ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಲ್ಟಿ ಸ್ಟ್ರಾಪ್ಸ್ ಹೊಂದಿರುವ ಗ್ಲಾಡಿಯೆಟರ್ಸ್ ಸ್ಯಾಂಡಲ್ಸ್ (Gladiator Sandal Fashion) ರೀ ಎಂಟ್ರಿ ನೀಡಿವೆ. ಒಂದರ ಮೇಲೊಂದು ಇರುವ ಸ್ಟ್ರಾಫ್ಸ್, ಕೆಲವು ಮಂಡಿವರೆಗೂ ಸ್ಟ್ರಾಪ್‌ಗಳನ್ನು ಹೊಂದಿದ್ದರೆ, ಮತ್ತೆ ಕೆಲವು ಡೀಸೆಂಟಾದ ಮಲ್ಟಿ ಸ್ಟ್ರಾಪ್‌ಗಳನ್ನೊಳಗೊಂಡಿರುತ್ತವೆ. ಎರಡಿಂಚಿನಿಂದ ಆರಂಭವಾಗುವ ಈ ಸ್ಟ್ರಾಪ್ ಸ್ಯಾಂಡಲ್ಸ್ ಈ ಬೇಸಿಗೆ ಫುಟ್‌ವೇರ್ ಫ್ಯಾಷನ್‌ನಲ್ಲಿ ಹೊಸ ರೂಪದೊಂದಿಗೆ ರೀ ಎಂಟ್ರಿ ನೀಡಿವೆ.
ವೈವಿಧ್ಯಮಯ ಗ್ಲಾಡಿಯೆಟರ್ಸ್ ಸ್ಯಾಂಡಲ್ಸ್
ಸ್ಟ್ರಾಪಿ ಸ್ಟಿಲೆಟ್ಟೋಸ್, ಕ್ಲಾಗ್ಸ್, ಹೈ ಹೀಲ್ಡ್ಸ್‌ನಲ್ಲೂ ಕಾಣಸಿಗುವ ಇವು ವೈವಿಧ್ಯಮಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಹೈ ಹೀಲ್ಡ್ ಫ್ಲಿಪ್-ಫ್ಲಾಫ್ಸ್, ಗ್ಲಾಡಿಯೆಟರ್ಸ್, ಪೀಟ್ ಟೋಸ್, ರೋಮನ್ ಸ್ಯಾಂಡಲ್ಸ್, ಸ್ನೀಕರ್ಸ್, ಸೆನೋರಿಟಾ, ಮೊರ್ಜಾರೀಸ್ ಫ್ಲ್ಯಾಟ್ಸ್ ಸ್ಯಾಂಡಲ್‌ಗಳು ಸಾವಿರಾರು ಬಗೆಯ ಡಿಸೈನ್ಸ್‌ಗಳಲ್ಲಿ ಲಗ್ಗೆ ಇಟ್ಟಿವೆ. ಈಗಾಗಲೇ ಇವು ಬಹುತೇಕ ಮಾನಿನಿಯರ ಪಾದಾರವಿಂದವನ್ನು ಇವು ಅಲಂಕರಿಸಿವೆ ಎನ್ನುತ್ತಾರೆ ಫುಟ್‌ವೇರ್ ಸ್ಟೈಲಿಸ್ಟ್‌ಗಳು.
ಸ್ಟೈಲಿಶ್ ಲುಕ್‌ಗಾಗಿ ಗ್ಲಾಡಿಯೆಟರ್ಸ್ ಪಾದರಕ್ಷೆಗಳು
ಸ್ಟೈಲಿಸ್ಟ್ ಜಾನ್ ಹೇಳುವಂತೆ, ಗ್ಲಾಡಿಯೆಟರ್ಸ್ ಸ್ಯಾಂಡಲ್‌ಗಳಲ್ಲಿ ಹುಡುಗಿಯರು ಗ್ಲಾಮರಸ್ ಆಗಿ ಕಾಣಿಸುವುದು ಮಾತ್ರವಲ್ಲ, ಇವು ಸ್ಟೈಲಿಶ್ ಲುಕ್ ನೀಡುತ್ತವೆ. ಖುಷಿಯ ಸಂಗತಿಯೆಂದರೆ, ಇದೀಗ ನಾನಾ ಬ್ರಾಂಡ್‌ಗಳು ಕಲರ್‌ಫುಲ್ ಸ್ಟ್ರಾಪ್‌ಗಳಲ್ಲಿ ಬಿಡುಗಡೆಗೊಳಿಸಿವೆ. ಇನ್ನು ಸ್ಯಾಂಡಲ್ ಡಿಸೈನರ್ ದಿಶಾ ಹೇಳುವಂತೆ, ಗ್ಲಾಡಿಯೆಟರ್ಸ್ ಸ್ಯಾಂಡಲ್ಸ್ ಸೆಲೆಬ್ರೆಟಿಗಳ ಹಾಗೂ ಸ್ಟಾರ್ಸ್ ಸೆಲೆಕ್ಷನ್ ಆಗಿದ್ದು, ಎಲ್ಲರೂ ಈ ಬಗೆಯ ಸ್ಯಾಂಡಲ್‌ನಲ್ಲಿ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಇವು ಟ್ರೆಡಿಷನಲ್ ಲುಕ್‌ಗೆ ಮ್ಯಾಚ್ ಆಗುವುದಿಲ್ಲ. ಕೇವಲ ಕ್ಯಾಶುವಲ್ ಲುಕ್‌ಗೆ ಸಾಥ್ ನೀಡುತ್ತವೆ.
