿರಬೇಕು.
- ಇತರೇ ಆಕ್ಸೆಸರೀಸ್ ಕೂಡ ಮ್ಯಾಚ್ ಆಗಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Saree Fashion: ಟ್ರೆಂಡಿ ಸನ್ ಶೇಡ್ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ ಸಮ್ಮರ್ ಲುಕ್