Eco Friendly Holi: ಇಕೋ ಫ್ರೆಂಡ್ಲಿ ಸೆಲೆಬ್ರೇಷನ್‌ಗೆ ಸಾಥ್‌ ನೀಡುವ ಹೂ ಸುರಿಮಳೆಯ ಫ್ಲವರ್‌ ಹೋಳಿ - Vistara News

ಫ್ಯಾಷನ್

Eco Friendly Holi: ಇಕೋ ಫ್ರೆಂಡ್ಲಿ ಸೆಲೆಬ್ರೇಷನ್‌ಗೆ ಸಾಥ್‌ ನೀಡುವ ಹೂ ಸುರಿಮಳೆಯ ಫ್ಲವರ್‌ ಹೋಳಿ

ಎಲ್ಲೆಡೆ ನೀರಿಗೆ ಹಾಹಾಕಾರ (Eco friendly Holi) ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಇಕೋ ಫ್ರೆಂಡ್ಲಿ ಹೋಳಿಗೆ ಆದ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ, ಕೆಲವು ಹೋಟೆಲ್‌-ರೆಸಾರ್ಟ್‌ಗಳು ಹಾಗೂ ಕ್ಲಬ್‌ಗಳು ಫ್ಲವರ್‌ ಹೋಳಿ ನಡೆಸಲು ಸಜ್ಜಾಗಿವೆ. ಏನಿದು ಫ್ಲವರ್‌ ಹೋಳಿ ಸೆಲೆಬ್ರೇಷನ್‌? ನೀವೂ ಹೇಗೆ ಸೆಲೆಬ್ರೆಟ್‌ ಮಾಡಬಹುದು ಎಂಬುದರ ಬಗ್ಗೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Eco Friendly Holi
ಚಿತ್ರಕೃಪೆ: ಪಿಕ್ಸೆಲ್‌ ಮತ್ತು ಇನ್‌ಸ್ಟಾಗ್ರಾಮ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೂಮಳೆಯಂತೆ ಬಿಂಬಿಸುವ ಫ್ಲವರ್‌ ಹೋಳಿ (Eco friendly Holi) ಸೆಲೆಬ್ರೆಷನ್‌ಗೆ ಪರಿಸರ ಪ್ರೇಮಿಗಳು ರೆಡಿಯಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಹೋಟೆಲ್‌-ರೆಸಾರ್ಟ್‌ಗಳು ಹಾಗೂ ಕ್ಲಬ್‌ಗಳು ಫ್ಲವರ್‌ ಹೋಳಿ ನಡೆಸಲು ಸಜ್ಜಾಗಿವೆ.

Eco Friendly Holi

ಬಣ್ಣದ ನೀರಿನ ಹೋಳಿಗೆ ಫುಲ್‌ಸ್ಟಾಪ್‌ ಹಾಕಿ

ಇತ್ತೀಚೆಗೆ ಎಲ್ಲೆಡೆ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರುವಾಗ, ಇನ್ನು ಹೋಳಿ ಸೆಲೆಬ್ರೇ‍ಷನ್‌ಗೆ ಟ್ಯಾಂಕ್‌ಗಟ್ಟಲೆ ನೀರು ಬೇಕಾಗುತ್ತದೆ. ಇನ್ನು, ಈ ಸೆಲೆಬ್ರೇಷನ್‌ನಲ್ಲಿ ಆಟವಾಡಿದ ನಂತರ, ಮಿಂದ ನಂತರ ಅದನ್ನು ತೊಳೆಯಲು, ಸ್ವಚ್ಛವಾಗಿಸಲು ಲೆಕ್ಕವಿಲ್ಲದಷ್ಟು ಲೀಟರ್‌ಗಳ ನೀರು ಬೇಕಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡ ಜಿಲ್ಲಾಡಳಿತ ಇದಕ್ಕೂ ಒಂದಿಷ್ಟು ರೂಲ್ಸ್ ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಬಹುತೇಕ ಹೋಳಿ ಆಯೋಜಕರು, ಈ ಬಾರಿ ಇಕೋ ಫ್ರೆಂಡ್ಲಿ ಹೋಳಿ ಸೆಲೆಬ್ರೇಷನ್‌ಗೆ ಮುಂದಾಗಿದ್ದಾರೆ. ಅವುಗಳಲ್ಲಿ ಅರ್ಗಾನಿಕ್‌ ಡ್ರೈ ಪೌಡರ್‌ ಹೋಳಿ ಮತ್ತು ಫ್ಲವರ್‌ ಹೋಳಿ ಸೆಲೆಬ್ರೇಷನ್‌ ಮಾಡಲು ನಿರ್ಧರಿಸಿದ್ದಾರೆ.

Eco Friendly Holi

ಫ್ಲವರ್‌ ಹೋಳಿಗೆ ಆದ್ಯತೆ

ಇನ್ನು ಉದ್ಯಾನನಗರಿಯ ಲೀಲಾ ಪ್ಯಾಲೇಸ್‌ ಸೇರಿದಂತೆ ಸಾಕಷ್ಟು ಪಂಚತಾರಾ ಹೋಟೆಲ್‌ಗಳು ಹಾಗೂ ಕ್ಲಬ್‌ಗಳು ಹೂಗಳ ಹೋಳಿಗೆ ಸಜ್ಜಾಗಿವೆ. ಇದರೊಂದಿಗೆ ಅನೇಕ ಆಟೋಟಗಳನ್ನು ಮಿಕ್ಸ್ ಮಾಡಿವೆ. ಟ್ರೆಡಿಷನಲ್‌ ಗೇಮ್ಸ್, ರಂಗೋಲಿ ಹಾಗೂ ಇನ್ನಿತರೇ ಮನಸ್ಸಿಗೆ ಉಲ್ಲಾಸ ನೀಡುವ ಆಟಗಳನ್ನು ಈ ಸೆಲೆಬ್ರೇಷನ್‌ನಲ್ಲಿ ಸೇರಿಸಿವೆ. ಎಲ್ಲಿಯೂ ನೀರು ಪೋಲಾಗದಂತೆ, ನೀರು ಬಳಸದೆಯೂ ಹೋಳಿ ಸೆಲೆಬ್ರೇಟ್‌ ಮಾಡಲು ಮುಂದಾಗಿವೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತ ಜಾಹೀರಾತುಗಳನ್ನು ಸಾಮಾನ್ಯವಾಗತೊಡಗಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಹೋಳಿ ಪ್ರೇಮಿಗಳಾದ ಜಾನು ಹಾಗೂ ಸುಷ್ಮಾ.

