ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಯೋಗಾತ್ಮಕ ಗ್ರಾಫಿಕ್ ಐ ಮೇಕಪ್ (Graphic Eye Makeup) ಕಂಗಳ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆದಿದೆ. ನಾನಾ ರೇಖೆ ಹಾಗೂ ಶೇಡ್ಸ್ ಮೂಲಕ ಕಣ್ಣುಗಳನ್ನು ವಿಭಿನ್ನವಾಗಿ ಬಿಂಬಿಸುವ ಈ ಮೇಕಪ್ ಸದ್ಯಕ್ಕೆ ಮಾಡೆಲ್ ಲುಕ್ ಬಯಸುವವರಲ್ಲಿ ಕಾಣಬಹುದಾಗಿದೆ.
“ಗ್ರಾಫಿಕ್ ಐ ಮೇಕಪ್‌ನಲ್ಲಿ ಕಣ್ಣುಗಳು ಕೆಲವೊಮ್ಮೆ ನೋಡಲು ವಿಂಗ್ಸ್ ಐ ನಂತೆ ಕಂಡರೇ ಮತ್ತೊಮ್ಮೆ ಡಬಲ್ ಶೇಡ್‌ನಲ್ಲಿಡಿಫರೆಂಟ್ ಲುಕ್ ನೀಡುತ್ತವೆ. ಮತ್ತೆ ಕೆಲವು ಐ ಲ್ಯಾಶ್ ದಟ್ಟವಾಗಿರುವಂತೆ ಬಿಂಬಿಸುತ್ತವೆ. ಕಣ್ಣು ಮಿಟುಕಿಸಿದರೇ ಸಾಕು ನೋಡುಗರನ್ನು ಸೆಳೆಯುತ್ತವೆ. ಇವೆಲ್ಲದರ ಪ್ಯಾಕೇಜ್ ಈ ಗ್ರಾಫಿಕ್ ಐ ಮೇಕಪ್” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗ್ರಾಫಿಕ್ ಐ ಮೇಕಪ್ ಟ್ರಿಕ್ಸ್
ಮೊದಲಿಗೆ ಕಣ್ಣಿನ ರೆಪ್ಪೆ ಮೇಲೆ ಕನ್ಸಿಲರ್ ಹಚ್ಚಿ. ಇದು ಕಣ್ಣಿನ ರೆಪ್ಪೆಯ ಬಣ್ಣವನ್ನು ತಿಳಿಗೊಳಿಸುತ್ತದೆ. ಮಾತ್ರವಲ್ಲ, ಐ ಲೈನರ್ ಹಚ್ಚಲು ಸ್ಮೂತ್ ಸರ್ಫೆಸ್ ಮಾಡಿಕೊಡುತ್ತದೆ. ಡಾರ್ಕ್ ಐ ಲೈನರ್ ಹಚ್ಚುವ ಮುನ್ನ ಕಣ್ಣಿಗೆ ಕಾಣದ ಹಾಗೆ ಇನ್‌ವಿಸಿಬಲ್ ಐ ಲೈನರ್ ಹಚ್ಚಿ. ಇದು ಕಾಣಕೂಡದು. ಇದು ಐ ಲ್ಯಾಶ್‌ಗೂ ತಾಗಕೂಡದು. ಇದರ ಮೇಲೆ ಇಲ್ಲವೇ ಪಕ್ಕದಲ್ಲೇ ಐ ಲೈನರ್ ಹಚ್ಚಲು ಸುಲಭವಾಗುತ್ತದೆ.
ಗ್ರಾಫಿಕ್ ವಿಂಗ್ ಎಫೆಕ್ಟ್
ಇದಕ್ಕಾಗಿ ನೀವು ಆದಷ್ಟೂ ಜೆಲ್ ಬೇಸ್ ಇರುವಂತಹ ಐ ಲೈನರ್ ಹಚ್ಚಿ. ಇದು ನಿಮ್ಮ ಐ ಲಿಡ್‌ಗೆ ಹೊಂದಬೇಕು. ಐ ಲೈನರ್‌ನ ಟೇಲ್ ಭಾಗದಲ್ಲಿಕೊಂಚ ಟ್ವಿಸ್ಟ್ ನೀಡಿ. ಇದು ಕೊಂಚ ಬಾಲದಂತೆ ಬಿಡಿಸಿ. ಆಗ ವಿಂಗ್ ಐ ಮೇಕಪ್‌ನಂತೆ ಬಿಂಬಿಸಲು ಸಹಕಾರಿ. ಅಷ್ಟು ಮಾತ್ರವಲ್ಲ. ಈ ಡಿಸೈನ್ ಟ್ರೆಂಡಿ ಕೂಡ ಎನ್ನುತ್ತಾರೆ ಸ್ಪೆಷಲಿಸ್ಟ್‌ಗಳು. ಅವರ ಪ್ರಕಾರ, ವಿಂಗ್ ಐ ಲೈನ್‌ಗೆ ಆದಷ್ಟೂ ಅರ್ಧ ಚಂದ್ರಕಾರ ಬರುವಂತೆ ಲೈನ್ ಬಿಡಿಸುವುದು ಅವಶ್ಯ. ಇದನ್ನು ಪ್ರಯೋಗಾತ್ಮಕವಾಗಿ ಮಾಡೆಲ್‌ಗಳು ನಾನಾ ಕಲರ್ ಐ ಲೈನರ್‌ಗಳಲ್ಲಿ ಪ್ರತಿಬಿಂಬಿಸುತ್ತಾರೆ. ಆಗ ಅದು ವೈಬ್ರೆಂಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಾಘವ್ ಮಹನಿ.
