Site icon Vistara News

Haldi Shastra Fashion: ಮದುವೆಯ ಹಳದಿ ಶಾಸ್ತ್ರದ ಡ್ರೆಸ್‌ ಕೋಡ್‌ಗೆ 5 ಸಿಂಪಲ್‌ ಐಡಿಯಾ

Haldi Shastra Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಪ್ರದಾಯಕ್ಕೆ ತಕ್ಕಂತೆ ನಡೆಯುವ ಮದುವೆಯ ಹಳದಿ ಶಾಸ್ತ್ರಕ್ಕೂ (Haldi Shastra Fashion) ಇದೀಗ ಫ್ಯಾಷನ್‌ ಟಚ್‌ ದೊರಕಿದೆ. ಹೌದು, ಮದುವೆಗೂ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಮೊದಲಿನಂತೆ ಹಳೆಯ ಅಥವಾ ಯಾವುದೋ ಒಂದು ಹಳದಿ ಅಥವಾ ಶ್ವೇತ ವರ್ಣದ ಸೀರೆ ಅಥವಾ ಔಟ್‌ಫಿಟ್‌ ಧರಿಸಿದರೇ ಸಾಲದು. ಇದಕ್ಕೆಂದೇ ನಾನಾ ಬಗೆಯ ಡ್ರೆಸ್‌ಕೋಡ್‌ಗಳು ಕಾಲಿಟ್ಟಿವೆ. ಆ ದಿನದಂದು ಮದುಮಕ್ಕಳು ಮಾತ್ರವಲ್ಲ, ಭಾಗವಹಿಸುವ ಇತರರು ಕೂಡ ಹೇಗೆಲ್ಲಾ ಔಟ್‌ಫಿಟ್‌ ಧರಿಸಬಹುದು? ಆಕರ್ಷಕವಾಗಿ ಕಾಣುವಂತೆ ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು ಸಿಂಪಲ್ 5 ಟಿಪ್ಸ್ ನೀಡಿದ್ದಾರೆ.

ಹಳದಿ ಶೇಡ್‌ ಔಟ್‌ ಫಿಟ್ಸ್ ಪ್ಲಾನಿಂಗ್‌

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಹಳದಿ ವರ್ಣದ ಅಥವಾ ಸನ್‌ಕಲರ್‌ ಶೇಡ್‌ನ ಔಟ್‌ಫಿಟ್‌ ಹಾಗೂ ಸೀರೆ ಧರಿಸಲು ಮುನ್ನವೇ ಸೂಚಿಸಬೇಕು. ಆ ನಂತರವಷ್ಟೇ ಎಲ್ಲರೂ ಯೂನಿಫಾರ್ಮ್‌ನಂತೆ ಹಳದಿಮಯವಾಗಿ ಕಾಣಿಸಲು ಸಾಧ್ಯ.

ಮದುಮಕ್ಕಳಿಗೆ ಶ್ವೇತ ವರ್ಣ

ಹಳದಿ ಶಾಸ್ತ್ರದಲ್ಲಿ ಭಾಗವಹಿಸುವವರೆಲ್ಲರೂ ಹಳದಿ ದಿರಸಿದಲ್ಲಿ ಮುಖ್ಯ ಪಾತ್ರದಾರಿಗಳಾದ ಮದುಮಗಳು ಹಾಗೂ ಮದುವೆ ಗಂಡು ಶ್ವೇತಾ ವರ್ಣದ ಔಟ್‌ಫಿಟ್‌ ಧರಿಸುವುದು ಉತ್ತಮ. ಹಳದಿ ನೀರನ್ನು ಎರಚಿದಾಗ ಈ ಉಡುಪುಗಳು ವಿಡಿಯೋ ಹಾಗೂ ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ.

ಟ್ವಿನ್ನಿಂಗ್‌ ಕಾನ್ಸೆಪ್ಟ್

ಮದುವೆಯಾಗುವ ಹೆಣ್ಣು ಹಾಗೂ ಗಂಡು ಟ್ವಿನ್ನಿಂಗ್‌ ಡ್ರೆಸ್‌ಕೋಡ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಒಂದೇ ಬಗೆಯ ಫ್ಯಾಬ್ರಿಕ್‌ ಉಡುಪನ್ನು ಧರಿಸಬಹುದು. ಇದು ಕೂಡ ಆಕರ್ಷಕವಾಗಿ ಬಿಂಬಿಸುತ್ತವೆ.

ಥೀಮ್‌ಗೆ ತಕ್ಕಂತೆ ಹಳದಿ ಶಾಸ್ತ್ರ

ಹಳದಿ ಶಾಸ್ತ್ರಕ್ಕೂ ಇದೀಗ ನಾನಾ ಬಗೆಯ ಥೀಮ್‌ ಡ್ರೆಸ್‌ಕೋಡ್‌ಗಳು ಬಂದಿವೆ. ಉದಾಹರಣೆಗೆ., ಹುಡುಗಿಗೆ ಶಕುಂತಲಾ ಸ್ಟೈಲಿಂಗ್‌, ಫ್ಲವರ್‌ ಗರ್ಲ್, ರಾಣಿ-ಮಹಾರಾಣಿ ಲುಕ್‌ ಹೀಗೆ ನಾನಾ ಬಗೆಯವನ್ನು ಕಾಣಬಹುದು. ಆಯಾ ಥೀಮ್‌ಗೆ ತಕ್ಕಂತೆ ಫ್ಯಾಷನ್‌ವೇರ್‌ಗಳನ್ನು ಧರಿಸಬಹುದು.

ಇದನನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಹೂವಿನ ಆಭರಣಗಳ ಮ್ಯಾಚಿಂಗ್‌

ನೈಜ ಹೂವುಗಳ ಅಥವಾ ಕೃತಕ ಹೂವುಗಳ ಆಭರಣಗಳನ್ನು ಆಯ್ಕೆ ಮಾಡಿರುವ ಹಳದಿ ಶಾಸ್ತ್ರದ ಉಡುಪಿಗೆ ಹಾಗೂ ಸೀರೆಗೆ ತಕ್ಕಂತೆ ಮದುಮಗಳು ಮ್ಯಾಚ್‌ ಮಾಡಬಹುದು. ದುಂಡು ಮಲ್ಲಿಗೆ, ಮಿನಿ ಬಟನ್‌ ರೋಸ್‌ ಹೀಗೆ ನಾನಾ ಬಗೆಯ ಮಿನಿ ಹೂವುಗಳ ಆಭರಣಗಳನ್ನು ಧರಿಸಿದಾಗ ಹಳದಿ ಶಾಸ್ತ್ರದ ಉಡುಗೆಗಳು ಹೈಲೈಟಾಗುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version