ಏನಿದು ಫ್ಲವರ್‌ ಹೋಳಿ?

ಬಣ್ಣಗಳ ಬದಲು ಹೂವುಗಳ ದಳಗಳನ್ನು ಬಳಸಿ ಆಟವಾಡುವುದನ್ನು ಫ್ಲವರ್‌ ಹೋಳಿ ಎನ್ನಲಾಗುತ್ತದೆ. ಇವುಗಳಲ್ಲಿ ಬಿಳಿ, ಕೆಂಪು, ಹಳದಿ ಗುಲಾಬಿ ದಳಗಳು, ಸೇವಂತಿ, ನಾನಾ ಬಗೆಯ ಮಲ್ಲಿಗೆ, ಕನಾಕಂಬರ ಹೂವಿನ ದಳಗಳನ್ನು ಸೇರಿದಂತೆ ನಾನಾ ಬಗೆಯ ಸುವಾಸನೆಯುಳ್ಳ ಹೂವುಗಳನ್ನು ಸೇರಸಿಲಾಗಿರುತ್ತದೆ. ಹೋಳಿಯ ಬಣ್ಣ ಎಸೆದಂತೆ ಇವನ್ನು ಎತ್ತಿ ಎಸೆದು ಆಟವಾಡಬಹುದು. ಕೆಮಿಕಲ್‌ ರಹಿತವಾಗಿರುವುದರಿಂದ ಯಾವುದೇ ಸೈಡ್‌ ಎಫೆಕ್ಟ್ ಆಗುವುದಿಲ್ಲ ಎನ್ನುತ್ತಾರೆ ಆಯೋಜಕರು.

Eco Friendly Holi

ನೀವೂ ಹೀಗೆ ಫ್ಲವರ್‌ ಹೋಳಿ ಸೆಲೆಬ್ರೇಟ್‌ ಮಾಡಬಹುದು

  • · ಹೋಳಿಯಾಡಲು ನಿಮ್ಮ ಆಯ್ಕೆಯ ಹೂವುಗಳನ್ನು ಬಳಸಿಕೊಳ್ಳಿ.
  • · ಕಡಿಮೆ ದರದಲ್ಲಿ ದೊರಕುವ ಹೂಗಳನ್ನು ಬಳಕೆ ಮಾಡಿ.
  • · ಕಾರ್ಪೆಟ್ ಹಾಸುಗಳನ್ನು ಬಳಸಿದಲ್ಲಿ ಇವನ್ನು ಮರು ಬಳಕೆ ಕೂಡ ಮಾಡಬಹುದು.
  • · ಒದ್ದೆಯಾಗಿರುವ ಹೂವುಗಳಿಗಿಂತ ಬಿಡಿಬಿಡಿಯಾಗಿರುವ ಹೂವುಗಳನ್ನು ಆಯ್ಕೆ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Walk: ಮಿಸ್ಟರ್ & ಮಿಸ್‌ ಐಕಾನ್‌ ಇಂಡಿಯಾ ಸೀಸನ್‌ 4 ಆಡಿಷನ್‌ನಲ್ಲಿ ಮಿಂಚಿನ ನಡಿಗೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Reliance Retail: ರಿಲಯನ್ಸ್ ರೀಟೇಲ್‌ಗೆ ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್‌ ಆದ “ಅಕೈಂಡ್” (Akind) ಬಿಡುಗಡೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್ ಅವರು ಅಕೈಂಡ್ ಅನ್ನು ಅನಾವರಣ ಮಾಡಿದರು.

VISTARANEWS.COM


on

Reliance Retail Tira unveils skin care brand Akind
Koo

ಮುಂಬೈ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ (Tira) ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್ ಆದ “ಅಕೈಂಡ್” (Akind) ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್, ಅಕೈಂಡ್ ಅನ್ನು ಅನಾವರಣ ಮಾಡಿದರು.

ಚರ್ಮದ ಆರೈಕೆಗೆ ಅಕೈಂಡ್

ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮವು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ವೈಯಕ್ತಿಕವಾಗಿ ಪ್ರತ್ಯೇಕ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ “ಅಕೈಂಡ್” ಅರ್ಥ ಮಾಡಿಕೊಳ್ಳುತ್ತದೆ. ಇನ್ನು ಪ್ರತಿ ವ್ಯಕ್ತಿಯ ಚರ್ಮದ ಅಗತ್ಯಗಳನ್ನು ಅರಿತು, ಆರೈಕೆಯನ್ನು ಸರಳಗೊಳಿಸಲಾಗುತ್ತದೆ. ಈ ನಿಶ್ಚಿತ ಗುರಿಯ ವಿಧಾನದ ಮೂಲಕವಾಗಿ ಈ ಬ್ರ್ಯಾಂಡ್ ಪ್ರತಿ ವ್ಯಕ್ತಿಯ ಚರ್ಮ ಕಾಳಜಿಯ ಗುರಿಯನ್ನು ಸಾಧಿಸಲು ಬಲ ತುಂಬುತ್ತದೆ. ಅಕೈಂಡ್‌ನಲ್ಲಿ ಇರುವಂಥ ಪ್ರತಿ ಸೂತ್ರವು ವಿಶಿಷ್ಟ ಉದ್ದೇಶವನ್ನು ಈಡೇರಿಸಿ, ಚರ್ಮದ ಆರೋಗ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅದು ಮೂರು ವರ್ಗಗಳ ಅಡಿಯಲ್ಲಿ ಬರುತ್ತದೆ.

