ಶೀಲಾ ಸಿ. ಶೆಟ್ಟಿ, ಬೆಂಗಳೂರು
ನ್ಯೂ ಇಯರ್ ಪಾರ್ಟಿಗೆ ಹೊಂದುವಂತಹ ಗ್ಲಾಮರಸ್ ಲುಕ್ ನೀಡುವ ಪಾರ್ಟಿವೇರ್ ಸೀರೆಗಳು (New year Party Sarees fashion) ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಸೀರೆ ಪ್ರಿಯರಿಗೆ ಇಷ್ಟವಾಗುವಂತಹ ಡಿಸೈನ್‌ಗಳಲ್ಲಿ ಹೊಸ ವರ್ಷದ ಸೆಲೆಬ್ರೇಷನ್‌ಗೆ ಈಗಾಗಲೇ ಸಾಕಷ್ಟು ಬಗೆಯ ಪಾರ್ಟಿವೇರ್ ಸೀರೆಗಳು ಕಾಲಿಟ್ಟಿದ್ದು, ಗ್ಲಾಮರಸ್ ಲುಕ್‌ಗೆ ಸಾಥ್ ನೀಡಲು ಸಜ್ಜಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಬಗೆಬಗೆಯ ಕಾಕ್‌ಟೈಲ್ ಪಾರ್ಟಿ ಸೀರೆಗಳು, ಝರಿ ಸೀರೆಗಳು ಹಾಗೂ ಶೈನಿಂಗ್ ಸಿಕ್ವೀನ್ಸ್ ಸೀರೆಗಳು ಟಾಪ್ ಸ್ಥಾನದಲ್ಲಿವೆ. ಇವುಗಳೊಂದಿಗೆ ಕೆಲವಕ್ಕೆ ಗ್ಲಾಮರಸ್ ಲುಕ್ ಕಲ್ಪಿಸುವ ಸ್ಲಿವ್‌ಲೆಸ್ ಬ್ಲೌಸ್‌ಗಳು ಹಾಗೂ ಬ್ಯಾಕ್‌ಲೆಸ್ ಬ್ಲೌಸ್‌ಗಳು ಜೊತೆಯಾಗಿವೆ ಎನ್ನುತ್ತಾರೆ ಸೀರೆ ಡಿಸೈನರ್ಸ್. ಅವರ ಪ್ರಕಾರ, ಸೀರೆಗಳ ಫ್ಯಾಷನ್ ಎಂದಾಕ್ಷಣಾ ಟ್ರೆಡಿಷನಲ್ ಲುಕ್ ಎಂದುಕೊಳ್ಳಬೇಕಾಗಿಲ್ಲ. ಇಂಡೋ-ವೆಸ್ಟರ್ನ್ ಲುಕ್ ನೀಡುವ ಗ್ಲಾಮರಸ್ ಸೀರೆಗಳು. ಅದರಲ್ಲೂ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಹ ಫ್ಲೋ ಆಗುವಂತಹ ಶೈನಿಂಗ್ ಸೀರೆಗಳು ಕಾಕ್‌ಟೈಲ್ ಸೀರೆಗಳು ಆಗಮಿಸಿವೆ ಎನ್ನುತ್ತಾರೆ.
ಪಾರ್ಟಿಗೆ ಕಾಕ್‌ಟೈಲ್ ಸೀರೆಗಳು
ನೋಡಲು ಮನಮೋಹಕವಾಗಿ ಕಾಣುವಂತಹ ಈ ಕಾಕ್‌ಟೈಲ್ ಸೀರೆಗಳು ಈ ನ್ಯೂ ಇಯರ್ ಸೀಸನ್‌ನಲ್ಲಿ ಹೊಸ ಶೇಡ್‌ಗಳಲ್ಲಿ ಹೊಸ ಲುಕ್‌ನಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಸಾಫ್ಟ್ ಫ್ಯಾಬ್ರಿಕ್‌ನಲ್ಲಿ, ಮುಟ್ಟಿದರೇ ಮೃದು ಎನಿಸುವಂತಹ ಮೆಟಿರಿಯಲ್‌ನಲ್ಲಿ ಬಂದಿವೆ. ಇನ್ನು ಈ ಸೀರೆಗೆ ಗ್ಲಾಮರಸ್ ಲುಕ್ ನೀಡುವ ಬ್ಯಾಕ್‌ಲೆಸ್, ಹಾಲ್ಟರ್ ನೆಕ್‌ಲೈನ್ ಇರುವ ಬ್ಲೌಸ್‌ಗಳು ಮ್ಯಾಚ್ ಆಗಲು ಸಿದ್ಧಗೊಂಡಿವೆ. ಇವೆರೆಡರ ಸಮಾಗಮವಾದಾಗ ಈ ಕಾಕ್‌ಟೈಲ್ ಸೀರೆ ಆಕರ್ಷಕವಾಗಿ ಕಾಣುತ್ತವೆ. ಯಾರೂ ಬೇಕಾದರೂ ಈ ಸೀರೆ ಉಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸಾಫ್ಟ್ ಜಾರ್ಜೆಟ್ ಝರಿ ಸೀರೆಗಳು
ಸಾಫ್ಟ್ ಮೆಟಿರಿಯಲ್‌ನ ಝರಿ ಸೀರೆಗಳು ಗೋಲ್ಡನ್, ಸಿಲ್ವರ್ ಶೇಡ್‌ಗಳಲ್ಲಿ ಬಂದಿವೆ. ಉಟ್ಟಾಗ ಲೈಟ್‌ಗೆ ಮಿನುಗುವ ಇವೂ ಕೂಡ ಸಾಕಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಪಾರ್ಟಿಗಾದಲ್ಲಿ ಇವುಗಳಿಗೆ ಗ್ಲಾಮರಸ್ ಬ್ಲೌಸ್‌ಗಳನ್ನು ಧರಿಸಬೇಕಾಗುತ್ತದೆ ಎನ್ನುತ್ತಾರೆ ಸೀರೆ ಡಿಸೈನರ್ಸ್.
ಶೈನಿಂಗ್ ಸಿಕ್ವೀನ್ಸ್ ಸೀರೆ ಕಮಾಲ್
ಈಗಾಗಲೇ ಸಾಕಷ್ಟು ಟ್ರೆಂಡಿಯಾಗಿರುವ ಶೈನಿಂಗ್ ಸಿಕ್ವೀನ್ಸ್ ಸೀರೆಗಳು ಮತ್ತೊಮ್ಮೆ ಈ ಸೀಸನ್‌ನಲ್ಲೂ ಟ್ರೆಂಡ್‌ನಲ್ಲಿವೆ. ಒಂದಿಷ್ಟು ಹೊಸ ಕಲರ್ಸ್‌ನಲ್ಲಿ ಬಂದಿವೆ. ಪ್ರಯೋಗಾತ್ಮಕ ಶೇಡ್‌ಗಳು ಈ ಬಾರಿಯ ಸೀರೆಗಳ ವಿಶೇಷ. ಇನ್ನು ಈ ಸೀರೆಗಳಿಗೆ ಇಂಡೋ-ವೆಸ್ಟರ್ನ್ ಶೈಲಿಯ ಬ್ಲೌಸ್ ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Party Gowns Fashion: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಂತು 3 ಶೈಲಿಯ ಪಾರ್ಟಿ ಗೌನ್ಸ್