–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್ ಪ್ಲೀಟ್ಸ್ ಸ್ಕರ್ಟ್‌ಗಳು ಹುಡುಗಿಯರ ಫ್ಯಾಷನ್‌ಗೆ (Girls Pleats Skirts Fashion) ಎಂಟ್ರಿ ನೀಡಿವೆ. ಕೊರಿಯನ್ ಗ್ಲಾಸ್ ಸ್ಕಿನ್ ಟ್ರೆಂಡ್ ಸೈಡಿಗೆ ಸರಿಯುತ್ತಿದ್ದಂತೆ, ಇದೀಗ ಕೊರಿಯನ್ ಪ್ಲೀಟೇಡ್ ಸ್ಕರ್ಟ್‌ಗಳು, ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ವೆಸ್ಟರ್ನ್ ಫ್ಯಾಷನ್ ಲಿಸ್ಟ್‌ಗೆ ಸೇರಿಕೊಂಡು ಹಂಗಾಮಾ ಎಬ್ಬಿಸಿವೆ.
ಹುಡುಗಿಯರನ್ನು ಸೆಳೆದ ಕೊರಿಯನ್ ಸ್ಕರ್ಟ್ಸ್
ಕೊರಿಯನ್ ಪ್ಲೀಟೇಡ್ ಸ್ಕರ್ಟ್ಸ್ ಇಂದು ಕಾಲೇಜು ಹುಡುಗಿಯರನ್ನು ಮಾತ್ರವಲ್ಲ, ವೀಕೆಂಡ್ ಹಾಗೂ ಔಟಿಂಗ್ ಇಷ್ಟಪಡುವ ಹುಡುಗಿಯರನ್ನು ಆವರಿಸಿಕೊಂಡಿವೆ. ಸಮ್ಮರ್ ಲುಕ್‌ಗೆ ಸಾಥ್ ನೀಡುವ ಇವು ನಾನಾ ಶೈಲಿಯ ಟಾಪ್‌ಗಳೊಂದಿಗೆ ಮಿಕ್ಸ್ ಮ್ಯಾಚ್ ಆಗಿ ಆಕರ್ಷಕ ಸ್ಕರ್ಟ್ ಫ್ಯಾಷನ್‌ಗೆ ನಾಂದಿ ಹಾಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟ್ರೆಂಡಿಯಾಗಿರುವ ಕೊರಿಯನ್ ಸ್ಕರ್ಟ್ಸ್
ಹೈ ವೇಸ್ಟ್ ಪ್ಲೀಟೆಡ್ ಕೊರಿಯನ್ ಸ್ಕರ್ಟ್, ಎ-ಲೈನ್ ಪ್ಲೀಟೆಡ್, ಹೈ ವೇಸ್ಟ್ ಟೆನ್ನೀಸ್ ಸ್ಕರ್ಟ್, ಸ್ಯಾಟೀನ್ ಪ್ಲೀಟೆಡ್, ನೆಟ್ಟೆಡ್ ಪ್ಲೀಟೆಡ್, ಪ್ಲೀಟೆಡ್ ಮಿಡಿ ಸ್ಕರ್ಟ್, ಶಾರ್ಟ್ ಪ್ಲೀಟೆಡ್, ಬಿಗೇ ಪ್ಲೀಟೆಡ್, ಮಿನಿ ಪ್ಲೀಟೆಡ್ ಸ್ಕರ್ಟ್, ಲಾಂಗ್ ಪ್ಲೀಟೆಡ್ ಸ್ಲರ್ಟ್ ಸೇರಿದಂತೆ ಸಾಕಷ್ಟು ನೆರಿಗೆ ಇರುವ ಕೊರಿಯನ್ ಸ್ಕರ್ಟ್‌ಗಳು ನಮ್ಮಲ್ಲಿ ಬಂದು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಏನಿದು ಕೊರಿಯನ್ ಪ್ಲೀಟೆಡ್ ಸ್ಕರ್ಟ್ಸ್?