3 ಹಂತಗಳಲ್ಲಿ ಚರ್ಮದ ರಕ್ಷಣೆ

ಬಿಲ್ಡ್, ಬ್ಯಾಲೆನ್ಸ್ ಹಾಗೂ ಡಿಫೆನ್ಸ್ ಹೀಗೆ ಮೂರು ಶ್ರೇಣಿಗಳಿವೆ. ಅದರಲ್ಲಿ ಮೊದಲನೆಯ ಶ್ರೇಣಿಯಾದ ಬಿಲ್ಡ್ ಚರ್ಮದ ಅಡೆತಡೆಗಳನ್ನು ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ನಯವಾಗಿ ನಿರ್ವಹಿಸುತ್ತದೆ, ಯಥಾ ಸ್ಥಿತಿಯಲ್ಲಿ ಇರಿಸುತ್ತದೆ, ಅದರ ಫಲಿತವಾಗಿ ಆರೋಗ್ಯಪೂರ್ಣವಾಗಿ, ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ. ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣದಿಂದ ಆಗುವಂಥ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಈ ಕುರಿತು ಮಾತನಾಡಿ, “ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ಅಕೈಂಡ್ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈಗ ಮಾಡಿರುವ ಉತ್ಪನ್ನದ ಬಿಡುಗಡೆಯು ಟಿರಾದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಎನಿಸುತ್ತದೆ. ನಾವು ವಿಸ್ತರಿಸುವುದನ್ನು ಮತ್ತು ವಿಕಸನಗೊಳ್ಳುವುದನ್ನು ಮುಂದುವರಿಸಿದಂತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಅಕೈಂಡ್ ಸಹ-ಸಂಸ್ಥಾಪಕಿ ಮೀರಾ ಕಪೂರ್ ಮಾತನಾಡಿ, ಬಹಳ ಹಿಂದೆಯೇನೂ ಅಲ್ಲ, ನನ್ನದೇ ಚರ್ಮ ರಕ್ಷಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಚರ್ಮದ ರಕ್ಷಣೆಯ ಈ ಪ್ರಯಾಣವು ನಿಜವಾಗಿಯೂ ಪ್ರಾರಂಭವಾಯಿತು. ಅಕೈಂಡ್ ಶ್ರೇಣಿಯು ಎಚ್ಚರಿಕೆಯಿಂದ, ಪ್ರಯೋಗಗಳಿಂದ ಮತ್ತು ತಪ್ಪುಗಳಿಂದ ಹಾಗೂ ನಿರ್ದಿಷ್ಟ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರವಾಗಿ ಕಾರ್ಯನಿರ್ವಹಿಸುವ ಉನ್ನತ-ಪರಿಣಾಮಕಾರಿ ಪದಾರ್ಥಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯೊಂದಿಗೆ ನಿಖರವಾಗಿ ರೂಪಿಸಲಾಗಿದೆ ಮತ್ತು ಕ್ಯುರೇಟೆಡ್‌ ಬ್ರ್ಯಾಂಡ್‌ಗಳ ಪಾಲಿ ಅಂತಿಮ ತಾಣದಂತೆ ಇರುವ ಟಿರಾ ಮೂಲಕ ನಾವು ತಲುಪುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ. ಇದರಿಂದ ನಮ್ಮ ದೃಷ್ಟಿ ಹೆಚ್ಚು ವ್ಯಾಪಿಸುತ್ತದೆ ಹಾಗೂ ಉದ್ದೇಶವನ್ನು ಜೀವಂತ ಇರಿಸುತ್ತದೆ. ಅಕೈಂಡ್ ಜತೆಗೆ, ಹೇಗೆ ನನಗೆ ಅತ್ಯುತ್ತಮ ಚರ್ಮ ರಕ್ಷಣೆಯ ಮಾರ್ಗ ದೊರೆಯಿತೋ ಅದು ಎಲ್ಲರ ಜತೆಗೂ ಈ ಚರ್ಮರಕ್ಷಣೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಟಿರಾ ಟೂಲ್ಸ್ (Tira Tools) ಯಶಸ್ವಿ ಬಿಡುಗಡೆಯ ನಂತರ, ಖಾಸಗಿ ಲೇಬಲ್ ಅಡಿಯಲ್ಲಿ ಪ್ರೀಮಿಯಂ ಕ್ಯುರೇಟೆಡ್ ಸೌಂದರ್ಯ ಪರಿಕರಗಳು ಮತ್ತು ನೈಲ್ಸ್ ಅವರ್ ವೇ, ರೋಮಾಂಚಕ ಉಗುರು ಬಣ್ಣಗಳು ಮತ್ತು ಕಿಟ್‌ಗಳ ವಿಶೇಷ ಶ್ರೇಣಿಯ ಮೂಲಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ (RRL) ತನ್ನ ನವೀನ ಕೊಡುಗೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಅದರ ಮೊದಲ ಚರ್ಮರಕ್ಷಣೆ ಬ್ರಾಂಡ್‌ನ ಸೇರ್ಪಡೆ, ಅಕೈಂಡ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗಗಳಾದ್ಯಂತ ಗ್ರಾಹಕರಿಗೆ ಉತ್ತಮ-ಗುಣಮಟ್ಟದ, ವೈವಿಧ್ಯಮಯ ಮತ್ತು ಟ್ರೆಂಡ್-ಸೆಟ್ಟಿಂಗ್ ಉತ್ಪನ್ನಗಳನ್ನು ಒದಗಿಸುವ ಟಿರಾ ಬದ್ಧತೆಯನ್ನು ಒತ್ತಿ‌ ಹೇಳುತ್ತದೆ.

