ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಬಿಂದಾಸ್ ಫ್ಯಾಷನ್‌ನಲ್ಲಿ (Summer Fashion) ಇದೀಗ ಗ್ಲಾಮರಸ್ ಆಫ್ ಶೋಲ್ಡರ್ ಡ್ರೆಸ್‌ಗಳು ಮರು ಎಂಟ್ರಿ ನೀಡಿವೆ. ಈ ಬಿಸಿಲು ಕಾಲದಲ್ಲಿ ನೋಡಲು ಗ್ಲಾಮರಸ್ ಲುಕ್‌ಗೆ ಸಾಥ್ ನೀಡುತ್ತಿವೆ. ಬಹುತೇಕ ಮಹಿಳೆಯರು ಹಾಗೂ ಯುವತಿಯರು, ಆಫ್ ಶೋಲ್ಡರ್ ಡ್ರೆಸ್ ಎಂದಾಕ್ಷಣ ಹೆಚ್ಚು ಗ್ಲಾಮರ್ ಹಾಗೂ ಸೆಕ್ಸಿ ಲುಕ್ ನೀಡುವ ಉಡುಪು ಎಂದು ಕೊಳ್ಳಬಹುದು. ಕೇವಲ ಪೇಜ್ ತ್ರೀ ಹಾಗೂ ಸಿನಿಮಾ ತಾರೆಯರು ಧರಿಸುವ ಉಡುಗೆಗಳು ಎಂದುಕೊಳ್ಳಬಹುದು. ಆದರೆ, ಈಗ ಜನರೇಷನ್ ಡ್ರೆಸ್ ಸೆನ್ಸ್ ಬದಲಾಗಿದೆ. ಪರಿಣಾಮ, ಸಾಮಾನ್ಯ ಯುವತಿಯರು ಈ ಔಟ್‌ಫಿಟ್‌ಗಳನ್ನು ಧರಿಸತೊಡಗಿದ್ದಾರೆ. ಹಾಗಾಗಿ ಈ ಉಡುಪುಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ರೀ ಎಂಟ್ರಿ ನೀಡಿವೆ.
ಆಫ್ ಶೋಲ್ಡರ್ ಡ್ರೆಸ್ ಡಿಟೇಲ್ಸ್
ಅಂದ ಹಾಗೆ, ಆಫ್ ಶೋಲ್ಡರ್ ಅಥವಾ ಶೋಲ್ಡರ್ ಲೆಸ್ ಡ್ರೆಸ್‌ಗಳ ಟ್ರೆಂಡ್, ನಿನ್ನೆ ಮೊನ್ನೆಯದಲ್ಲ! ವಿಂಟರ್ ಸೀಸನ್ ಮುಗಿಯುತ್ತಿದ್ದಂತೆ, ಪ್ರತಿಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ವಿನೂತನ ಡಿಸೈನ್‌ನಲ್ಲಿ, ಇವು ಫ್ಯಾಷನ್ ಲೋಕದಲ್ಲಿಎಂಟ್ರಿ ನೀಡುತ್ತಿರುತ್ತಿವೆ. ಈ ಡ್ರೆಸ್‌ಗಳಲ್ಲಿ ಶೋಲ್ಡರ್ ಭಾಗ ಓಪನ್ ಆಗಿರುತ್ತದೆ. ನೆಕ್‌ಲೈನ್ ಇರುವುದಿಲ್ಲ. ಭುಜದ ಭಾಗ ಎಕ್ಸ್‌ಪೋಸ್ ಆಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಆಫ್ ಶೋಲ್ಡರ್ ಡ್ರೆಸ್‌ಗಳು ನೋಡಲು ಒಂದೇ ರೀತಿಯಾಗಿ ಕಾಣಬಹುದು. ಆದರೆ, ಸ್ಟಿಚ್ಚಿಂಗ್ ಹಾಗೂ ಡಿಸೈನ್ ವಿಭಿನ್ನವಾಗಿರುತ್ತವೆ. ಆಯಾ ಉಡುಪುಗಳಿಗೆ ತಕ್ಕಂತೆ ಹೊಸ ರೂಪ ಪಡೆದುಕೊಂಡಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಮಿಕ್ಸ್ ಮ್ಯಾಚ್ ಚಾಯ್ಸ್
ಆಫ್ ಶೋಲ್ಡರ್ ಟಾಪ್ಸ್, ಇಂದು ವೆಸ್ಟರ್ನ್ ಸಮ್ಮರ್ ಔಟ್‌ಫಿಟ್‌ನಲ್ಲಿ ಟೀನೇಜ್ ಹುಡುಗಿಯರನ್ನು, ಯುವತಿಯರನ್ನು ಸವಾರಿ ಮಾಡತೊಡಗಿವೆ. ಸೋ, ವೀಕೆಂಡ್ ಪ್ರಿಯ ಬಿಂದಾಸ್ ಫ್ಯಾಷನ್ ಪ್ರೇಮಿಗಳ ಫೇವರಿಟ್ ಲಿಸ್ಟ್‌ಗೆ ಸೇರಿವೆ. ಅದರಲ್ಲೂ ಲೈಟ್ ಶೇಡ್‌ಗಳಲ್ಲಿಹಾಗೂ ಫ್ಲೋರಲ್ ಪ್ರಿಂಟ್ಸ್‌ನಲ್ಲಿಹೊಸ ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಇನ್ನು, ಆಫ್ ಶೋಲ್ಡರ್ ಕ್ರಾಪ್ ಟಾಪ್‌ಗಳು ಬೀಚ್ ಸೈಡ್ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ.
ಆಫ್ ಶೋಲ್ಡರ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಈ ಔಟ್ಫಿಟ್ ಎಲ್ಲರಿಗೂ ಸೂಟ್ ಆಗುವುದಿಲ್ಲ. ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
- ಕಾಲೇಜು ಹಾಗೂ ವರ್ಕ್ ಸ್ಪೇಸ್ ಮಹಿಳೆಯರಿಗೆ ಸೂಟ್ ಆಗದು.
- ಇದು ವೀಕೆಂಡ್ ಔಟ್ಫಿಟ್ ಕೆಟಗರಿಗೆ ಸೇರುತ್ತವೆ.
- ಹಾಲಿಡೇ ಫ್ಯಾಷನ್ಗೂ ಧರಿಸಬಹುದು.
- ಫಂಕಿ ಲುಕ್ ಇದಕ್ಕೆ ಪರ್ಫೆಕ್ಟ್.
- ಸ್ಟ್ರಾಪ್ಲೆಸ್ ಇನ್ನರ್ವೇರ್ ಧರಿಸುವುದು ಉತ್ತಮ.
- ಬಿಗ್ ಜಂಕ್ ಜುವೆಲ್ಸ್ ಧರಿಸಬಹುದು.
- ಟ್ರೆಡಿಷನಲ್ ಲುಕ್ ಮಿಕ್ಸ್ ಮಾಡಬೇಡಿ.
- ಸಮ್ಮರ್ ಹೇರ್ಸ್ಟೈಲ್ ಮ್ಯಾಚ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಟ್ರೆಂಡಿಯಾದ ಡಿಸೈನರ್ ಕಾಟನ್ ಬ್ಲೌಸ್