ಮಾಡರ್ನ್ ಲುಕ್‌ಗಾಗಿ ಗ್ಲಾಡಿಯೆಟರ್ಸ್ ಪಾದರಕ್ಷೆ
ಗ್ಲಾಡಿಯೆಟರ್ಸ್ ಸ್ಯಾಂಡಲ್ಸ್ ಇದೀಗ ಕಾಲೇಜು ಹುಡುಗಿಯರನ್ನೂ ಆಕರ್ಷಿಸಿವೆ. ಟಿನೇಜ್ ಮಾಡರ್ನ್ ಹುಡುಗಿಯರನ್ನು ಬರಸೆಳೆದಿವೆ. ಪರಿಣಾಮ, ಒಂದಕ್ಕಿಂತ ಒಂದು ಭಿನ್ನವಾದ ಸಾವಿರಾರು ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಸಂತಸದ ವಿಚಾರವೆಂದರೇ, ಇವುಗಳ ಬೆಲೆ ಕೂಡ ಮಧ್ಯಮವರ್ಗದವರ ಕೈಗೆಟಕುವಂತಿರುವುದು ಎಂಬುದು ಮಾರಾಟಗಾರರ ಅಭಿಪ್ರಾಯ.
ಟ್ರೆಂಡಿ ಕಲರ್ಸ್-ಶೇಡ್ಸ್
ಮೆಟಾಲಿಕ್ ಶೇಡ್ಸ್, ಶ್ವೇತವರ್ಣ, ರೇಡಿಯಂ ಬಣ್ಣ, ಹಾಟ್ ಪಿಂಕ್, ಎಲೆಕ್ಟ್ರಿಕ್ ಬ್ಲ್ಯೂ ಕಲರ್ಸ್ ಮತ್ತು ಶೇಡ್ಸ್‌ನವು ಟ್ರೆಂಡಿಯಾಗಿವೆ. ಅಂದ ಹಾಗೆ, ಇವು ಧರಿಸಿದಾಗ ಬಿಸಿಲಿನಲ್ಲಿ ಪಾದಗಳ ರಂಗನ್ನು ಹೆಚ್ಚಿಸುತ್ತವಂತೆ. ಇವುಗಳಲ್ಲಿ, ಕೆಲವು ಮುಂಭಾಗದ ಪಾದ ಮುಚ್ಚಿರುತ್ತವೆ. ಅದನ್ನು ಹೊರತು ಪಡಿಸಿದಲ್ಲಿ, ಶೂ ಶೈಲಿಯವು ಟ್ರೆಂಡಿಯಾಗಿರುವ ಲಿಸ್ಟ್‌ನಲ್ಲಿವೆ. ಎಲ್ಲಾ ಡಿಸೈನ್‌ನವು ತಕ್ಷಣಕ್ಕೆ ನೋಡಲು ಒಂದೇ ಬಗೆಯಲ್ಲಿ ಕಂಡರೂ ವೈವಿಧ್ಯಮಯ ವಿನ್ಯಾಸ ಹಾಗೂ ರಂಗು ರಂಗಾಗಿರುತ್ತವೆ ಎನ್ನುತ್ತಾರೆ ಮಾರಾಟಗಾರರು.
ಗ್ಲಾಡಿಯೆಟರ್ಸ್ ಸ್ಯಾಂಡಲ್ಸ್ ಆಯ್ಕೆ
- ಹೀಲ್ಸ್ ಆದಲ್ಲಿ ಬಣ್ಣದ ಆಯ್ಕೆಗೆ ಪ್ರಾಮುಖ್ಯತೆ ನೀಡಿ.
- ಬೇಸಿಗೆಯ ಪಾರ್ಟಿಗೆ ಹೈ ಹೀಲ್ಸ್ ಬೆಸ್ಟ್.
- ಹೆಚ್ಚು ಸ್ಟ್ರ್ಯಾಫ್ಸ್ ಇರುವ ಸ್ಯಾಂಡಲ್ಸ್ ಶಾರ್ಟ್ ಡ್ರೆಸ್ ಧರಿಸುವವರಿಗೆ ಓಕೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)