Continue Reading

ಫ್ಯಾಷನ್

Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

ನಟ ಸುದೀಪ್‌ ಅವರ ಪುತ್ರಿ ಹಾಗೂ ಗಾಯಕಿ ಸಾನ್ವಿ ಸುದೀಪ್‌ ಅವರ ಇತ್ತೀಚಿನ ಬ್ಲೇಜರ್‌ ಲುಕ್‌ ಕ್ಲಾಸಿಯಾಗಿದೆ. ಫಾರ್ಮಲ್‌ ಲುಕ್‌ಗೆ (Celebrity Fashion) ಸ್ಯಾಟೀನ್‌ ಜಾರ್ಗರ್ಸ್ ಪ್ಯಾಂಟ್‌ ಮಿಕ್ಸ್ ಮ್ಯಾಚ್‌ ಮಾಡಿರುವುದು ಅವರಿಗೆ ಕ್ಲಾಸಿ ಇಮೇಜ್‌ ನೀಡಿದೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Celebrity Fashion
ಚಿತ್ರಗಳು: ಸಾನ್ವಿ ಸುದೀಪ್‌, ಸಿಂಗರ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾನ್ವಿ ಸುದೀಪ್‌ರ ಕ್ಲಾಸಿ ಲುಕ್‌ ಫ್ಯಾಷನ್‌ (Celebrity Fashion) ಪ್ರಿಯರನ್ನು ಸೆಳೆದಿದೆ. ಹೌದು, ಸ್ಯಾಂಡಲ್‌ವುಡ್ ನಟ ಸುದೀಪ್‌ ಅವರ ಪುತ್ರಿ ಹಾಗೂ ಸಿಂಗರ್‌ ಸಾನ್ವಿ ಸುದೀಪ್‌ ಅವರ ಈ ಲುಕ್‌ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳನ್ನು ಆಕರ್ಷಿಸಿದೆ. “ಸಾನ್ವಿ ಸಿಂಪಲ್‌ ಹುಡುಗಿ. ಆಗಾಗ ಅವರು ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಬದಲಿಸುತ್ತಿರುತ್ತಾರೆ. ಹೈ ಫ್ಯಾಷನ್‌ನಲ್ಲೂ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಅಳವಡಿಸಿಕೊಳ್ಳುತ್ತಿರುತ್ತಾರೆ. ಇದರೊಂದಿಗೆ ಅವರ ಪ್ರೊಫೆಷನ್‌ಗೆ ಮ್ಯಾಚ್‌ ಆಗುವಂತಹ ಡ್ರೆಸ್‌ಕೋಡ್‌ನಲ್ಲೂ ಕಾಣಿಸುತ್ತಿರುತ್ತಾರೆ. ಈ ಜನರೇಷನ್‌ನ ಆಯ್ಕೆ ಕಂಪ್ಲೀಟ್‌ ಡಿಫರೆಂಟ್‌ ಎಂಬುದು ಅವರ ನಾನಾ ಫ್ಯಾಷನ್‌ ಡ್ರೆಸ್‌ಕೋಡ್‌ಗಳಲ್ಲಿ ಕಾಣಬಹುದು” ಎನ್ನುವ ಫ್ಯಾಷನ್‌ ವಿಮರ್ಶಕರಾದ ಜಾನ್‌, ಸಾನ್ವಿಯವರ ಬ್ಲೇಜರ್‌ ಲುಕ್‌ಗೆ ಫುಲ್‌ ಮಾರ್ಕ್ಸ್ ನೀಡಿದ್ದಾರೆ.

Celebrity Fashion

ಸಾನ್ವಿ ಸುದೀಪ್‌ ವಾಯ್ಸ್

ಅಂದಹಾಗೆ, ಸಾನ್ವಿಯವರು ಸಿಂಗರ್‌ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚೆನ್ನಾಗಿ ಹಾಡುತ್ತಾರೆ. ಇದಕ್ಕೆ ತಂದೆಯ ಸಪೋರ್ಟ್ ಕೂಡ ಇದೆ. ತಾನು ಕೂಡ ಇಂಡಿಪೆಂಡೆಂಟ್‌ ಆರ್ಟಿಸ್ಟ್ ಆಗಿ ಬೆಳೆಯಬೇಕೆಂಬ ಸಾನ್ವಿಯವರ ಉತ್ಸಾಹ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರ ಹಾಡು ಕೇಳಿದವರಿಗೆ ತಿಳಿದುಬರುತ್ತದೆ.

