ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್ ಸೀಸನ್‌ನಲ್ಲಿ (Wedding Fashion), ಗೋಲ್ಡನ್ ಶೇಡ್‌ನಲ್ಲಿನ ನಾನಾ ಡಿಸೈನ್‌ನ ಪಾದರಕ್ಷೆಗಳು ಟ್ರೆಂಡಿಯಾಗಿವೆ. ಕೇವಲ ಮದುಮಗಳು ಧರಿಸುವ ಡಿಸೈನ್‌ಗಳು ಮಾತ್ರವಲ್ಲ, ಮದುವೆಯಲ್ಲಿ ಭಾಗವಹಿಸುವ ಮಾನಿನಿಯರು ಕೂಡ ಈ ಗ್ರ್ಯಾಂಡ್ ಗೋಲ್ಡ್ ಶೇಡ್ ಡಿಸೈನ್‌ಗಳತ್ತ ವಾಲಿದ್ದಾರೆ.
ಗೋಲ್ಡನ್ ಶೇಡ್ ಡಿಸೈನ್ ಪಾದರಕ್ಷೆಗಳು
ಬಂಗಾರ ವರ್ಣದ ಪಾದರಕ್ಷೆಗಳು ಇದುವರೆಗೂ ಕೇವಲ ಮದುವೆಯಾಗುತ್ತಿರುವ ಹೆಣ್ಣುಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಮದುವೆಯ ಫ್ಯಾಷನ್ ರೂಲ್ಸ್ ಕಂಪ್ಲೀಟ್ ಬದಲಾಗಿದೆ. ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಭಾಗವಹಿಸುವ ಫ್ಯಾಮಿಲಿಯ ಹುಡುಗಿಯರು, ಸ್ನೇಹಿತೆಯರು ಹಾಗೂ ಮಹಿಳೆಯರು ಎಲ್ಲರೂ ವಯಸ್ಸಿನ ಭೇದಬಾವವಿಲ್ಲದೇ ಈ ಗೋಲ್ಡನ್ ಶೇಡ್ ಇರುವಂತಹ ಗ್ರ್ಯಾಂಡ್ ಪಾದರಕ್ಷೆಗಳನ್ನು ಧರಿಸುತ್ತಿದ್ದಾರೆ. ರೇಷ್ಮೆ ಸಿರೆ, ಲೆಹೆಂಗಾ ಹಾಗೂ ಗ್ರ್ಯಾಂಡ್ ಔಟ್‌ಫಿಟ್‌ಗೆ ಮ್ಯಾಚ್ ಆಗುವ ಇವು ನಾನಾ ಡಿಸೈನ್ ಹಾಗೂ ಪ್ಯಾಟರ್ನ್‌ನಲ್ಲಿ ಇವು ಲಭ್ಯವಿದೆ. ಈ ಸೀಸನ್‌ನಲ್ಲಿ ಇವುಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಫುಟ್‌ವೇರ್ ಮಾರಾಟಗಾರರು.
ಟ್ರೆಂಡ್‌ನಲ್ಲಿರುವ ವಿನ್ಯಾಸಗಳು
ಸಾಂಪ್ರದಾಯಿಕ ಪೂಜೆ ಹಾಗೂ ಕಾರ್ಯಕ್ರಮಗಳನ್ನು ಹೊರತುಪಡಿಸಿದಲ್ಲಿ, ಇತರೇ ಸಮಯದಲ್ಲಿ ಧರಿಸಿ ಓಡಾಡಬಹುದಾದ್ದರಿಂದ ಮದುಮಗಳ ಬ್ರೈಡಲ್ ಕಲೆಕ್ಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಬಂಗಾರ ವರ್ಣದ ಪಾದರಕ್ಷೆಗಳು ಬಂದಿವೆ. ಸ್ಯಾಂಡಲ್ ಶೈಲಿಯವು, ಆಫ್ ಶೂನಂತವು, ವಿ ಶೇಪ್, ಕ್ರಿಸ್ಟಲ್‌ನಿಂದ ಪ್ಯಾಚ್ ವರ್ಕ್ ಮಾಡಿದಂತವು, ಹ್ಯಾಂಡ್‌ವರ್ಕ್ ಚಪ್ಪಲಿಗಳು, ಹೈ ಹೀಲ್ಸ್‌ನ ಕಟ್ಟುವ ಚಪ್ಪಲಿ, ಮಿರ ಮಿರ ಮಿನುಗುವ ಬೀಡ್ಸ್ ಸ್ಯಾಂಡಲ್ಸ್, ಗೌನ್ ಜೊತೆ ಧರಿಸಬಹುದಾದ ಹೀಲ್ಸ್ ಆಫ್ ಶೂಗಳು, ಕಲಾತ್ಮಕ ಚಿತ್ತಾರ ಹಾಗೂ ಬಂಗಾರದ ವರ್ಣದ ಎಂಬ್ರಾಯ್ಡರಿ ಇರುವಂತಹ ಫುಟ್‌ವೇರ್ಸ್ ಸೇರಿದಂತೆ ಸಾಕಷ್ಟು ಬಗೆಯವು ನಾನಾ ಬ್ರಾಂಡ್‌ಗಳಲ್ಲಿ ಬಂದಿವೆ.
ಎಥ್ನಿಕ್ ಲುಕ್‌ಗೆ ಮ್ಯಾಚ್ ಆಗುವ ಪಾದರಕ್ಷೆಗಳಿವು
ಗೋಲ್ಡನ್ ವರ್ಕ್ ಹಾಗೂ ಬಣ್ಣದ ಪಾದರಕ್ಷೆಗಳು ಯಾವುದೇ ಬಗೆಯ ಎಥ್ನಿಕ್ ಲುಕ್ ನೀಡುವ ಔಟ್‌ಫಿಟ್ ಹಾಗೂ ರೇಷ್ಮೆ ಸೀರೆಗಳಿಗೆ ಮ್ಯಾಚ್ ಆಗುತ್ತವೆ. ನೋಡಲು ರಾಯಲ್ ಲುಕ್ ನೀಡುತ್ತವೆ. ಎಲ್ಲಾ ಬಗೆಯ ಗ್ರ್ಯಾಂಡ್ ಉಡುಪುಗಳಿಗೂ ಧರಿಸಬಹುದು. ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.
ಗೋಲ್ಡನ್ ಪಾದರಕ್ಷೆಗಳ ಪ್ರಿಯರ ಗಮನಕ್ಕೆ
- ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸಬಹುದು.
- ಆದಷ್ಟೂ ಕಂಫರ್ಟಬಲ್ ಸೈಜ್ನದ್ದನ್ನು ಧರಿಸಿ.
- ಧರಿಸಿದ ನಂತರ ಕವರ್ನಲ್ಲಿ ಅಥವಾ ಪ್ರತ್ಯೇಕವಾಗಿ ಇರಿಸಿ.
- ಎಂಬ್ರಾಯ್ಡರಿ ಸೂಕ್ಮವಾಗಿರುವಂತಹ ಪಾದರಕ್ಷೆಗಳನ್ನು ಔಟ್ಫಿಟ್ನಂತೆಯೆ ಸಂರಕ್ಷಿಸಿಡಬೇಕು. ಇಲ್ಲವಾದಲ್ಲಿ ಹರಿದು ಹೋಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Beads Bracelet Fashion: ಬೇಸಿಗೆ ಫ್ಯಾಷನ್‌ಗೆ ಲಗ್ಗೆ ಇಟ್ಟ ಬಣ್ಣಬಣ್ಣದ ಬೀಡ್ಸ್ ಬ್ರೇಸ್ಲೆಟ್ಸ್