ಕೊರಿಯನ್ ಶೈಲಿಯ ನೆರಿಗೆ ಪಕ್ಕ ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ಪಕ್ಕ ಪಕ್ಕದಲ್ಲೆ ಇರುವಂತಹ ಪ್ಲೀಟೆಡ್ ಸ್ಕರ್ಟ್ಸ್ ನೋಡಲು ತಕ್ಷಣಕ್ಕೆ ನಮ್ಮ ರಾಷ್ಟ್ರದಲ್ಲಿ ಶಾಲೆಯ ಯೂನಿಫಾರ್ಮ್ ಸ್ಕರ್ಟ್‌ನಂತೆಯೇ ಕಾಣುತ್ತವೆ. ಒಟ್ಟಿನಲ್ಲಿ, ನೆರಿಗೆ ಇರುವಂತಹ ಸ್ಕರ್ಟ್‌ಗಳಿವು. ನೆರಿಗೆಯ ಸ್ಕರ್ಟ್‌ಗಳು ಎಂದು ಹೇಳಬಹುದು. ದಪ್ಪನೆಯ ಫ್ಯಾಬ್ರಿಕ್‌ನದ್ದಾದಲ್ಲಿ ನೀಟಾಗಿ ಈ ನೆರಿಗೆಗಳು ಕಾಣಿಸುತ್ತವೆ. ತೆಳುವಾದ ಅಂದರೇ, ನೆಟ್ಟೆಡ್‌ನದ್ದಾದಲ್ಲಿ ಲೈನಿಂಗ್ ಕಾಣಿಸುತ್ತವೆ. ಒಟ್ನಲ್ಲಿ, ನಾನಾ ಬಗೆಯವು ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Torn Jeans Styling Tips: ಟೊರ್ನ್ ಜೀನ್ಸ್ ಪ್ಯಾಂಟ್ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು
“ಕೊರಿಯನ್ ಪ್ಲೀಟೆಡ್ ಸ್ಕರ್ಟ್‌ಗಳು ಇಂದು ಟೀನೇಜ್ ಹಾಗೂ ಕಾಲೇಜು ಹುಡುಗಿಯರ ಫೇವರೇಟ್ ವಾರ್ಡ್ರೋಬ್ ಲಿಸ್ಟ್‌ಗರ ಸೇರಿವೆ. ವೆಸ್ಟರ್ನ್ ಲುಕ್‌ಗೆ ಸಾಥ್ ನೀಡುವ ಈ ಕೊರಿಯನ್ ಶೈಲಿಯವು ಇದೀಗ ಜಾಗತೀಕ ಮಟ್ಟದಲ್ಲಿ ಪ್ರಚಲಿತದಲ್ಲಿವೆ. ಪಾಸ್ಟೆಲ್ ಶೇಡ್‌ನವು ಹಾಗೂ ಚೆಕ್ಸ್ ಮತ್ತು ಮಾನೋಕ್ರಾಮ್ ಡಿಸೈನ್‌ನವು ಹೆಚ್ಚು ಹುಡುಗಿಯರಿಗೆ ಪ್ರಿಯವಾಗಿವೆ ” ಎನ್ನುವ ಸ್ಟೈಲಿಸ್ಟ್‌ಗಳು, ಇವು ನಾನಾ ಬಗೆಯಲ್ಲಿ ಧರಿಸಬಹುದು ಎನ್ನುತ್ತಾರೆ.
ಕೊರಿಯನ್ ಪ್ಲೀಟೆಡ್ ಸ್ಕರ್ಟ್ಸ್ ಟಿಪ್ಸ್
- ಫ್ಯಾಬ್ರಿಕ್ ಆಧಾರದ ಮೇಲೆ ಸ್ಟೈಲಿಂಗ್ ಮಾಡಬಹುದು.
- ಸ್ಕರ್ಟ್ಸ್ ಜೊತೆ ಸ್ಟಾಕಿಂಗ್ಸ್ ಧರಿಸಬಹುದು.
- ಹೈ ಹೀಲ್ಸ್ ಅಥವಾ ಶೂ ಧರಿಸಿದರೆ ಆಕರ್ಷಕವಾಗಿ ಕಾಣಿಸುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)