Celebrity Fashion

ಮಿಕ್ಸ್ ಮ್ಯಾಚ್‌ ಬ್ಲೇಜರ್‌ ಲುಕ್‌

ನೀವು ಗಮನಿಸಿರಬಹುದು, ಈ ಜನರೇಷನ್‌ನವರ ಲುಕ್‌ ಸದಾ ಕಂಪ್ಲೀಟ್‌ ಡಿಫರೆಂಟ್‌ ಚಾಯ್ಸ್ ಹೊಂದಿರುತ್ತದೆ. ಇದೇ ರೀತಿ, ಸಾನ್ವಿಯವರ ಬ್ಲೇಜರ್‌ ಲುಕ್‌ನಲ್ಲೂ ಕಾಣಬಹುದು. ಸ್ಟ್ರೇಟ್‌ಕಟ್‌ ಅಥವಾ ಫಾರ್ಮಲ್ ಪ್ಯಾಂಟ್‌ ಬ್ಲೇಜರ್‌ಗೆ ಧರಿಸುವ ಬದಲು ಅವರು ಸ್ಯಾಟಿನ್‌ನ ಜಾಗರ್ಸ್ ಶೈಲಿಯ ಬ್ಲಾಕ್‌ ಶೇಡ್‌ನ ಪ್ಯಾಂಟ್‌ ಬ್ಲೇಜರ್‌ನೊಂದಿಗೆ ಮ್ಯಾಚ್‌ ಮಾಡಿದ್ದಾರೆ. ಬ್ಲ್ಯಾಕ್‌ ಮಾನೋಕ್ರೋಮ್‌ ಶೇಡ್‌ಗೆ ಮಿಡ್‌-ರೈಸ್‌-ಫ್ಲಾಟ್‌ ಫ್ರಂಟ್‌ ಲುಕ್‌ ನೀಡುವ ಬೂದು ಬಣ್ಣದ ಚೆಕ್ಸ್ ಪ್ಲೈಡ್ ಬ್ಲೇಜರ್‌ ಧರಿಸಿದ್ದಾರೆ. ಬ್ಲೇಜರ್‌ನ ಲುಕ್‌ ಕಂಪ್ಲೀಟ್‌ ಕ್ಲಾಸಿಯಾಗಿದೆ. ತಕ್ಷಣಕ್ಕೆ ರೆಟ್ರೋ ಜಾಕೆಟ್‌ನಂತಹ ಲುಕ್‌ ಕೂಡ ನೀಡುತ್ತದೆ. ಆದರೆ, ಇದು ಬ್ಲೇಜರ್‌ ಆಗಿರುವುದರಿಂದ ಮಿಕ್ಸ್ ಮ್ಯಾಚ್‌ ಮಾಡಿದರೂ ಕೂಡ ಕ್ಲಾಸಿ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Celebrity Fashion

ಸಾನ್ವಿಯವರ ಮೂಗುತಿ

ಇನ್ನು, ಮೂಗಿಗೆ ಧರಿಸಿರುವ ಡಬ್ಬಲ್‌ ಹೂಪ್‌ ವಿನ್ಯಾಸದಂತಿರುವ ಮೂಗುತಿ ಸಾನ್ವಿಯವರಿಗೆ ಡಿಫರೆಂಟ್‌ ಇಮೇಜ್‌ ನೀಡಿದೆ.

ಇದನ್ನೂ ಓದಿ: Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

ಟ್ಯಾಟೂ ಪ್ರೇಮ

ಇತ್ತೀಚೆಗಷ್ಟೇ ಕಿವಿಯ ಹಿಂದೆ ಪುಟ್ಟ ಟ್ಯಾಟೂಗಳನ್ನು ಹಾಕಿಸಿಕೊಂಡಿರುವ ಸಾನ್ವಿಯವರ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್ಮೆಂಟ್‌ಗಳು ಕೊಂಚ ವಿಭಿನ್ನವಾಗಿದ್ದರೂ, ನೋಡಲು ಆಕರ್ಷಕವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Continue Reading

ಫ್ಯಾಷನ್

Shirt Fashion: ಮೆನ್ಸ್ ಹೈ ಫ್ಯಾಷನ್‌ಗೆ ಲಗ್ಗೆ ಇಟ್ಟ ಪ್ರಯೋಗಾತ್ಮಕ ರ‍್ಯಾಂಪ್‌ ಶರ್ಟ್

ಇದೀಗ ಬಾಲಿವುಡ್‌ ನಟ ಹರ್ಷವರ್ಧನ್‌ ರಾಣೆ ಧರಿಸಿದ ಪಾರ್ಟಿವೇರ್‌ ರ‍್ಯಾಂಪ್‌ ಶರ್ಟ್ (Shirt Fashion), ಹೈ ಫ್ಯಾಷನ್‌ಗೆ ಸೈ ಎನ್ನುವ ಯುವಕರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿಕೊಂಡಿದೆ. ಏನಿದು ಪಾರ್ಟಿವೇರ್‌ ವ್ರಾಪ್‌ ಶರ್ಟ್? ಏನಿದರ ವಿಶೇಷತೆ? ಈ ಕುರಿತಂತೆ ಮೆನ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Shirt Fashion
ಚಿತ್ರಗಳು: ಹರ್ಷವರ್ಧನ್‌ ರಾಣೆ, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್‌ ಶರ್ಟ್ (Shirt Fashion) ಇದೀಗ ಪಾರ್ಟಿವೇರ್‌ ಯುವಕರನ್ನು ಸವಾರಿ ಮಾಡತೊಡಗಿದೆ. ಹೌದು, ಇದಕ್ಕೆ ಪೂರಕ ಎಂಬಂತೆ, ಇವೆಂಟ್‌ವೊಂದರಲ್ಲಿ ಬಾಲಿವುಡ್‌ ನಟ ಹರ್ಷ್ ವರ್ಧನ್‌ ರಾಣೆ ಧರಿಸಿದ್ದ ಪಾರ್ಟಿವೇರ್‌ ವ್ರಾಪ್‌ ಬ್ಲ್ಯಾಕ್‌ ಶರ್ಟ್, ಹೈ ಫ್ಯಾಷನ್‌ ಫಾಲೋ ಮಾಡುವ ಯುವಕರನ್ನು ಆವರಿಸಿಕೊಂಡಿದೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಈ ವ್ರಾಪ್‌ ಶರ್ಟ್ ಈ ಮೊದಲು ಸಿನಿಮಾ ಹಾಗೂ ಮಾಡೆಲಿಂಗ್‌ ಜಗತ್ತಿನ ಯುವಕರನ್ನು ಸೆಳೆದಿತ್ತು. ಇದೀಗೆ ಹೈ ಫ್ಯಾಷನ್‌ ಲುಕ್‌ ಬಯಸುವ ಹುಡುಗರನ್ನು ಸೆಳೆಯಲಾರಂಭಿಸಿದೆ. ಡಿಫರೆಂಟ್‌ ಇಮೇಜ್‌ ಬಯಸುವ ಪುರುಷರನ್ನು ಶೃಂಗರಿಸಿದೆ.

