-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಜನರೇಷನ್‌ನ ಹುಡುಗ-ಹುಡುಗಿಯರಿಗೆ ಪ್ರಿಯವಾಗುವಂತಹ ಬಗೆಬಗೆಯ ಡಿಸೈನ್‌ನ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು (Friendship Band Trend) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 4 ಬಗೆಯವು ಹೆಚ್ಚು ಟ್ರೆಂಡಿಯಾಗಿವೆ. ಹೌದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲೆಕ್ಕವಿಲ್ಲದಷ್ಟು ನಾನಾ ಬಗೆಯ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅವುಗಳಲ್ಲಿ ನಾಲ್ಕು ಬಗೆಯವು ಮಾತ್ರ ಜೆನ್ ಜಿ ಜನರೇಷನ್‌ನ ಹುಡುಗ-ಹುಡುಗಿಯರನ್ನು ಆಕರ್ಷಿಸಿವೆ. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಬ್ರೆಸ್‌ಲೆಟ್ ಬ್ಯಾಂಡ್
ನೋಡಲು ಥೇಟ್ ಬ್ರೇಸ್‌ಲೆಟ್‌ನಂತೆಯೇ ಕಾಣುವ ಇವು ವೈಟ್ ಹಾಗೂ ಬ್ಲಾಕ್ ಇಲ್ಲವೇ ಅಕ್ಸಿಡೈಸ್ಡ್ ಮೆಟಲ್‌ನಿಂದ ಸಿದ್ಧಗೊಂಡಿರುತ್ತವೆ. ಹರಿದು ಹೋಗದ ಫಂಕಿ ಹಾಗೂ ಜಂಕ್ ಬ್ರೆಸ್‌ಲೆಟ್‌ಗಳಿವು. ಈ ಜನರೇಷನ್‌ನ ಅಭಿರುಚಿಗೆ ತಕ್ಕಂತೆ ಚಿತ್ರ-ವಿಚಿತ್ರ ಡಿಸೈನ್‌ನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
ಇವಿಲ್ ಐ ಫ್ರೆಂಡ್‌ಶಿಪ್ ಬ್ಯಾಂಡ್
ಇವಿಲ್ ಐ ಡಿಸೈನ್ ಹೊಂದಿದ ಈ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಹುಡುಗ ಹುಡುಗಿಯರು ಎನ್ನುವ ಭೇದ-ಭಾವವಿಲ್ಲದೇ ಡಿಮ್ಯಾಂಡ್ ಹೆಚ್ಚಿಸಿಕೊಂಡಿವೆ. ಹಾಗೆಂದು ಈ ಬ್ಯಾಂಡ್ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ! ಈ ಬಾರಿ ಫ್ರೆಂಡ್ಸ್ ನಡುವೆ ಬಾಂಧವ್ಯ ಹೆಚ್ಚಿಸಲು ಬ್ಯಾಂಡ್ ರೂಪದಲ್ಲಿ ಎಂಟ್ರಿ ನೀಡಿವೆ.
ಉಲ್ಲನ್ ಥ್ರೆಡ್ ಫ್ರೆಂಡ್‌ಶಿಪ್ ಬ್ಯಾಂಡ್
ಉಲ್ಲನ್ ದಾರವನ್ನು ಬಳಸಿ ಕೈಗಳಿಂದ ಹೆಣೆದಿರುವಂತಹ ಫ್ರೆಂಡ್‌ಶಿಪ್ ಬ್ಯಾಂಡ್‌ಗಳಿವು. ಹೆಸರು, ಅಕ್ಷರ ಅಥವಾ ಯಾವುದೇ ಪುಟ್ಟ ಚಿತ್ರವನ್ನು ಮಧ್ಯೆ ಹೆಣೆದು ಬ್ಯಾಂಡ್ ಮಾಡಲಾಗಿರುತ್ತದೆ. ಕೈಗೆ ಬೇಕಾದಾಗ ಸುಲಭವಾಗಿ ಕಟ್ಟಿಕೊಂಡು ಎತ್ತಿಡಬಹುದಾಗಿದೆ. ಕಡಿಮೆ ಬೆಲೆಗೆ ದೊರಕುವ ಇವು ಕೂಡ ಇಂದಿಗೂ ಟ್ರೆಂಡ್‌ನಲ್ಲಿವೆ.
ಇದನ್ನೂ ಓದಿ: Model Monsoon Fashion: ಮಾನ್ಸೂನ್ ಫ್ಯಾಷನ್‌ನಲ್ಲಿ ಮಾಡೆಲ್ ಸನ್ನಿಧಿಯ ಸಿಂಪಲ್ ಲುಕ್ಸ್!
ಕ್ರಿಸ್ಟಲ್ ಬೀಡ್ಸ್ ಫ್ರೆಂಡ್‌ಶಿಪ್ ಬ್ಯಾಂಡ್
ನಾನಾ ಬಣ್ಣದಲ್ಲಿ ಲಭ್ಯವಿರುವ ಈ ಕ್ರಿಸ್ಟಲ್ ಬೀಡ್ಸ್ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಕಸ್ಟಮೈಸ್ಡ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇವು ಕೂಡ ಹೆಸರು, ಇನಿಶಿಯಲ್‌ನಿಂದ ಸಿದ್ಧಪಡಿಸಬಹುದು. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಡಾರ್ಕ್ ಶೇಡ್‌ನವನ್ನು ಹುಡುಗರು ಇಷ್ಟಪಟ್ಟರೇ, ಹುಡುಗಿಯರು ಲೈಟ್ ಶೇಡ್‌ನವನ್ನು ಆಯ್ಕೆ ಮಾಡುತ್ತಿದ್ದಾರೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )