ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್ ಫ್ಯಾಷನ್‌ನಲ್ಲಿ (Summer fashion) ಇದೀಗ ಜೆನ್ ಜಿ ಹುಡುಗಿಯರನ್ನು ಹಾಲ್ಟರ್ ನೆಕ್ ಟಾಪ್‌ಗಳು ಸವಾರಿ ಮಾಡತೊಡಗಿವೆ. ನೋಡಲು ಮಾಡರ್ನ್ ಲುಕ್ ನೀಡುವ ಈ ಟಾಪ್‌ಗಳು ಕ್ಯಾಶುವಲ್ ಲುಕ್‌ಗೆ ಸಾಥ್ ನೀಡುತ್ತಿವೆ. ವೆಸ್ಟರ್ನ್ ಫ್ಯಾಷನ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿವೆ.
ಏನಿದು ಹಾಲ್ಟರ್ ನೆಕ್ ಟಾಪ್?
ಕತ್ತನ್ನು ಸುತ್ತುವರಿದ ನೆಕ್‌ಲೈನ್‌ಗಳಿವು. ತೋಳುಗಳಿಲ್ಲದ ಸ್ಲಿವ್‌ಲೆಸ್ ಟಾಪ್‌ಗಳಿವು. ಶೋಲ್ಡರ್‌ಲೆಸ್ ಡಿಸೈನ್ ಇರುವಂತಹ ವಿನ್ಯಾಸ ಹೊಂದಿರುವಂತವು. ಈ ಹಿಂದೆ ಹಾಲಿವುಡ್ ತಾರೆಯರ ಲಿಸ್ಟ್‌ನಲ್ಲಿ ಇದ್ದ ಈ ಫ್ಯಾಷನ್, ಬಾಲಿವುಡ್ ತಲುಪಿ, ಇದೀಗ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಹಾಲ್ಟರ್ ನೆಕ್ ಟಾಪ್ ಫ್ಯಾಷನ್
ಹಾಲ್ಟರ್ ನೆಕ್ ಟಾಪ್‌ಗಳು ಪಾಶ್ಚಿಮಾತ್ಯ ವಿನ್ಯಾಸದ ಉಡುಪುಗಳಿಗೆ ಹೆಚ್ಚು ಮ್ಯಾಚ್ ಆಗುವುದರಿಂದ ಇವನ್ನು ವೆಸ್ಟರ್ನ್ ಶೈಲಿಯ ಗೌನ್, ಫ್ರಾಕ್ ಹಾಗೂ ಶಾರ್ಟ್ ಟಾಪ್‌ಗಳಲ್ಲಿ ಹೆಚ್ಚು ಕಾಣಬಹುದು ಎನ್ನುವ ಡಿಸೈನರ್ ರೀಟಾ ಪ್ರಕಾರ, ಹಾಲ್ಟರ್ ನೆಕ್‌ನಲ್ಲೆಸಾಕಷ್ಟು ವಿಧಗಳಿವೆಯಂತೆ. ಹಾಗೆಂದು ಎಲ್ಲಾಉಡುಪುಗಳಿಗೂ ಹಾಲ್ಟರ್ ನೆಕ್ ಟಾಪ್ ಮ್ಯಾಚ್ ಮಾಡಲಾಗದು. ಸೂಕ್ತ ಸ್ಕರ್ಟ್, ಪ್ಯಾಂಟ್ ಅಥವಾ ಶಾಟ್ರ್ಸ್ ಧರಿಸಬೇಕಾಗುತ್ತದೆ ಎನ್ನುತ್ತಾರೆ.