Shirt Fashion

ಏನಿದು ವ್ರಾಪ್‌ ಶರ್ಟ್?

ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಹೊಂದಿರುವ ಈ ಶರ ಪಾರ್ಟಿವೇರ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರುತ್ತವೆ. ಸಾಮಾನ್ಯ ಶರ್ಟ್‌ನಂತೆ ಬಟನ್‌ಗಳನ್ನು ಹೊಂದಿರುವುದಿಲ್ಲ. ಬದಲಿಗೆ ಕಾಲರ್‌ ಜೊತೆಜೊತೆಗೆ ವ್ರಾಪ್‌ ಮಾಡುವಂತಹ ವಿನ್ಯಾಸ ಹೊಂದಿರುತ್ತವೆ. ಬಲಗಡೆ ಅಥವಾ ಎಡಗಡೆ ಸೈಡ್‌ನಲ್ಲಿ ಕಟ್ಟುವಂತಹ ಟೈಯಿಂಗ್‌ ಅಪ್ಷನ್‌ ಹೊಂದಿರುತ್ತವೆ. ಕೆಲವು ಸಿಂಪಲ್‌ ಡಿಸೈನ್‌ನಲ್ಲಿರುತ್ತವೆ. ಇನ್ನು ಕೆಲವು ಕ್ರಾಪ್ಡ್ ಕುರ್ತಾದಂತೆ ಕಾಣುತ್ತವೆ. ಮತ್ತೆ ಕೆಲವು ಗಿಡ್ಡನಾದ ಜಾಕೆಟ್‌ನಂತೆಯೂ ಕಾಣಿಸುತ್ತವೆ. ಒಟ್ಟಿನಲ್ಲಿ, ಒಂದೆಡೆ ವ್ರಾಪ್‌ ಮಾಡುವಂತಹ ಶರ್ಟ್ ಡಿಸೈನ್‌ ಹೊಂದಿರುತ್ತವೆ ಎನ್ನಬಹುದು ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಾಘವ್‌. ಅವರ ಪ್ರಕಾರ, ಈ ವಿನ್ಯಾಸದ ಶರ್ಟ್‌ಗಳು ಇತ್ತೀಚೆಗೆ ಟ್ರೆಂಡಿಯಾಗತೊಡಗಿವೆ. ಮೊದಲು ಇವುಗಳನ್ನು ಕೇವಲ ಸೆಲೆಬ್ರೆಟಿಗಳು ಮಾತ್ರ ಪಾರ್ಟಿಗಳಲ್ಲಿ ಧರಿಸುತ್ತಿದ್ದರು ಎನ್ನುತ್ತಾರೆ.

Shirt Fashion

ಪಾರ್ಟಿವೇರ್‌ ವ್ರಾಪ್‌ ಶರ್ಟ್ಸ್

ಈ ಔಟ್‌ಫಿಟ್ ಸಾಮಾನ್ಯವಾಗಿ ಫಾರ್ಮಲ್ಸ್ ಸೆಟ್‌ನಲ್ಲಿ ಕಂಡು ಬರುತ್ತವೆ. ಮಾನೋಕ್ರೋಮ್‌ ಶೇಡ್‌ಗಳಲ್ಲಿ ಇವು ಹೆಚ್ಚಾಗಿ ಬಿಡುಗಡೆಗೊಳ್ಳುತ್ತವೆ. ಡಿಸೈನರ್‌ಗಳ ಬಳಿ ವಿಶೇಷವಾಗಿ ಕಸ್ಟಮೈಸ್ಡ್‌ ಡಿಸೈನ್‌ನಲ್ಲಿ ಇವು ಲಭ್ಯ. ಇತ್ತೀಚೆಗೆ ಆನ್‌ಲೈನ್‌ ಶಾಪ್‌ಗಳಲ್ಲೂ, ನಾನಾ ಡಿಸೈನ್‌ನವು ದೊರೆಯುತ್ತಿವೆ.

Shirt Fashion

ಸೆಲೆಬ್ರೆಟಿಗಳ ಪ್ರಯೋಗಾತ್ಮಕ ಇಮೇಜ್‌

ಅಂದಹಾಗೆ, ಸೆಲೆಬ್ರೆಟಿಗಳ ಮುಖಾಂತರ ಇಂತಹ ರ‍್ಯಾಂಪ್‌ ಶರ್ಟ್‌ಗಳು ಸಾಮಾನ್ಯ ಪುರುಷರ ಫ್ಯಾಷನ್‌ಗೆ ಕಾಲಿಟ್ಟಿವೆ ಎನ್ನಬಹುದು. ಸಿನಿಮಾಗಳಲ್ಲಿ ಹಾಗೂ ಫ್ಯಾಷನ್‌ ರ‍್ಯಾಂಪ್‌ಗಳಲ್ಲಿ ಇವುಗಳನ್ನು ಸೆಲೆಬ್ರೆಟಿಗಳು ಧರಿಸಿ ಕಾಣಿಸಿಕೊಂಡ ನಂತರವೇ, ಇವುಗಳನ್ನು ಡಿಸೈನ್‌ ಮಾಡಿಸುವವರ ಸಂಖ್ಯೆ ಕ್ರಮೇಣ ಹೆಚ್ಚಾಯಿತು ಎನ್ನುತ್ತಾರೆ ಡಿಸೈನರ್ಸ್.

