ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೂಮಳೆಯಂತೆ ಬಿಂಬಿಸುವ ಫ್ಲವರ್ ಹೋಳಿ (Eco friendly Holi) ಸೆಲೆಬ್ರೆಷನ್‌ಗೆ ಪರಿಸರ ಪ್ರೇಮಿಗಳು ರೆಡಿಯಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಹೋಟೆಲ್-ರೆಸಾರ್ಟ್‌ಗಳು ಹಾಗೂ ಕ್ಲಬ್‌ಗಳು ಫ್ಲವರ್ ಹೋಳಿ ನಡೆಸಲು ಸಜ್ಜಾಗಿವೆ.
ಬಣ್ಣದ ನೀರಿನ ಹೋಳಿಗೆ ಫುಲ್‌ಸ್ಟಾಪ್ ಹಾಕಿ
ಇತ್ತೀಚೆಗೆ ಎಲ್ಲೆಡೆ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರುವಾಗ, ಇನ್ನು ಹೋಳಿ ಸೆಲೆಬ್ರೇಷನ್‌ಗೆ ಟ್ಯಾಂಕ್‌ಗಟ್ಟಲೆ ನೀರು ಬೇಕಾಗುತ್ತದೆ. ಇನ್ನು, ಈ ಸೆಲೆಬ್ರೇಷನ್‌ನಲ್ಲಿ ಆಟವಾಡಿದ ನಂತರ, ಮಿಂದ ನಂತರ ಅದನ್ನು ತೊಳೆಯಲು, ಸ್ವಚ್ಛವಾಗಿಸಲು ಲೆಕ್ಕವಿಲ್ಲದಷ್ಟು ಲೀಟರ್‌ಗಳ ನೀರು ಬೇಕಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡ ಜಿಲ್ಲಾಡಳಿತ ಇದಕ್ಕೂ ಒಂದಿಷ್ಟು ರೂಲ್ಸ್ ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಬಹುತೇಕ ಹೋಳಿ ಆಯೋಜಕರು, ಈ ಬಾರಿ ಇಕೋ ಫ್ರೆಂಡ್ಲಿ ಹೋಳಿ ಸೆಲೆಬ್ರೇಷನ್‌ಗೆ ಮುಂದಾಗಿದ್ದಾರೆ. ಅವುಗಳಲ್ಲಿ ಅರ್ಗಾನಿಕ್ ಡ್ರೈ ಪೌಡರ್ ಹೋಳಿ ಮತ್ತು ಫ್ಲವರ್ ಹೋಳಿ ಸೆಲೆಬ್ರೇಷನ್ ಮಾಡಲು ನಿರ್ಧರಿಸಿದ್ದಾರೆ.
ಫ್ಲವರ್ ಹೋಳಿಗೆ ಆದ್ಯತೆ
ಇನ್ನು ಉದ್ಯಾನನಗರಿಯ ಲೀಲಾ ಪ್ಯಾಲೇಸ್ ಸೇರಿದಂತೆ ಸಾಕಷ್ಟು ಪಂಚತಾರಾ ಹೋಟೆಲ್‌ಗಳು ಹಾಗೂ ಕ್ಲಬ್‌ಗಳು ಹೂಗಳ ಹೋಳಿಗೆ ಸಜ್ಜಾಗಿವೆ. ಇದರೊಂದಿಗೆ ಅನೇಕ ಆಟೋಟಗಳನ್ನು ಮಿಕ್ಸ್ ಮಾಡಿವೆ. ಟ್ರೆಡಿಷನಲ್ ಗೇಮ್ಸ್, ರಂಗೋಲಿ ಹಾಗೂ ಇನ್ನಿತರೇ ಮನಸ್ಸಿಗೆ ಉಲ್ಲಾಸ ನೀಡುವ ಆಟಗಳನ್ನು ಈ ಸೆಲೆಬ್ರೇಷನ್‌ನಲ್ಲಿ ಸೇರಿಸಿವೆ. ಎಲ್ಲಿಯೂ ನೀರು ಪೋಲಾಗದಂತೆ, ನೀರು ಬಳಸದೆಯೂ ಹೋಳಿ ಸೆಲೆಬ್ರೇಟ್ ಮಾಡಲು ಮುಂದಾಗಿವೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಜಾಹೀರಾತುಗಳನ್ನು ಸಾಮಾನ್ಯವಾಗತೊಡಗಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಹೋಳಿ ಪ್ರೇಮಿಗಳಾದ ಜಾನು ಹಾಗೂ ಸುಷ್ಮಾ.
ಏನಿದು ಫ್ಲವರ್ ಹೋಳಿ?
ಬಣ್ಣಗಳ ಬದಲು ಹೂವುಗಳ ದಳಗಳನ್ನು ಬಳಸಿ ಆಟವಾಡುವುದನ್ನು ಫ್ಲವರ್ ಹೋಳಿ ಎನ್ನಲಾಗುತ್ತದೆ. ಇವುಗಳಲ್ಲಿ ಬಿಳಿ, ಕೆಂಪು, ಹಳದಿ ಗುಲಾಬಿ ದಳಗಳು, ಸೇವಂತಿ, ನಾನಾ ಬಗೆಯ ಮಲ್ಲಿಗೆ, ಕನಾಕಂಬರ ಹೂವಿನ ದಳಗಳನ್ನು ಸೇರಿದಂತೆ ನಾನಾ ಬಗೆಯ ಸುವಾಸನೆಯುಳ್ಳ ಹೂವುಗಳನ್ನು ಸೇರಸಿಲಾಗಿರುತ್ತದೆ. ಹೋಳಿಯ ಬಣ್ಣ ಎಸೆದಂತೆ ಇವನ್ನು ಎತ್ತಿ ಎಸೆದು ಆಟವಾಡಬಹುದು. ಕೆಮಿಕಲ್ ರಹಿತವಾಗಿರುವುದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಎನ್ನುತ್ತಾರೆ ಆಯೋಜಕರು.
ನೀವೂ ಹೀಗೆ ಫ್ಲವರ್ ಹೋಳಿ ಸೆಲೆಬ್ರೇಟ್ ಮಾಡಬಹುದು
- · ಹೋಳಿಯಾಡಲು ನಿಮ್ಮ ಆಯ್ಕೆಯ ಹೂವುಗಳನ್ನು ಬಳಸಿಕೊಳ್ಳಿ.
- · ಕಡಿಮೆ ದರದಲ್ಲಿ ದೊರಕುವ ಹೂಗಳನ್ನು ಬಳಕೆ ಮಾಡಿ.
- · ಕಾರ್ಪೆಟ್ ಹಾಸುಗಳನ್ನು ಬಳಸಿದಲ್ಲಿ ಇವನ್ನು ಮರು ಬಳಕೆ ಕೂಡ ಮಾಡಬಹುದು.
- · ಒದ್ದೆಯಾಗಿರುವ ಹೂವುಗಳಿಗಿಂತ ಬಿಡಿಬಿಡಿಯಾಗಿರುವ ಹೂವುಗಳನ್ನು ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Walk: ಮಿಸ್ಟರ್ & ಮಿಸ್ ಐಕಾನ್ ಇಂಡಿಯಾ ಸೀಸನ್ 4 ಆಡಿಷನ್‌ನಲ್ಲಿ ಮಿಂಚಿನ ನಡಿಗೆ!