ಚಿಕ್ಕ ಕಂಗಳ ಗ್ರಾಫಿಕ್ ಐ ಮೇಕ್‌ಓವರ್
ಕಣ್ಣಿನ ಕೊನೆಯಲ್ಲಿ ಮತ್ತೊಂದು ವರ್ಣದ ಐ ಲೈನರ್‌ನಿಂದ ಸ್ವಲ್ಪ ದೂರದಲ್ಲಿ ಅದೇ ರೀತಿ ಲೈನ್ ಎಳೆದು ಕೊನೆಯಲ್ಲಿ ವಿಂಗ್‌ನಂತೆ ಕಾಣುವಂತೆ ಜಾಯಿನ್ ಮಾಡಬಹುದು. ಮಧ್ಯದಲ್ಲಿ ಯಾವುದಾದರೂ ಬ್ರೈಟ್ ಐ ಶೇಡ್ ಹಚ್ಚಬಹುದು ಇದು ಗ್ರಾಫಿಕ್ ಶೇಡ್ಸ್‌ನಂತೆ ಕಾಣುತ್ತದೆ. ಮಾತ್ರವಲ್ಲ, ಪಾಶ್ ಲುಕ್ ನೀಡುತ್ತದೆ. ಜತೆಗೆ ಕಣ್ಣುಗಳು ವೈಬ್ರೆಂಟ್ ಆಗಿ ಕಾಣುತ್ತವೆ. ಚಿಕ್ಕ ಕಂಗಳು ಕೊಂಚ ದೊಡ್ಡದಾಗಿ ಕಾಣುವಂತೆ ಮಾಡಲು ಈ ಟ್ರಿಕ್ಸ್ ನೀಡಬಹುದು. ಇದು ಕಣ್ಣುಗಳಿಗೆ ಗ್ಲಾಮರ್ ಟಚ್ ನೀಡುತ್ತವೆ. ಸಿಲೆಬ್ರಿಟಿ ಲುಕ್ ನೀಡುತ್ತವೆ ಎಂಬುದು ಮಾಡೆಲ್ ಝಿನತ್ ಅಭಿಪ್ರಾಯ.
ಗ್ರಾಫಿಕ್ ಐ ಮೇಕಪ್ ಪ್ರಿಯರ ಗಮನಕ್ಕೆ
- ವೈಬ್ರೆಂಟ್ ಶೇಡ್ಸ್ ನೀಡುವಾಗ ಕಲರ್ಸ್ ಆಯ್ಕೆ ಸರಿಯಾಗಿರಬೇಕು.
- ಕಪ್ಪು ಸ್ಕಿನ್ ಟೋನ್ನವರು ಡಾರ್ಕ್ ಶೇಡ್ಸ್ನಿಂದ ದೂರವಿರಬೇಕು.
- ಪೂಜೆ ಹಾಗೂ ಆಧ್ಯಾತ್ಮಿಕ ಸಮಾರಂಭಕ್ಕೆ ಹೋಗುವಾಗ ಬೇಡ.
- ಧರಿಸುವ ಉಡುಪಿಗೆ ಮ್ಯಾಚ್ ಆಗುವಂತಿದ್ದರೇ ಉತ್ತಮ.
- ಸಂದರ್ಭಕ್ಕೆ ತಕ್ಕಂತೆ ಹಾಗೂ ಮುಖದ ಇನ್ನಿತರೇ ಭಾಗದ ಮೇಕಪ್ಗೆ ಹೊಂದುವಂತಿರಲಿ.
- ಪರ್ಪಲ್, ಅಕ್ವಾ, ರೆಡಿಯಂಟ್ ಗ್ರೀನ್ ವರ್ಣದ ಶೇಡ್ಸ್ ಫಂಕಿ ಲುಕ್ ನೀಡುತ್ತದೆ.
- ಕಣ್ಣುಗಳ ಆಕಾರಕ್ಕೆ ತಕ್ಕಂತೆ ಮೇಕಪ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Big Jhumka Fashion: ಯುವತಿಯರ ಕಿವಿಯ ಸೌಂದರ್ಯ ಹೆಚ್ಚಿಸಿದ ಬಟ್ಟಲಗಲದ ಬಿಗ್ ಜುಮಕಿಗಳು