Shirt Fashion

ಮೆನ್ಸ್ ಹೈ ಫ್ಯಾಷನ್‌ಗೆ ಸಾಥ್‌

ಮಾಡರ್ನ್‌ ಪಾರ್ಟಿ ಪ್ರಿಯ ಹುಡುಗರ ಹೈ ಫ್ಯಾಷನ್‌ಗೆ ಇವು ಸಾಥ್‌ ನೀಡುತ್ತಿವೆ. ಪ್ರಯೋಗಾತ್ಮಕ ವಿನ್ಯಾಸದ ಈ ಶೈಲಿಯ ಶರ್ಟ್ಸ್, ಡಿಫರೆಂಟ್‌ ಲುಕ್‌ ಬಯಸುವ ಯುವಕರನ್ನು ಬರಸೆಳೆಯುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Continue Reading

ಫ್ಯಾಷನ್

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

ಫಟಾಫಟ್ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಇದೀಗ ರೆಡಿ ಸೀರೆಗಳು (Ready Saree Fashion Tips) ಸೇರಲಾರಂಭಿಸಿವೆ. ಹಾಗಾದಲ್ಲಿ, ಈ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇವುಗಳನ್ನು ಸ್ಟೈಲಿಶ್‌ ಆಗಿ ಸ್ಟೈಲಿಂಗ್‌–ಡ್ರೇಪಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸೀರೆ ಡ್ರೇಪಿಂಗ್‌ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Ready Saree Fashion Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಡಿಮೇಡ್‌ ಸೀರೆಗಳು (Ready Saree Fashion Tips) ಇದೀಗ ಯುವತಿಯರನ್ನು ಸೆಳೆದಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನಲ್ಲಿ ಈ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ. ಆದರೆ, ಎಲ್ಲಾ ರೆಡಿ ಸೀರೆಗಳು ಒಂದೇ ಬಗೆಯಲ್ಲಿ ಕಾಣಿಸುವುದಿಲ್ಲ. ಒಂದೊಂದು ಡಿಫರೆಂಟ್‌ ಲುಕ್‌ ನೀಡುತ್ತವೆ. ಹಾಗಾಗಿ ರೆಡಿ ಸೀರೆಗಳನ್ನು ಖರೀದಿಸುವಾಗ ಅವುಗಳ ವಿನ್ಯಾಸ ನೋಡಿ ಆಯ್ಕೆ ಮಾಡುವುದು ಹಾಗೂ ನಂತರ ಸ್ಟೈಲಿಂಗ್‌-ಡ್ರೇಪಿಂಗ್‌ ಮಾಡುವ ರೀತಿ-ನೀತಿ ಪಾಲಿಸುವುದು ಮುಖ್ಯ ಎನ್ನುತ್ತಾರೆ ಸೀರೆ ಡ್ರೇಪರ್‌ ನವನೀತಾ.
ಹೌದು, ಇಂದು ಫಟಾಫಟ್ ಆಗಿ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಬಗೆಬಗೆಯ ರೆಡಿಮೇಡ್‌ ಸೀರೆಗಳು ದಾಳಿ ಇಡಲಾರಂಭಿಸಿವೆ. ಒಂದಕ್ಕಿಂತ ಒಂದು ಆಕರ್ಷಕ ವಿನ್ಯಾಸದಲ್ಲಿ ದೊರೆಯುತ್ತಿವೆ. ಆದರೆ, ಈ ಸೀರೆಗಳನ್ನು ಖರೀದಿಸುವಾಗ ಮಾತ್ರ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಕೊಟ್ಟ ಬೆಲೆಗೆ ತಕ್ಕನಾಗಿ ಉಡಬಹುದು ಹಾಗೂ ನಾನಾ ಸ್ಟೈಲಿಂಗ್‌ನಲ್ಲಿ ಡ್ರೇಪಿಂಗ್‌ ಮಾಡಿ ಆಕರ್ಷಕವಾಗಿ ಕಾಣಿಸಬಹುದು ಎನ್ನುವ ಸೀರೆ ಡ್ರೇಪರ್ ಮೋಹಿನಿ ಒಂದಿಷ್ಟು ಐಡಿಯಾಗಳನ್ನು ನೀಡಿದ್ದಾರೆ.

Ready Saree Fashion Tips

ರೆಡಿಮೇಡ್‌ ಸೀರೆ ಆಯ್ಕೆ

ರೆಡಿಮೇಡ್‌ ಸೀರೆಗಳನ್ನು ಆಯ್ಕೆ ಮಾಡುವಾಗ ಮೊದಲು ಅವು ಟ್ರೆಂಡ್‌ನಲ್ಲಿವೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ಬಾಲಿವುಡ್‌ ಸೆಲೆಬ್ರೆಟಿಗಳ ಸೋಷಿಯಲ್‌ ಮೀಡಿಯಾ ಪೋಸ್ಟ್ ನೋಡಿದಲ್ಲಿ ಹೊಸ ಟ್ರೆಂಡಿ ರೆಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಬಹುದು.

Ready Saree Fashion Tips

ಪರ್ಸನಾಲಿಟಿಗೆ ತಕ್ಕಂತಿರಲಿ ಸೀರೆ ಆಯ್ಕೆ

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ರೆಡಿ ಸೀರೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸೆರಗು ಒಂದು ಕಡೆ, ಪಲ್ಲು ಒಂದು ಕಡೆ ಸರಿಯಾಗಿ ಕೂರದಿರಬಹುದು. ಅಲ್ಲದೇ, ಸ್ಲಿಮ್‌ ಇರುವವರ ರೆಡಿ ಸೀರೆ ದಪ್ಪ ಇರುವವರಿಗೆ ಆಗದಿರಬಹುದು. ಹಾಗಾಗಿ ಈ ಸೀರೆಗಳನ್ನು ಉಡುವವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು.