ಹಾಲ್ಟೆರ್‌ನೆಕ್ ಪ್ರೇಮಿಗಳು
ಸಿನಿಮಾ ತಾರೆಯರ ವಾರ್ಡ್‌ರೋಬ್‌ಅನ್ನು ಹಾಲ್ಟೆರ್ ನೆಕ್ ಡ್ರೆಸ್‌ಗಳು ಆಕ್ರಮಿಸಿಕೊಂಡಿವೆ. ಅದರಲ್ಲೂ ಬಾಲಿವುಡ್‌ನ ಫ್ಯಾಷನ್ ದಿವಾಗಳಾದ ಸಾರಾ, ಅಲಿಯಾ, ಫ್ರೀಡಾ ಪಿಂಟೋ, ಕರೀನಾ, ಸೋನಾಕ್ಷಿ ಈ ಹಾಲ್ಟರ್‌ನೆಕ್‌ನ ಅಭಿಮಾನಿಗಳು. ಆಗಾಗ್ಗೆ ಧರಿಸುತ್ತಿರುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಾಲ್ಟರ್ ನೆಕ್ ಟಾಪ್ ಆಯ್ಕೆಗೂ ಮುನ್ನ
ಫಿಟ್ಟಿಂಗ್ ಪ್ಯಾಂಟ್‌ಗಳಿಗೆ ಹಾಲ್ಟರ್ ನೆಕ್ ಟಾಪ್ ಸರಿಯಾಗಿ ಮ್ಯಾಚ್ ಆಗುತ್ತದೆ. ತೀರಾ ಸ್ಲಿಮ್ ಆಗಿರುವವರು ಹಾಲ್ಟರ್ ನೆಕ್‌ನ ಟಾಪ್ ಧರಿಸುವಾಗ ಫಿಟ್ಟಿಂಗ್‌ನದ್ದನ್ನು ಧರಿಸಬೇಕು. ಇಲ್ಲವಾದಲ್ಲಿ ಫಿಟ್ ಆಗಿ ಕೂರದೇ ನೋಡಲು ಕೆಟ್ಟದಾಗಿ ಕಾಣಬಹುದು. ಕೊಂಚ ಪ್ಲಂಪಿ ಲುಕ್ ಇರುವವರಿಗೂ ಹಾಲ್ಟರ್ ನೆಕ್ ಓಕೆ. ಹಾಗೆಂದು ತೀರಾ ದಪ್ಪಗಿರುವವರಿಗೆ ಇದು ಹೊಂದದು. ತೆಳ್ಳಗೆ ಬಳುಕುವ ಬಳ್ಳಿಯಂತಿರುವವರಿಗೆ ಹಾಲ್ಟರ್‌ನೆಕ್ ಟಾಪ್ ಪರ್ಫೆಕ್ಟ್! ಎನ್ನುತ್ತಾರೆ ಡಿಸೈನರ್ಸ್.
ಹಾಲ್ಟರ್ ವಿನ್ಯಾಸ ಲೋಕ
- ಕತ್ತು ಉದ್ದವಾಗಿದ್ದರೇ ಈ ಶೈಲಿಯ ಟಾಪ್‌ಗಳು ಸುಂದರವಾಗಿ ಕಾಣುತ್ತವೆ.
- ನೆಕ್ಲೈನ್ ತೀರಾ ಉಸಿರುಗಟ್ಟಿಸುವಂತಿರಬಾರದು.
- ಧರಿಸುವ ಸಂದರ್ಭದಲ್ಲಿ, ಕೈ ಕೆಳಗೆ ಎಕ್ಸ್ಪೋಸ್ ಆಗದಂತೆ ನೋಡಿಕೊಳ್ಳಬೇಕು.
- ಫಿಟ್ ಹಾಲ್ಟರ್‌ನೆಕ್ ಟಾಪ್ ಆಯ್ಕೆ ಮಾಡಿಕೊಳ್ಳಿ.
- ಕೈಗಳು ಉದ್ದವಾಗಿರುವಂತೆ ಇವು ಬಿಂಬಿಸುತ್ತವೆ.
- ಟೀನೇಜ್ ಹುಡುಗಿಯರಿಗೆ ಕ್ರಾಪ್ ಟಾಪ್ ಶೈಲಿಯವು ಸೂಟ್ ಆಗುತ್ತವೆ.
- ಆಕ್ಸೆಸರೀಸ್ ಧರಿಸುವುದು ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: False Eyelash Fashion Tips: ಕೃತಕ ಐ ಲ್ಯಾಶಸ್ ಆಯ್ಕೆಗೂ ಮುನ್ನ ಪಾಲಿಸಬೇಕಾದ 5 ಸಂಗತಿಗಳು