ಇಂಡೋ-ವೆಸ್ಟರ್ನ್‌ ರೆಡಿ ಸೀರೆ ಆಯ್ಕೆ

ಬಹುತೇಕ ರೆಡಿ ಸೀರೆಗಳು ಇಂಡೋ–ವೆಸ್ಟರ್ನ್ ಲುಕ್‌ ನೀಡುತ್ತವೆ. ಟ್ರೆಡಿಷನಲ್‌ ಲುಕ್‌ ನೀಡುವ ರೆಡಿ ಸೀರೆಗಳು ಹೆಚ್ಚಿನ ಡಿಸೈನ್‌ನಲ್ಲಿ ದೊರೆಯುವುದಿಲ್ಲ. ಹಾಗಾಗಿ ಆದಷ್ಟೂ ಟ್ರೆಡಿಷನಲ್‌ ಸೀರೆಗಳನ್ನು ರೆಡಿಮೇಡ್‌ ಆಗಿ ಖರೀದಿಸದಿರಿ. ಬದಲಿಗೆ ವೆಸ್ಟರ್ನ್‌ ಲುಕ್‌ ನೀಡುವಂತಹದ್ದನ್ನೇ ಸೆಲೆಕ್ಟ್‌ ಮಾಡಿ.

Ready Saree Fashion Tips

ಸೀರೆ ಡ್ರೇಪಿಂಗ್‌ಗೆ ಪ್ರಾಮುಖ್ಯತೆ

ಸೀರೆ ಖರೀದಿಸುವಾಗ ಮೊದಲೇ ನೀವು ಆಯ್ಕೆ ಮಾಡುವ ರೆಡಿ ಸೀರೆ ಹೇಗೆಲ್ಲಾ ಉಡಬಹುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಎಲ್ಲದಕ್ಕಿಂತ ಹೆಚ್ಚಾಗಿ, ತೀರಾ ಸಿಂಪಲ್‌ ಆಗಿ ಉಡುವುದಾದಲ್ಲಿ ರೆಡಿ ಸೀರೆ ಖರೀದಿಸುವುದೇ ಬೇಕಾಗಿಲ್ಲ. ಕೆಲವು ಮೂರ್ನಾಲ್ಕು ಶೈಲಿಯಲ್ಲಿ ಡ್ರೇಪಿಂಗ್‌ ಮಾಡುವ ರೆಡಿ ಸೀರೆಗಳು ದೊರೆಯುತ್ತವೆ. ಅಂತದ್ದನ್ನೇ ಕೊಳ್ಳಿ. ಆದಷ್ಟೂ ಡ್ರೇಪಿಂಗ್‌ಗೆ ಪ್ರಾಮುಖ್ಯತೆ ನೀಡಿ.

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ರೆಡಿ ಸೀರೆ ಸ್ಟೈಲಿಂಗ್‌ ಹೀಗಿರಲಿ

ರೆಡಿ ಸೀರೆಗಳ ಸ್ಟೈಲಿಂಗ್‌ ಆಯಾ ಸೀರೆಯ ವಿನ್ಯಾಸಕ್ಕೆ ಮ್ಯಾಚ್‌ ಆಗುವಂತಿರಲಿ. ಉದಾಹರಣೆಗೆ, ಕಾಕ್‌ಟೈಲ್‌ ರೆಡಿ ಸೀರೆ, ಪಾರ್ಟಿವೇರ್‌ ರೆಡಿ ಸೀರೆ, ಗೌನ್‌ ರೆಡಿ ಸೀರೆ, ಲೆಹೆಂಗಾ ರೆಡಿ ಸೀರೆ ಹೀಗೆ ಆಯಾ ಸೀರೆಯ ವಿನ್ಯಾಸಕ್ಕೆ ತಕ್ಕಂತೆ ಸ್ಟೈಲಿಂಗ್‌ ಇರಲಿ. ಹೇರ್‌ಸ್ಟೈಲ್‌ ಸೇರಿದಂತೆ ಮೇಕಪ್‌ ಕೂಡ ಹೊಂದಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Actor Darshan
ಬೆಂಗಳೂರು34 seconds ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

Samarjit Lankesh Dhool Yebsava Video Song Out
ಸ್ಯಾಂಡಲ್ ವುಡ್11 mins ago

Samarjit Lankesh: ʻಗೌರಿʼ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ’ ಸಾಂಗ್ ರಿಲೀಸ್!

Viral Video
ಕ್ರಿಕೆಟ್12 mins ago

Viral Video: ‘ಹಿಟ್​ ದಿ ಟಾರ್ಗೆಟ್’​ ಎಂದು ಬೌಲಿಂಗ್​ ಅಭ್ಯಾಸ ಆರಂಭಿಸಿದ ಮೊಹಮ್ಮದ್ ಶಮಿ

BS Yediyurappa
ಪ್ರಮುಖ ಸುದ್ದಿ15 mins ago

BS Yediyurappa: ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪಗೆ ಬಿಗ್‌ ರಿಲೀಫ್‌; ಬಂಧಿಸದಂತೆ ಕೋರ್ಟ್‌ ಆದೇಶ

World Blood Donor Day Awareness Jatha in Bengaluru
ಕರ್ನಾಟಕ22 mins ago

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

World Blood Donor Day
ಆರೋಗ್ಯ35 mins ago

World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

actor Darshan
ಬೆಂಗಳೂರು35 mins ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Money Guide
ಮನಿ-ಗೈಡ್41 mins ago

Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

Anant Ambani Love Letter Printed On Radhika Merchant Pre-Wedding Dress
ಬಾಲಿವುಡ್48 mins ago

Anant Ambani: ಅನಂತ್ ಅಂಬಾನಿ ಕೊಟ್ಟ ಪ್ರೇಮ ಪತ್ರ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚಂಟ್‌!

E. Tukaram
ಕರ್ನಾಟಕ57 mins ago

E. Tukaram: ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಈ. ತುಕಾರಾಂ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು35 seconds ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

ಟ್ರೆಂಡಿಂಗ್‌